Udupi: ಪುತ್ತಿಗೆ ಪರ್ಯಾಯಕ್ಕೆ “ರಾಜ ದರ್ಬಾರ್‌” ಮೆರುಗು

ಇಂಗ್ಲಿಷ್‌ ಕಲಿತು ವಿದೇಶಗಳಲ್ಲಿ ಇಂಗ್ಲಿಷ್‌ ಉಪನ್ಯಾಸ ಮಾಡುವುದನ್ನು ಕರಗತ ಮಾಡಿಕೊಂಡರು

Team Udayavani, Jan 19, 2024, 10:26 AM IST

Udupi: ಪುತ್ತಿಗೆ ಪರ್ಯಾಯಕ್ಕೆ “ರಾಜ ದರ್ಬಾರ್‌” ಮೆರುಗು

ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನಾಲ್ಕನೆಯ ಪರ್ಯಾಯ ಮಹೋತ್ಸವದ ಅಂಗವಾಗಿ ಗುರುವಾರ ಮುಂಜಾನೆ ರಾಜಾಂಗಣದ ನಡೆದ ಪರ್ಯಾಯ ದರ್ಬಾರ್‌ ರಾಜ ದರ್ಬಾರಿನ ಮೆರುಗು ಪಡೆದಿತ್ತು. ವೇದಿಕೆಯನ್ನು ವಿಶೇಷವಾಗಿ ಅಲಂಕರಿಸಿ, ದಶಾವತಾರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪರ್ಯಾಯ ಮೆರವಣಿಗೆ ಸಂಪನ್ನಗೊಳಿಸಿ, ಕೃಷ್ಣ ಪೂಜಾಧಿಕಾರ ಪಡೆದ ಅನಂತರ ರಾಜಾಂಗಣಕ್ಕೆ ಯತಿ ದ್ವಯರು ಆಗಮಿಸಿದರು.

ದರ್ಬಾರ್‌ ಆರಂಭದಲ್ಲಿ ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ವೇದಘೋಷ ಜರಗಿತು. ದರ್ಬಾರ್‌ ಕಾರ್ಯಕ್ರಮಕ್ಕೂ ಮೊದಲು ವಿ| ಎ. ಚಂದನ್‌ ಕುಮಾರ್‌ ಮತ್ತು ಬಳದಿಂದ ಕೊಳಲು ವಾದನ, ಪಟ್ಲ ಸತೀಶ್‌ ಶೆಟ್ಟಿ, ರತ್ನಕರ ಶೆಣೈ ಭಾಗವತಿಕೆಯಲ್ಲಿ ಬಡಗು, ತೆಂಕುತಿಟ್ಟು ಹಾಗೂ ಭರತನಾಟ್ಯ ಒಳಗೊಂಡ ಶ್ರೀಕೃಷ್ಣಗೀತಾ ರೂಪಕ ಪ್ರಸ್ತುತಗೊಂಡಿತು. ಅನಂತರ ಅಮೆರಿಕದ ಭಕ್ತನಿಂದ ಭಕ್ತಿಗೀತೆ, ನೃತ್ಯ ಗೋಪಾಲ (ಕಾಳಿಂಗ ಮರ್ದನ) ಗುಂಪುನೃತ್ಯ ನೆರವೇರಿತು.

ಕಲಿತದ್ದು 7ನೇ ತರಗತಿ- ನಿರರ್ಗಳ ಇಂಗ್ಲಿಷ್‌ ಭಾಷಣ
ವಿದೇಶಗಳ ಅತಿಥಿಗಳನ್ನುದ್ದೇಶಿಸಿ ಮಾತನಾಡುವಾಗ ಪುತ್ತಿಗೆ ಶ್ರೀಗಳು ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡಿದರು. ಇವರು
ಅಧಿಕೃತವಾಗಿ ಓದಿದ್ದು ಕಾಪು ತಾಲೂಕಿನ ಕೆಮುಂಡೇಲು ಹಿ.ಪ್ರಾ. ಶಾಲೆಯಲ್ಲಿ ಏಳನೆಯ  ತರಗತಿವರೆಗೆ. ಅನಂತರ ಖಾಸಗಿಯಾಗಿ ಇಂಗ್ಲಿಷ್‌ ಕಲಿತು ವಿದೇಶಗಳಲ್ಲಿ ಇಂಗ್ಲಿಷ್‌ ಉಪನ್ಯಾಸ ಮಾಡುವುದನ್ನು ಕರಗತ ಮಾಡಿಕೊಂಡರು.

ಶ್ರೀಕೃಷ್ಣನ ಸೇವೆ ಜೀವನದ ಅಪೂರ್ವ ಅವಕಾಶ: ಪುತ್ತಿಗೆ ಶ್ರೀ
ಉಡುಪಿ: ಶ್ರೀಕೃಷ್ಣನ ಸೇವೆಯೇ ಜೀವನದ ಅಪೂರ್ವ ಅವಕಾಶ. ಗೀತೆಯಲ್ಲಿ ಹೇಳುವಂತೆ ಭಗವತ್‌ ಕೇಂದ್ರಿತ ಜೀವನವೇ ಮುಖ್ಯ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು ನುಡಿದರು. ಗುರುವಾರ ಬೆಳಗ್ಗೆ ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್‌ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ನಮಗೆ ಭಗವದ್ಗೀತೆಯೇ ಸ್ಫೂರ್ತಿ. ಭಗವಂತನನ್ನು ಸರ್ವಸ್ವ ಎಂದು ತಿಳಿದರೆ ಪಶ್ಚಾತ್ತಾಪ ಪಡುವಂತಿಲ್ಲ. ಭಗವಂತನ ಸಂಬಂಧವೇ ಶಾಶ್ವತ. ಉಳಿದ ಸಂಬಂಧಗಳು ಹೆಚ್ಚೆಂದರೆ ನೂರು ವರ್ಷ ಇರಬಹುದು ಎಂದರು.

ನಮಗೆ ಸನ್ಯಾಸವಾಗಿ 50 ವರ್ಷವಾಗಿದೆ. ಹೀಗಾಗಿ ಗೀತೆಯನ್ನು ಬೋಧಿಸಿದ ಶ್ರೀಕೃಷ್ಣನ (ಪಾರ್ಥಸಾರಥಿ ರೂಪ) ಸುವರ್ಣ ರಥವನ್ನು ಸಮರ್ಪಿಸಬೇಕೆಂದಿದ್ದೇವೆ. ಕೋಟಿ ಭಕ್ತರಿಂದ ಗೀತೆಯನ್ನು ಬರೆಸುವ ಕೋಟಿ ಲೇಖನ ಯಜ್ಞವನ್ನು ನಡೆಸಲಿದ್ದೇವೆ. ಅನ್ನದಾನಕ್ಕೆ ಗರಿಷ್ಠ ಆದ್ಯತೆ ನೀಡುತ್ತೇವೆ. ಅಖಂಡ ಗೀತಾ ಪಾರಾಯಣವೂ ಗೀತಾ ಮಂದಿರದಲ್ಲಿ ನಡೆಯಲಿದೆ ಎಂದು ಶ್ರೀಗಳು ಹೇಳಿದರು.

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.