Breast Cancer ಲಕ್ಷಣಗಳಿಲ್ಲದೆಯೂ ಕಾಣಿಸಿಕೊಳ್ಳಬಹುದೇ?


Team Udayavani, Jan 14, 2024, 9:17 AM IST

2-breast-cancer

ಸ್ತನ ಕ್ಯಾನ್ಸರ್‌ ಉಂಟಾಗಲು ನಿರ್ದಿಷ್ಟ ಕಾರಣವೇನು ಎಂಬುದನ್ನು ಇನ್ನೂ ಖಚಿತವಾಗಿ ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಆದರೆ ಅನೇಕ ಅಂಶಗಳು ಈ ತೊಂದರೆ ಉಂಟಾಗಲು ಕಾರಣವಾಗಬಹುದು. ಕೆಲವು ಸಾಮಾನ್ಯ ಅಂಶಗಳು ಎಂದರೆ:

  1. ಲಿಂಗ: ಪುರುಷರಿಗಿಂತ ಮಹಿಳೆಯರೇ ಸ್ತನ ಕ್ಯಾನ್ಸರ್‌ಗೆ ಹೆಚ್ಚು ಪ್ರಮಾಣದಲ್ಲಿ ತುತ್ತಾಗುತ್ತಾರೆ.
  2. ವಯಸ್ಸು: ವಯಸ್ಸು ಹೆಚ್ಚಿದಂತೆ ಸ್ತನ ಕ್ಯಾನ್ಸರ್‌ ಉಂಟಾಗುವ ಸಾಧ್ಯತೆ, ಅದರಲ್ಲೂ ಋತುಚಕ್ರ ಬಂಧದ ಬಳಿಕ ಹೆಚ್ಚು.
  3. ಕುಟುಂಬದಲ್ಲಿ ಸ್ತನ ಕ್ಯಾನ್ಸರ್‌ ಹಿನ್ನೆಲೆ: ಕುಟುಂಬ ಸದಸ್ಯರಿಗೆ ಸ್ತನ ಕ್ಯಾನ್ಸರ್‌ ಇದ್ದಲ್ಲಿ ಅದಕ್ಕೆ ತುತ್ತಾಗುವ ಸಾಧ್ಯತೆಗಳು ಅಧಿಕ.
  4. ವಂಶಪಾರಂಪರ್ಯವಾಗಿ ಹರಿದುಬಂದ ವಂಶವಾಹಿ ಮ್ಯುಟೇಶನ್‌ಗಳು: ಬಿಆರ್‌ಸಿಎ1 ಮತ್ತು ಬಿಆರ್‌ ಸಿಎ2ರಂತಹ ಕೆಲವು ನಿರ್ದಿಷ್ಟ ವಂಶವಾಹಿಗಳ ಮ್ಯುಟೇಶನ್‌ ಗಳು ಈ ಅಪಾಯವನ್ನು ಹೆಚ್ಚಿಸುತ್ತವೆ.
  5. ಸ್ತನ ಕ್ಯಾನ್ಸರ್‌ನ ವೈಯಕ್ತಿಕ ಹಿನ್ನೆಲೆ: ಒಂದು ಸ್ತನದಲ್ಲಿ ಈ ಹಿಂದೆ ಕ್ಯಾನ್ಸರ್‌ ಉಂಟಾಗಿದ್ದರೆ ಇನ್ನೊಂದು ಸ್ತನದಲ್ಲಿಯೂ ಅದು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
  6. ಹಾರ್ಮೋನ್‌ ಪುನರ್‌ಸ್ಥಾಪನೆ ಚಿಕಿತ್ಸೆ (ಎಚ್‌ಆರ್‌ಟಿ): ಕೆಲವು ಹಾರ್ಮೋನ್‌ ಚಿಕಿತ್ಸೆಗಳನ್ನು ದೀರ್ಘ‌ಕಾಲೀನವಾಗಿ ಉಪಯೋಗಿಸುವುದರಿಂದ ಅಪಾಯ ಹೆಚ್ಚುತ್ತದೆ.
  7. ಪ್ರಜನನಾತ್ಮಕ ಅಂಶಗಳು: ಋತುಚಕ್ರ ಬೇಗನೆ ಆರಂಭವಾಗಿರುವುದು, ಋತುಚಕ್ರಬಂಧ ತಡವಾಗಿ ಆರಂಭವಾಗಿರುವುದು, ಮೊದಲ ಗರ್ಭಧಾರಣೆ ವಿಳಂಬವಾಗಿ ಆಗಿರುವುದು ಅಥವಾ ಗರ್ಭ ಧರಿಸದೆ ಇರುವುದು ಈ ಅಪಾಯ ಹೆಚ್ಚಲು ಕಾರಣವಾಗಬಹುದು.
  8. ರೇಡಿಯೇಶನ್‌ಗೆ ಒಡ್ಡಿಕೊಂಡಿರುವುದು: ಎದೆಯ ಭಾಗದಲ್ಲಿ ರೇಡಿಯೇಶನ್‌ ಚಿಕಿತ್ಸೆಗೆ ಒಳಗಾಗಿರುವುದು ಸ್ತನದ ಕ್ಯಾನ್ಸರ್‌ ಅಪಾಯವನ್ನು ಹೆಚ್ಚಿಸುತ್ತದೆ.
  9. ಸ್ತನದ ಅಂಗಾಂಶಗಳು ಸಾಂದ್ರವಾಗಿರುವುದು: ಸ್ತನದ ಅಂಗಾಂಶ ಸಾಂದ್ರವಾಗಿರುವ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್‌ ಉಂಟಾಗುವ ಸಾಧ್ಯತೆ ಹೆಚ್ಚು.
  10. ಜೀವನಶೈಲಿಯ ಅಂಶಗಳು: ಬೊಜ್ಜು, ಅತಿಯಾದ ಮದ್ಯಪಾನ ಮತ್ತು ದೈಹಿಕ ಚಟುವಟಿಕೆಯ ಕೊರತೆಗಳು ಈ ಸಮಸ್ಯೆ ತಲೆದೋರಲು ಕಾರಣವಾಗಬಹುದು.

