ಟಿ20; ಪಾಕಿಸ್ಥಾನ ವಿರುದ್ಧ ಸತತ 4 ಪಂದ್ಯ ಗೆದ್ದ ನ್ಯೂಜಿಲ್ಯಾಂಡ್
Team Udayavani, Jan 19, 2024, 11:48 PM IST
ಕ್ರೈಸ್ಟ್‌ಚರ್ಚ್: ಪ್ರವಾಸಿ ಪಾಕಿಸ್ಥಾನವನ್ನು ಸತತ 4ನೇ ಪಂದ್ಯದಲ್ಲೂ ಮಣಿಸಿದ ನ್ಯೂಜಿಲ್ಯಾಂಡ್ ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಳ್ಳುವ ಹಾದಿಯಲ್ಲಿದೆ.
ಶುಕ್ರವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಪಂದ್ಯವನ್ನು ನ್ಯೂಜಿಲ್ಯಾಂಡ್ 7 ವಿಕೆಟ್‌ಗಳಿಂದ ಜಯಿಸಿತು. ಪಾಕಿಸ್ಥಾನ 5 ವಿಕೆಟಿಗೆ 158 ರನ್ ಮಾಡಿದರೆ, ಕಿವೀಸ್ 18.1 ಓವರ್‌ಗಳಲ್ಲಿ 3 ವಿಕೆಟಿಗೆ 159 ರನ್ ಬಾರಿಸಿತು. 5ನೇ ಹಾಗೂ ಅಂತಿಮ ಪಂದ್ಯ ರವಿವಾರ ಇದೇ ಅಂಗಳದಲ್ಲಿ ನಡೆಯಲಿದೆ.
ನ್ಯೂಜಿಲ್ಯಾಂಡ್ ಚೇಸಿಂಗ್ ಅತ್ಯಂತ ಆಘಾತಕಾರಿಯಾಗಿತ್ತು. ನಾಯಕ ಅಫ್ರಿದಿ ದಾಳಿಗೆ ತತ್ತರಿಸಿ 2.4 ಓವರ್‌ಗಳಲ್ಲಿ 20 ರನ್ನಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆದರೆ ಪಾಕ್ ಬೌಲಿಂಗ್ ಪರಾಕ್ರಮ ಇಲ್ಲಿಗೇ ಕೊನೆಗೊಂಡಿತು. 4ನೇ ವಿಕೆಟಿಗೆ ಜತೆಗೂಡಿದ ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಕ್ರೀಸಿಗೆ ಅಂಟಿಕೊಂಡು ಇನ್ನಿಂಗ್ಸ್ ಬೆಳೆಸುತ್ತ ಹೋದರು. ಈ ಜೋಡಿಯನ್ನು ಬೇರ್ಪಡಿಸಿಲು ಪಾಕಿಸ್ಥಾನಕ್ಕೆ ಸಾಧ್ಯವಾಗಲೇ ಇಲ್ಲ.
139 ರನ್ ಜತೆಯಾಟ
ಮಿಚೆಲ್-ಫಿಲಿಪ್ಸ್ ಮುರಿಯದ 4ನೇ ವಿಕೆಟಿಗೆ 139 ರನ್ ಪೇರಿಸಿ ನ್ಯೂಜಿಲ್ಯಾಂಡ್ ಗೆಲುವನ್ನು ಸಾರಿದರು. ಆಗ ಮಿಚೆಲ್ 4 ಎಸೆತಗಳಿಂದ 72 ರನ್ (7 ಬೌಂಡರಿ, 2 ಸಿಕ್ಸರ್) ಮತ್ತು ಫಿಲಿಪ್ಸ್ 52 ಎಸೆತಗಳಿಂದ 70 ರನ್ (5 ಬೌಂಡರಿ, 3 ಸಿಕ್ಸರ್) ಮಾಡಿ ಅಜೇಯರಾಗಿದ್ದರು. ಔಟಾದ ಮೂವರೆಂದರೆ ಫಿನ್ ಅಲೆನ್ (8), ಟಿಮ್ ಸೀಫರ್ಟ್ (0), ವಿಲ್ ಯಂಗ್ (4). ಮೂರೂ ವಿಕೆಟ್ ಶಾಹೀನ್ ಶಾ ಅಫ್ರಿದಿ ಪಾಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.