Kanakpur: ಅಂಗನವಾಡಿ ಮೇಲ್ವಿಚಾರಕರ 11 ಹುದ್ದೆಗಳು ಖಾಲಿ !


Team Udayavani, Jan 15, 2024, 10:53 AM IST

Kanakpur: ಅಂಗನವಾಡಿ ಮೇಲ್ವಿಚಾರಕರ 11 ಹುದ್ದೆಗಳು ಖಾಲಿ !

ಕನಕಪುರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೌಲಭ್ಯಗಳು ಸಾರ್ವ ಜನಿಕರಿಗೆ ತಲುಪಿಸುವ ಹಾಗೂ ಅಂಗನವಾಡಿ ಕೇಂದ್ರಗಳ ಸಮರ್ಪಕ ನಿರ್ವಹಣೆ ಮೇಲೆ ನಿಗಾವಹಿಸಿ ಕೆಲಸ ಮಾಡಬೇಕಾದ ಅಂಗನ ವಾಡಿ ಮೇಲ್ವಿಚಾರಕ ಹುದ್ದೆಗಳು ಸಿಬ್ಬಂದಿ ಗಳಿಲ್ಲದೆ ಖಾಲಿ ಖಾಲಿಯಾಗಿರುವುದು ಅಂಗನವಾಡಿ ಕೇಂದ್ರಗಳ ಸಮರ್ಪಕ ನಿರ್ವ ಹಣೆಗೆ ತೊಡಕಾಗಿರುವುದರ ಜೊತೆಗೆ ಅಧಿಕಾರಿಗಳು ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ.

ಡಿಸಿಎಂ ಡಿ.ಕೆ.ಶಿವಕುಮಾರ್‌ ಸ್ವ-ಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 11 ಮೇಲ್ವಿ ಚಾರಕರು ಕೆಲಸ ಮಾಡಬೇಕಾದ ಜಾಗದಲ್ಲಿ ಒಬ್ಬರೇ ಒಬ್ಬರು ಮೇಲ್ವಿ ಚಾರಕರು ಮಾತ್ರವೇ ಕೆಲಸ ನಿರ್ವಹಿಸುತ್ತಿದ್ದು, ಉಳಿದ ಹತ್ತು ವೃತ್ತಗಳಲ್ಲಿ ಮೇಲ್ವಿ ಚಾರಕರು ಇಲ್ಲದೆ ಹುದ್ದೆಗಳು ಖಾಲಿ ಉಳಿದಿವೆ. ಸಿಬ್ಬಂದಿಗಳ ಕೊರತೆಯಿಂದ ಸಿಡಿಪಿಒ ಮತ್ತು ಎಸಿಡಿಪಿಒ ಅಧಿಕಾರಿಗಳಿಗೂ ಒತ್ತಡದಲ್ಲಿ ಕೆಲಸ ಮಾಡುವ ಅನಿವಾರ್ಯತೆಯೂ ಸೃಷ್ಟಿಯಾಗಿದೆ.

