Eye Health: ಕಣ್ಣುಗಳು ಮತ್ತು ರುಮಟಾಯ್ಡ್‌ ಆರ್ಥ್ರೈಟಿಸ್‌


Team Udayavani, Jan 14, 2024, 3:07 PM IST

11-eyes

ರುಮಟಾಯ್ಡ್‌ ಆರ್ಥ್ರೈಟಿಸ್‌ (ಆರ್‌ಎ) ಎನ್ನುವುದು ಒಂದು ಆಟೊಇಮ್ಯೂನ್‌ ಕಾಯಿಲೆ. ಇನ್‌ಫ್ಲಮೇಟರಿ ಪಾಲಿಆರ್ಥ್ರೈಟಿಸ್‌, ಸಂಧಿಗಳು ಪೆಡಸಾಗುವುದು, ಜ್ವರ, ತೂಕ ನಷ್ಟ ಮತ್ತು ಅಸ್ವಾಸ್ಥ್ಯ ಇದರ ಲಕ್ಷಣಗಳು. ಸಂಧಿಗಳ ಸುತ್ತ ಎಲುಬು ನಷ್ಟವಾಗುವುದು, ಸಂಧಿಗಳ ವೈಕಲ್ಯ ಮತ್ತು ಗಂಟುಗಳು ಕೂಡ ಉಂಟಾಗಬಹುದಾಗಿದ್ದು, ಡಿಸ್ಟಲ್‌ ಇಂಟರ್‌ ಫ‌ಲೇಂಜಿಯಲ್‌ ಸಂಧಿಗಳಲ್ಲಿ ಮಾತ್ರ ಇವು ಉಂಟಾಗುವುದಿಲ್ಲ. ರುಮಟಾಯ್ಡ ಆರ್ಥ್ರೈಟಿಸ್‌ ಸ್ತ್ರೀಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಆರ್‌ಎ ಕಣ್ಣುಗಳನ್ನು ಕೂಡ ಬಾಧಿಸಬಹುದಾಗಿದ್ದು, ಚಿಕಿತ್ಸೆ ನೀಡಬೇಕಾಗುತ್ತದೆ.

ಸಂಧಿಗಳಂತೆಯೇ ಕಣ್ಣುಗಳ ಭಾಗವಾದ ಸ್ಲೆರಾ ಮತ್ತು ಕಾರ್ನಿಯಾ ಕೂಡ ಪ್ರೊಟಿಯೊಗ್ಲೈಕನ್‌ ಮತ್ತು ಕೊಲಾಜೆನ್‌ ಹೊಂದಿವೆ. ಈ ದೇಹಶಾಸ್ತ್ರೀಯ ಸಮಾನ ಗುಣದಿಂದಾಗಿ ಆರ್‌ಎಯ ಲಕ್ಷಣಗಳು ಕಣ್ಣುಗಳಲ್ಲಿಯೂ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

ಇಲ್ಲಿ ಆರ್‌ಎಯ ನೇತ್ರಸಂಬಂಧಿ ಲಕ್ಷಣಗಳು ಮತ್ತು ಚಿಕಿತ್ಸೆಯನ್ನು ವಿವರಿಸಲಾಗಿದೆ.

ಶುಷ್ಕ ನೇತ್ರಗಳು (ಡ್ರೈ ಐ ಸಿಂಡ್ರೋಮ್‌)

