Australian Open:ಕೊಕೊ ಗಾಫ್, ಗಾರ್ಸಿಯಾ ಮುನ್ನಡೆ; ಸಿಸಿಪಸ್‌ ಗೆಲುವು

Team Udayavani, Jan 15, 2024, 11:09 PM IST

1-sadasd

ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌ ವನಿತಾ ಸಿಂಗಲ್ಸ್‌ನಲ್ಲಿ 4ನೇ ಶ್ರೇಯಾಂಕದ ಕೊಕೊ ಗಾಫ್, 6ನೇ ಶ್ರೇಯಾಂಕದ ಓನ್ಸ್‌ ಜೆಬ್ಯುರ್‌, ಕ್ಯಾರೋಲಿನ್‌ ಗಾರ್ಸಿಯಾ ಗೆಲುವಿನ ಆರಂಭ ಪಡೆದಿದ್ದಾರೆ. ಆದರೆ ವಿಂಬಲ್ಡನ್‌ ಚಾಂಪಿಯನ್‌ ಮಾರ್ಕೆಟಾ ವೊಂಡ್ರೂಸೋವಾ ಮತ್ತು ಜಪಾನ್‌ನ ನವೋಮಿ ಒಸಾಕಾ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ. ಪುರುಷರ ವಿಭಾಗದಲ್ಲಿ ಸ್ಟೆಫ‌ನಸ್‌ ಸಿಸಿಪಸ್‌, ಅಲೆಕ್ಸ್‌ ಡಿ ಮಿನೌರ್‌ ದ್ವಿತೀಯ ಸುತ್ತು ತಲುಪಿದ್ದಾರೆ.

ಅಮೆರಿಕದ ಕೊಕೊ ಗಾಫ್ ಸ್ಲೊವಾಕಿಯಾದ ಅನ್ನಾ ಕ್ಯಾರೋಲಿನಾ ಶ್ಮಿಡೊÉàವಾ ಅವರನ್ನು 6-3, 6-0 ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು. ಮುಂದಿನ ಸುತ್ತಿನಲ್ಲಿ ತಮ್ಮದೇ ದೇಶದ ಕ್ಯಾರೋಲಿನಾ ಡೋಲ್‌ಹೈಡ್‌ ಅವರನ್ನು ಎದುರಿಸಲಿದ್ದಾರೆ.

ಟ್ಯುನಿಶಿಯದ ಓನ್ಸ್‌ ಜೆಬ್ಯುರ್‌ 6-3, 6-1ರಿಂದ ಉಕ್ರೇನಿನ ಯುಲಿಯಾ ಸ್ಟಾರೊಡುಬೆÕàವಾ ಅವ ರನ್ನು ಮಣಿಸಿದರು. ಕಳೆದೆರಡು ವಿಂಬಲ್ಡನ್‌ ಫೈನಲ್‌ ಪ್ರವೇಶಿಸಿ ಪರಾಭವಗೊಂಡಿದ್ದ ಜೆಬ್ಯುರ್‌, 2022ರ ಯುಎಸ್‌ ಓಪನ್‌ ಪ್ರಶಸ್ತಿ ಸಮರದಲ್ಲೂ ಮುಗ್ಗರಿಸಿದ್ದರು. “ಇದು ನನ್ನ ಪಾಲಿನ ವೆರಿ ಸ್ಪೆಷಲ್‌ ಕಮ್‌ ಬ್ಯಾಕ್‌’ ಎಂಬುದಾಗಿ ಹೇಳಿದ್ದಾರೆ. ಕಳೆದ ವರ್ಷ ಅನಾರೋಗ್ಯದ ಸಮಸ್ಯೆಯಿಂದಾಗಿ ದ್ವಿತೀಯ ಸುತ್ತಿನಲ್ಲೇ ಸೋಲನುಭವಿಸಿ “ಮೆಲ್ಬರ್ನ್ ಪಾರ್ಕ್‌’ ತೊರೆದಿದ್ದರು.

