Adelaide International: ಮೊದಲ ಎಟಿಪಿ ಪ್ರಶಸ್ತಿ ಗೆದ್ದ ಲೆಹೆಕ
Team Udayavani, Jan 14, 2024, 11:34 PM IST
ಅಡಿಲೇಡ್: ಜೆಕ್ ಆಟಗಾರ ಜಿರಿ ಲೆಹೆಕ ಮೊದಲ ಎಟಿಪಿ ಟೂರ್ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ. ಅವರು “ಅಡಿಲೇಡ್ ಇಂಟರ್ನ್ಯಾಶನಲ್ ಟೆನಿಸ್’ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಮೂಡಿಬಂದರು.
ಶನಿವಾರ ನಡೆದ ಫೈನಲ್ನಲ್ಲಿ ಜಿರಿ ಲೆಹೆಕ ಬ್ರಿಟನ್ನ ಜಾಕ್ ಡ್ರಾಪರ್ ವಿರುದ್ಧ 4-6, 6-4, 6-3 ಅಂತರದ ಗೆಲುವು ಸಾಧಿಸಿದರು. “ಮೊದಲ ಪ್ರಶಸ್ತಿಯಿಂದ ಬಹಳ ರೋಮಾಂಚನಗೊಂಡಿದ್ದೇನೆ. ಹೊಸ ವರ್ಷವನ್ನು ಅದ್ಭುತ ರೀತಿಯಲ್ಲಿ ಆರಂಭಿಸಿದ್ದಕ್ಕೆ ಖುಷಿ ಆಗುತ್ತಿದೆ’ ಎಂಬುದಾಗಿ ಲೆಹೆಕ ಹೇಳಿದರು.
ಆಸ್ಟ್ರೇಲಿಯನ್ ಓಪನ್ನಲ್ಲಿ 32ನೇ ಶ್ರೇಯಾಂಕ ಪಡೆದಿರುವ ಜಿರಿ ಲೆಹೆಕ, ಮೊದಲ ಸುತ್ತಿನಲ್ಲಿ ಸ್ಪೇನ್ನ ಬೆರ್ನಾಬ್ ಝಪಾಟ ಮಿರಾಲ್ಲೆಸ್ ವಿರುದ್ಧ ಆಡಲಿದ್ದಾರೆ.
ಒಸ್ಟಾಪೆಂಕೊ ಚಾಂಪಿಯನ್
ವನಿತಾ ಸಿಂಗಲ್ಸ್ನಲ್ಲಿ ಮಾಜಿ ಫ್ರೆಂಚ್ ಓಪನ್ ಚಾಂಪಿಯನ್ ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ಪ್ರಶಸ್ತಿ ಎತ್ತಿದರು. ಫೈನಲ್ನಲ್ಲಿ ಅವರು ರಷ್ಯಾದ ದರಿಯಾ ಕಸತ್ಕಿನಾ ವಿರುದ್ಧ 6-3, 6-2 ಅಂತರದ ಸುಲಭ ಜಯ ಸಾಧಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.