Ram Mandir: ಎಳನೀರಿನ ಸೇವನೆ, ನೆಲದ ಮೇಲೆ ನಿದ್ದೆ; ಕಠಿನ ವ್ರತದಲ್ಲಿ ಮೋದಿ 

ಗರ್ಭಗುಡಿಯಲ್ಲಿ ರಾಮಲಲ್ಲಾ ವಿರಾಜಮಾನ

Team Udayavani, Jan 19, 2024, 6:23 AM IST

1-adas-dad

ಲಕ್ನೋ: ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಗುರುವಾರ ವಿರಾಜಮಾನ ನಾಗಿದ್ದಾನೆ. ಸಂಜೆ ವೇಳೆಗೆ ಬಾಲರಾಮನ ವಿಗ್ರಹವನ್ನು ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಗರ್ಭಗುಡಿಯ ಹೊರಗೆ ವಾಸ್ತು ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು 121 ಅರ್ಚಕರು ಸೇರಿ ನೆರವೇರಿಸುವ ಮೂಲಕ ವಿಗ್ರಹ ಸ್ಥಾಪನೆ ಕಾರ್ಯ ಪೂರ್ಣಗೊಂಡಿದೆ.

ಬುಧವಾರ ರಾತ್ರಿಯೇ ವಿಶೇಷ ಪೂಜೆಯೊಂದಿಗೆ ರಾಮಲಲ್ಲಾನ ವಿಗ್ರಹವನ್ನು ಮಂದಿರದ ಗರ್ಭಗುಡಿಗೆ ತರಲಾಗಿತ್ತು ಆದರೆ, ಕೆಲ ತಾಂತ್ರಿಕ ಕಾರಣಗಳಿಂದ  ಪ್ರತಿಷ್ಠಾಪಿಸಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ಖ್ಯಾತ ಜ್ಯೋತಿಷಿಗಳಾದ ಆಚಾರ್ಯ ಗಣೇಶ್ವರ ಶಾಸ್ತ್ರೀ ಅವರ ನೇತೃತ್ವದಲ್ಲಿ ಜಲಾಧಿವಾಸ್‌ ವಿಧಿಯ ಪ್ರಕಾರ ವಿಗ್ರಹವನ್ನು ಸ್ವತ್ಛಗೊಳಿಸಿ ಸತತ 4 ಗಂಟೆಗಳ ಕಾಲ ಪೂಜೆ, ಮಂತ್ರ ಪಠಣೆಯನ್ನು ನೆರ ವೇರಿಸಿ ಶುಭ ಮುಹೂರ್ತದಲ್ಲಿ ವಿಗ್ರಹ ಪ್ರತಿಷ್ಠಾಪಿಸ ಲಾಗಿದೆ. ಗೌರಿ ಗಣೇಶ ಪೂಜೆ, ವರುಣ ಪೂಜೆ ಸೇರಿ ವಿವಿಧ ಪೂಜಾ ಪ್ರಕ್ರಿಯೆಗಳನ್ನು ಅನು ಸರಿ ಸ ಲಾಗಿದೆ ಎಂದು ಮಂದಿರ ಟ್ರಸ್ಟ್‌ ಮಾಹಿತಿ ನೀಡಿದೆ.

ರಾಮಾಯಾಣ ಧಾರಾವಾಹಿಯ ಪಾತ್ರಧಾರಿಗಳಿಗೆ ಸ್ವಾಗತ
ಪ್ರಸಿದ್ಧ ರಾಮಾಯಣ ಧಾರವಾಹಿಯಲ್ಲಿ ಶ್ರೀರಾಮ , ಸೀತೆ ಮತ್ತು ಲಕ್ಷ್ಮಣ ಪಾತ್ರಧಾರಿಗಳಾಗಿ ಖ್ಯಾತರಾಗಿರುವ ಕಲಾವಿದರಾದ ಅರುಣ್‌ ಗೋವಿಲ್‌, ದೀಪಿಲಾ ಚಿಖೀಯಾ ಮತ್ತು ಸುನಿಲ್‌ ಲಹ್ರಿ ಅವರು ಗುರುವಾರ ಅಯೋಧ್ಯೆಗೆ ತೆರಳಿದ್ದು, ಅವರಿಗೆ ಅಭೂತಪೂರ್ವ ಸ್ವಾಗತ ದೊರಕಿದೆ. ಜಾಲತಾಣಗಳಲ್ಲೂ ಅಯೋಧ್ಯೆಗೆ ಭೇಟಿ ನೀಡಿರುವ ಈ ಕಲಾವಿದರ ಸ್ವಾಗತದ ವಿಡಿಯೋ ವೈರಲ್‌ ಆಗಿದೆ.

ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ ನೇರಪ್ರಸಾರ
ರಾಮ ಮಂದಿರ ಉದ್ಘಾಟನೆ ಸಮಾರಂಭದ ನೇರ ಪ್ರಸಾರವನ್ನು ಭಾರತದಾದ್ಯಂತ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲಿ ಪ್ರದರ್ಶಿಸುವುದಾಗಿ ಭಾರತೀಯ ರೈಲ್ವೆ ಘೋಷಿಸಿದೆ. ಈಗಾಗಲೇ ದೇಶಾದ್ಯಂತ 9,000 ರೈಲ್ವೆ ನಿಲ್ದಾಣಗಳಲ್ಲಿ ನೇರ ಪ್ರಸಾರಕ್ಕೆ ಅನುವಾಗುವ ಸ್ಕ್ರೀನ್‌ಗಳು ಇವೆ ಎಂದು ಎಎನ್‌ಐ ವರದಿ ಮಾಡಿದೆ.

ರಾಮಾಯಣ ಅಂಚೆ ಚೀಟಿ ಬಿಡುಗಡೆಗೊಳಿಸಿದ ಪ್ರಧಾನಿ
ಶ್ರೀರಾಮ ಜನ್ಮಭೂಮಿಯ ರಾಮ ಮಂದಿರ ಉದ್ಘಾಟನೆ ಸಮಾರಂಭದ ಸ್ಮರಣಾರ್ಥ ಪ್ರಧಾನಿ ಮೋದಿ ಅವರು ಗುರುವಾರ 6 ಅಂಚೆ ಚೀಟಿ (ಸ್ಟಾಂಪ್‌)ಗಳನ್ನು ಬಿಡುಗಡೆಗೊಳಿಸಿದ್ದಾರೆ.  ರಾಮ ಮಂದಿರ, ಗಣೇಶ, ಹನುಮಾನ್‌, ಜಟಾಯು, ಶಬರಿ ಮತ್ತು ಕೇವರ್‌ ವಿನ್ಯಾಸವಿರುವ  ಒಟ್ಟು ಆರು ಸ್ಟಾಂಪ್‌ಗ್ಳನ್ನು ಬಿಡುಗಡೆಗೊಳಿಸಲಾಗಿದ್ದು, ಅವುಗಳಲ್ಲಿ ಪಂಚಭೂತ ತತ್ವ (ಆಕಾಶ, ವಾಯು, ಅಗ್ನಿ, ಭೂಮಿ, ನೀರು)ಗಳನ್ನು ವಿವರಿಸುವಂಥ ವಿನ್ಯಾಸಗಳಿವೆ.  ಈ ಪಂಚಭೂತ ತತ್ವವು ಪರಿಪೂರ್ಣ ಸಾಮರಸ್ಯದ ಪ್ರತೀಕವೆಂದು ನಂಬಲಾಗಿದೆ.

ಸ್ಟಾಂಪ್‌ಗ ಳಲ್ಲಿ ಇರುವ ವಿನ್ಯಾಸ 
ರಾಮ ಮಂದಿರ
ಚೌಪಾಯಿ ” ಮಂಗಳ ಭವನ್‌ ಅಮಂಗಳ ಹರಿ’
ಸೂರ್ಯ
ಸರಯೂ ನದಿ
ದೇಗುಲದ ಸುತ್ತಲಿನ ಶಿಲ್ಪಗಳು

ಸ್ಟಾಂಪ್‌ ಬುಕ್‌ ಬಿಡುಗಡೆ
ಇದೇ ವೇಳೆ ಪ್ರಧಾನಿ ಜಗತ್ತಿನ ವಿವಿಧ ದೇಶಗಳಲ್ಲಿ ಬಿಡುಗಡೆಗೊಂಡಿರುವ ರಾಮಾಯಣಕ್ಕೆ ಸಂಬಂಧಿಸಿದ ಸ್ಟಾಂಪ್‌ಗ್ಳ ಸಂಗ್ರಹವನ್ನು ಹೊಂದಿರುವಂಥ 48 ಪುಟಗಳ ಸ್ಟಾಂಪ್‌ ಪುಸ್ತಕವನ್ನೂ ಬಿಡುಗಡೆಗೊಳಿಸಿದ್ದಾರೆ.