ವೊಂಡ್ರೂಸೋವಾ ಔಟ್‌
ವಿಂಬಲ್ಡನ್‌ ಚಾಂಪಿಯನ್‌, ಜೆಕ್‌ ಆಟಗಾರ್ತಿ ಮಾರ್ಕೆಟಾ ವೊಂಡ್ರೂಸೋವಾ ಅವರಿಗೆ ಆಘಾತ ವಿಕ್ಕಿ ದವರು ಉಕ್ರೇನ್‌ನ ಅರ್ಹತಾ ಆಟಗಾರ್ತಿ ಡಯಾನಾ ಯಾಸ್ಟ್ರೆಮ್‌ಸ್ಕಾ. ಅಂತರ 6-1, 6-2. ವೊಂಡ್ರೂಸೋವಾ ಕಳೆದ ವರ್ಷ, ವಿಂಬಲ್ಡನ್‌ ಗೆದ್ದ ಮೊದಲ ಶ್ರೇಯಾಂಕ ರಹಿತ ಆಟಗಾರ್ತಿ ಎಂಬ ದಾಖಲೆ ಸ್ಥಾಪಿಸಿದ್ದರು.
ಜಪಾನ್‌ನ ನವೋಮಿ ಒಸಾಕಾ ಅವರನ್ನು ಫ್ರಾನ್ಸ್‌ನ ಕ್ಯಾರೋಲಿನ್‌ ಗಾರ್ಸಿಯಾ 6-4, 7-6 (7-2) ಅಂತರದಿಂದ ಪರಾಭವಗೊಳಿಸಿದರು.

ಸಿಸಿಪಸ್‌ ಗೆಲುವು
ಗ್ರೀಸ್‌ನ ಸ್ಟೆಫ‌ನಸ್‌ ಸಿಸಿಪಸ್‌ ಬೆಲ್ಜಿಯಂನ ಝಿಜೂ ಬಗ್ಸ್‌ì ಅವರನ್ನು 5-7, 6-1, 6-1, 6-3ರಿಂದ ಪರಾ ಭವ ಗೊಳಿಸಿದರು. ಮೂಲ ವೇಳಾಪಟ್ಟಿಯಂತೆ ಮ್ಯಾಟಿಯೊ ಬರೆಟಿನಿ ವಿರುದ್ಧ ಸಿಸಿಪಸ್‌ ಮೊದಲ ಸುತ್ತಿನ ಪಂದ್ಯ ಆಡಬೇಕಿತ್ತು. ಆದರೆ ಬರೆಟಿನಿ ಪಾದದ ನೋವಿ ನಿಂದಾಗಿ ರವಿವಾರ ಕೂಟದಿಂದ ಹಿಂದೆ ಸರಿದಿದ್ದರು.

ಕೆನಡಾದ ಮಿಲೋಸ್‌ ರಾನಿಕ್‌ ಗಾಯಾಳಾದ ಕಾರಣ ಆತಿಥೇಯ ದೇಶದ ಅಲೆಕ್ಸ್‌ ಡಿ ಮಿನೌರ್‌ ದ್ವಿತೀಯ ಸುತ್ತಿಗೆ ಏರಿದರು. ಆಗ ಮಿನೌರ್‌ 6-7 (6), 6-3, 2-0 ಮುನ್ನಡೆಯಲ್ಲಿದ್ದರು. ಇವರ ಮುಂದಿನ ಎದುರಾಳಿ ಇಟಲಿಯ ಮ್ಯಾಟಿಯೊ ಅರ್ನಾಲ್ಡಿ. ಇವರು ವೈಲ್ಡ್‌ಕಾರ್ಡ್‌ ಮೂಲಕ ಬಂದ ಆಸ್ಟ್ರೇಲಿಯದ ಆ್ಯಡಂ ವಾಲ್ಟನ್‌ಗೆ ಸೋಲುಣಿಸಿದರು.

