India vs Afghanistan; ರೋಚಕ ಹೋರಾಟದ 2 ಸೂಪರ್ ಓವರ್!!: ಭಾರತಕ್ಕೆ ಗೆಲುವು
Team Udayavani, Jan 18, 2024, 6:10 AM IST
ಬೆಂಗಳೂರು: ದೊಡ್ಡ ಮೊತ್ತದ ರೋಚಕ ಹೋರಾಟ ಕಂಡ ಬೆಂಗಳೂರಿನ ಅಂತಿಮ ಟಿ20 ಪಂದ್ಯ ಟೈಯಲ್ಲಿ ಅಂತ್ಯಗೊಂಡ ಬಳಿಕ ಅಂತಿಮವಾಗಿ ಎರಡನೇ ಸೂಪರ್ ಓವರ್‌ನಲ್ಲಿ ಇತ್ಯರ್ಥ ಕಂಡಿತು. ಇದರಿಂದಾಗಿ ಭಾರತ ಟಿ20 ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿತು.
ಎರಡನೇ ಸೂಪರ್ ಓವರಿನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ಎಸೆತಗಳಲ್ಲಿ ಎರಡು ವಿಕೆಟಿಗೆ 11 ರನ್ ಗಳಿಸಿದ್ದರೆ ಅಘಾ^ನಿಸ್ಥಾನ ತಂಡವು ಮೂರು ಎಸೆತಗಳಲ್ಲಿ 2 ವಿಕೆಟಿಗೆ ಕೇವಲ 1 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಈ ಮೊದಲು ನಡೆದ ಮೊದಲ ಸೂಪರ್ ಓವರ್‌ನಲ್ಲಿ ಅಘಾ^ನಿಸ್ಥಾನ ಒಂದು ವಿಕೆಟಿಗೆ 16 ರನ್ ಗಳಿಸಿದ್ದರೆ ಭಾರತ ಕೂಡ ವಿಕೆಟ್ ನಷ್ಟವಿಲ್ಲದೇ 16 ರನ್ ಗಳಿಸಿದ್ದರಿಂದ ಮತ್ತೆ ಟೈ ಆಯಿತು. ಈ ಸೂಪರ್ ಓವರ್‌ನಲ್ಲಿ ರೋಹಿತ್ ಎರಡು ಸಿಕ್ಸರ್ ಬಾರಿಸಿ ತಂಡವನ್ನು ಆಧರಿಸಿದ್ದರು.
ಪಂದ್ಯ ಟೈ
ಆರಂಭಿಕ ಕುಸಿತದಿಂದ ಚೇತರಿಸಿಕೊಂಡ ಭಾರತ 4 ವಿಕೆಟಿಗೆ 212 ರನ್ ಪೇರಿಸಿತು. ಇದರಲ್ಲಿ ರೋಹಿತ್ ಕೊಡುಗೆ ಅಜೇಯ 121 ರನ್. ರಿಂಕು ಸಿಂಗ್ ಔಟಾಗದೆ 69 ರನ್ ಹೊಡೆದರು. ಇವರಿಬ್ಬರು ಸೇರಿಕೊಂಡು ಅಂತಿಮ 5 ಓವರ್‌ಗಳಲ್ಲಿ 103 ರನ್, ಕೊನೆಯ ಓವರ್‌ನಲ್ಲಿ 36 ರನ್ ಸೂರೆಗೈದರು. ದಿಟ್ಟ ಜವಾಬಿತ್ತ ಅಫ್ಘಾನಿಸ್ಥಾನ 6 ವಿಕೆಟಿಗೆ 212 ರನ್ ಬಾರಿಸಿದ್ದರಿಂದ ಪಂದ್ಯ ಟೈಗೊಂಡಿತು. ಪಂದ್ಯ ಸೂಪರ್ ಓವರ್‌ನತ್ತ ಮುಖ ಮಾಡಿತು.