ಒಂದೆರಡು ಅಥವಾ ಹೆಚ್ಚು ಅಪಾಯ ಅಂಶಗಳು ಇದ್ದರೆ ಸ್ತನದ ಕ್ಯಾನ್ಸರ್‌ ಉಂಟಾಗುವುದು ಖಚಿತ ಎಂದು ಹೇಳಲು ಸಾಧ್ಯವಿಲ್ಲ; ಹಾಗೆಯೇ ಯಾವುದೇ ಅಪಾಯ ಅಂಶಗಳು ಇಲ್ಲದವರು ಕೂಡ ಸ್ತನದ ಕ್ಯಾನ್ಸರ್‌ಗೆ ತುತ್ತಾಗಬಹುದು ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.

ಸ್ತನದ ಕ್ಯಾನ್ಸರ್‌ ಆರಂಭಿಕ ಹಂತಗಳಲ್ಲಿ ಗಮನಾರ್ಹ ಲಕ್ಷಣಗಳನ್ನು ಪ್ರಕಟಿಸದೆ ಇರಬಹುದು. ಹೀಗಾಗಿ ಮ್ಯಾಮೊಗ್ರಾಮ್‌ ನಂತಹ ತಪಾಸಣೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳುವುದು ಶೀಘ್ರವಾಗಿ ಈ ರೋಗವನ್ನು ಪತ್ತೆಹಚ್ಚುವುದಕ್ಕೆ ನಿರ್ಣಾಯಕವಾಗಿವೆ; ಯಾಕೆಂದರೆ ಲಕ್ಷಣಗಳು ಗಮನಕ್ಕೆ ಬರುವ ವೇಳೆಗೆ ಸ್ತನದ ಕ್ಯಾನ್ಸರ್‌ ಮುಂದುವರಿದ ಹಂತಗಳನ್ನು ಮುಟ್ಟಿರುವ ಅಪಾಯ ಇರುತ್ತದೆ.

