Ram ಎಂದರೆ ರಾಷ್ಟ್ರ, ರಾಷ್ಟ್ರ ಎಂದರೆ ರಾಮ: ಒಡಿಯೂರು ಶ್ರೀ
Team Udayavani, Jan 15, 2024, 6:35 AM IST
ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್
ಆದೌ ರಾಮತಪೋವನಾದಿಗಮನಮ್ ಹತ್ವಾಮೃಗಮ್ ಕಾಂಚನಮ್
ವೈದೇಹಿ ಹರಣಮ್ ಜಟಾಯು ಮರಣಮ್ ಸುಗ್ರೀವ ಸಂಭಾಷಣಮ್
ವಾಲೀ ನಿಗ್ರಹಣಮ್ ಸಮುದ್ರ ತರಣಮ್ ಲಂಕಾಪುರೀ ದಹನಮ್
ಪಶ್ಚಾತ್ ರಾವಣ ಕುಂಭಕರ್ಣ ಹನನಮ್ ಏತದ್ಧಿರಾಮಾಯಣಮ್ ||
(ಏಕೀಶ್ಲೋಕ ರಾಮಾಯಣಮ್)
ಲೋಕದಲ್ಲಿ ಅಧರ್ಮವು ವಿಜೃಂಭಿಸುವಾಗ ಮೆಟ್ಟಿ ನಿಲ್ಲುವುದಕ್ಕೆ ಭಗವಂತನು ಅವತರಿಸುತ್ತಾನೆ. ರಾಮಾ ಯಣದಲ್ಲಿ ವಿಶೇಷವಾಗಿ ರಾಮಾವತಾರ ಮಹತ್ವಪೂರ್ಣವಾದುದು. ಆಯನ ಎನ್ನುವುದಕ್ಕೆ ನಡೆ ಎನ್ನುವ ಅರ್ಥವಿದೆ. ರಾಮನ ನಡೆಯೇ ರಾಮಾ ಯಣ. ಭಾರತೀಯ ಪರಂಪರೆಯಲ್ಲಿ ರಾಮಾಯಣಕ್ಕೆ ಅದರದೇ ಆದ ವೈಶಿಷ್ಟ್ಯ ವಿದೆ. ರಾಮನು ಧರ್ಮವೇ ಮತ್ತೆ ಜನ್ಮತಳೆದಂತೆ. ಧರ್ಮವನ್ನು ಬಿಟ್ಟು ರಾಮನಿಲ್ಲ, ರಾಮನನ್ನು ಬಿಟ್ಟು ಧರ್ಮವೂ ಇಲ್ಲ.
ಜೀವನ ಮೌಲ್ಯಗಳನ್ನು ರೂಪಿಸಿಕೊಳ್ಳುವುದರಲ್ಲಿ ಪಠ್ಯವಾಗಿ ಪಾತ್ರವಹಿಸುವುದೇ ರಾಮಾಯಣ. ತುಳಸಿದಾಸರು ತಮ್ಮ ರಾಮಚರಿತಮಾನಸದಲ್ಲಿ ರಾಮನ ಮಹತ್ವವನ್ನು ಬಣ್ಣಿಸುತ್ತಾರೆ. ಹನುಮಂತನ ಮಹತ್ವವನ್ನು ತಿಳಿಸುತ್ತಾರೆ. ರಾಮಗಣಿತವೊಂದನ್ನು ಸಿದ್ಧಮಾಡಿ ಈ ರೀತಿಯಲ್ಲಿ ಉಲ್ಲೇಖಿಸಿದ್ದಾರೆ. ಯಾವುದೇ ವ್ಯಕ್ತಿಯ ಹೆಸರಿನ ಅಕ್ಷರಗಳನ್ನು ಒಟ್ಟುಗೂಡಿಸಿ ಅದಕ್ಕೆ ನಾಲ್ಕರಿಂದ ಗುಣಿಸಿ ಐದನ್ನು ಕೂಡಿಸಿ, ಎರಡರಿಂದ ಗುಣಿಸಿ, ಎಂಟರಿಂದ ಭಾಗಿಸಿ ಬರುವ ಉತ್ತರದಲ್ಲಿ ಶೇಷವು ಎರಡು ಉಳಿಯುತ್ತದೆ. ಈ ಎರಡು ಎಂದರೆ ರಾಮ ಎಂದರ್ಥ. ಎಲ್ಲರ ಹೆಸರಲ್ಲೂ ರಾಮ ಸೇರಿರುತ್ತಾನೆ. ನಾಲ್ಕರಿಂದ ಗುಣಿಸುವುದು ಎಂದರೆ ಚತುರ್ವಿಧ ಪುರುಷಾರ್ಥಗಳು. ಧರ್ಮ, ಅರ್ಥ, ಕಾಮ, ಮೋಕ್ಷ. ಐದನ್ನು ಕೂಡಿಸುವುದೆಂದರೆ ಪಂಚತತ್ತ್ವಗಳು. ಅಗ್ನಿ, ವಾಯು, ಆಕಾಶ, ಭೂಮಿ, ಜಲ. ಎರ ಡು ಅಂದರೆ ಬ್ರಹ್ಮ ಮತ್ತು ಮಾಯೆ. ಎಂಟು ಎಂದರೆ ಅಷ್ಟ ಐಶ್ವರ್ಯ ಗಳು. ಗುಣಿಸು, ಕೂಡಿಸು, ಭಾಗಿಸು ಎಂದರೆ ಜೀವನ. ಇಲ್ಲೊಂದು ಉತ್ತಮ ಸಂದೇಶವನ್ನು ತುಳಸಿದಾಸರು ಸಾರಿದ್ದಾರೆ.
ಚೈತ್ರ ಶುದ್ಧ ನವಮಿಯಂದು ಭಗವಂತನ ಅವತಾರ ವಿಶೇಷ. ಜ್ಞಾನಪೂರ್ಣವಾದ ಕರ್ಮವನ್ನು ನಡೆಸಲು ರಾಮನು ಧರ್ಮ ಮಾರ್ಗ ದಲ್ಲಿ ನಡೆದು ಜಗತ್ತಿಗೆ ಆದರ್ಶವನ್ನು ತೋರಿದ. ಚಂಚಲ ವೆನ್ನುವ ಕಪಿಗಳನ್ನು ಒಟ್ಟು ಸೇರಿಸಿ ಸೇವಾಕಾರ್ಯದಲ್ಲಿ ಅಂದರೆ ಅಧರ್ಮದ ವಿರುದ್ಧ ಹೋರಾಟಕ್ಕೆ ಅಣಿಗೊಳಿಸಿದ ಪ್ರಯತ್ನ ಅಸಾಧಾರಣವಾದುದು.
ಜಾಂಬವಂತ, ಸುಗ್ರೀವ, ಹನುಮರೇ ಇನ್ನಿತ್ಯಾದಿ ನಾಯಕರ ನಾಯಕತ್ವದಲ್ಲಿ ಧರ್ಮಕ್ಕೆ ಜಯ ದೊರಕಿರುವುದು ಒಪ್ಪತಕ್ಕ ವಿಚಾರ. ಜಟಾಯು ಪಕ್ಷಿಯ ಸಹಕಾರವನ್ನೂ ಇಲ್ಲಿ ಸ್ಮರಿಸಬಹುದು. ಅಳಿಲೊಂದು ರಾಮಸೇತು ಬಂಧನದಲ್ಲಿ ತನ್ನ ಕೈಲಾದ ಸೇವೆಯನ್ನು ಸಲ್ಲಿಸಿ ಕೃತಾರ್ಥ ವಾದುದು ಪ್ರೇಮದ ವಿಚಾರ. ಸೂರ್ಯ ವಂಶದ ರಾಮನನ್ನು ನೆನೆದರೆ ಒಂದು ರೀತಿಯ ಪ್ರಪಂಚದ ಚಿತ್ರಣವೇ ಮೂಡುತ್ತದೆ. ಭೋಗದ ಬದುಕು ಬದುಕಲ್ಲ, ತ್ಯಾಗದ ಬದುಕು ನಿಜದ ಬದುಕು ಎನ್ನುವುದನ್ನು ನಾರಾಯಣನು ನರನಾಗಿ ಅವತರಿಸಿ ಜಗತ್ತಿಗೆ ಮಾನವೀಯ ಮೌಲ್ಯಗಳನ್ನು ತಿಳಿಸಿದ್ದಾನೆ. ಇಂದಿಗೆ ಅಗತ್ಯವಿರುವ ಮಾನವೀಯ ಮೌಲ್ಯಗಳನ್ನು ಜನರಲ್ಲಿ ಬಿತ್ತಬೇಕಾದ ಆವಶ್ಯಕತೆ ಇದೆ. ರಾಮನೆಂದರೆ ತ್ಯಾಗದ ಮೂರ್ತಿಯಾದರೆ ಹನುಮನು ಸೇವೆಯ ಸಾಕಾರ. ತ್ಯಾಗ ಮತ್ತು ಸೇವೆಗಳಿಂದ ವ್ಯಕ್ತಿಯು ವಿಕಾಸ ಹೊಂದುತ್ತಾನೆ. ರಾಷ್ಟ್ರವಿಕಾಸ ವಾಗುತ್ತದೆ. ರಾಷ್ಟ್ರೀಯ ಆದರ್ಶ ಗಳಾದ ತ್ಯಾಗ, ಸೇವೆಗಳನ್ನು ಮೈಗೂಡಿಸಿಕೊಳ್ಳುವುದರಿಂದ ಇದು ಸಾಧ್ಯವಾಗುತ್ತದೆ. ರಾಮ, ಹನುಮರ ಆದರ್ಶಗಳು ಬದುಕಿಗೆ ಬೆಳಕು ಮತ್ತು ಬೇಕು.
ರಾಮ ಎಂದರೆ ರಾಷ್ಟ್ರ, ರಾಷ್ಟ್ರ ಎಂದರೆ ರಾಮ. ರಾಮ ಎನ್ನುವಾಗ ನಮ್ಮಲ್ಲಿ ರಾಷ್ಟ್ರಪ್ರಜ್ಞೆ ಮೂಡುತ್ತದೆ. ಭಾರತೀಯತೆಯಲ್ಲಿ ರಾಮನ ಆದರ್ಶ ತುಂಬಿಕೊಂಡಿದೆ. ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಜತೆಗೆ ಅನ್ಯೋನ್ಯ ಪ್ರೀತಿ, ವಿಶ್ವಾಸಗಳನ್ನು ತುಂಬಿಕೊಳ್ಳುವ, ಪ್ರಾಣಿ-ಪಕ್ಷಿಗಳಲ್ಲೂ ಆತ್ಮೀಯತೆ ತೋರುವ ಪ್ರೇಮಭಾವದ ರಾಮನ ವ್ಯಕ್ತಿತ್ವವನ್ನು ಕಾಣಬಹುದು. ತ್ರೇತಾಯುಗದಲ್ಲಿ ರಾಮನ ಅವತಾರ ಸಾರ್ವಕಾಲಿಕ ಸಾಹಿತ್ಯಗಳನ್ನು ಒಳಗೊಂಡ ರಾಮಾಯಣ ಬದುಕಿಗೆ ಅತ್ಯುತ್ತಮವಾದ ಪಠ್ಯ. ರಾಮಚರಿತೆಯು ಸಾಂಸ್ಕೃತಿಕ ಸಂಪತ್ತಾಗಿ ಆದರ್ಶಗಳಿಗೆ ಮಾರ್ಗದರ್ಶಿಯಾಗಿ ಅಧ್ಯಾತ್ಮ ಬದುಕಿಗೆ ಕೈಗನ್ನಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ
Ayodhya: ವ್ಯಾಟಿಕನ್, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ
Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?
Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ
Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.