ಟಾಪ್ ನ್ಯೂಸ್

Belagavi: ಈದ್ ಮಿಲಾದ್ ಮೆರವಣಿಗೆ ಮುಗಿಸಿ ಹೋಗುವಾಗ ತಲವಾರ್ ದಿಂದ ಹೊಡೆದಾಟ: ಮೂವರಿಗೆ ಗಾಯ

Belagavi: ಈದ್ ಮಿಲಾದ್ ಮೆರವಣಿಗೆ ಮುಗಿಸಿ ಹೋಗುವಾಗ ತಲವಾರ್ ದಿಂದ ಹೊಡೆದಾಟ: ಮೂವರಿಗೆ ಗಾಯ

Mudhol: ಬಾಲಕಿಗೆ ಲೈಂಗಿಕ‌‌ ಕಿರುಕುಳ… ಫೋಕ್ಸೊ ಪ್ರಕರಣ ದಾಖಲು

Mudhol: ಬಾಲಕಿಗೆ ಲೈಂಗಿಕ‌‌ ಕಿರುಕುಳ… ಫೋಕ್ಸೊ ಪ್ರಕರಣ ದಾಖಲು

Santhekatte-Road

Udupi Santhekatte Road: ನಾಲ್ಕಲ್ಲ, ಕನಿಷ್ಠ ಒಂದು ರಸ್ತೆಯನ್ನಾದರೂ ಕೊಡಿ

Horoscope: ಭಗವಂತನ ಮೇಲೆ ಪೂರ್ಣ ವಿಶ್ವಾಸವಿರಲಿ

Horoscope: ಭಗವಂತನ ಮೇಲೆ ಪೂರ್ಣ ವಿಶ್ವಾಸವಿರಲಿ

1-pragyan

Pragyan rover; ಚಂದ್ರನ ಮೇಲೆ 160 ಕಿ.ಮೀ. ಕುಳಿ ಪತ್ತೆ!

ಪ್ರಧಾನಿ ಮೋದಿ ಶಾಂತಿಮಂತ್ರಕ್ಕೆ ಅಮೆರಿಕ ಶ್ಲಾಘನೆ

PM Modi ಶಾಂತಿಮಂತ್ರಕ್ಕೆ ಅಮೆರಿಕ ಶ್ಲಾಘನೆ

PRAVASI-Mandir

Udupi: ಬ್ರಹ್ಮಗಿರಿಯಲ್ಲಿರುವ ಪ್ರವಾಸಿ ಮಂದಿರಕ್ಕೆ ಕತ್ತಲ ಭಾಗ್ಯ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ms

CSK; ಉಳಿಕೆ ಆಟಗಾರರ ಪಟ್ಟಿಯಲ್ಲಿ ಧೋನಿ ಹೆಸರು?

1-tII

Team India’s Test Record; ಸೋಲನ್ನು ಮೀರಿಸಿದ ಗೆಲುವು

badminton

Badminton; ಅನ್ಮೋಲ್‌ ಖರಬ್‌ಗೆ ಬ್ಯಾಡ್ಮಿಂಟನ್‌ ಪ್ರಶಸ್ತಿ

1-dtt

Duleep Trophy:ಇಂಡಿಯಾ ಎ ಚಾಂಪಿಯನ್‌

1-chess–bg

Chess Olympiad; ಭಾರತಕ್ಕೆ ಅವಳಿ ಸ್ವರ್ಣ ಸಂಭ್ರಮ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Belagavi: ಈದ್ ಮಿಲಾದ್ ಮೆರವಣಿಗೆ ಮುಗಿಸಿ ಹೋಗುವಾಗ ತಲವಾರ್ ದಿಂದ ಹೊಡೆದಾಟ: ಮೂವರಿಗೆ ಗಾಯ

Belagavi: ಈದ್ ಮಿಲಾದ್ ಮೆರವಣಿಗೆ ಮುಗಿಸಿ ಹೋಗುವಾಗ ತಲವಾರ್ ದಿಂದ ಹೊಡೆದಾಟ: ಮೂವರಿಗೆ ಗಾಯ

Mudhol: ಬಾಲಕಿಗೆ ಲೈಂಗಿಕ‌‌ ಕಿರುಕುಳ… ಫೋಕ್ಸೊ ಪ್ರಕರಣ ದಾಖಲು

Mudhol: ಬಾಲಕಿಗೆ ಲೈಂಗಿಕ‌‌ ಕಿರುಕುಳ… ಫೋಕ್ಸೊ ಪ್ರಕರಣ ದಾಖಲು

Santhekatte-Road

Udupi Santhekatte Road: ನಾಲ್ಕಲ್ಲ, ಕನಿಷ್ಠ ಒಂದು ರಸ್ತೆಯನ್ನಾದರೂ ಕೊಡಿ

Horoscope: ಭಗವಂತನ ಮೇಲೆ ಪೂರ್ಣ ವಿಶ್ವಾಸವಿರಲಿ

Horoscope: ಭಗವಂತನ ಮೇಲೆ ಪೂರ್ಣ ವಿಶ್ವಾಸವಿರಲಿ

1-pragyan

Pragyan rover; ಚಂದ್ರನ ಮೇಲೆ 160 ಕಿ.ಮೀ. ಕುಳಿ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.