ಎಳನೀರಿನ ಸೇವನೆ, ನೆಲದ ಮೇಲೆ ನಿದ್ದೆ; ಕಠಿನ ವ್ರತದಲ್ಲಿ ಮೋದಿ 
ದೇಶನಿವಾಸಿಗಳ ಪ್ರತಿನಿಧಿಯಾಗಿ ಮಂದಿರ ಉದ್ಘಾಟಿಸುತ್ತಿರುವ ಪ್ರಧಾನಿ ಮೋದಿ ಕೂಡ 11 ದಿನಗಳ ವರೆಗೆ ಬರೀ ಎಳನೀರಿನ ಸೇವನೆ ಮಾಡುವಂಥ ಉಪವಾಸ ವ್ರತ ಸೇರಿದಂತೆ ಹಲವು ಕಠಿನ ಅನುಷ್ಠಾನಗಳನ್ನು ನೆರವೇರಿಸುತ್ತಿದ್ದಾರೆ. “ಯಮ ನಿಯಮ’ ವ್ರತ ಅನುಷ್ಠಾನದಲ್ಲಿರುವ ಪ್ರಧಾನಿ,  ಸೂರ್ಯೋದಯಕ್ಕೂ ಮುನ್ನವೇ ಎದ್ದು ಸ್ನಾನ ಪೂಜೆ ಇತ್ಯಾದಿ ಕ್ರಿಯೆಗಳನ್ನು ಪೂರೈಸಿ, ಯೋಗ ಮತ್ತು ಧ್ಯಾನ ಕ್ರಮಗಳನ್ನೂ ಪೂರ್ಣಗೊಳಿಸುತ್ತಿದ್ದಾರೆ. ಅಲ್ಲದೇ, ಸಾತ್ವಿಕ ಆಹಾರವಾಗಿ ಬರೀ ಎಳನೀರನ್ನಷ್ಟೇ ಸೇವಿಸುತ್ತಿದ್ದು, ನೆಲದ ಮೇಲೆ ಮಲಗಿ ನಿದ್ರಿಸುತ್ತಿದ್ದಾರೆ. ಪ್ರಾಣ ಪ್ರತಿಷ್ಠೆಗೆ ಮುನ್ನವೂ ಉಪವಾಸ ವ್ರತ ಆಚರಿಸುವ ನಿಯಮವಿದ್ದು ಎಲ್ಲ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ ಎನ್ನಲಾಗಿದೆ.

ನಾಳೆ ರಾಮೇಶ್ವರಕ್ಕೆ ಮೋದಿ ಭೇಟಿ 
ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ 11 ದಿನಗಳ ಅನುಷ್ಠಾನದ ಭಾಗವಾಗಿ ರಾಮಾಯಣ ಸಂಬಂಧಿಸಿದ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಜ.20 ಮತ್ತು ಜ.21ರಂದು ತಮಿಳುನಾಡಿನ ವಿವಿಧ ದೇಗುಲಗಳಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ರಾಮನು ಲಂಕಾ ಪ್ರಯಾಣ ಆರಂಭಿಸಿದ ರಾಮೇಶ್ವರ ದೇಗುಲಕ್ಕೂ ಭೇಟಿ ನೀಡಲಿದ್ದಾರೆ. ಅಲ್ಲದೇ, ಧನುಷೊRàಡಿಯಲ್ಲಿರುವ  ಕೋದಂಡರಾಮ ದೇಗುಲಕ್ಕೂ ಭೇಟಿ ನೀಡಿ ರಾಮ ಭಜನೆಗಳನ್ನು ಆಲಿಸಲಿದ್ದಾರೆ. ರಾವಣನ ತಮ್ಮ ವಿಭೀಷಣನನ್ನು ಇದೇ ಜಾಗದಲ್ಲಿ ರಾಮ ಪಟ್ಟಾಭಿಷಿಕ್ತನನ್ನಾಗಿಸಿದ ಎಂಬ  ಪ್ರತೀತಿಯೂ  ಈ ಕ್ಷೇತ್ರಕ್ಕಿದೆ.