ತಾಲೂಕಿನಲ್ಲಿ 351 ಅಂಗನವಾಡಿ ಕೇಂದ್ರಗಳು: ತಾಲೂಕಿನಲ್ಲಿ ಸುಮಾರು 351 ಅಂಗನವಾಡಿ ಕೇಂದ್ರ ಗಳಿವೆ, ಇದರಲ್ಲಿ 306 ಅಂಗನ ವಾಡಿ ಶಿಕ್ಷಕರಿದ್ದಾರೆ. ಉಳಿದ ಸುಮಾರು 45 ಶಿಕ್ಷಕಿಯರ ಕೊರತೆಯೂ ಇದೆ. ತಾಲೂಕಿನಲ್ಲಿ 351 ಅಂಗನವಾಡಿ ಕೇಂದ್ರಗಳಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿ ಅಥವಾ 25 ರಿಂದ 30 ಅಂಗನವಾಡಿ ಕೇಂದ್ರಗಳನ್ನು ಒಳಗೊಂಡಂತೆ ಸುಮಾರು 11 ವೃತ್ತಗಳಿವೆ. ಆದರೆ ಆ ವೃತ್ತಗಳಲ್ಲಿ ಕೆಲಸ ಮಾಡಬೇಕಾದ ಮೇಲ್ವಿಚಾರಕ ಸಿಬ್ಬಂದಿಗಳೆ ಇಲ್ಲ ಸರ್ಕಾರ ಒಂದು ವೃತ್ತಕ್ಕೆ ಒಬ್ಬರಂತೆ ಮೇಲ್ವಿಚಾರಕರ ಹುದ್ದೆಗಳನ್ನು ಮಂಜೂರು ಮಾಡಿದೆ. ಆದರೆ, ಒಬ್ಬರು ಮಾತ್ರ ಕೆಲಸ ಮಾಡುತ್ತಿದ್ದು 10 ಹುದ್ದೆಗಳು ಖಾಲಿ ಖಾಲಿ ಯಾಗಿವೆ.

ಮೂಲಸೌರ್ಯ ಸೌಕರ್ಯ ಕಲ್ಪಿಸುವುದು ಮೇಲ್ವಿ ಚಾರಕರ ಹೊಣೆ: ಸಾಮಾಜಿಕ ಪಿಡುಗಾಗಿ ಪರಿಣಮಿ ಸಿರುವ ಬಾಲ್ಯ ವಿವಾಹವನ್ನು ತಡೆಗಟ್ಟುವುದು ಮತ್ತು ಕದ್ದುಮುಚ್ಚಿ ಆಗುವ ಬಾಲ್ಯವಿವಾಹ ಪ್ರಕರಣಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿ ಗಳಿಗೆ ಮಾಹಿತಿ ಕೊಡುವುದು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಗರ್ಭಿಣಿ ಮಹಿಳೆಯರಿಗೆ ಸರ್ಕಾರ ಕೊಡುವ ಪೂರಕ ಪೌಷ್ಟಿಕ ಆಹಾರ ಮತ್ತು ಇಲಾಖೆ ಸೌಲಭ್ಯಗಳು ಸಮರ್ಪಕವಾಗಿ ಸಾರ್ವಜನಿಕರು ಫ‌ಲಾನುಭವಿಗಳಿಗೆ ತಲುಪುತ್ತಿವಿ ಯೇ? ಇಲ್ಲವೇ? ಇವುಗಳ ಬಗ್ಗೆ ಮೇಲ್ವಿ ಚಾರಕರು ನಿಗಾ ವಹಿಸಬೇಕು. ಅಂಗನವಾಡಿ ಕಟ್ಟಡದ ಕೊರತೆ ಶೌಚಾಲಯ ಸೇರಿದಂತೆ ಮಕ್ಕಳಿಗೆ ಮೂಲ ಸೌಕರ್ಯದ ಕೊರತೆ ಇದ್ದರೆ ಸ್ಥಳಿಯ ಗ್ರಾಪಂ ಅಧಿಕಾ ರಿಗಳ ಗಮನಕ್ಕೆ ತಂದು ಮೂಲಸೌರ್ಯ ಸೌಕರ್ಯ ಕಲ್ಪಿಸುವುದು ಮೇಲ್ವಿ ಚಾರಕರ ಹೊಣೆಗಾರಿಕೆ.

ಗ್ರಾಮಗಳಲ್ಲಿ ತಾಯಂದಿರ ಸಭೆ: ಗ್ರಾಮಗಳಲ್ಲಿ ತಾಯಂದಿರ ಸಭೆಗಳನ್ನು ನಡೆಸಿ ಅರಿವು ಮೂಡಿ ಸುವುದು ಮೇಲಧಿ ಕಾರಿಗಳ ಸೂಚನೆ ಮೇರೆಗೆ ಗುಪ್ತ ಸಭೆಗಳನ್ನು ಮಾಡಿ ಮಾಹಿತಿ ಸಂಗ್ರಹಿಸುವುದು. ಪೌಷ್ಟಿಕ ಶಿಬಿರಗಳನ್ನು ನಡೆಸಿ ಅಧಿಕಾರಿಗಳಿಗೆ ಮಾಹಿತಿ ಕೊಡುವುದು ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ, ಪೂರಕ ಪೌಷ್ಟಿಕ ಆಹಾರ, ಮಾತೃಪೂರ್ಣ, ಗರ್ಭಿಣಿ ಬಾಣಂತಿ, ಮಕ್ಕಳಿಗೆ ಆರೋಗ್ಯ ತಪಾಸಣೆ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ ತರಬೇತಿ ಕಾರ್ಯಾಗಾರ, ಉದ್ಯೋಗಿನಿ ಯೋಜನೆ ಯಡಿಯಲ್ಲಿ ಸ್ವ-ಉದ್ಯೋಗ ಮಾಡುವವರಿಗೆ ಸಾಲ ಸೌಲಭ್ಯ, ಈ ಎಲ್ಲ ಸೌಲಭ್ಯಗಳನ್ನು ಫ‌ಲಾನುಭವಿಗಳಿಗೆ ತಲುಪಿಸಲು ಇಲಾಖೆ ಮತ್ತು ಫ‌ಲಾನುಭವಿಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡುವುದರ ಜೊತೆಗೆ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ಮತ್ತು ಸೌಲಭ್ಯಗಳು ದುರ್ಬಳಕೆಯಾಗದಂತೆ ನೋಡಿ ಕೊಳ್ಳುವ ಜವಬ್ದಾರಿಯೂ ಇವರ ಮೇಲಿದೆ.

ಇಷ್ಟೆಲ್ಲಾ ಜವಬ್ದಾರಿ ನಿರ್ವಹಿಸಬೇಕಾದ ಮೇಲ್ವಿಚಾರಕರ ಹುದ್ದೆಗಳು ಸಿಬ್ಬಂದಿ ಗಳಿಲ್ಲದೆ ಖಾಲಿ ಖಾಲಿಯಾಗಿರುವುದು ಇಲಾಖೆ ಸೌಲಭ್ಯಗಳು ಬಗ್ಗೆ ಸಾರ್ವಜನಿಕರಿಗೆ ಸರಿ ಯಾದ ಮಾಹಿತಿ ಇಲ್ಲದೆ ಸೌಲಭ್ಯ ತಲುಪದೇ ವಂಚಿತರಾಗುತ್ತಿದ್ದಾರೆ. ಕೆಲವು ಅಂಗನ ವಾಡಿಗಳಲ್ಲಿ ಪೂರಕ ಪೌಷ್ಟಿಕ ಆಹಾರವು ಕೂಡ ಗರ್ಭಿಣಿ ಬಾಣಂತಿಯ ಮಕ್ಕಳಿಗೆ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ಇತ್ತೀಚಿಗೆ ತಿಮ್ಮೇಗೌಡನ ದೊಡ್ಡಿ ಗ್ರಾಮದಲ್ಲಿ ಪೌಷ್ಟಿಕ ಆಹಾರಗಳ ಅವಧಿ ಮುಗಿದರೂ ವಿತರಣೆ ಮಾಡದೆ ಅಂಗನವಾಡಿ ಶಿಕ್ಷಕಿ ಫ‌ಲಾನುಭವಿಗಳಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿರುವುದೇ ಇದಕ್ಕೆ ಸ್ಪಷ್ಟ ಉದಾಹರಣೆ.