ಶುಷ್ಕ ನೇತ್ರಗಳು (ಡ್ರೈ ಐ ಸಿಂಡ್ರೋಮ್‌)- ಇದನ್ನು ಕೆರಾಟೊಕಂಜುಕ್ಟವಿಟಿಸ್‌ ಸಿಕ್ಕಾ ಎಂದು ಕೂಡ ಕರೆಯಲಾಗುತ್ತದೆ. ಇದು ಆರ್‌ಎಯ ಬಹಳ ಸಾಮಾನ್ಯವಾದ ನೇತ್ರಸಂಬಂಧಿ ಲಕ್ಷಣವಾಗಿದೆ. ಕಣ್ಣುಗಳಲ್ಲಿ ಇರುವ ಕಣ್ಣೀರು ಸ್ರವಿಸುವ ಗ್ರಂಥಿಗಳು ಕಾರ್ಯಚಟುವಟಿಕೆ ನಿಲ್ಲಿಸುವುದರ ಪರಿಣಾಮವಾಗಿ ಇದು ಉಂಟಾಗುತ್ತದೆ. ಶುಷ್ಕ ನೇತ್ರ ಸಿಂಡ್ರೋಮ್‌ನ ರೋಗಲಕ್ಷಣಗಳಲ್ಲಿ ಕಣ್ಣುಗಳಲ್ಲಿ ಬಾಹ್ಯ ವಸ್ತು ಸೇರಿಕೊಂಡಿರುವ ಸಂವೇದನೆ ಉಂಟಾಗುವುದು, ಉರಿ, ದೃಷ್ಟಿ ಸ್ಪಷ್ಟತೆ ಕಡಿಮೆಯಾಗುವುದು, ಫೊಟೊಫೋಬಿಯಾ ಮತ್ತು ಪ್ರುರಿಟಸ್‌ ಸೇರಿವೆ. ಕಣ್ಣುಗಳಲ್ಲಿ ಸಹಜವಾಗಿ ಇರುವ ಕಣ್ಣೀರಿನ ಪದರವು ಸೂಕ್ಷ್ಮಾಣು ನಿರೋಧಕ ಗುಣಗಳು ಮತ್ತು ರೋಗ ನಿರೋಧಕ ಗುಣಗಳನ್ನು ಹೊಂದಿರುತ್ತದೆ. ಶುಷ್ಕ ನೇತ್ರ ಸಿಂಡ್ರೋಮ್‌ಗೆ ತುತ್ತಾಗುವ ರೋಗಿಗಳು ಈ ರಕ್ಷಣಾತ್ಮಕ ವ್ಯವಸ್ಥೆಗಳಿಂದ ವಂಚಿತರಾಗುತ್ತಾರೆ ಮತ್ತು ಇದರ ಪರಿಣಾಮವಾಗಿ ಸೂಪರ್‌ ಫೀಶಿಯಲ್‌ ಪಂಕ್ವುಯೇಟ್‌ ಕೆರಾಟಿಟಿಸ್‌, ಫಿಲಮೆಂಟರಿ ಕೆರಾಟಿಟಿಸ್‌, ಕಾರ್ನಿಯಲ್‌ ಅಲ್ಸರ್‌ ಮತ್ತು ಅಂತಿಮವಾಗಿ ಕಾರ್ನಿಯಾ ಕರಗುವ ತೊಂದರೆಗಳಿಗೆ ಶುಷ್ಕ ನೇತ್ರ ಸಿಂಡ್ರೋಮ್‌ ಕಾರಣವಾಗುತ್ತದೆ.

ಹೀಗಾಗಿ ಆರ್‌ಎ ಹೊಂದಿರುವ ರೋಗಿಗಳಿಗೆ ಅವರು ಶುಷ್ಕ ನೇತ್ರ ಸಿಂಡ್ರೋಮ್‌ಗೆ ಕೂಡ ತುತ್ತಾಗುವ ಸಾಧ್ಯತೆ ಇರುವುದರಿಂದ ವಿಶೇಷವಾಗಿ ಲಾಸಿಕ್‌ ಸಹಿತ ದೃಷ್ಟಿ ಸರಿಪಡಿಸುವ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಶುಷ್ಕ ನೇತ್ರ ಸಿಂಡ್ರೋಮ್‌ ಗೆ ಚಿಕಿತ್ಸಾ ವಿಧಾನಗಳಲ್ಲಿ ಲ್ಯೂಬ್ರಿಕೇಟಿಂಗ್‌ ಡ್ರಾಪ್‌ ಮತ್ತು ಮುಲಾಮುಗಳು, ಟಾಪಿಕಲ್‌ ಸೈಕ್ಲೊನ್ಪೊರಿನ್‌ ಮತ್ತು ಬಾಯಿಯ ಮೂಲಕ ತೆಗೆದುಕೊಳ್ಳುವ ಪಿಲೊಕಾರ್ಪಿನ್‌ ಹಾಗೂ ಇತರ ಇತ್ತೀಚೆಗಿನ ಚಿಕಿತ್ಸಾ ವಿಧಾನಗಳು ಸೇರಿವೆ.

