RBIಗೆ ಇದೆ, ಸಿಎಂಗೆ ಆರ್ಥಿಕ ಸಲಹೆಗಾರ ಇದ್ದರೆ ತಪ್ಪೇ?- ಬಸವರಾಜ ರಾಯರೆಡ್ಡಿ ವಿಶೇಷ ಸಂದರ್ಶನ

"ಉದಯವಾಣಿ" ನೇರಾನೇರ ಸಂದರ್ಶನದಲ್ಲಿ ಮುಖ್ಯಮಂತ್ರಿಗಳ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರಶ್ನೆ

Team Udayavani, Jan 17, 2024, 12:45 AM IST

rayareddy

ಬೆಂಗಳೂರು: ಈ ದೇಶದ ಆರ್‌ಬಿಐ ಗವರ್ನರ್‌ ಸ್ವತಃ ಆರ್ಥಿಕ ತಜ್ಞರು. ಅಂತಹವರಿಗೂ ಒಬ್ಬ ಆರ್ಥಿಕ ಸಲಹೆಗಾರರಿದ್ದಾರೆ. ಅಷ್ಟೇ ಯಾಕೆ, 14 ಬಾರಿ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಒಬ್ಬ ಆರ್ಥಿಕ ತಜ್ಞ ಹಾಗೂ ಹಣಕಾಸು ಸಚಿವರೂ ಆಗಿದ್ದಾರೆ. ಅವರಿಗೂ ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳಿಲ್ಲವೇ? ಅದೇ ರೀತಿ ನಾನೂ ಒಬ್ಬ ರಾಜಕಾರಣಿಯಾಗಿ ಜನರ ಪರವಾಗಿ ಮುಖ್ಯಮಂತ್ರಿಗೆ ಸಲಹೆ ನೀಡಿದರೆ ತಪ್ಪೇನು?

ಇದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡ ಬಸವರಾಜ ರಾಯರೆಡ್ಡಿ, ತಮ್ಮನ್ನು ಮತ್ತು ತಮ್ಮ ಹುದ್ದೆಯನ್ನು ಟೀಕಿಸುತ್ತಿರುವ ವಿಪಕ್ಷಗಳಿಗೆ ನೀಡಿದ ತಿರುಗೇಟು.
ಸಲಹೆಗಾರ ಹುದ್ದೆ ರೂಪದಲ್ಲಿ ಗಂಜಿಕೇಂದ್ರ ತೆರೆಯಲಾಗಿದೆ. 14 ಬಾರಿ ಬಜೆಟ್‌ ಮಂಡಿಸಿದವರಿಗೆ ಇವರೇನು ಆರ್ಥಿಕ ಸಲಹೆ ನೀಡಬಲ್ಲರು? ಸರಕಾರದ ವಿರುದ್ಧ ತಮ್ಮ ಪ್ರತಿರೋಧದ ದನಿ ಅಡಗಿಸಲು ಇಂತಹದ್ದೊಂದು ಹುದ್ದೆ ಸೃಷ್ಟಿಸಿ, ತಂದು ಕೂರಿಸಲಾಗಿದೆ ಅಷ್ಟೇ… ಹೀಗೆ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡ ದಿನದಿಂದ ಬಸವರಾಜ ರಾಯರೆಡ್ಡಿ ವಿಪಕ್ಷಗಳಿಗೆ ಆಹಾರವಾಗಿದ್ದಾರೆ. ಈ ಟೀಕಾಸ್ತ್ರಗಳಿಗೆ ಸ್ವತಃ ರಾಯರೆಡ್ಡಿ ಈ ಹಿಂದೆ ಎತ್ತಿದ “ಅಪಸ್ವರ’ಗಳು ಕೂಡ ಕಾರಣ. ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾದವರು.

ಈಗ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸಂಪುಟ ದರ್ಜೆ ಸ್ಥಾನಮಾನ ಪಡೆದಿದ್ದಾರೆ. ಈ ಮಧ್ಯೆ ಬಜೆಟ್‌ ಮಂಡನೆಗೆ ದಿನ ಸನ್ನಿಹಿತವಾಗಿದೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಸಲಹೆ ನೀಡುವ ಉತ್ಸಾಹದಲ್ಲಿರುವ ಅವರು ತಮ್ಮ ವಿರುದ್ಧದ ಟೀಕೆ-ಟಿಪ್ಪಣಿಗಳು, ತಮ್ಮ ಈ ಹಿಂದಿನ ಅಪಸ್ವರಗಳಿಗೆಲ್ಲ ನೇರಾನೇರದಲ್ಲಿ ಸಮಜಾಯಿಷಿ, ಸಮರ್ಥನೆ, ಸ್ಪಷ್ಟೀಕರಣಗಳನ್ನು ನೀಡಿದ್ದಾರೆ. ಅದರ ಸಾರ ಇಲ್ಲಿದೆ…

