Australian Open: ನೊವಾಕ್ ಜೊಕೋವಿಕ್, ಸ್ಟೆಫನಸ್ ಸಿಸಿಪಸ್ 3ನೇ ಸುತ್ತು ಪಾಸ್
Team Udayavani, Jan 20, 2024, 12:07 AM IST
ಮೆಲ್ಬರ್ನ್: ಹಾಲಿ ಚಾಂಪಿ ಯನ್ ನೊವಾಕ್ ಜೊಕೋವಿಕ್, ಸ್ಟೆಫನಸ್ ಸಿಸಿಪಸ್, ಕೊಕೊ ಗಾಫ್ ಆಸ್ಟ್ರೇಲಿಯನ್ ಓಪನ್ 3ನೇ ಸುತ್ತು ದಾಟಿದ್ದಾರೆ.
ಶುಕ್ರವಾರದ 3ನೇ ಸುತ್ತಿನ ಪಂದ್ಯದಲ್ಲಿ ಜೊಕೋವಿಕ್ 6-3, 6-3, 7-6 (2)ರಿಂದ ಆರ್ಜೆಂಟೀನಾದ ಥಾಮಸ್ ಇಶೆವೆರಿ ಅವರನ್ನು ಮಣಿಸಿದರು. ಮುಂದಿನ ಎದುರಾಳಿ ಫ್ರಾನ್ಸ್‌ನ ಅಡ್ರಿಯನ್ ಮನ್ನಾರಿನೊ.
4ನೇ ಶ್ರೇಯಾಂಕದ ಜಾನಿಕ್ ಸಿನ್ನರ್ 6-0, 6-1, 6-3ರಿಂದ ಸೆಬಾಸ್ಟಿಯನ್ ಬೇಝ್ ಆಟಕ್ಕೆ ತೆರೆ ಎಳೆದರು. ಮುಂದಿನ ಎದುರಾಳಿ ಕರೆನ್ ಕಶನೇವ್. ಗ್ರೀಸ್‌ನ ಸ್ಟೆಫನಸ್ ಸಿಸಿಪಸ್ ಫ್ರಾನ್ಸ್‌ನ ಲುಕಾ ವಾನ್ ಆ್ಯಶೆ ಅವರನ್ನು 6-3, 6-0, 6-4 ಅಂತರದಿಂದ ಸೋಲಿಸಿದರು.
ವನಿತಾ ಸಿಂಗಲ್ಸ್‌ನಲ್ಲಿ ರಷ್ಯಾದ ಅರ್ಹತಾ ಆಟಗಾರ್ತಿ ಮರಿಯಾ ಟಿಮೊಫೀವಾ 7-6 (7), 6-3ರಿಂದ ಬ್ರಝಿಲ್‌ನ ಬೀಟ್ರಿಝ್ ಹದ್ದಾದ್ ಮಯಾಗೆ ಸೋಲುಣಿಸಿದರು. ರಷ್ಯಾದ 16 ವರ್ಷದ ಮಿರ್ರಾ ಆ್ಯಂಡ್ರೀವಾ ಫ್ರಾನ್ಸ್‌ನ ದಿಯಾನೆ ಪ್ಯಾರ್ರಿ ವಿರುದ್ಧ 1-6, 6-1, 7-6 (5) ಅಂತರದಿಂದ ಗೆದ್ದು ಬಂದರು. ಕೊಕೊ ಗಾಫ್ 6-0, 6-2ರಿಂದ ಅಲಿಸಿಯಾ ಪಾರ್ಕ್‌ಗೆ ಆಘಾತವಿಕ್ಕಿದರು. ಅರಿನಾ ಸಬಲೆಂಕಾ ಒಂದೂ ಅಂಕ ನೀಡದೆ ಉಕ್ರೇನಿನ ಲೆಸಿಯಾ ಸುರೆಂಕೊ ಅವರಿಗೆ 6-0, 6-0 ಅಂತರದ ಸೋಲುಣಿಸಿದರು.
ಬೋಪಣ್ಣ-ಎಬೆxನ್ 3ನೇ ಸುತ್ತಿಗೆ
ದ್ವಿತೀಯ ಶ್ರೇಯಾಂಕದ ರೋಹನ್ ಬೋಪಣ್ಣ ಮತ್ತು ಆತಿಥೇಯ ದೇಶ ಮ್ಯಾಥ್ಯೂ ಎಬೆxನ್ “ಆಸ್ಟ್ರೇಲಿಯನ್ ಓಪನ್’ ಪುರುಷರ ಡಬಲ್ಸ್‌ನಲ್ಲಿ 3ನೇ ಸುತ್ತಿಗೆ ಓಟ ಬೆಳೆಸಿದ್ದಾರೆ. ಇವರಿಬ್ಬರು ಸೇರಿಕೊಂಡು ಆಸ್ಟ್ರೇಲಿಯದವರೇ ಆದ ಜಾನ್ ಮಿಲ್ಮಾನ್-ಎಡ್ವರ್ಡ್ ವಿಂಟರ್ ಅವರನ್ನು 6-2, 6-4 ನೇರ ಸೆಟ್‌ಗಳಲ್ಲಿ ಮಣಿಸಿದರು.
ಬೋಪಣ್ಣ-ಎಬೆxನ್ ಪಂದ್ಯದ ಎಲ್ಲ ವಿಭಾಗಗಳಲ್ಲೂ ನಿಚ್ಚಳ ಮೇಲುಗೈ ಸಾಧಿಸಿದರು. 203 ಕಿ.ಮೀ. ವೇಗದ ಅತೀ ವೇಗದ ಸರ್ವ್ ಹಾಗೂ 17 ವಿನ್ನರ್ ಮೂಲಕ ಗಮನ ಸೆಳೆದರು.
ಇಂಡೋ-ಆಸ್ಟ್ರೇಲಿಯನ್ ಜೋಡಿ ಇನ್ನು 14ನೇ ಶ್ರೇಯಾಂ ಕದ ವೆಸ್ಲಿ ಕೂಲೋಫ್ (ನೆದರ್ಲೆಂಡ್ಸ್)- ನಿಕೋಲ ಮೆಕ್ಟಿಕ್ (ಕ್ರೊವೇಶಿಯಾ) ವಿರುದ್ಧ ಆಡಲಿದ್ದಾರೆ.
ಬಾಲಾಜಿ ಜೋಡಿಗೆ ಜಯ
ಇದೇ ವೇಳೆ ಭಾರತದ ಮತ್ತೋರ್ವ ಆಟಗಾರ ಶ್ರಿರಾಮ್ ಬಾಲಾಜಿ-ವಿಕ್ಟರ್ ಕೋರ್ನಿಯ (ರೊಮೇನಿಯಾ) ಪುರುಷರ ಡಬಲ್ಸ್ ನಲ್ಲಿ ದ್ವಿತೀಯ ಸುತ್ತು ತಲುಪಿದ್ದಾರೆ. ಇವರು ಇಟಲಿಯ ಮ್ಯಾಟಿಯೊ ಅರ್ನಾಲ್ಡಿ-ಆ್ಯಂಡ್ರೆ ಪೆಲೆಗ್ರಿನೊ ವಿರುದ್ಧ 6-3, 6-4ರಿಂದ ಗೆದ್ದು ಬಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
ಕಾಸರಗೋಡು: ಬೈಕ್ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.