Mother: ಅಮ್ಮ ಅಂದರೆ ಅಷ್ಟೇ ಸಾಕೇ…


Team Udayavani, Jan 18, 2024, 2:31 PM IST

10-uv-fusion

ಅಮ್ಮ ಎಂಬುದು ಕೇವಲ ಎರಡಕ್ಷರದ ಪದವಾದರೂ, ಅದು ಸಾಗರದಷ್ಟು ಭಾವನೆಗಳನ್ನು ಮೆಲುಕು ಹಾಕುವ ಶಬ್ದ. ಅಮ್ಮನ ಪ್ರೀತಿ ಆಕಾಶದಲ್ಲಿ ಇರುವ ನಕ್ಷತ್ರಕ್ಕೆ ಸಮಾನ. ಎಣಿಸಲು ಎಂದಿಗೂ ಸಾಧ್ಯವಿಲ್ಲ. ಅಮ್ಮನ ಋಣವನ್ನು ಸಾವಿರ ಜನ್ಮದಲ್ಲಿಯೂ ತೀರಿಸಲು ಸಾಧ್ಯವಿಲ್ಲ. ಆಕೆ ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಮಗುವನ್ನು ಜೋಪಾನ ಮಾಡುತ್ತಾಳೆ. ತನ್ನ ಎಲ್ಲ ನೋವುಗಳನ್ನು ತನ್ನ ಮಗು ಎಂಬುದಕ್ಕಾಗಿ ಸಹಿಸಿಕೊಂಡು ಮರೆಯುತ್ತಾಳೆ. ತನ್ನ ಜೀವವನ್ನು ಪಣಕ್ಕಿಟ್ಟು ಇನ್ನೊಂದು ಜೀವಕ್ಕೆ ಜನ್ಮ ನೀಡುತ್ತಾಳೆ. ಬಾಲ್ಯದಲ್ಲಿ ನಾವು ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆಯುವಾಗ ಆಕೆಯೂ ಖುಷಿಪಡುತ್ತಾಳೆ. ಸದಾ ತನ್ನ ಮಕ್ಕಳ ಒಳಿತಿಗಾಗಿ ಚಿಂತಿಸುತ್ತಾಳೆ.

“ಊರಿಗೆ ಅರಸನಾದರೂ ತಾಯಿಗೆ ಮಗನೇ’ಎಂಬ ಗಾದೆ ಎಷ್ಟು ಅದ್ಭುತವಾಗಿದೆ ಅಲ್ಲವೇ? ಒಬ್ಬ ಮಗ ಎಷ್ಟೇ ಶ್ರೀಮಂತ ರಾಜನಾಗಿದ್ದರೂ ಅವನ ತಾಯಿಗೆ ಆತ ಮಗನೇ. ಮಗ ಕಳ್ಳನಾಗಲಿ ಸುಳ್ಳನಾಗಲಿ ಅವನನ್ನು ಕೊನೆಯವರೆಗೂ ಪ್ರೀತಿಯಿಂದ ನೋಡುವವಳು, ಆದರಿಸುವವಳು. ಗದರಿ ಬುದ್ಧಿ ಹೇಳಿ ಸರಿ ದಾರಿಗೆ ತರುವವಳು ತಾಯಿ ಮಾತ್ರ.

ಅಮ್ಮನ ಪ್ರೀತಿ, ಮಮಕಾರವನ್ನು ಯಾರಿಂದಲೂ ಪಡೆಯಲು ಸಾಧ್ಯವಿಲ್ಲ. ತನಗಾಗಿ ಏನನ್ನೂ ಬಯಸದೆ ತನ್ನ ಮಕ್ಕಳಿಗಾಗಿ ದುಡಿಯುವವಳು. ರುಚಿಕರವಾದ ಅಡುಗೆ ಮಾಡಿ ಕೊನೆಗೆ ಉಳಿದದ್ದನ್ನು ತಿನ್ನುವವಳು. ನಿಸ್ವಾರ್ಥ ಪ್ರೀತಿ ತ್ಯಾಗದ ಸ್ವರೂಪ ಅಮ್ಮ. “ಅಮ್ಮ’ ಎಂದ ತತ್‌ಕ್ಷಣ ಮೈ ರೋಮಾಂಚನಗೊಳ್ಳುತ್ತದೆ. ಕಾಣದ ದೇವರಿಗಾಗಿ ಇನ್ನೆಲ್ಲೋ ಹುಡುಕುವ ಬದಲು ಅಮ್ಮನಲ್ಲೇ ದೇವರನ್ನು ಕಾಣಬಹುದು.

ಇಂದಿನ ತಂತ್ರಜ್ಞಾನದ ಯುಗದಲ್ಲಿ ಅಮ್ಮನ ಮೌಲ್ಯ ನಿಜವಾಗಿಯೂ ಯಾರಿಗೂ ತಿಳಿದಿಲ್ಲ. ಮಕ್ಕಳು ದೊಡ್ಡವರಾದ ಮೇಲೆ ವಯಸ್ಕರಾದ ತಮ್ಮ ತಂದೆ ತಾಯಿಯನ್ನು ಸಲಹುವ ವ್ಯವಧಾನವಿಲ್ಲದೆ ವೃದ್ಧಾಶ್ರಮಕ್ಕೆ ಕಳಿಸುತ್ತಾರೆ. ಆದರೆ ಒಂದಂತೂ ಸತ್ಯ. ನಾವು ಪ್ರೀತಿಸಿ ನಮ್ಮನ್ನು ಪ್ರೀತಿಸುವ ಜೀವಗಳು ಸಾವಿ ರಾರು ಸಿಗಬಹುದು ನಮಗೆ. ಆದರೆ ನಾವು ಪ್ರೀತಿಸದಿದ್ದರೂ ನಮ್ಮನ್ನು ಪ್ರೀತಿಸುವ ಜೀವ ಅಂದರೆ ಅದು ಅಮ್ಮ ಮಾತ್ರ.

-ಜಯಶ್ರೀ ಸಂಪ

ಅಂಬಿಕಾ ಮಹಾವಿದ್ಯಾಲಯ ಪುತ್ತೂರು

ಟಾಪ್ ನ್ಯೂಸ್

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.