ಸ್ತನದ ಕ್ಯಾನ್ಸರ್‌ ತಪಾಸಣೆಯಲ್ಲಿ ಸ್ತನದ ಅಂಗಾಂಶಗಳ ಎಕ್ಸ್‌ರೇ ಪರೀಕ್ಷೆಯಾಗಿರುವ ಮ್ಯಾಮೊಗ್ರಾಮ್‌ ಒಳಗೊಂಡಿರುತ್ತದೆ. ಇದರ ಉದ್ದೇಶ ಲಕ್ಷಣಗಳು ಪ್ರಕಟವಾಗುವುದಕ್ಕೆ ಮುನ್ನವೇ, ಆರಂಭಿಕ ಹಂತಗಳಲ್ಲಿಯೇ ಗಡ್ಡೆಯಂತಹ ಅಸಹಜತೆಗಳನ್ನು ಪತ್ತೆಹಚ್ಚುವುದು. ನಿಯಮಿತವಾಗಿ ಇಂತಹ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು, ವಿಶೇಷವಾಗಿ 40 ವರ್ಷ ವಯಸ್ಸು ದಾಟಿರುವ ಮಹಿಳೆಯರಿಗೆ ಆದಷ್ಟು ಬೇಗನೆ ಈ ಕಾಯಿಲೆಯನ್ನು ಪತ್ತೆಹಚ್ಚಿ ಯಶಸ್ವಿಯಾಗಿ ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ಬಹಳ ಮುಖ್ಯವಾಗಿದೆ. ಸ್ತನದ ವೈದ್ಯಕೀಯ ತಪಾಸಣೆ ಮತ್ತು ವೈಯಕ್ತಿಕವಾಗಿ ಪರೀಕ್ಷೆ ಮಾಡಿಕೊಳ್ಳುವುದು ಕೂಡ ಸ್ತನದ ಆರೋಗ್ಯದ ಮೇಲೆ ನಿಗಾ ಇರಿಸಿಕೊಳ್ಳುವಲ್ಲಿ ನಿರ್ಣಾಯಕವಾಗಿದೆ.

ಸ್ತನದ ಕ್ಯಾನ್ಸರ್‌ನ ಕೌಟುಂಬಿಕ ಹಿನ್ನೆಲೆ ಹೊಂದಿರುವವರು ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುವುದರಿಂದ ವ್ಯಕ್ತಿನಿರ್ದಿಷ್ಟ ತಪಾ ಸಣೆಯ ಕಾರ್ಯವಿಧಾನಗಳು ಅತ್ಯುಪಯುಕ್ತ ವಾಗಿವೆ. ನಿಕಟ ಬಂಧುಗಳು ಸ್ತನದ ಕ್ಯಾನ್ಸರ್‌ ಗೆ ತುತ್ತಾಗಿರುವ ಹಿನ್ನೆಲೆ ಇದ್ದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಶಿಫಾರಸು ಮಾಡಲಾಗುವ ವಯಸ್ಸಿಗಿಂತ ಬೇಗನೇ ತಪಾಸಣೆಯನ್ನು ಆರಂಭಿಸುವುದು ಉತ್ತಮ. ಬಿಆರ್‌ಸಿಎಯಂತಹ ವಂಶವಾಹಿಗಳಲ್ಲಿ ಮ್ಯುಟೇಶನ್‌ನಂತಹ ನಿರ್ದಿಷ್ಟ ವಂಶವಾಹಿ ಅಪಾಯಗಳನ್ನು ವಿಶ್ಲೇಷಿಸುವುದಕ್ಕಾಗಿ ವಂಶವಾಹಿ ಆಪ್ತಸಮಾಲೋಚನೆ ಮತ್ತು ಪರೀಕ್ಷೆಗಳನ್ನು ಕೂಡ ಪರಿಗಣಿಸಬಹುದಾಗಿದೆ.