ಎಪಿಸ್ಕ್ಲೆರೈಟಿಸ್‌

ಎಪಿಸ್ಕ್ಲೆರೈಟಿಸ್‌ ಎಂಬುದು ಕಣ್ಣುಗಳಲ್ಲಿ ಟೆನನ್ಸ್‌ ಕ್ಯಾಪ್ಸೂಲ್‌ ನ ಕೆಳಗಿರುವ ಎಪಿಸ್ಕ್ಲಿಯರ್‌ ಎಂಬ ಭಾಗದ ಉರಿಯೂತ. ಇದು ಸ್ವಯಂಜನ್ಯ ತೊಂದರೆಯಾಗಿದ್ದರೂ ಆರ್‌ಎ ಅಥವಾ ಇದರ ದೇಹವ್ಯವಸ್ಥೆ ಸಂಬಂಧಿ ಕಾಯಿಲೆಯ ಜತೆಗೆ ಸಂಬಂಧ ಹೊಂದಿರಬಹುದಾಗಿದೆ. ಶೇ. 40 ಸಂದರ್ಭಗಳಲ್ಲಿ ಇದು ಎರಡೂ ಕಣ್ಣುಗಳಲ್ಲಿ ಉಂಟಾಗಬಹುದಾಗಿದ್ದು, ಕಣ್ಣುಗಳು ಗುಲಾಬಿ ಬಣ್ಣಕ್ಕೆ ತಿರುಗುವುದು ಮತ್ತು ಲಘು ನೋವು ಲಕ್ಷಣಗಳಾಗಿವೆ. ಆಂಶಿಕವಾಗಿ ವರ್ತುಲಾಕಾರದಲ್ಲಿ ಕಾಣಿಸಿಕೊಳ್ಳಬಹುದು, ಅಪರೂಪಕ್ಕೆ ಗಂಟಿನ ರೂಪದಲ್ಲಿಯೂ ಉಂಟಾಗಬಹುದು. ಎಪಿಸ್ಕ್ಲೆರೈಟಿಸ್‌ ಸಾಮಾನ್ಯವಾಗಿ ಸ್ವಯಂ ನಿಯಂತ್ರಣ ಹೊಂದುತ್ತದೆ.

ಟಾಪಿಕಲ್‌ ಕಾರ್ಟಿಕೊಸ್ಟಿರಾಯ್ಡ್ ಗಳು ಅಥವಾ ಬಾಯಿಯ ಮೂಲಕ ತೆಗೆದುಕೊಳ್ಳುವ ಸ್ಟಿರಾಯ್ಡೇತರ ಆ್ಯಂಟಿ ಇನ್‌ಫ್ಲಮೇಟರಿ ಔಷಧಗಳನ್ನು (ಎನ್‌ಎಸ್‌ಎಐಡಿಗಳು) ಇದರ ರೋಗಲಕ್ಷಣಗಳನ್ನು ಶಮನಗೊಳಿಸಲು ಉಪಯೋಗಿಸಬಹುದಾಗಿದೆ.

