Urwa ಚೂರಿ ತೋರಿಸಿ ಹಣ, ಮೊಬೈಲ್ ಸುಲಿಗೆ
Team Udayavani, Jan 17, 2024, 9:58 PM IST
ಮಂಗಳೂರು: ಚೂರಿ ತೋರಿಸಿ ಹಣ ಮತ್ತು ಮೊಬೈಲ್ ಸುಲಿಗೆ ಮಾಡಿದ ಘಟನೆ ಉರ್ವ ಸ್ಟೋರ್ನ ಪಿಡಬ್ಲ್ಯುಡಿ ಕ್ವಾಟ್ರಸ್ನ ಬಳಿ ನಡೆದಿದೆ.
ಸೋಮವಾರ ರಾತ್ರಿ 10 ಗಂಟೆಯ ಸುಮಾರಿಗೆ ಭರತ್ ಅವರು ಕೆಲಸ ಮುಗಿಸಿಕೊಂಡು ರೂಮ್ನ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಕ್ವಾಟ್ರìಸ್ನ ಒಂದನೇ ಕ್ರಾಸ್ ಬಳಿ ತಲುಪಿದಾಗ ಹಿಂದಿನಿಂದ ಸ್ಕೂಟರ್ನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳ ಪೈಕಿ ಓರ್ವ ಚೂರಿ ತೋರಿಸಿ ಬೆದರಿಸಿ ವಿವೋ ಮೊಬೈಲ್ ಅನ್ನು ಕಸಿದುಕೊಂಡ. ಇನ್ನೋರ್ವ ಪ್ಯಾಂಟಿನ ಕಿಸೆಯಲ್ಲಿದ್ದ 500 ರೂ. ಕಸಿದುಕೊಂಡಿದ್ದಾನೆ.
ಮೂವರು ಕೂಡ ಕೈಯಿಂದ ಹೊಡೆದು ನೆಲಕ್ಕೆ ಬೀಳಿಸಿ ಚೂರಿಯಿಂದ ಬಲಗೈಗೆ ಹೊಡೆದು ಪರಾರಿಯಾಗಿದ್ದಾರೆ ಎಂದು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.