ರೋಹಿತ್ ಶರ್ಮ ಅವರ 5ನೇ ಶತಕ ಹೊಡೆದು ಟಿ20ಯಲ್ಲಿ ಅತ್ಯಧಿಕ ಶತಕ ಬಾರಿಸಿದ ದಾಖಲೆ ಬರೆದರು. ಸೂರ್ಯಕುಮಾರ್ ಯಾದವ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ತಲಾ 4 ಸೆಂಚುರಿ ಹೊಡೆದಿದ್ದಾರೆ.
ಮೊದಲೆರಡು ಪಂದ್ಯಗಳಲ್ಲಿ ಖಾತೆಯನ್ನೇ ತೆರೆಯದಿದ್ದ ರೋಹಿತ್ ಇಲ್ಲಿ ಹಿಟ್‌ಮ್ಯಾನ್ ಅವತಾರ ಎತ್ತಿದರು. ಕೊನೆಯ ತನಕ ಕ್ರೀಸ್ ಆಕ್ರಮಿಸಿಕೊಂಡು ನಿಂತರು. ಅವರ ಶತಕ 64 ಎಸೆತಗಳಲ್ಲಿ ದಾಖಲಾಯಿತು. ಒಟ್ಟು 69 ಎಸೆತ ನಿಭಾಯಿಸಿದ ರೋಹಿತ್ 11 ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿದರು.
ರಿಂಕು ಸಿಂಗ್ ಅವರ 69 ರನ್ 39 ಎಸೆತಗಳಿಂದ ಬಂತು. ಇದರಲ್ಲಿ 2 ಫೋರ್, 6 ಸಿಕ್ಸರ್ ಸೇರಿತ್ತು. ಇದು ಅವರ 2ನೇ ಫಿಫ್ಟಿ. ರೋಹಿತ್-ರಿಂಕು 95 ಎಸೆತಗಳಿಂದ ಮುರಿಯದ 5ನೇ ವಿಕೆಟಿಗೆ 190 ರನ್ ಪೇರಿಸಿದರು.
22ಕ್ಕೆ 4 ವಿಕೆಟ್ ಉರುಳಿದ ಬಳಿಕ ಜತೆಗೂಡಿದ ರೋಹಿತ್-ರಿಂಕು ಅಫ್ಘಾನ್ ಬೌಲರ್‌ಗಳಿಗೆ ತಿರುಗೇಟು ನೀಡಿದರು.
ಈ ಜವಾಬ್ದಾರಿಯುತ ಬ್ಯಾಟಿಂಗ್ ವೇಳೆ ರೋಹಿತ್ ಶರ್ಮ ಟಿ20ಯಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತದ ನಾಯಕರೆನಿಸಿದರು. ವಿರಾಟ್ ಕೊಹ್ಲಿ ಅವರ 1,570 ರನ್ನುಗಳ ದಾಖಲೆ ಪತನಗೊಂಡಿತು. ಮೊದಲ ಓವರ್‌ನಲ್ಲೇ 11 ರನ್ ಬಿಟ್ಟುಕೊಟ್ಟ ಫರೀದ್ ಅಹ್ಮದ್, ಪವರ್ ಪ್ಲೇಯಲ್ಲೇ ಭಾರತಕ್ಕೆ ಕಂಟಕವಾಗಿ ಕಾಡಿದರು.
ಸಂಕ್ಷಿಪ್ತ ಸ್ಕೋರ್
ಭಾರತ-4 ವಿಕೆಟಿಗೆ 212 (ರೋಹಿತ್ ಔಟಾಗದೆ 121, ರಿಂಕು ಔಟಾಗದೆ 69, ಫರೀದ್ 20ಕ್ಕೆ 3). ಅಫ್ಘಾನಿಸ್ಥಾನ 6 ವಿಕೆಟಿಗೆ 212 (ಗುರ್ಬಜ್ 50, ಜದ್ರಾನ್ 50, ನೈಬ್ ಔಟಾಗದೆ 55, ನಬಿ 34, ವಾಷಿಂಗ್ಟನ್ 18ಕ್ಕೆ 3).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.