ಸ್ಕ್ಲೆರೈಟಿಸ್‌

ಕಣ್ಣಿನ ಭಾಗವಾಗಿರುವ ಸ್ಕ್ಲೆರಾದ ಉರಿಯೂತವಾಗಿರುವ ಸ್ಕ್ಲೆರೈಟಿಸ್‌ಗೆ ಬಹಳ ಸಾಮಾನ್ಯವಾದ ಕಾರಣ ಆರ್‌ಎ. ಅಂತರ್ಗತ ಮತ್ತು ಮೇಲ್ಮೈಯ ಎಪಿಸ್ಕ್ಲೆರಲ್‌ ರಕ್ತನಾಳಗಳು ವಿಕಸನಗೊಳ್ಳುವುದು ಇದರ ಲಕ್ಷಣವಾಗಿದೆ. ಅಪರೂಪಕ್ಕೆ ಆರ್‌ಎ ತುತ್ತಾಗಿರುವ ರೋಗಿಯ ದೇಹದಲ್ಲಿ ಸಂಧಿಭಾಗಗಳಲ್ಲಿ ರೋಗಲಕ್ಷಣಗಳು ಉಂಟಾಗುವುದಕ್ಕೆ ಮುನ್ನವೇ ಸ್ಕ್ಲೆರೈಟಿಸ್‌ ಕಾಣಿಸಿಕೊಳ್ಳಬಹುದಾಗಿದೆ. ಶೇ.40ರಿಂದ 50 ರಷ್ಟು ಪ್ರಕರಣಗಳಲ್ಲಿ ಸ್ಕ್ಲೆರೈಟಿಸ್‌ ಎರಡೂ ಕಣ್ಣುಗಳಲ್ಲಿ ಉಂಟಾಗುತ್ತದೆ. ಆ್ಯಂಟೀರಿಯರ್‌ ಸ್ಕ್ಲೆರೈಟಿಸ್‌ ಗಂಟಿನ ರೂಪದಲ್ಲಿರಬಹುದು, ಡಿಫ್ಯೂಸ್‌ ಆಗಿರಬಹುದು, ನೆಕ್ರೊಸಿಸ್‌ಗೆ ಕಾರಣವಾಗಬಹುದು. ಕಣ್ಣು ಚಲನೆಯಿಂದ ಹೆಚ್ಚಳವಾಗುವ ತೀವ್ರ ನೋವು, ಅಸ್ಪಷ್ಟ ದೃಷ್ಟಿ, ಫೊಟೊಫೋಬಿಯಾ ಮತ್ತು ಹರಿಯುವಿಕೆ (ಚಿತ್ರ 1) ಇದರ ಲಕ್ಷಣಗಳು. ಸ್ಕ್ಲೆರೊಮಲೇಸಿಯಾ ಪರ್ಫೊರಾನ್ಸ್‌ ಎಂಬುದು ಉರಿಯೂತ ರಹಿತ ಆಂಟೀರಿಯರ್‌ ನೆಕ್ರೊಟೈಸಿಂಗ್‌ ಸ್ಕ್ಲೆರೈಟಿಸ್‌ ಆಗಿದೆ.

(ಚಿತ್ರ 2). ಈ ತೊಂದರೆಯು ದೃಷ್ಟಿ ನಷ್ಟ, ಆಸ್ಟಿಗ್ಪಾಟಿಸಂ ಮತ್ತು ಗ್ಲೋಬ್‌ ಪರ್ಫೊರೇಶನ್‌ಗಳಿಗೆ ಕಾರಣವಾಗಬಹುದಾಗಿದ್ದರೂ ನೋವು ಇರುವುದಿಲ್ಲ. ಪೊಸ್ಟೀರಿಯರ್‌ ಸ್ಕ್ಲೆರೈಟಿಸ್‌ ಇನ್ನೊಂದು ವಿಧವಾದ ಸ್ಕ್ಲೆರೈಟಿಸ್‌.