ಸ್ತನದ ಕ್ಯಾನ್ಸರ್‌ನ ಕೌಟುಂಬಿಕ ಹಿನ್ನೆಲೆ ಹೊಂದಿರುವವರು ತಮ್ಮ ಅಪಾಯ ಸಾಧ್ಯತೆಯ ಬಗ್ಗೆ ಆಂಕಾಲಜಿಸ್ಟ್‌ ಬಳಿ ಸಮಾಲೋಚಿಸುವುದು ಬಹಳ ಮುಖ್ಯವಾಗಿದೆ. ಇದರಿಂದ ವೈಯಕ್ತಿಕ ಮತ್ತು ಕೌಟುಂಬಿಕವಾದ ಅಪಾಯ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಬೇಗನೆ ರೋಗಪತ್ತೆ ಮತ್ತು ಸಮರ್ಪಕವಾದ ರೋಗಪ್ರತಿಬಂಧಕ ಕ್ರಮಗಳನ್ನು ಅನುಸರಿಸುವುದಕ್ಕೆ ಅಗತ್ಯವಾದಂತಹ ವ್ಯಕ್ತಿನಿರ್ದಿಷ್ಟ ರೋಗ ತಪಾಸಣೆ ಯೋಜನೆಯನ್ನು ರೂಪಿಸುವುದಕ್ಕೆ ಸಾಧ್ಯವಾಗುತ್ತದೆ.

ಸ್ತನದ ಕ್ಯಾನ್ಸರ್‌ನ ಬಲವಾದ ಕೌಟುಂಬಿಕ ಹಿನ್ನೆಲೆ ಅಥವಾ ನಿರ್ದಿಷ್ಟ ವಂಶವಾಹಿ ಮ್ಯುಟೇಶನ್‌ (ಉದಾಹರಣೆಗೆ, ಬಿಆರ್‌ಸಿಎ1 ಅಥವಾ ಬಿಆರ್‌ಸಿಎ2) ನಂತಹ ಹೆಚ್ಚು ಅಪಾಯ ಸಾಧ್ಯತೆ ಹೊಂದಿರುವವರಿಗೆ ಸ್ತನದ ಕ್ಯಾನ್ಸರ್‌ ತಪಾಸಣೆಗಾಗಿ ಮ್ಯಾಗ್ನೆಟಿಕ್‌ ರೆಸೊನೆನ್ಸ್‌ ಇಮೇಜಿಂಗ್‌ (ಎಂಆರ್‌ಐ)ಯನ್ನು ಕೂಡ ಉಪಯೋಗಿ ಸಬಹುದಾಗಿರುತ್ತದೆ. ಸ್ತನದ ಅಂಗಾಂಶಗಳ ಹೆಚ್ಚು ವಿವರವಾದ ಮತ್ತು ಮ್ಯಾಮೊಗ್ರಾಮ್‌ ನಲ್ಲಿ ಪತ್ತೆಯಾಗದ ಚಿತ್ರಣವನ್ನು ಎಂಆರ್‌ಐ ಒದಗಿಸಬಹು ದಾಗಿದೆ.ಆದರೆ ಎಲ್ಲರಿಗೂ ರೂಢಿಗತ ಎಂಆರ್‌ಐ ತಪಾಸಣೆಯಿಂದ ಪ್ರಯೋಜನವಾಗು ತ್ತದೆ ಎಂದೇನಿಲ್ಲ; ಇದರ ಉಪಯೋಗ ಕೆಲವು ನಿರ್ದಿಷ್ಟ ಪ್ರಕರಣಗಳಿಗೆ ಮಾತ್ರ ಮೀಸಲಾಗಿರುತ್ತದೆ. ವ್ಯಕ್ತಿಯ ಅಪಾಯ ಅಂಶಗಳನ್ನು ಆಧರಿಸಿ ಸ್ತನದ ಕ್ಯಾನ್ಸರ್‌ ತಪಾಸಣೆಯಲ್ಲಿ ಎಂಆರ್‌ಐಯನ್ನು ಸೇರಿಸಿಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ; ರೋಗಿಯ ನಿರ್ದಿಷ್ಟ ಸ್ಥಿತಿಗತಿಗಳಿಗೆ ಅನುಗುಣವಾಗಿ ಯಾವ ತಪಾಸಣೆ ಯೋಜನೆ ಸೂಕ್ತ ಎಂಬುದನ್ನು ನಿರ್ಧರಿಸುವುದಕ್ಕೆ ಆಂಕಾಲಜಿಸ್ಟ್‌ ಜತೆಗೆ ಸಮಾಲೋಚನೆ ಬಹಳ ಮುಖ್ಯವಾಗಿರುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ:

