![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jan 14, 2024, 11:56 PM IST
ಪಶ್ಚಿಮಘಟ್ಟದಲ್ಲಿ ಹೊಸ ಪ್ರಭೇದದ ಚಿಟ್ಟೆಯೊಂದು ಪತ್ತೆಯಾಗಿರುವುದಾಗಿ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಮಾಹಿತಿ ನೀಡಿದ್ದಾರೆ. ತಮಿಳುನಾಡಿನ ಶ್ರೀವಿಲ್ಲಿಪುತ್ತೂರು-ಮೇಘಮಲೈ ಹುಲಿ ರಕ್ಷಿತಾರಣ್ಯದಲ್ಲಿ “ಸಿಗಾರಿಟಿಸ್ ಮೇಘಮಲೈನ್‌ಸಿಸ್” ಎಂಬ ಹೊಸ ಪ್ರಭೇದದ ಸಿಲ್ವರ್‌ಲೈನ್ ಚಿಟ್ಟೆಯನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಹೊಸ ಪ್ರಭೇದ ಪತ್ತೆಯಾಗಿದ್ದು 33 ವರ್ಷಗಳಲ್ಲಿ ಇದೇ ಮೊದಲು.
ಈಗ ಇಲ್ಲಿ ಸಿಕ್ಕಿರುವ ಚಿಟ್ಟೆಗಳ ಪ್ರಭೇದದ ಸಂಖ್ಯೆ 337ಕ್ಕೇರಿದೆ ಎಂದೂ ಹೇಳಿದ್ದಾರೆ. ಈ ಪೋಸ್ಟ್ ಕೆಲವೇ ಕ್ಷಣಗಳಲ್ಲಿ 32 ಸಾವಿರ ವೀಕ್ಷಣೆ ಪಡೆದಿದೆ.
You seem to have an Ad Blocker on.
To continue reading, please turn it off or whitelist Udayavani.