ಅನ್ನದಾಸೋಹ ಏರ್ಪಡಿಸಿ, ಜನರೊಂದಿಗೆ ಬನ್ನಿ: ಸಚಿವರಿಗೆ ಮೋದಿ ಸಲಹೆ 
ರಾಮಮಂದಿರ ಉದ್ಘಾಟನೆ ದಿನದಂದು ಮನೆಗಳಲ್ಲಿ ದೀಪ ಬೆಳಗಿಸುವುದರ ಜತೆಗೆ ಬಡವರಿಗೆ, ಅಸಹಾಯಕರಿಗೆ ಅನ್ನದಾನ  ಮಾಡುವ ಮೂಲಕ ರಾಮಲಲ್ಲಾನ ಪ್ರಾಣಪ್ರತಿಷ್ಠೆಯನ್ನು ಸಂಭ್ರಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವರಿಗೆ ಕರೆ ನೀಡಿದ್ದಾರೆ. ಇದಲ್ಲದೇ, ಜ.22ರ ಬಳಿಕ ಅಯೋಧ್ಯೆ ದರ್ಶನಕ್ಕೆಂದು ಬರುವ ಭಕ್ತರಿಗೆ ರೈಲಿನ ವ್ಯವಸ್ಥೆ ಮಾಡಿಕೊಡುವಲ್ಲಿ ಸಹಕರಿಸುವಂತೆಯೂ ಸಚಿವರನ್ನು ಕೇಳಿದ್ದಾರೆ. ಜತೆಗೆ ಸಚಿವರು ತಮ್ಮ ಕ್ಷೇತ್ರಗಳ ಜನರಿಗಾಗಿ ತಾವೇ ವ್ಯವಸ್ಥೆ ಮಾಡಿ ಅವರೊಂದಿಗೆ ರೈಲಿನಲ್ಲೇ ಸಂಚರಿಸಿ ಮಂದಿರದ ದರ್ಶನ ಪಡೆಯುವಂತೆಯೂ ಪ್ರಧಾನಿ ಕರೆ ನೀಡಿದ್ದಾರೆ.

ತ್ರೇತಾಯುಗವೇ ಮೈದಳೆದ ಅಯೋಧ್ಯೆ!
ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಯೋಧ್ಯೆಯ ಪ್ರತಿ ಬೀದಿಗಳೂ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದ್ದು, ಎತ್ತ ನೋಡಿದರೂ ರಾಮಾಯಣದ ಸೊಬಗೇ ಆವರಿಸಿದಂತಾಗಿದೆ. ನಗರದ ತುಂಬೆಲ್ಲಾ ಅಲಂಕಾರಿಕ ತೂಗುದೀಪಗಳನ್ನು ಅಳವಡಿಸಲಾಗಿದ್ದು, ಎಲ್ಲ ದೀಪಗಳ ಮೇಲೂ ರಾಮನಂದಿ ತಿಲಕ, ಬಿಲ್ಲುಬಾಣಗಳ ಚಿತ್ರಣವೇ ಜನರ ಚಿತ್ತ ಸೆಳೆಯುತ್ತಿವೆ.  ಹೌದು, ಉತ್ತರ ಪ್ರದೇಶ ರಾಜಧಾನಿ ಲಕ್ನೋದಿಂದ ಅಯೋಧ್ಯೆಗೆ ತಲುಪುವ ಎಲ್ಲ ರಸ್ತೆಗಳನ್ನು ಅದ್ಭುತವಾಗಿ ಅಲಂಕರಿಸಲಾಗುತ್ತಿದೆ. ಕೆಲ ರಸ್ತೆಗಳಲ್ಲಿ ಮಂದಿರ ಉದ್ಘಾಟನೆಗೆ ಆಹ್ವಾನಿಸುತ್ತಿರುವ ದೊಡ್ಡ ದೊಡ್ಡ ಪೋಸ್ಟರ್‌ಗಳು ರಾರಾಜಿಸುತ್ತಿದ್ದರೆ, ಮತ್ತೂ ಕೆಲವು ರಸ್ತೆಗಳಲ್ಲಿ ” ಶುಭಗಡಿ ಆಯಿ, ವಿರಾಜೇ ರಘುರಾಯಿ’ ಎನ್ನುವಂಥ ಘೋಷಣೆಗಳಿರುವ ಫ‌ಲಕಗಳನ್ನು ಅಳವಡಿಸಲಾಗಿದೆ.
ಹೆದ್ದಾರಿಯಲ್ಲಿರುವ ಹೊಟೇಲ್‌ಗ‌ಳು, ಡಾಬಾಗಳು ಕೂಡ ಅಯೋಧ್ಯೆಗೆ ಆಗಮಿಸುತ್ತಿರುವ ಭಕ್ತರಿಗೆ ಸ್ವಾಗತಕೋರುವ ಬ್ಯಾನರ್‌ಗಳನ್ನು ಅಳವಡಿಸಿಕೊಂಡಿವೆ. ಅಷ್ಟೇ ಅಲ್ಲದೇ, ನೂತನವಾಗಿ ನಿರ್ಮಾಣವಾಗಿರುವ ರಾಮ ಮಂದಿರ ಚಿತ್ರಗಳು, ರಾಮನ ಚಿತ್ರಗಳಿರುವ ಬ್ಯಾನರ್‌ಗಳನ್ನೂ ಅಳವಡಿಸಲಾಗಿದ್ದು, ನಗರಗಳ ತುಂಬೆಲ್ಲಾ  ಕೇಸರಿ ಧ್ವಜಗಳ ಹಾರಾಟ ತ್ರೇತಾಯುಗವನ್ನೇ ಪ್ರತಿಬಿಂಬಿಸುತ್ತಿವೆ. ಫೈಜಾಬಾದ್‌ ಕಡೆಯಿಂದ ಅಯೋಧ್ಯೆಗೆ ಆಗಮಿಸುವ ರಸ್ತೆಗಳಂತೂ ಸಂಪೂರ್ಣ ದೀ‌ಪಾಲಂಕಾರಗಳು, ಬಿಲ್ಲುಬಾಣಗಳ ಪೋಸ್ಟರ್‌, ರಾಮ ನಂದಿತಿಲಕಗಳ ಫ್ಲೆಕ್‌  Õಗಳಿಂದ ತುಂಬಿಹೋಗಿದ್ದು, ಆಕಾಶವೂ ಕೂಡ ಮಂದಿರ ಉದ್ಘಾಟನೆಗೆ ಅಲಂಕೃತಗೊಂಡಂತೆ ತೋರುತ್ತಿವೆ.