ಸ್ಕ್ಲೆರೈಟಿಸ್‌ಗೆ ಚಿಕಿತ್ಸೆಯಲ್ಲಿ ಸ್ಥಳೀಯವಾಗಿ ಉಪಯೋಗಿಸುವ ಔಷಧಗಳು (ಟಾಪಿಕಲ್‌ ಮೆಡಿಕೇಶನ್ಸ್‌) ಸಾಮಾನ್ಯವಾಗಿ ಪರಿಣಾಮಕಾರಿಯಲ್ಲ. ರೋಗಿಗಿರುವ ಆರ್‌ಎಯನ್ನು ನಿರ್ವಹಿಸುವುದಕ್ಕೆ ಚಿಕಿತ್ಸೆ ಗಮನ ಹರಿಸಬೇಕು. ಇದಕ್ಕಾಗಿ ರೋಗಿಯ ಪ್ರಾಥಮಿಕ ಆರೈಕೆ ವೈದ್ಯರು ಮತ್ತು ರುಮಟಾಲಜಿಸ್ಟ್‌ ಸಹಿತ ಬಹು ವೈದ್ಯ ವಿಭಾಗೀಯ ತಂಡ ವಿಧಾನದಲ್ಲಿ ಚಿಕಿತ್ಸೆ ಒದಗಿಸಬೇಕು.

ಲಘು ಪ್ರಕರಣಗಳು ಮತ್ತು ನೋಡ್ಯುಲಾರ್‌ ಆಂಟೀರಿಯರ್‌ ಸ್ಕ್ಲೆರೈಟಿಸ್‌ಗೆ ಬಾಯಿಯ ಮೂಲಕ ತೆಗೆದುಕೊಳ್ಳುವ ಎನ್‌ಎಸ್‌ಎಐಡಿಗಳು ಬಹಳ ಪರಿಣಾಮಕಾರಿಯಾಗಿರುತ್ತವೆ. ತೀವ್ರ ತರಹದ ಪ್ರಕರಣಗಳಲ್ಲಿ ಬಾಯಿಯ ಮೂಲಕ ತೆಗೆದುಕೊಳ್ಳುವ ಕಾರ್ಟಿಕೊಸ್ಟಿರಾಯ್ಡಗಳು ಚಿಕಿತ್ಸೆಯ ಆಯ್ಕೆಗಳಾಗಿವೆ. ಸ್ಕ್ಲೆರೈಟಿಸ್‌ನ ಲಕ್ಷಣಗಳ ತೀವ್ರತೆಯನ್ನು ಮತ್ತು ಚಿಕಿತ್ಸೆಗೆ ಪ್ರತಿಸ್ಪಂದನೆಯನ್ನು ಆಧರಿಸಿ ನೀಡಬಹುದಾದ ಇತರ ಔಷಧಗಳಲ್ಲಿ ಮೆಥೊಟ್ರಿಕ್ಸೇಟ್‌, ಅಝಾಥಿಯೊಪ್ರೈನ್‌, ಮೈಕೊಫಿನೊಲೇಟ್‌ ಮೊಫೆಟಿಲ್‌, ಸೈಕ್ಲೊನ್ಪೊರಿನ್‌ ಮತ್ತು ಇನ್‌ಫ್ಲಿಕ್ಸಿಮಾಬ್‌, ಅಡಾಲಿಮುಮಾಬ್‌ ಮತ್ತು ಅನಾಕಿನ್ರಾದಂತಹ ಜೀವಶಾಸ್ತ್ರೀಯ ಏಜೆಂಟ್‌ಗಳು ಸೇರಿವೆ.

