Koppal: ಈಜಲು ಹೋದ 9 ನೇ ತರಗತಿ ವಿದ್ಯಾರ್ಥಿ ನೀರು ಪಾಲು
ವಸತಿ ಶಾಲೆಯ ಗೋಡೆ ಹಾರಿ ಹೋಗಿದ್ದ ನಾಲ್ವರು ಸ್ನೇಹಿತರು...
Team Udayavani, Jan 14, 2024, 7:51 PM IST
ಕೊಪ್ಪಳ: ಸಂಕ್ರಾಂತಿ ನಿಮಿತ್ತ ಈಜಲು ಹೋಗಿದ್ದ ವಸತಿ ಶಾಲೆಯ ಬಾಲಕನೋರ್ವ ನೀರು ಪಾಲಾದ ದುರ್ಘಟನೆ ಭಾನುವಾರ ಸಂಭವಿಸಿದೆ.
ಕೂಕನೂರು ಪಟ್ಟಣದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಪ್ರದೀಪ್ ಮೃತ ದುರ್ದೈವಿ. ನಾಲ್ಕು ಜನ ಸ್ನೇಹಿತರೊಂದಿಗೆ ವಸತಿ ಶಾಲೆಯ ಗೋಡೆ ಹಾರಿ ಕಲ್ಲು ಕ್ವಾರಿಯಲ್ಲಿ ದೊಡ್ಡದಾಗಿ ಅಗೆದಿರುವ ನೀರಿನ ಹೊಂಡದಲ್ಲಿ ಈಜಲು ಹೋಗಿದ್ದಾರೆ.
ಈ ವೇಳೆ ಮೂವರಿಗೆ ಈಜಲು ಬಂದಿದ್ದು, ಕುಷ್ಟಗಿ ಮೂಲದ ಪ್ರದೀಪ್ ಈಜಲು ಬರದೇ ಹೊಂಡದಲ್ಲಿ ಮುಳುಗಿದ್ದಾನೆ. ಅಗ್ನಿ ಶಾಮಕ ದಳದ ಸಿಬಂದಿ, ಪೊಲೀಸರು ಮೃತ ಬಾಲಕನ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕೂಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.