14 ಬಾರಿ ಬಜೆಟ್‌ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು ನಮ್ಮವರೇ ಹೇಳುವಂತೆ ಅತ್ಯುತ್ತಮ ಆರ್ಥಿಕ ತಜ್ಞ. ಅಂತಹವರಿಗೆ ಆರ್ಥಿಕ ಸಲಹೆಗಾರರ ಆವಶ್ಯಕತೆ ಇದೆಯೇ? ನೀವು ಕೊಡುವ ಸಲಹೆಗಳನ್ನು ಅವರು ಸ್ವೀಕರಿಸುತ್ತಾರೆಯೇ?
ಆರ್ಥಿಕ ಸಲಹೆ ನೀಡುವುದು ಒಂದು ನಿರಂತರವಾದ ಕೆಲಸ. ಇಲ್ಲಿ 14, 15 ಅಥವಾ 18 ಬಾರಿ ಬಜೆಟ್‌ ಮಂಡನೆಯಂತಹ ಲೆಕ್ಕ ಬರುವುದಿಲ್ಲ. ಈಗ ನೀವೇ ನೋಡಿ, ದೇಶದ ಭಾರತದ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಸ್ವತಃ ಒಬ್ಬ ಆರ್ಥಿಕ ತಜ್ಞ. ಅವರಿಗೇ ಆರ್ಥಿಕ ಸಲಹೆಗಾರ ಇರುವುದಿಲ್ಲವೇ? ಹಾಗಿದ್ದರೆ ಅವರ್ಯಾಕೆ ಅಂತ ಕೇಳಲು ಆಗುತ್ತದೆಯೇ? ಇನ್ನೂ ಮುಂದುವರಿದು ಹೇಳುವುದಾದರೆ ಸಿದ್ದರಾಮಯ್ಯ ಅವರೇ ಹಣಕಾಸು ಸಚಿವರು. ಆದರೂ ಹಣಕಾಸಿನ ಹೆಚ್ಚುವರಿ ಕಾರ್ಯದರ್ಶಿಗಳ ಸಹಿತ ಹಲವು ವಿಭಾಗಗಳಲ್ಲಿ ಕಾರ್ಯದರ್ಶಿಗಳಿಲ್ಲವೇ? ಅವರೆಲ್ಲ ಯಾಕೆ ಎಂದು ಕೇಳಬಹುದೇ? ಅಧಿಕಾರಿಗಳಾಗಿ ಅವರೆಲ್ಲ ಸಲಹೆಗಳನ್ನು ನೀಡಿದರೆ ನಾನು ಒಬ್ಬ ರಾಜಕಾರಣಿಯಾಗಿ ಜನರ ಪರವಾಗಿ ಸಲಹೆಗಳನ್ನು ನೀಡುತ್ತೇನೆ ಅಷ್ಟೇ.

 ಸಲಹೆಗಾರ ಹುದ್ದೆಗಳು ಗಂಜಿಕೇಂದ್ರ. ಈ ನೆಪದಲ್ಲಿ ಎಲ್ಲ ಹುದ್ದೆಗೂ ಸಂಪುಟ ದರ್ಜೆ ಸ್ಥಾನ ನೀಡಲಾಗಿದೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ನೇರವಾಗಿ ಆರೋಪಿಸುತ್ತಾರಲ್ಲ?
ನೋಡಿ, ಸಂಪುಟ ದರ್ಜೆ ಸ್ಥಾನದಲ್ಲಿರುವ ನನಗೆ ಮಾಸಿಕ 1 ಲಕ್ಷ ರೂ. ವೇತನ ಬರುತ್ತದೆ. ಅದನ್ನು ತೆಗೆದುಕೊಳ್ಳುತ್ತಿಲ್ಲ. ಎರಡೂವರೆ ಲಕ್ಷ ರೂ. ಮನೆ ಬಾಡಿಗೆ ಬರುತ್ತದೆ. ಆದರೂ ಸ್ವಂತ ಮನೆಯಲ್ಲಿ ವಾಸವಿದ್ದೇನೆ. ಪೀಠೊಪಕರಣಗಳಿಗೆ 10 ಲಕ್ಷ ರೂ. ಬರುತ್ತದೆ. ಅದನ್ನೂ ತೆಗೆದುಕೊಂಡಿಲ್ಲ. ಹೊಸ ಕಾರು ಕೊಡುತ್ತಾರೆ. ಬೇಡ ಅಂತ ಹೇಳಿದ್ದೇನೆ. 1.10 ಲಕ್ಷ ಕಿ.ಮೀ. ಓಡಿರುವ ನನ್ನ ಹಳೆಯ ಕಾರನ್ನೇ ಬಳಕೆ ಮಾಡುತ್ತಿದ್ದೇನೆ. ಹೀಗಿರುವಾಗ ಗಂಜಿಕೇಂದ್ರ ಹೇಗಾಗುತ್ತದೆ?

