Dense Fog: ದೆಹಲಿಯಲ್ಲಿ ದಟ್ಟ ಮಂಜು: 50 ವಿಮಾನ, 30 ರೈಲುಗಳ ಸಂಚಾರದಲ್ಲಿ ವ್ಯತ್ಯಯ…
Team Udayavani, Jan 16, 2024, 10:28 AM IST
ನವದೆಹಲಿ: ಮಂಗಳವಾರ ರಾಷ್ಟ್ರ ರಾಜಧಾನಿಯನ್ನು ದಟ್ಟವಾದ ಮಂಜು ಆವರಿಸಿದ್ದರಿಂದ ದೆಹಲಿಯಲ್ಲಿ ಶೀತ ಅಲೆಯ ಪರಿಸ್ಥಿತಿ ಮುಂದುವರೆದಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ತಾಪಮಾನವು ಸಫ್ದರ್‌ಜಂಗ್‌ನಲ್ಲಿ 4.8 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದ್ದರೆ, ಪಾಲಂನಲ್ಲಿ ತಾಪಮಾನವು 7.2 ಡಿಗ್ರಿ ಸೆಲ್ಸಿಯಸ್ ಆಗಿತ್ತು.
ಪಾಲಮ್ ವಿಮಾನ ನಿಲ್ದಾಣದಲ್ಲಿ 07;00 ಗಂಟೆಗಳ IST ನಲ್ಲಿ 100 ಮೀ ಗೋಚರತೆಯನ್ನು ವರದಿ ಮಾಡಲಾಗಿದೆ ಎಂದು IMD ಹೇಳಿದೆ, ಆದರೆ ಇದು 07;30 ಗಂಟೆಗಳ IST ಕ್ಕೆ 0 ಮೀ ಗೆ ಇಳಿದಿದೆ. ಸಫ್ದರ್‌ಜಂಗ್ ವಿಮಾನ ನಿಲ್ದಾಣದಲ್ಲಿ, 0700 ಗಂಟೆಗೆ 50 ಮೀ ಗೋಚರತೆ ಇತ್ತು ಎಂದು ಅದು ಹೇಳಿದೆ.
ಗೋಚರತೆ ಕಡಿಮೆಯಾದ ಕಾರಣ, ದೆಹಲಿಯಿಂದ ಹೊರಡುವ ಸುಮಾರು 30 ವಿಮಾನಗಳು ವಿಳಂಬಗೊಂಡರೆ, 17 ಇತರ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಅಷ್ಟು ಮಾತ್ರವಲ್ಲದೆ ಇಂದು ದೆಹಲಿಗೆ ಬರಲಿದ್ದ 30 ರೈಲುಗಳು ತಡವಾಗಿ ಆಗಮಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ, ಮಂಗಳವಾರ ದಟ್ಟವಾದ ಮಂಜು ವಿಮಾನ ಮತ್ತು ರೈಲು ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದ್ದರಿಂದ ದೆಹಲಿ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಕಾಯುವುದು ಮಾತ್ರ ಯಥಾ ಸ್ಥಿತಿಯಾಗಿದೆ.
ಇದನ್ನೂ ಓದಿ: Ayodhya: ಜ.22 ರಂದು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ… ಎಂ.ಎಸ್. ಧೋನಿಗೆ ಆಹ್ವಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.