ಮಾಲೆ ಚುನಾವಣೆ: ಭಾರತ ವಿರೋಧಿ ಮುಯಿಜ್ಜು ಪಕ್ಷಕ್ಕೆ ಸೋಲು
ನಗರಪಾಲಿಕೆ ಚುನಾವಣೆಯಲ್ಲಿ ಭಾರತ ಪರವಿರುವ ಎಂಡಿಪಿ ಪಕ್ಷಕ್ಕೆ ಗೆಲುವು
Team Udayavani, Jan 14, 2024, 9:52 PM IST
ಮಾಲೆ: ಇತ್ತೀಚೆಗಷ್ಟೇ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಅನಗತ್ಯವಾಗಿ ನಿಂದಿಸಿ, ಮಾಲ್ಡೀವ್ಸ್ನ ಮೂರು ಮಂತ್ರಿಗಳು ಅಮಾನತುಗೊಂಡಿದ್ದರು. ಅದರ ಬೆನ್ನಲ್ಲೇ ನಡೆದ ಮಾಲ್ಡೀವ್ಸ್ ರಾಜಧಾನಿ ಮಾಲೆ ನಗರಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಆಡಳಿತಾರೂಢ ಪಿಎನ್ಸಿ ಪಕ್ಷ ಹೀನಾಯವಾಗಿ ಸೋತುಹೋಗಿದೆ. ಭಾರತ ಪರ ನಿಲುವು ಹೊಂದಿರುವ ಎಂಡಿಪಿ ಪಕ್ಷ ಮೇಯರ್ ಚುನಾವಣೆಯಲ್ಲಿ ಗೆದ್ದಿದೆ. ಆ್ಯದಮ್ ಅಜೀಮ್ ಮಾಲೆಯ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಈ ಸೋಲು ಆಡಳಿತಾರೂಢ ಪಿಎನ್ಸಿ ಪಕ್ಷದ ಭಾರತ ವಿರೋಧಿ ನಿಲುವಿಗೆ ಮತದಾರರು ವಿಧಿಸಿದ ಶಿಕ್ಷೆ ಎಂದು ಬಿಂಬಿಸಲಾಗುತ್ತಿದೆ. ಕಳೆದ ವರ್ಷ ನವೆಂಬರ್ನಲ್ಲಷ್ಟೇ ಮಾಲ್ಡೀವ್ಸ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಮುಯಿಜ್ಜು; ಅಲ್ಲಿಯವರೆಗೆ ಮಾಲೆ ಪಾಲಿಕೆಯ ಮೇಯರ್ ಆಗಿದ್ದರು! ಸ್ವತಃ ಮಾಲ್ಡೀವ್ಸ್ ಅಧ್ಯಕ್ಷರ ನೆಲೆಯಲ್ಲೇ ಆಡಳಿತಾರೂಢ ಹಾಗೂ ಭಾರತ ವಿರೋಧಿ ನಿಲುವು ಹೊಂದಿರುವ ಪಿಎನ್ಸಿ ಪಕ್ಷಕ್ಕೆ ಸೋಲಾಗಿದೆ. ಇನ್ನೊಂದು ಕಡೆ ಭಾರತದ ಪರ ನಿಲುವು ಹೊಂದಿರುವ, ಇಬ್ರಾಹಿಂ ಸೊಲಿಹ್ರ ಎಂಡಿಪಿ ಪಕ್ಷ ಗೆದ್ದು ಬೀಗಿದೆ.
ಪ್ರಸ್ತುತ ಚುನಾವಣೆಯಲ್ಲಿ ಎಂಡಿಪಿಯ ಆ್ಯದಮ್ ಅಜೀಮ್ಗೆ ಶೇ.45 ಮತ ಬಂದಿದ್ದರೆ, ಪಿಎನ್ಸಿ ಅಭ್ಯರ್ಥಿ ಅಜಿಮಾ ಶಕೂರ್ಗೆ ಶೇ.29 ಮತ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.