Ayodhya; ರಾಮಜನ್ಮಭೂಮಿಯಲ್ಲಿ ಮೊಳಗಲಿದೆ ಕನ್ನಡಿಗರ ನಾದ
ನಾಳೆಯಿಂದ 48 ದಿನಗಳ ಕಾಲ ಅಯೋಧ್ಯೆಯಲ್ಲಿ ರಾಮನಗರದ 10 ಕಲಾವಿದರಿಂದ ಮಂಗಳವಾದ್ಯ ಸೇವೆ
Team Udayavani, Jan 18, 2024, 7:00 AM IST
ರಾಮನಗರ: ಇಡೀ ದೇಶವೇ ಎದುರು ನೋಡುತ್ತಿರುವ ಅಯೋಧ್ಯೆ ರಾಮಮಂದಿರದಲ್ಲಿ ಒಂದೆಡೆ ಕರ್ನಾಟಕದ ಶಿಲ್ಪಿ ಕೆತ್ತಿದ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ಗೊಳ್ಳಲಿದ್ದರೆ, ಮತ್ತೂಂದೆಡೆ ಉದ್ಘಾಟನೆ ಸಮಯದಲ್ಲಿ 48 ದಿನಗಳ ಕಾಲ ಕರ್ನಾಟಕದ ವಾದಕರು ಮಂಗಳವಾದ್ಯ ಮೊಳಗಿಸಲಿದ್ದಾರೆ.
ಹೌದು.., ರಾಮನ ಜನ್ಮಭೂಮಿಯಲ್ಲಿ ನಡೆ ಯು ತ್ತಿ ರುವ ರಾಮಮಂದಿರ ಉದ್ಘಾಟನೆಯಲ್ಲಿ ರಾಮನಗರದ ಕಾಣಿಕೆಯೂ ಸಾಕಷ್ಟಿದೆ. ಈಗಾ ಗಲೇ 48 ದಿನಗಳ ಕಾಲ ಅಯೋಧ್ಯೆಯಲ್ಲಿ ಬಾಲರಾಮನ ಮೆರವಣಿಗೆಗೆ ಬಿದುರಿನ ಪಲ್ಲಕ್ಕಿಯನ್ನು ಕಳುಹಿಸಲಾ ಗಿದ್ದು, ಇದೀಗ ರಾಮ ನಗರದ ಗೀತವಾದಕ ವಿಜಿಕುಮಾರ್ ನೇತೃತ್ವದ 10 ಮಂದಿಯ ತಂಡ 48 ದಿನಗಳ ಕಾಲ ವಾದ್ಯಸೇವೆಯನ್ನು ಮಾಡಲಿದೆ.
ಜ.19ರಿಂದ ತಮ್ಮ ವಾದ್ಯ ಸೇವೆಯನ್ನು ಪ್ರಾರಂಭಿಸುವ ಈ ತಂಡ ಮಾ.10ರವರೆಗೆ ಪ್ರತಿದಿನ ಇವರು ನಾದ ಸೇವೆಯನ್ನು ಸಲ್ಲಿಸಲಿದ್ದಾರೆ. ರಾಮನಗರದ ಖ್ಯಾತ ತಬಲ ವಾದಕ ವಿಜಿಕುಮಾರ್ ಅವರ ನೇತೃತ್ವದಲ್ಲಿ ರಾಮನಗರ, ಮಂಡ್ಯ, ಮೈಸೂರು, ಶ್ರೀರಂಗಪಟ್ಟಣದಿಂದ ಮಂಗಳವಾದ್ಯ ತಂಡವನ್ನು ಸಿದ್ಧಪಡಿಸಿಕೊಂಡು ಅಯೋಧ್ಯೆಗೆ ತೆರಳಿದ್ದು, ಈ ತಂಡ 48 ದಿನಗಳ ಕಾಲ ರಾಮನಿಗೆ ಪ್ರಿಯವಾದ ರಾಗವನ್ನು ನುಡಿಸಲಿದೆ.
ಕರ್ನಾಟಕದ ತಂಡ ಆಯ್ಕೆಯಾಗಿದ್ದು ಹೇಗೆ
ವಿಜಿಕುಮಾರ್ಗೆ 10 ವರ್ಷಗಳಿಂದ ಆಯೋಧ್ಯೆ ಯಲ್ಲಿ ಮಂಗಳವಾದ್ಯ ನುಡಿಸುತ್ತಿದ್ದು, ಅಯೋಧ್ಯೆ ಯಲ್ಲಿರುವ ತಮಿಳುನಾಡು ಮೂಲದ ಅಮ್ಮಾಜಿ ದೇವಾಲಯದಲ್ಲಿ ಪ್ರತಿ ವರ್ಷ ಇವರು ಮಂಗಳ ವಾದ್ಯ ನುಡಿಸುತ್ತಿದ್ದರು. ಇವರ ಕಲೆಗೆ ಮಾರು ಹೋದ ರಾಮ ಜನ್ಮಭೂಮಿ ಟ್ರಸ್ಟ್ನ ಚಂಪತ್ ರಾಯ್ ಹಾಗೂ ಗೋಪಾಲ್ ಜೀ ಕಳೆದ ನಾಲ್ಕು ವರ್ಷಗಳಿಂದ ಅಯೋಧ್ಯೆಯಲ್ಲಿ ರಾಮ ನವಮಿ ಯಂದು ಮಂಗಳವಾದ್ಯ ನುಡಿ ಸಲು ಆಹ್ವಾನ ನೀಡುತ್ತಿದ್ದರು. ಇದೀಗ ರಾಮ ಮಂದಿರ ಉದ್ಘಾಟನೆಯ ಸಮಯದಲ್ಲಿ 48 ದಿನಗಳ ಕಾಲ ನಾದಸೇವೆ ಮಾಡುವ ಅವಕಾಶ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಸಲ್ಲಿಸುತ್ತಿದ್ದ ನಾದಸೇವೆಯನ್ನು ಕಂಡು ನಮ್ಮ ತಂಡಕ್ಕೆ ಅಯೋಧ್ಯೆ ರಾಮಜನ್ಮ ಭೂಮಿ ಟ್ರಸ್ಟ್ನ ಚಂಪತ್ ರಾಯ್ ಹಾಗೂ ಗೋಪಾಲ್ ಜೀ ಅವಕಾಶ ಮಾಡಿಕೊಟ್ಟಿದ್ದಾರೆ. 48 ದಿನಗಳಕಾಲ ಶ್ರೀರಾಮನಿಗೆ ನಾದಸೇವೆ ಮಾಡಲು ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ. ನಮ್ಮ ತಂಡ ಅತ್ಯಂತ ಹೆಚ್ಚು ಉತ್ಸಾಹದಿಂದ ಶ್ರೀರಾಮನಿಗೆ ನಾದಸೇವೆಯನ್ನು ಮಾಡುತ್ತೇವೆ.
ವಿಜಿಕುಮಾರ್, ಅಯೋಧ್ಯೆಯಲ್ಲಿ ಮಂಗಳವಾದ್ಯ ನುಡಿಸಲಿರುವ ರಾಮನಗರ ಜಿಲ್ಲೆ ಕಲಾವಿದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ
Ayodhya: ವ್ಯಾಟಿಕನ್, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ
Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?
Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ
Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.