Ram Mandir: “ಟೆಂಟ್‌ನೊಳಗೆ ಬೊಂಬೆ ಇಟ್ಟು ರಾಮ ಅಂದಿದ್ರು” ಎಂಬ ಹೇಳಿಕೆಗೆ ಬದ್ಧ: ರಾಜಣ್ಣ
ರಾವಣ ಅಂತ ಅನಿಸಿಕೊಳ್ಳಲೂ ಸಿದ್ಧ- ಅವನಂತ ದೈವ ಭಕ್ತ ಯಾರೂ ಇರಲಿಲ್ಲ
Team Udayavani, Jan 19, 2024, 10:54 PM IST
ತುಮಕೂರು (ಗ್ರಾಮಾಂತರ): “ಬಾಬ್ರಿ ಮಸೀದಿ ಬೀಳಿಸಿದಾಗ ನಾನೂ ಹೋಗಿದ್ದೆ. ಟೆಂಟ್‌ನೊಳಗೆ ಬೊಂಬೆ ಇಟ್ಟು ರಾಮ ಅಂದಿದ್ರು’ ಎಂಬ ಹೇಳಿಕೆಗೆ ನಾನು ಬದ್ಧ ಎಂದು ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, 90ರ ದಶಕದಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದಾಗ, ನಾನು ಭೇಟಿ ಕೊಟ್ಟಾಗ ಕಂಡ ಚಿತ್ರಣವನ್ನು ಅವತ್ತು ಹೇಳಿಕೊಂಡಿದ್ದೇನೆ ಅಷ್ಟೇ. ಬೊಂಬೆಯನ್ನು ದೇವರು ಅಂತಾ ಹೇಳಿದ್ರೆ ಏನು ತಪ್ಪು? ಬೊಂಬೆಯಲ್ಲಿ ದೈವತ್ವ ಇರೋದಿಲ್ವ ಎಂದು ಪ್ರಶ್ನೆ ಮಾಡಿದರು.
ರಾವಣ ಎನಿಸಿಕೊಳ್ಳಲು ಸಿದ್ಧ
ಬಿಜೆಪಿಯವರು ನನ್ನನ್ನು ರಾವಣ ಎಂದಿದ್ದಾರೆ. ಅದರಿಂದ ನನಗೆ ಬೇಸರವಿಲ್ಲ. ರಾವಣ ಎನಿಸಿಕೊಳ್ಳಲು ಸಿದ್ಧನಿದ್ದೇನೆ. ಅವನಂಥ ದೈವ ಭಕ್ತ ಯಾರೂ ಇರಲಿಲ್ಲ. ಇವರೆಲ್ಲ ಡೋಂಗಿ ದೈವ ಭಕ್ತರು. ಹಿಂದೆ ಅಣ್ಣಾದೊರೈ ರಾಮಾಯಣಕ್ಕೆ ಬದಲಾಗಿ ರಾವಯಾಣಾವಣ ನಾಟಕ ಆಡಿದ್ರು. ಈ ನಾಟಕದಲ್ಲಿ ರಾವಣ ಸೀತೆ ಮೇಲೆ ಬಲಾತ್ಕಾರ ಮಾಡುವುದಿಲ್ಲ. ಇದು ರಾವಣನ ದೊಡ್ಡ ಗುಣ ಅಲ್ವೇ ಎಂದು ಪ್ರಶ್ನಿಸಿದರು.
ಸಚಿವ ಕೆ.ಎನ್.ರಾಜಣ್ಣ ವಾಲ್ಮೀಕಿ ಸಮಾಜದವರು. ಆ ಸಮುದಾಯಕ್ಕೆ ಸೇರಿದವರು ರಾಮನ ಬಗ್ಗೆ ಗೌರವ ಭಾವವನ್ನು ಎದೆಗೂಡಿನಲ್ಲಿ ಇಟ್ಟುಕೊಂಡಿರುತ್ತಾರೆ ಎಂದು ಭಾವಿಸಿದ್ದೆ. ಆದರೆ ಟಿಪ್ಪು ಜಯಂತಿ ಆಚರಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಓಲೈಸಿ ಡಿಸಿಎಂ ಸ್ಥಾನ ಪಡೆಯಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ಅವರಿಗೆ ಉತ್ತರ ನೀಡುತ್ತಾರೆ. -ಪ್ರತಾಪ ಸಿಂಹ, ಸಂಸದ
ರಾಜಣ್ಣರದ್ದು ವೈಯಕ್ತಿಕ ಹೇಳಿಕೆ: ಸಚಿವ ನಾಗೇಂದ್ರ
ಬಳ್ಳಾರಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಂಬಂಧ ಸಚಿವ ರಾಜಣ್ಣ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದು ಸಚಿವ ಬಿ.ನಾಗೇಂದ್ರ ಸಮರ್ಥಿಸಿಕೊಂಡರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಯನ್ನು ಕೇಂದ್ರ ಸರಕಾರ ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಅನಿಸುತ್ತಿದೆ. ಹಾಗೆ ಸಚಿವ ರಾಜಣ್ಣ ಅವರಿಗೆ ಅಯೋಧ್ಯೆಗೆ ಹೋದಾಗ ಕಂಪನ ಆಗಿಲ್ಲದಿರ ಬಹುದು. ನನಗೆ ದೇವಸ್ಥಾನಕ್ಕೆ ಹೋದಾಗ ಕಂಪನ ಆಗುತ್ತದೆ. ಅವರಿಗೆ ಆಗಿಲ್ಲ. ಅದರಲ್ಲಿ ತಪ್ಪೇನಿದೆ. ಹಾಗಂತ ರಾಜಣ್ಣ ಅವರು ರಾಮ ಮಂದಿರವನ್ನು ನಿಂದನೆ ಮಾಡಿದಂತಲ್ಲ ಎಂದರು.
ಸದ್ಯ ನನ್ನ ಕಲ್ಪನೆಯ ಮಂದಿರ ಬೇರೆ ಇದೆ ಎಂದ ಸಚಿವ ನಾಗೇಂದ್ರ ಅವರು, ನಮ್ಮ ಕಲ್ಪನೆಗೆ ಮೀರಿದ ರೀತಿಯಲ್ಲಿ ಮಂದಿರ ಇದ್ದರೆ ಚೆನ್ನಾಗಿರುತ್ತದೆ. ಇಲ್ಲ ಎಂದರೆ ಹಾಗೆ ಅನಿಸುತ್ತದೆ. ನಮ್ಮ ಸರಕಾರ ಇದ್ದರೆ ಇನ್ನು ಅದ್ದೂರಿಯಾಗಿ ಉದ್ಘಾಟನೆ ಮಾಡುತ್ತಿದ್ದೆವು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.