ಖಾಲಿ ಇರುವ ಹುದ್ದೆ ಭರ್ತಿಗೆ ಸಾರ್ವಜನಿಕರ ಒತ್ತಾಯ : ಇಲಾಖೆ ಮೇಲಧಿಕಾರಿಗಳು ನಡೆಸುವ ಸಭೆಗಳಲ್ಲಿ ಭಾಗವಹಿಸುವುದು ಜೊತೆಗೆ ಗ್ರಾಪಂ ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಇಲಾಖೆ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊಡಬೇಕು. ಆದರೆ, ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ನಾವು ಒತ್ತಡ ದಲ್ಲಿ ಕೆಲಸ ಮಾಡುತ್ತಿದ್ದೆವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಗಳು ಸಾರ್ವಜನಿಕವಾಗಿಯೇ ಗ್ರಾಮ ಸಭೆಗಳಲ್ಲಿ ಅಸಹಾಯಕತೆ ತೋಡಿ ಕೊಳ್ಳುತ್ತಿದ್ದಾರೆ. ಈಗ ಗೃಹಲಕ್ಷ್ಮಿ ಯೋಜನೆ ತಲುಪಿಸುವ ಹೊಣೆಗಾರಿಕೆಯೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲಿದೆ ಅಂಗನವಾಡಿ ಮೇಲ್ವಿಚಾರಕರ ನಿರ್ವಹಿಸಬೇಕಾದ ಎಲ್ಲಾ ಕೆಲಸಗಳನ್ನು ಮೇಲಧಿ ಕಾರಿಗಳೇ ನಿರ್ವಹಿಸಬೇಕು. ಇದರಿಂದ ಅಧಿಕಾರಿಗಳು ಒತ್ತಡದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಸರ್ಕಾರ ಮತ್ತು ಜಿಲ್ಲಾಡಳಿತ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಇಲಾಖೆ ಸೌಲತ್ತುಗಳು ಸಮರ್ಪಕವಾಗಿ ತಲುಪಿಸಲು ಕೆಲಸ ಮಾಡಬೇಕು ಎಂಬುದು ಸಾರ್ವಜನಿಕ ಒತ್ತಾಯ.

ತಾಲೂಕಿನಲ್ಲಿ ಸುಮಾರು 351 ಅಂಗನವಾಡಿ ಕೇಂದ್ರಗಳಿಗೆ ಒಟ್ಟು 11 ವೃತ್ತಗಳಿವೆ. ಒಂದು ವೃತ್ತದಲ್ಲಿ ಒಬ್ಬರಂತೆ 11ಮೇಲ್ವಿಚಾರಕರು ಕೆಲಸ ಮಾಡಬೇಕು. ಆದರೆ, ಒಬ್ಬರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಉಳಿದ ಹತ್ತು ಹುದ್ದೆಗಳು ಖಾಲಿ ಇವೆ. ಇದರಿಂದ ನಾವು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇವೆ. ಶೀಲಾ,ಸಿಡಿಪಿಒ ಕನಕಪುರ

ಬಿ.ಟಿ.ಉಮೇಶ್‌ ಬಾಣಗಹಳ್ಳಿ

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagar: ನೀರಿಲ್ಲದೇ ಜಿಲ್ಲೆಯ ಕೆರೆಗಳು ಖಾಲಿ ಖಾಲಿ!

Ramanagar: ನೀರಿಲ್ಲದೇ ಜಿಲ್ಲೆಯ ಕೆರೆಗಳು ಖಾಲಿ ಖಾಲಿ!

Sweet Pumpkin: ಮಳೆ ನೀರಿನಿಂದಲೇ ಸಿಹಿ ಕುಂಬಳಕಾಯಿ ಬೆಳೆದ ರೈತ

Sweet Pumpkin: ಮಳೆ ನೀರಿನಿಂದಲೇ ಸಿಹಿ ಕುಂಬಳಕಾಯಿ ಬೆಳೆದ ರೈತ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

BJPBJP MLA Munirathna: ನನಗೇ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದರು

BJP MLA Munirathna: ನನಗೇ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದರು

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.