Tooth: ನಿಮ್ಮ ಮುಖದಲ್ಲಿ ಶುಭ್ರ ನಗು: ಸೂಕ್ತವಾದ ಟೂತ್‌ಬ್ರಶ್‌ ಆರಿಸಿಕೊಳ್ಳಲು ಸಲಹೆಗಳು


Team Udayavani, Jan 14, 2024, 3:26 PM IST

12-teeth

ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸರಿಯಾದ ಹಲ್ಲುಜ್ಜುವ ಬ್ರಶ್‌ ಆರಿಸಿಕೊಳ್ಳುವುದು ಬಹಳ ನಿರ್ಣಾಯಕವಾದ ವಿಷಯ. ಸರಿಯಾದ ಹಲುjಜ್ಜುವ ಬ್ರಶ್‌ ಆಯ್ದುಕೊಂಡು ಉಪಯೋಗಿಸಿ ಶುಭ್ರ ನಗು ಸೂಸುವುದಕ್ಕಾಗಿ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

ಬಾಯಿಯ ಆರೋಗ್ಯವನ್ನು ಚೆನ್ನಾಗಿ ಇರಿಸಿಕೊಳ್ಳುವುದು ಆರೋಗ್ಯಯುತ, ಶುಭ್ರ ನಗುವನ್ನು ಸೂಸುವುದಕ್ಕೆ ನಿರ್ಣಾಯಕವಾಗಿದೆ. ನಮ್ಮ ಬಾಯಿಯ ಆರೋಗ್ಯ, ನೈರ್ಮಲ್ಯವನ್ನು ಕಾಪಾಡಿಕೊಳ್ಳುವಲ್ಲಿ ಬಹಳ ಮುಖ್ಯವಾದ ಸಲಕರಣೆ ನಮ್ಮ ಹಲ್ಲುಜ್ಜುವ ಬ್ರಶ್‌. ಮಾರುಕಟ್ಟೆಯಲ್ಲಿ ವೈವಿಧ್ಯಮಯವಾದ ಬ್ರಶ್‌ ಗಳು ಲಭ್ಯವಿರುವುದರಿಂದ ನಮ್ಮ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ತಕ್ಕುದಾದ ಬ್ರಶ್‌ ಆರಿಸಿಕೊಳ್ಳುವುದು ಸವಾಲೇ ಸರಿ. ಬೇರೆ ಬೇರೆಯದಾದ ಬಾಯಿಯ ಆರೋಗ್ಯ- ಆರೈಕೆ ಅಗತ್ಯಗಳಿಗಾಗಿ ಬೇರೆ ಬೇರೆಯದೇ ಆದ ಹಲ್ಲುಜ್ಜುವ ಬ್ರಶ್‌ಗಳು ಮಾರುಕಟ್ಟೆಯಲ್ಲಿವೆ. ಬ್ರಶ್‌ಗಳ ಪ್ರಧಾನ ಗುಣಲಕ್ಷಣಗಳು ಮತ್ತು ನಮ್ಮ ನಿರ್ದಿಷ್ಟ ಹಲ್ಲು ಮತ್ತು ಬಾಯಿಯ ಅಗತ್ಯಗಳನ್ನು ಆಧರಿಸಿಕೊಂಡು ನಾವು ಹಲ್ಲುಜ್ಜುವ ಬ್ರಶ್‌ ಆರಿಸಿಕೊಂಡರೆ ಬಾಯಿ, ಹಲ್ಲು ಮತ್ತು ವಸಡುಗಳ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡು ಶುಭ್ರ ನಗುವನ್ನು ಸೂಸುವುದಕ್ಕೆ ಸಾಧ್ಯ.

