ISRO: ಸಂಕಷ್ಟದಲ್ಲಿ ಸಿಲುಕುವ ಮೀನುಗಾರರಿಗೆ ಇಸ್ರೋ “ಡಿಎಟಿ” ಸಹಾಯಹಸ್ತ
- ಅಪಾಯ ಎದುರಾದಾಗ ತುರ್ತು ಸಂದೇಶ ರವಾವಿಸುವ ತಂತ್ರಜ್ಞಾನ
Team Udayavani, Jan 17, 2024, 10:46 PM IST
ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ “ಡಿಸ್ಟ್ರೆಸ್ ಅಲರ್ಟ್ ಟ್ರಾನ್ಸ್‌ಮೀಟರ್'(ಡಿಎಟಿ) ಎಂಬ ಸಾಧನವನ್ನು ಅತ್ಯಾಧುನಿಕಗೊಳಿಸಿ, ಬಿಡುಗಡೆ ಮಾಡಿದೆ. ಕಡಲಲ್ಲಿ ದೋಣಿಗಳ ಮೂಲಕ ಮೀನುಗಾರಿಕೆ ನಡೆಸುವವರಿಗೆ ಸಹಾಯ ಮಾಡುವ ಈ ಸಾಧನ 2010ರಲ್ಲೇ ಬಿಡುಗಡೆಯಾಗಿತ್ತು. ಈಗ ಅದರ 2ನೇ ಆವೃತ್ತಿಯನ್ನು ಅಂದರೆ ಡಿಎಟಿ-ಸೆಕೆಂಡ್ ಜನರೇಶನ್ ಅನ್ನು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಬಿಡುಗಡೆ ಮಾಡಿದ್ದಾರೆ.
ಲಾಭಗಳೇನು?:
- ಕಡಲಲ್ಲಿರುವ ಮೀನುಗಾರರು ತೊಂದರೆಯಲ್ಲಿದ್ದರೆ ಡಿಎಟಿ ಬಳಸಿ ಅಲರ್ಟ್ ಬಟನ್ ಒತ್ತಬಹುದು. ಇದು ನಿಗದಿತ ಸಂವಹನ ಉಪಗ್ರಹದ ಮೂಲಕ ಐಎನ್‌ಎಂಸಿಸಿಯ ನಿಯಂತ್ರಣ ಕೊಠಡಿಗೆ ಹೋಗುತ್ತದೆ.
- ಈ ಸಂದೇಶ ಬಳಸಿ ನಿರ್ದಿಷ್ಟ ದೋಣಿ ಎಲ್ಲಿದೆ ಎಂದು ಗುರ್ತಿಸಿ ಭಾರತೀಯ ಕರಾವಳಿ ಪಡೆ (ಐಸಿಜಿ) ನೆರವಿಗೆ ಧಾವಿಸುತ್ತದೆ.
- ಹೊಸತಾಗಿ ಸೇರ್ಪಡೆಯಾಗಿರುವ ಲಕ್ಷಣಗಳು ಹೀಗಿವೆ: ಎಚ್ಚರಿಕೆ ಸಂದೇಶ ಸ್ವೀಕರಿಸಿದ ಕೂಡಲೇ, ಸ್ವೀಕರಿಸಲಾಗಿದೆ ಎಂಬ ಸಂದೇಶ ಮೀನುಗಾರರಿಗೆ ತಲುಪುತ್ತದೆ. ಅದರಿಂದ ತಮ್ಮ ರಕ್ಷಣೆಗೆ ಐಸಿಜಿ ಬರುತ್ತಿದೆ ಎಂಬ ಸಂದೇಶ ಮೀನುಗಾರರಿಗೆ ಸಿಗುತ್ತದೆ.
- ಪ್ರತಿಕೂಲ ವಾತಾವರಣ, ಚಂಡಮಾರುತ, ಸುನಾಮಿಯ ಲಕ್ಷಣವಿದ್ದಾಗ ನಿಯಂತ್ರಣ ಕೊಠಡಿಯಿಂದ ಡಿಎಟಿಗೆ ಸಂದೇಶ ಹೋಗುತ್ತದೆ. ಆಗ ಮೀನುಗಾರರು ಎಚ್ಚೆತ್ತುಕೊಳ್ಳಬಹುದು.
- ಎಲ್ಲಿ ಮೀನುಗಾರಿಕೆ ಮಾಡಿದರೆ ಉತ್ತಮ ಎಂಬ ಸಂದೇಶವೂ ಸಿಗುತ್ತದೆ. ಡಿಎಟಿಯನ್ನು ಬ್ಲೂಟೂತ್ ಮೂಲಕ ಮೊಬೈಲ್‌ಗೂ ಸಂಪರ್ಕಿಸಿಕೊಳ್ಳಬಹುದು. ಮೊಬೈಲ್‌ನಲ್ಲಿರುವ ಆ್ಯಪ್ ಬಳಸಿ ತಮಗೆ ಬೇಕಾದ ಭಾಷೆಯಲ್ಲಿ ಸಂದೇಶ ಓದಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.