Hanagerekatte; ಸಂಗ್ರಹವಾಯ್ತು ಅರ್ಧ ಕೋಟಿ ರೂ.ಗೂ ಹೆಚ್ಚಿನ ಕಾಣಿಕೆ ಹಣ !
ಹಿಂದೂ- ಮುಸ್ಲಿಂ ಭಾವೈಕ್ಯ ಕೇಂದ್ರ
Team Udayavani, Jan 18, 2024, 7:27 PM IST
ತೀರ್ಥಹಳ್ಳಿ : ತಾಲೂಕಿನ ಹಿಂದೂ-ಮುಸ್ಲಿಂ ಭಾವೈಕ್ಯ ಕೇಂದ್ರವಾಗಿರುವ ಹಣಗೆರೆ ಕಟ್ಟೆಯಲ್ಲಿರುವ ಭೂತರಾಯ ಚೌಡೇಶ್ವರಿ ದೇವಾಲಯ ಮತ್ತು ಸೈಯದ್ ಹಜರತ್ ದರ್ಗಾದ ಕಾಣಿಕೆ ಹುಂಡಿಯನ್ನು ಬುಧವಾರ ತೆಗೆಯಲಾಗಿದ್ದು ಅರ್ಧ ಕೋಟಿಗೂ ಹೆಚ್ಚಿನ ಹಣ ಸಂಗ್ರಹವಾಗಿದೆ.
ಬುಧವಾರ ಹಣಗೆರೆಕಟ್ಟೆಯ ಈ ಧಾರ್ಮಿಕ ಕೇಂದ್ರದಲ್ಲಿ ಮುಜರಾಯಿ ಇಲಾಖೆಯ ಸಿಬಂದಿಗಳು ಕಾಣಿಕೆ ಹುಂಡಿ ಎಣಿಕೆಗೆ ಹೋದಾಗ ಅಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತಿತರರು ಕೆಲ ಬೇಡಿಕೆಯನ್ನಿಟ್ಟು ಪ್ರತಿಭಟಿಸಿದ್ದರು. ಈ ಪ್ರತಿಭಟನೆಯಿಂದ ಹುಂಡಿ ಎಣಿಕೆ ಕಾರ್ಯ ತಡವಾಗಿ ಆರಂಭವಾಗಿತ್ತು.
ತಡವಾಗಿ ಹುಂಡಿ ಎಣಿಕೆ ಕಾರ್ಯ ಆರಂಭಿಸಿದ್ದ ಕಾರಣ ರಾತ್ರಿ 9 ರವರೆಗೆ ಎಣಿಕೆ ನಡೆಯಿತು. ನಾಣ್ಯದ ಎಣಿಕೆ ಹೊರತುಪಡಿಸಿ ಒಟ್ಟು ನೋಟುಗಳ ಎಣಿಕೆಗಳನ್ನ ಮಾಡಲಾಗಿದ್ದು 54ಲಕ್ಷದ 50ಸಾವಿರದ760 ರೂ. ಸಂಗ್ರಹವಾಗಿದೆ. ಪ್ರತಿ ಮೂರು ತಿಂಗಳಿಗೆ ಈ ಧಾರ್ಮಿಕ ಕೇಂದ್ರದಲ್ಲಿ ಇಷ್ಟೇ ಹಣ ಸಂಗ್ರಹವಾಗುತ್ತಿದೆ.
ಈ ಕಾಣಿಕೆಯ ಸಂಗ್ರಹದ ಆಧಾರದ ಮೇಲೆಯೇ ಧಾರ್ಮಿಕ ಕೇಂದ್ರ ಯಾವ ಶ್ರೇಣಿಯಲ್ಲಿದೆ ಎಂಬುದನ್ನ ನಿಗದಿಪಡಿಸಲಾಗುತ್ತದೆ. ಹಣಗೆರೆಕಟ್ಟೆಯ ಈ ಧಾರ್ಮಿಕ ಕೇಂದ್ರ ‘ಎ’ ಶ್ರೇಣಿಯ ಧಾರ್ಮಿಕ ಕೇಂದ್ರ ಎನಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Onion Price; ಈರುಳ್ಳಿ ಬೆಲೆ ಇಳಿಕೆ: ಹರಾಜು ನಿಲ್ಲಿಸಿ ರೈತರ ಪ್ರತಿಭಟನೆ
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.