ಸರಿಯಾಗಿ ಉಪಯೋಗಿಸಿದರೆ ಸಾದಾ ಮತ್ತು ಇಲೆಕ್ಟ್ರಿಕ್‌ – ಎರಡೂ ವಿಧವಾದ ಬ್ರಶ್‌ಗಳು ಪರಿಣಾಮಕಾರಿ. ಹಿಂದು ಮುಂದಕ್ಕೆ ಜರುಗುವ ಅಥವಾ ವರ್ತುಲಾಕಾರವಾಗಿ ಸುತ್ತುವ ತಲೆಯುಳ್ಳ ಇಲೆಕ್ಟ್ರಿಕ್‌ ಹಲ್ಲುಜ್ಜುವ ಬ್ರಶ್‌ ಹಲ್ಲುಗಳಲ್ಲಿ ಕಟ್ಟಿರುವ ಕೊಳೆಯನ್ನು ನಿರ್ಮೂಲಗೊಳಿಸುವಲ್ಲಿ ಪ್ರಯೋಜನಕಾರಿ. ಸಾದಾ ಹಲ್ಲುಜ್ಜುವ ಬ್ರಶ್‌ನಿಂದ ಸರಿಯಾಗಿ ಹಲ್ಲುಜ್ಜುವ ಕ್ರಮವನ್ನು ಅನುಸರಿಸಿದರೆ ಇದು ಕೂಡ ಪರಿಣಾಮಕಾರಿ. ಸಾದಾ ಹಲ್ಲುಜ್ಜುವ ಬ್ರಶ್‌ಗಳು ಎಲ್ಲೆಲ್ಲೂ ದೊರಕುತ್ತವೆ, ಬಹಳ ಸಾಮಾನ್ಯವಾದುದಾಗಿವೆ. ಇದು ಯಾವ ವಿಧದ್ದು ಎಂಬುದು ಬಹಳ ಮುಖ್ಯ. ಈ ಬ್ರಶ್‌ ಗಳ ಬ್ರಿಸ್ಟಲ್‌ಗ‌ಳು ಮತ್ತು ಹೆಡ್‌ ಬಹಳ ಮುಖ್ಯ ಭಾಗ. ಇವು ಬೇರೆ ಬೇರೆಯದೇ ಆದ ಅಗತ್ಯ ಮತ್ತು ಆದ್ಯತೆಗಳಿಗೆ ಅನುಸಾರವಾಗಿ ವಿಭಿನ್ನ ಗಾತ್ರಗಳು, ಆಕಾರಗಳು ಮತ್ತು ಬ್ರಿಸ್ಟಲ್‌ ವಿಧ (ಸಾಫ್ಟ್, ಮೀಡಿಯಂ ಅಥವಾ ಹಾರ್ಡ್‌) ಗಳಲ್ಲಿ ಲಭ್ಯವಿವೆ.