ಪೆರಿಫ‌ರಲ್‌ ಅಲ್ಸರೇಟಿವ್‌ ಕೆರಾಟೈಟಿಸ್‌

ಪೆರಿಫ‌ರಲ್‌ ಅಲ್ಸರೇಟಿವ್‌ ಕೆರಾಟೈಟಿಸ್‌ (ಪಿಯುಕೆ) ಕಾರ್ನಿಯಾ ಕರಗುವ ತೊಂದರೆಯ ಒಂದು ವಿಧವಾಗಿದ್ದು, ಕಾರ್ನಿಯಲ್‌ ಪೆರಿಫ‌ರಿಯ 0.5 ಮಿ.ಮೀ. ವಾಸ್ಕಾಲಾರ್‌ ಆರ್ಕೇಡ್‌ಗಳಲ್ಲಿ ರೋಗ ನಿರೋಧಕ ಸಂಕೀರ್ಣಗಳು ಒಳನುಸುಳಿದಾಗ ಉಂಟಾಗುತ್ತದೆ. ಇದಕ್ಕೆ ಆರ್‌ಎ ಸಾಮಾನ್ಯವಾದ ರೋಗ ಕಾರಣವಾಗಿದ್ದು, ಶೇ. 34 ಪ್ರಕರಣಗಳಲ್ಲಿ ಕಂಡುಬರುತ್ತದೆ; ಆದರೆ ಇದು ಇತರ ಆಟೊಇಮ್ಯೂನ್‌ ತೊಂದರೆಗಳು, ಸೋಂಕುಗಳು, ನರಶಾಸ್ತ್ರೀಯ ತೊಂದರೆಗಳು ಮತ್ತು ಚರ್ಮಶಾಸ್ತ್ರೀಯ ಸಮಸ್ಯೆಗಳಿಂದಲೂ ಉಂಟಾಗಬಹುದು. ಶೇ. 60ರಷ್ಟು ಪ್ರಕರಣಗಳಲ್ಲಿ ಇದು ಒಂದೇ ಕಣ್ಣಿನಲ್ಲಿ ಕಂಡುಬರುತ್ತದೆ; ನೋವು, ಫೊಟೊಫೋಬಿಯಾ, ಹಾನಿ ಮತ್ತು ಕಾರ್ನಿಯಲ್‌ ಒಪೇಸಿಟಿ ಅಥವಾ ಅಸ್ಟಿಗ್ಮಾಟಿಸಂನಿಂದಾಗಿ ದೃಷ್ಟಿ ಸ್ಪಷ್ಟತೆ ಕಡಿಮೆಯಾಗುವ ಲಕ್ಷಣಗಳನ್ನು ಹೊಂದಿರುತ್ತದೆ. ಇದರ ಸಂಕೀರ್ಣ ಅಪಾಯಗಳಲ್ಲಿ ಕಾರ್ನಿಯಲ್‌ ಪಫೊìರೇಶನ್‌ ಒಂದಾಗಿದೆ.

ಚಿಕಿತ್ಸೆಯ ಕಾರ್ಯತಂತ್ರಗಳಲ್ಲಿ ಆರ್‌ಎಯನ್ನು ನಿಭಾಯಿಸುವುದಕ್ಕೆ ಪ್ರಥಮ ಆದ್ಯತೆ ನೀಡಬೇಕಾಗಿರುತ್ತದೆ. ಇಮ್ಯುನಾಲಾಜಿಕ್‌ ಏಜೆಂಟ್‌ ಸಹಿತ ಅಥವಾ ರಹಿತವಾಗಿ ಸಿಸ್ಟೆಮಿಕ್‌ ಕಾರ್ಟಿಕೊಸ್ಟಿರಾಯ್ಡಗಳನ್ನು ನೀಡುವುದು ಮುಖ್ಯ ಚಿಕಿತ್ಸಾ ಕ್ರಮವಾಗಿದೆ. ಕಾರ್ನಿಯಾವನ್ನು ಉಳಿಸಿಕೊಳ್ಳುವ ಇತರ ಕ್ರಮಗಳೆಂದರೆ ಕೊಲ್ಯಾಜಿನೇಸ್‌ ಇನ್‌ಹಿಬಿಟರ್‌ಗಳಾಗಿ ಕಾರ್ಯನಿರ್ವಹಿಸುವ ಟಾಪಿಕಲ್‌ ಮೆಡ್ರೊಕ್ಸೈಪ್ರೊಜೆಸ್ಟಿರೋನ್‌ ಮತ್ತು ಅಸಿಟಿಲ್‌ಸಿಸ್ಟೇನ್‌ ಹಾಗೂ ಮ್ಯಾಟ್ರಿಕ್ಸ್‌ ಮೆಟಾಲ್ಲೊಪ್ರೊಟೀನೇಸ್‌ ಇನ್‌ಹಿಬಿಟ್‌ ಆಗಿ ಕೆಲಸ ಮಾಡುವ ಬಾಯಿಯ ಮೂಲಕ ತೆಗೆದುಕೊಳ್ಳುವ ಟೆಟ್ರಾಸೈಕ್ಲಿನ್‌.