ಹಾಗಿದ್ದರೆ ಮುನಿಸಿಕೊಂಡ ನಿಮ್ಮನ್ನು ಸಮಾಧಾನಪಡಿಸಲು ಪಕ್ಷ ನೀಡಿದ ಹುದ್ದೆ ಎನ್ನಬಹುದಾ?
ಸಚಿವ ಸ್ಥಾನ ಕೊಡಬೇಕಾಗಿತ್ತು. ಆದರೆ ಹಲವು ಕಾರಣಗಳಿಂದ ಕೊಡಲಿಕ್ಕೆ ಆಗಿಲ್ಲ. ಹೆಚ್ಚು ಅನುಭವ ಇರುವುದರಿಂದ ಪಕ್ಷ ಗುರುತಿಸಿದೆ. ಅದಕ್ಕೆ ತಕ್ಕುದಾದ ಹುದ್ದೆ ಕೊಟ್ಟಿದ್ದಾರೆ. ಸಮಾಧಾನಪಡಿಸಲು ಅಲ್ಲ. ಸೇವೆ ಮತ್ತು ಅನುಭವ ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಹುದ್ದೆ ನೀಡಲಾಗಿದೆ.

 ಯಾವಾಗಲೂ ನೀವೇ ಯಾಕೆ ಗುರಿಯಾಗುತ್ತಿದ್ದೀರಿ? ಈ ಹಿಂದೆ ದಿಲ್ಲಿ ವಿಶೇಷ ಪ್ರತಿನಿಧಿ ಆಗಿದ್ದಿರಿ. ಈಗ ಸಲಹೆಗಾರ ಸ್ಥಾನ. ನಿಮಗಿಂತ ಕಿರಿಯರಿಗೆ ಸಚಿವ ಸ್ಥಾನ ಸಿಗುತ್ತದೆ. ನಿಮಗೆ ಮಾತ್ರ ಯಾಕೆ ಕೈತಪ್ಪುತ್ತಿದೆ?
ನಾನು ದಿಲ್ಲಿ ವಿಶೇಷ ಪ್ರತಿನಿಧಿ ಆದದ್ದು 1998-99ರಲ್ಲಿ. ಈಗ ಸಲಹೆಗಾರ ಹುದ್ದೆ ಕೊಟ್ಟಿದ್ದಾರೆ. ನಮ್ಮ ನಮ್ಮ ಅನುಭವ, ವಿಚಾರಗಳನ್ನು ತಿಳಿದುಕೊಳ್ಳಲು ಆಯಾ ಸಂದರ್ಭದಲ್ಲಿ ಮುಖ್ಯಮಂತ್ರಿ ಮತ್ತು ಪಕ್ಷ ತೀರ್ಮಾನ ಕೈಗೊಂಡಿರುತ್ತದೆ. ಅದಕ್ಕೆ ನಾವು ಬದ್ಧರಾಗಿರಬೇಕಾಗುತ್ತದೆ. ಏನೂ ಮಾಡಲಿಕ್ಕಾಗದು.

ಮುಂದಿನ ತಿಂಗಳು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಜನ ಏನು ನಿರೀಕ್ಷೆ ಮಾಡಬಹುದು?
ಈಗಾಗಲೇ ಬಜೆಟ್‌ ಪೂರ್ವಭಾವಿ ಸಭೆಗಳು ನಡೆಯುತ್ತಿವೆ. ಯಾವುದಕ್ಕೆ ಎಷ್ಟು ಖರ್ಚಾಗಿದೆ? ಎಷ್ಟು ನೀಡಲಾಗಿತ್ತು? ಮುಂದೆ ಎಷ್ಟು ಮೀಸಲಿಡಬೇಕು? ಯಾವ ಹೊಸ ಯೋಜನೆಗಳನ್ನು ನೀಡಬಹುದು ಎಂಬುದರ ಬಗ್ಗೆ ಜ. 20-24ರ ವರೆಗೆ ಆಯಾ ಖಾತೆಗಳ ಸಚಿವರು, ಅಧಿಕಾರಿಗಳನ್ನು ಆಹ್ವಾನಿಸಿ ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ. ಅದರಲ್ಲಿ ನಾನೂ ಭಾಗವಹಿಸಲಿದ್ದೇನೆ. ಜ. 25ರ ಅನಂತರ ಬಜೆಟ್‌ನ ಸ್ವರೂಪ ಗೊತ್ತಾಗಲಿದೆ. ಆಗ ನಿರೀಕ್ಷೆಗಳ ಬಗ್ಗೆ ಹೇಳಬಹುದು.

 ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿಗಳ ಸ್ವರೂಪವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ?
ಯಾವುದೇ ಸರಕಾರ ಬಂದರೂ ಈ ಗ್ಯಾರಂಟಿಗಳನ್ನು ತೆಗೆಯಲು ಆಗುವುದಿಲ್ಲ. ಬೇಕಿದ್ದರೆ ಸುಧಾರಣೆ ಮಾಡಬಹುದಷ್ಟೇ. ಯಾಕೆಂದರೆ ಇವೆಲ್ಲವೂ ರಾಜ್ಯದ ಬಹುತೇಕ ಜನರ ಬದುಕಿಗೆ ಸಂಬಂಧಿಸಿದವು.

ಸರಕಾರದಲ್ಲಿ ಹಣವೇ ಇಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಮುಂದೆ ಗ್ಯಾರಂಟಿಗೆ ಎಲ್ಲಿಂದ ದುಡ್ಡು ಬರುತ್ತದೆ?
ಈಗಾಗಲೇ ಮುಖ್ಯಮಂತ್ರಿಗಳು ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಶಾಸಕರಿಗೆ ತಲಾ 25 ಕೋಟಿ ರೂ. ಘೋಷಿಸುವುದರ ಜತೆಗೆ ಸರಕಾರಿ ಆದೇಶ ಕೂಡ ಮಾಡಿದ್ದಾರೆ. ಹಾಗಾಗಿ ಹಣ ಇಲ್ಲ ಎಂದು ಇನ್ಮುಂದೆ ಹೇಳುವಂತಿಲ್ಲ. ಗ್ಯಾರಂಟಿಗೆ ಬರುವ ವರ್ಷ 55ರಿಂದ 56 ಸಾವಿರ ಕೋಟಿ ರೂ. ಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಸಂಪನ್ಮೂಲ ಕ್ರೋಡೀಕರಣಕ್ಕೆ ಕ್ರಮ ಕೈಗೊಳ್ಳಬೇಕಿದೆ. ಉದಾಹರಣೆಗೆ, ಬಹುತೇಕ ಕಡೆ ಬಿಲ್‌ಗ‌ಳನ್ನು ಕೊಡುವುದಿಲ್ಲ. ಇದಕ್ಕೆ ಬ್ರೇಕ್‌ ಹಾಕಿದರೆ, 10 ಸಾವಿರ ಕೋಟಿ ರೂ. ಬರಬಹುದು ಎಂಬುದು ನನ್ನ ಅಂದಾಜು. ಅದೇ ರೀತಿ ಮುದ್ರಾಂಕ ಶುಲ್ಕದ ನಿರ್ವಹಣೆ, ಅಬಕಾರಿ ಇಲಾಖೆಯಲ್ಲಿ ವ್ಯಾಜ್ಯಗಳಿಂದ ಬಂದ್‌ ಆಗಿರುವ ಮಳಿಗೆಗಳ ಪುನರಾರಂಭ, ಗಣಿ ಮತ್ತು ಭೂವಿಜ್ಞಾನದಲ್ಲಿ ರಾಜಸ್ವ ಸಂಗ್ರಹ ಮತ್ತಿತರ ಕಡೆಗಳಿಂದ ಕನಿಷ್ಠ 15 ಸಾವಿರ ಕೋಟಿ ರೂ. ಒಟ್ಟಾರೆಯಾಗಿ ಬರಲು ಅವಕಾಶ ಇದೆ. ಇದಕ್ಕೆ ದಿಟ್ಟಕ್ರಮಗಳ ಆವಶ್ಯಕತೆ ಇದೆ.

 ಲೋಕಸಭಾ ಚುನಾವಣೆಗೆ ನಿಮ್ಮನ್ನು ಕಣಕ್ಕಿಳಿಸುವ ಚಿಂತನೆ ನಡೆದಿದೆಯೇ? ವರಿಷ್ಠರಿಂದ ಒತ್ತಡ ಬಂದರೆ ನಿಲ್ಲುತ್ತೀರಾ?
ಈ ಬಗ್ಗೆ ವದಂತಿಗಳು ಕೇಳಿಬರುತ್ತಿರಬಹುದು. ಆದರೆ ನಾನಂತೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಒಂದು ವೇಳೆ ಒತ್ತಡ ಬಂದರೂ “ಬೇಡ’ ಎಂದು ಹೇಳುತ್ತೇನೆ.

 ವಿಜಯ ಕುಮಾರ ಚಂದರಗಿ

ಟಾಪ್ ನ್ಯೂಸ್

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.