  1. ಸಾಫ್ಟ್ ಬ್ರಿಸ್ಟಲ್‌ಗ‌ಳು: ಸಾಫ್ಟ್ ಬ್ರಿಸ್ಟಲ್‌ ಗಳು ವಸಡು, ಹಲ್ಲು ಎನಾಮಲ್‌ಗ‌ಳ ಮೇಲೆ ಮೃದುವಾಗಿ ವರ್ತಿಸುತ್ತವೆ; ಹೀಗಾಗಿ ಸೂಕ್ಷ್ಮ ಸಂವೇದಿ ಹಲ್ಲುಗಳು ಮತ್ತು ವಸಡುಗಳನ್ನು ಹೊಂದಿರುವವರಿಗೆ ಇವು ಸೂಕ್ತ. ಕಿರಿಕಿರಿ, ನೋವು ಉಂಟು ಮಾಡದೆ ಇವು ಪ್ಲೇಕ್‌ ಮತ್ತು ಕೊಳೆಯನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತವೆ.
  2. ಮೀಡಿಯಂ ಬ್ರಿಸ್ಟಲ್‌ಗ‌ಳು: ಮೃದುತ್ವ ಮತ್ತು ಗಡಸುತನಗಳ ನಡುವಣ ಸಮತೋಲನವನ್ನು ಮೀಡಿಯಂ ಬ್ರಿಸ್ಟಲ್‌ಗ‌ಳು ಸಾಧಿಸುತ್ತವೆ. ಇವು ಸಾಫ್ಟ್ ಬ್ರಿಸ್ಟಲ್‌ಗ‌ಳಿಗಿಂತ ಸ್ವಲ್ಪ ಗಡಸು, ಹೀಗಾಗಿ ಶುಚಿಗೊಳಿಸುವ ಸಾಮರ್ಥ್ಯ ಸಾಫ್ಟ್ ಬ್ರಿಸ್ಟಲ್‌ಗ‌ಳಿಗಿಂತ ಕೊಂಚ ಹೆಚ್ಚು. ಆದರೆ ಇವು ಸೂಕ್ಷ್ಮ ಸಂವೇದಿ ಹಲ್ಲುಗಳು ಮತ್ತು ವಸಡು ಹೊಂದಿರುವವರಿಗೆ ಸೂಕ್ತವಾದುವಲ್ಲ.
  3. ಹಾರ್ಡ್‌ ಬ್ರಿಸ್ಟಲ್‌ಗ‌ಳು: ಹಾರ್ಡ್‌ ಬ್ರಿಸ್ಟಲ್‌ಗ‌ಳು ಹೆಚ್ಚು ಗಡುಸಾಗಿದ್ದು, ಹೆಚ್ಚು ತೀವ್ರತರಹದ ಶುಚಿಗೊಳಿಸುವ ಕೆಲಸ ಮಾಡುತ್ತವೆ. ಹೆಚ್ಚು ಗಟ್ಟಿಯಾದ ಪ್ಲೇಕ್‌ ಮತ್ತು ಕೊಳೆಯನ್ನು ತೆಗೆದುಹಾಕಲು ಇವು ಪ್ರಯೋಜನಕಾರಿ. ಆದರೆ ಇವುಗಳ ಬಳಕೆಯಲ್ಲಿ ಜಾಗರೂಕರಾಗಿರಬೇಕು ಏಕೆಂದರೆ ವಸಡುಗಳು ಮತ್ತು ಹಲ್ಲುಗಳ ಎನಾಮಲ್‌ ಗಳಿಗೆ ಹಾನಿಯಾಗಬಹುದು. ಹೀಗಾಗಿ ದೈನಿಕ ಬಳಕೆಗೆ ಅದರಲ್ಲೂ ಸೂಕ್ಷ್ಮ ಸಂವೇದಿ ವಸಡು ಮತ್ತು ಹಲ್ಲುಗಳನ್ನು ಹೊಂದಿರುವವರಿಗೆ ಇವು ಸೂಕ್ತವಲ್ಲ.
  4. ಎಕ್ಸ್‌ಟ್ರಾ ಸಾಫ್ಟ್ ಬ್ರಿಸ್ಟಲ್‌ ಗಳು: ಇವು ಸಾಫ್ಟ್ ಬ್ರಿಸ್ಟಲ್‌ ಬ್ರಶ್‌ ಗಳಿಗಿಂತಲೂ ಮೃದುವಾಗಿದ್ದು, ಹಲ್ಲುಗಳು ಮತ್ತು ವಸಡು ತೀರಾ ಸೂಕ್ಷ್ಮ ಸಂವೇದಿಯಾಗಿರುವವರಿಗೆ ಇವುಗಳನ್ನು ಶಿಫಾರಸು ಮಾಡಲಾಗುತ್ತದೆ. ಇವುಗಳನ್ನು ತೀರಾ ಮೃದು ಮತ್ತು ನವಿರಾಗಿದ್ದೂ ಕೊಳಚೆಯನ್ನು ಪರಿಣಾಮಕಾರಿಯಾಗಿ ನಿರ್ಮೂಲಗೊಳಿಸುವಂತೆ ವಿನ್ಯಾಸ ಮಾಡಲಾಗಿರುತ್ತದೆ.
  5. ಟೇಪರ್ಡ್ ಬ್ರಿಸ್ಟಲ್ಸ್‌: ಪರ್ಡ್ ಬ್ರಿಸ್ಟಲ್ಸ್‌ ದುಂಡನೆಯ ಅಥವಾ ಮೊನೆಯುಳ್ಳ ತಲೆಯನ್ನು ಹೊಂದಿರುತ್ತವೆ. ಹಲ್ಲುಗಳ ನಡುವೆ, ವಸಡಿನ ಒಳಭಾಗದಂತಹ ಸ್ಥಳಗಳಿಗೂ ತಲುಪಿ ಶುಚಿಗೊಳಿಸುವ ಕೆಲಸ ಇವುಗಳಿಂದ ಸಾಧ್ಯ. ಪ್ಲೇಕ್‌ ನಿರ್ಮೂಲಗೊಳಿಸಿ ವಸಡಿನ ಕಾಯಿಲೆಗಳು ಉಂಟಾಗುವ ಅಪಾಯವನ್ನು ದೂರ ಮಾಡುವಲ್ಲಿ ಇವು ಪರಿಣಾಮಕಾರಿ. ‌
  6. ಕ್ರಿಸ್‌ಕ್ರಾಸ್‌ ಬ್ರಿಸ್ಟಲ್ಸ್‌: ಬ್ರಿಸ್ಟಲ್‌ ಗಳು ಬೇರೆ ಬೇರೆ ಕೋನಗಳಲ್ಲಿ ಇರುವಂತೆ ವಿನ್ಯಾಸಗೊಂಡಿರುವ ಬ್ರಶ್‌ಗಳಿವು. ಹಲ್ಲುಗಳನ್ನು ಹಲವು ಕೋನಗಳಿಂದ ತಿಕ್ಕಿ ಶುಚಿಗೊಳಿಸುವುದು ಇವುಗಳಿಂದ ಸಾಧ್ಯ.
  7. ಮಲ್ಟಿ-ಲೆವೆಲ್‌ ಬ್ರಶ್‌: ಇವುಗಳಲ್ಲಿ ಬ್ರಿಸ್ಟಲ್‌ಗ‌ಳು ಬೇರೆ ಬೇರೆ ಹಂತಗಳಲ್ಲಿ ಮೆಟ್ಟಿಲುಗಳಂತೆ ಜೋಡಣೆಗೊಂಡಿರುತ್ತವೆ. ಹಲ್ಲುಗಳ ವಿವಿಧ ಎತ್ತರ-ತಗ್ಗುಗಳನ್ನು, ಮುಂಭಾಗ, ಹಿಂಭಾಗ ಮತ್ತು ಜಗಿಯುವ ಭಾಗ ಸಹಿತ ಏಕಕಾಲದಲ್ಲಿ ಶುಚಿಗೊಳಿಸುವುದು ಇದರಿಂದ ಸಾಧ್ಯ.