ರುಮಟಾಯ್ಡ್‌ ಆರ್ಥ್ರೈಟಿಸ್‌ಗೆ ಚಿಕಿತ್ಸೆ ನೀಡುವಾಗ ನೇತ್ರ ಸಂಬಂಧಿ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ, ಚಿಕಿತ್ಸೆಗೆ ಒಳಪಡಿಸಬೇಕಾಗುತ್ತದೆ. ರೋಗಿಗೆ ದೀರ್ಘ‌ಕಾಲೀನವಾಗಿ ಸ್ಟಿರಾಯ್ಡಗಳನ್ನು ನೀಡಿದ ಸಂದರ್ಭದಲ್ಲಿ ಕ್ಯಾಟರ್ಯಾಕ್ಟ್ ಮತ್ತು ಗ್ಲುಕೊಮಾ ಉಂಟಾಗುವ ಸಾಧ್ಯತೆ ಇರುತ್ತದೆ.

ಕ್ಯಾಟರ್ಯಾಕ್ಟ್ ಉಂಟಾದ ಸಂದರ್ಭದಲ್ಲಿ ರೋಗಿಗೆ ದೃಷ್ಟಿ ಮಂಜಾಗಬಹುದು; ಇದನ್ನು ಕ್ಯಾಟರ್ಯಾಕ್ಟ್ ಶಸ್ತ್ರಚಿಕಿತ್ಸೆಯ ಮೂಲಕ ನಿಭಾಯಿಸಬೇಕಾಗುತ್ತದೆ. ಗ್ಲುಕೊಮಾದ ಆರಂಭಿಕ ಹಂತಗಳಲ್ಲಿ ರೋಗಿಗೆ ಯಾವುದೇ ಲಕ್ಷಣಗಳು ಕಂಡುಬರಲಾರವು; ನೇತ್ರಶಾಸ್ತ್ರೀಯವಾಗಿ ನಿಗಾ ವಹಿಸದೆ ಇದ್ದಲ್ಲಿ ಕೊನೆಯ ಹಂತಗಳಲ್ಲಿ ಮಾತ್ರ ಪತ್ತೆಯಾದೀತು. ಹೈಡ್ರೊಕ್ಸೈಕ್ಲೊರೊಕ್ವಿನ್‌ನಿಂದ ಮಾಕ್ಯುಲಾರ್‌ ತೆಳುವಾಗುವಿಕೆ ಉಂಟಾಗಬಹುದು; ಇದನ್ನು ಶೀಘ್ರವಾಗಿ ಪತ್ತೆಹಚ್ಚಲು ನಿಯಮಿತ ತಪಾಸಣೆಗಳು ಮತ್ತು ಒಸಿಟಿ ಸ್ಕ್ಯಾನ್‌ ಅಗತ್ಯವಾಗುತ್ತದೆ.

-ಡಾ| ಕೀರ್ತನ್‌ ರಾವ್‌,

ಕನ್ಸಲ್ಟಂಟ್‌ ಆಪ್ತಮಾಲಜಿ,

ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಪ್ತಮಾಲಜಿ ಮತ್ತು ರುಮಟಾಲಜಿ ವಿಭಾಗ, ಕೆಎಂಸಿ ಮಂಗಳೂರು)

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.