Test: ವೆಸ್ಟ್ ಇಂಡೀಸ್ ಎದುರು 10 ವಿಕೆಟ್‌ಗಳಿಂದ ಗೆದ್ದ ಆಸ್ಟ್ರೇಲಿಯ
Team Udayavani, Jan 19, 2024, 11:38 PM IST
ಅಡಿಲೇಡ್: ಪ್ರವಾಸಿ ವೆಸ್ಟ್ ಇಂಡೀಸ್ ಎದುರಿನ ಅಡಿಲೇಡ್ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯ 10 ವಿಕೆಟ್‌ಗಳಿಂದ ಜಯಿಸಿದೆ. 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಕೇವಲ 26 ರನ್ನುಗಳ ಗುರಿ ಪಡೆದ ಆಸ್ಟ್ರೇಲಿಯ ಇದನ್ನು ವಿಕೆಟ್ ನಷ್ಟವಿಲ್ಲದೆ ಸಾಧಿಸಿತು. ದ್ವಿತೀಯ ಟೆಸ್ಟ್ ಜ. 25ರಂದು ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿದೆ.
95 ರನ್ ಹಿನ್ನಡೆಗೆ ಸಿಲುಕಿದ ವೆಸ್ಟ್ ಇಂಡೀಸ್ ಮತ್ತೆ ಜೋಶ್ ಹೇಝಲ್‌ವುಡ್ ಬೌಲಿಂಗ್ ದಾಳಿಗೆ ತತ್ತರಿಸಿ 120ಕ್ಕೆ ಕುಸಿಯಿತು. ಹೇಝಲ್‌ವುಡ್ ಸಾಧನೆ 35ಕ್ಕೆ 5 ವಿಕೆಟ್. ಮೊದಲ ಸರದಿಯಲ್ಲಿ ಅವರು 4 ವಿಕೆಟ್ ಕೆಡವಿದ್ದರು.
ಇನ್ನಿಂಗ್ಸ್ ಸೋಲಿನಿಂದ ಪಾರಾದುದಷ್ಟೇ ವೆಸ್ಟ್ ಇಂಡೀಸ್ ಸಾಧನೆ. ಮೊದಲ ಸರದಿಯಲ್ಲಿ ಅರ್ಧ ಶತಕ ಹೊಡೆದಿದ್ದ ಕರ್ಕ್ ಮೆಕೆಂಝಿ 26 ರನ್ ಮಾಡಿ ಟಾಪ್ ಸ್ಕೋರರ್ ಎನಿಸಿದರು. ಮಿಚೆಲ್ ಸ್ಟಾರ್ಕ್ ಮತ್ತು ನಥನ್ ಲಿಯಾನ್ ತಲಾ 2 ವಿಕೆಟ್ ಕೆಡವಿದರು. ಪಂದ್ಯ ಮೂರೇ ದಿನಗಳಲ್ಲಿ ಮುಗಿಯಿತು. ಮೊದÇ ಇನ್ನಿಂಗ್ಸ್‌ನಲ್ಲಿ 119 ರನ್ ಬಾರಿಸಿದ್ದ ಟ್ರ್ಯಾವಿಸ್ ಹೆಡ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್-188 ಮತ್ತು 120 (ಮೆಕೆಂಝಿ 26, ಗ್ರೀವ್ಸ್ 24, ಜೋಶುವ 18, ಜೋಸೆಫ್ 16, ಹೇಝಲ್‌ವುಡ್ 35ಕ್ಕೆ 5, ಲಿಯಾನ್ 4ಕ್ಕೆ 2, ಸ್ಟಾರ್ಕ್ 46ಕ್ಕೆ 2). ಆಸ್ಟ್ರೇಲಿಯ-283 ಮತ್ತು ವಿಕೆಟ್ ನಷ್ಟವಿಲ್ಲದೆ 26 (ಸ್ಮಿತ್ ಔಟಾಗದೆ 11, ಖ್ವಾಜಾ ಔಟಾಗದೆ 9).
ಪಂದ್ಯಶ್ರೇಷ್ಠ: ಟ್ರ್ಯಾವಿಸ್ ಹೆಡ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.