„ ಸ್ತನದ ಕ್ಯಾನ್ಸರ್‌ ಯಾವುದೇ ಲಕ್ಷಣಗಳನ್ನು ಪ್ರಕಟಿಸದೆಯೂ ಕಾಣಿಸಿಕೊಳ್ಳಬಹುದಾಗಿದೆ. ಆದಷ್ಟು ಬೇಗನೆ ಇದನ್ನು ಪತ್ತೆಹಚ್ಚಿ, ಚಿಕಿತ್ಸೆ ಆರಂಭಿಸಿ ಪ್ರಾಣ ಉಳಿಸುವುದಕ್ಕೆ ತಪಾಸಣೆ ನೆರವಾಗುತ್ತದೆ.

„ 40 ವರ್ಷ ವಯಸ್ಸಿನ ಬಳಿಕ ವಾರ್ಷಿಕವಾಗಿ ಅಥವಾ ಎರಡು ವರ್ಷಗಳಿಗೆ ಒಮ್ಮೆ ಮ್ಯಾಮೊಗ್ರಾಮ್‌ ಮಾಡಿಸಿಕೊಳ್ಳುವುದರಿಂದ ಸ್ತನದ ಕ್ಯಾನ್ಸರ್‌ ಪತ್ತೆಹಚ್ಚಬಹುದು.

„ ವಂಶವಾಹಿ ಮ್ಯುಟೇಶನ್‌ ಅಥವಾ ವಂಶವಾಹಿ ಮ್ಯುಟೇಶನ್‌ ಹೊಂದಿರುವವರು ಅಥವಾ ಬಲವಾದ ಕೌಟುಂಬಿಕ ಹಿನ್ನೆಲೆ ಹೊಂದಿರುವವರಲ್ಲಿ ಸ್ತನ ಕ್ಯಾನ್ಸರ್‌ ತಪಾಸಣೆಗೆ ಎಂಆರ್‌ಐ ಸ್ಕ್ಯಾನ್‌ ಉಪಯೋಗಿಸಬಹುದು.

„ ಆಂಕಾಲಜಿಸ್ಟ್‌ರಿಂದ ನಿಯಮಿತವಾಗಿ ತಪಾಸಣೆಗೆ ಒಳಗಾಗುವುದರಿಂದ ಸ್ತನದ ಕ್ಯಾನ್ಸರನ್ನು ಬೇಗನೆ ಪತ್ತೆಹಚ್ಚಲು ಸಾಧ್ಯವಾಗುತ್ತದೆ (ವೈದ್ಯಕೀಯ ಪರೀಕ್ಷೆ).

„ ಕನಿಷ್ಟ ತಿಂಗಳಿಗೆ ಒಮ್ಮೆ ಸ್ವಯಂ ಸ್ತನದ ಪರೀಕ್ಷೆ ಮಾಡಿಸಿಕೊಳ್ಳುವುದು ಕೂಡ ಮುಖ್ಯವಾಗಿದೆ.

 

-ಡಾ| ಹರೀಶ್‌ ಇ.,

ಸರ್ಜಿಕಲ್‌ ಆಂಕಾಲಜಿ,

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸರ್ಜಿಕಲ್‌ ಆಂಕಾಲಜಿ ವಿಭಾಗ, ಕೆಎಂಸಿ ಮಂಗಳೂರು)

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.