ಟಾಪ್ ನ್ಯೂಸ್

ಮುಂದಿನ ವರ್ಷವೇ ʼಕಲ್ಕಿ 2898 ಎಡಿʼ ಸೀಕ್ವೆಲ್ ರಿಲೀಸ್; ನಿರ್ಮಾಪಕರೇ ಕೊಟ್ರು ಸುಳಿವು

ಮುಂದಿನ ವರ್ಷವೇ ʼಕಲ್ಕಿ 2898 ಎಡಿʼ ಸೀಕ್ವೆಲ್ ರಿಲೀಸ್; ನಿರ್ಮಾಪಕರೇ ಕೊಟ್ರು ಸುಳಿವು

Bihar: ಬಿಹಾರದಲ್ಲಿ ಕುಸಿದು ಬಿದ್ದ ಮತ್ತೊಂದು ಸೇತುವೆ- 15 ದಿನಗಳಲ್ಲಿ 10 ಸೇತುವೆ ಕುಸಿತ!

Bihar: ಬಿಹಾರದಲ್ಲಿ ಕುಸಿದು ಬಿದ್ದ ಮತ್ತೊಂದು ಸೇತುವೆ- 15 ದಿನಗಳಲ್ಲಿ 10 ಸೇತುವೆ ಕುಸಿತ!

Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ

Sagara: ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ

Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್

Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Transfer of four IPS officers; New SP for Raichur, Koppal

IPS Transfer: ಮತ್ತೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ; ರಾಯಚೂರು, ಕೊಪ್ಪಳಕ್ಕೆ ಹೊಸ ಎಸ್.ಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

ram mandir imp

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

ram mandir 2

Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?

yogi ram mandir

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

ram mandir 2

Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

ಮುಂದಿನ ವರ್ಷವೇ ʼಕಲ್ಕಿ 2898 ಎಡಿʼ ಸೀಕ್ವೆಲ್ ರಿಲೀಸ್; ನಿರ್ಮಾಪಕರೇ ಕೊಟ್ರು ಸುಳಿವು

ಮುಂದಿನ ವರ್ಷವೇ ʼಕಲ್ಕಿ 2898 ಎಡಿʼ ಸೀಕ್ವೆಲ್ ರಿಲೀಸ್; ನಿರ್ಮಾಪಕರೇ ಕೊಟ್ರು ಸುಳಿವು

Bihar: ಬಿಹಾರದಲ್ಲಿ ಕುಸಿದು ಬಿದ್ದ ಮತ್ತೊಂದು ಸೇತುವೆ- 15 ದಿನಗಳಲ್ಲಿ 10 ಸೇತುವೆ ಕುಸಿತ!

Bihar: ಬಿಹಾರದಲ್ಲಿ ಕುಸಿದು ಬಿದ್ದ ಮತ್ತೊಂದು ಸೇತುವೆ- 15 ದಿನಗಳಲ್ಲಿ 10 ಸೇತುವೆ ಕುಸಿತ!

Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ

Sagara: ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ

Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್

Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್

11-honnavara

Honnavara: ಭಾರೀ ಮಳೆ; ಹಲವು ಮನೆಗಳಿಗೆ ನೆರೆ ನೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.