ಹೀಗೆ ಬಾಯಿಯ ಒಳಭಾಗವನ್ನು ಶುಚಿಯಾಗಿ, ಆರೋಗ್ಯಪೂರ್ಣವಾಗಿ ಇರಿಸಿಕೊಳ್ಳುವಲ್ಲಿ ಸರಿಯಾದ ಮತ್ತು ಸೂಕ್ತವಾದ ಬ್ರಶ್‌ ಆರಿಸಿಕೊಳ್ಳುವುದು ಮೊದಲ ಹೆಜ್ಜೆಯಾಗಿದೆ.

-ಡಾ| ಆನಂದದೀಪ್‌ ಶುಕ್ಲಾ,

ಅಸೋಸಿಯೇಟ್‌ ಪ್ರೊಫೆಸರ್‌ ಓರಲ್‌ ಸರ್ಜರಿ ವಿಭಾಗ,

ಎಂಸಿಒಡಿಎಸ್‌, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ದಂತ ವೈದ್ಯಕೀಯ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

 

ಟಾಪ್ ನ್ಯೂಸ್

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

vidan-soudha-kannada

Golden Jubilee: ಕನ್ನಡವೇ ಅಧಿಕಾರಿಗಳ‌ ಹೃದಯದ ಭಾಷೆ ಆಗಲಿ

KSRTC

Transport: ಕೆಎಸ್ಸಾರ್ಟಿಸಿ ದಾಖಲೆ: ಒಂದೇ ದಿನ 1.23 ಕೋಟಿ ಮಂದಿ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Mental health: ತಾಯಂದಿರ ಮಾನಸಿಕ ಆರೋಗ್ಯ

1

Dentistry: ನಿಮ್ಮ ಆತ್ಮವಿಶ್ವಾಸದ ನಗುಮುಖಕ್ಕೆ ಡೆಂಟಲ್‌ ಇಂಪ್ಲಾಂಟ್‌

7

fasting- ಆತ್ಮದ ಶಕ್ತಿ; ಆಧುನಿಕ ಪ್ರಾಚೀನ ಹಾಗೂ ಪರಿಕಲ್ಪನೆಯ ಸಂಯೋಗ

4

Health: ಮೊಣಕಾಲಿನ ಅಸ್ಥಿಸಂಧಿವಾತ; ಸಾಮಾನ್ಯ ಸಮಸ್ಯೆಯನ್ನು ಮಾಡಿಕೊಳ್ಳುವುದು

1

Tobacco Cessation Centre: ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ತಂಬಾಕು ವರ್ಜನ ಕೇಂದ್ರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.