![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Jan 19, 2024, 7:08 PM IST
ರಬಕವಿ ಬನಹಟ್ಟಿ: ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ನೌಕರರ ಸಂಘದ ಬೇಡಿಕೆಗಳನ್ನು ಆದಷ್ಟು ಬೇಗನೆ ಪೂರೈಸಬೇಕು. ಸರ್ಕಾರ ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿಯ ಭರವಸೆಗಳನ್ನು ಇಲ್ಲಿಯವರಿಗೆ ಪೂರೈಸದೆ ಇರುವುದರಿಂದ ನೌಕರರಲ್ಲಿ ಅನಿಶ್ಚಿತ ಭಾವನೆ ಉಂಟಾಗಿದೆ. ಸರ್ಕಾರ ನೌಕರರ ಬೇಡಿಕೆಗಳಿಗೆ ಸ್ಪಂದಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ನೌಕರರ ಸಂಘದ ರಬಕವಿ ಬನಹಟ್ಟಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಹನಗಂಡಿ ತಿಳಿಸಿದರು.
ಶುಕ್ರವಾರ ಬನಹಟ್ಟಿಯ ಶಾಸಕರ ಕಾರ್ಯಾಲಯದಲ್ಲಿ ಶಾಸಕ ಸಿದ್ದು ಸವದಿಯವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
7ನೇ ವೇತನ ಆಯೋಗದ ವರದಿಯನ್ನು ಶೀಘ್ರವಾಗಿ ಪಡೆದುಕೊಂಡು ಸರ್ಕಾರ ಈಗಾಗಲೇ ನೀಡಿರುವ ಶೇ. 17 ರಷ್ಟು ಮಧ್ಯಂತರ ಪರಿಹಾರ ಭತ್ಯೆ ಸೇರಿದಂತೆ ಶೇ. 4೦ ರಷ್ಟು ಫಿಟಮೆಂಟ್ ಸೌಲಭ್ಯವನ್ನು ನೀಡಬೇಕು ರಾಜ್ಯ ಸರ್ಕಾರ ಈಗಾಗಲೇ ಪಂಜಾಬ್ , ರಾಜಸ್ಥಾನ, ಛತ್ತಿಸಘಡ, ಜಾರ್ಖಂಡ ಮತ್ತು ಹಿಮಾಚಲ ಪ್ರದೇಶ ಸರ್ಕಾರ ಜಾರಿಗೆ ತಂದಿರುವಂತೆ ಎನ್ ಪಿ ಎಸ್ ಯೋಜನೆಯನ್ನು ರದ್ದು ಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಹನಗಂಡಿ ಆಗ್ರಹಿಸಿದರು.
ಬಿ.ಬಿ.ಮುಧೋಳ ಮಾತನಾಡಿ, ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ವರ್ಗದವರಿಗೆ ನಗದು ರಹಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಶಾಸಕ ಸಿದ್ದು ಸವದಿ ಮನವಿ ಸ್ವೀಕರಿಸಿ ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುವುದರ ಜೊತೆಗೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಈ ಕುರಿತು ಪ್ರಶ್ನಿಸಲಾಗುವುದು ಎಂದರು.
ಎಸ್.ಬಿ.ಮುಕರ್ತಿಹಾಳ, ಬಾಬಗೌಡ ಪಾಟೀಲ ಮಾತನಾಡಿದರು.ಪ್ರಶಾಂತ ಹೊಸಮನಿ, ರಾಜಶೇಖರ ಸಿಂಗಾರೆಡ್ಡಿ, ಎಸ್.ಬಿ.ಕಡಕೋಳ, ಚಾಂದ ಕಳಾವಂತ, ಸಂಜಯ ಭುಜರುಕ್, ಐ.ಎ. ಡಾಂಗೆ, ಆರ್.ವಿ. ಲಮಾಣಿ, ವಿಜಯಕುಮಾರ ಹಲಕುರ್ಕಿ, ಮಲ್ಲಿಕಾರ್ಜುನ ಗಡೆನ್ನವರ, ವಿಜಯಲಕ್ಷ್ಮಿ ಲುಕ್ಕ, ಶೈಲಜಾ ಮಿರ್ಜಿ, ಯಶವಂತ ವಾಜಂತ್ರಿ, ಸಂತೋಷಿಮಾ ರಾಮದುರ್ಗ, ಮಂಜುನಾಥ ಆಲಗೂರ, ಸದಾಶಿವ ಕುಂಬಾರ ಸೇರಿದಂತೆ ವಿವಿಧ ಸಂಘಟನೆಗಳ ತಾಲ್ಲೂಕು ಘಟಕದ ಅನೇಕ ಸದಸ್ಯರು ಇದ್ದರು.
You seem to have an Ad Blocker on.
To continue reading, please turn it off or whitelist Udayavani.