Mangaluru ಕಟ್ಟುವ ಉತ್ಸಾಹ, ದುರಂತಪ್ರಜ್ಞೆ ಎರಡೂ ರಾಮಾಯಣದಲ್ಲಿದೆ: ಲಕ್ಷ್ಮೀಶ ತೋಳ್ಪಾಡಿ

ಮಂಗಳೂರು ಲಿಟ್‌ಫೆಸ್ಟ್‌ 6ನೇ ಆವೃತ್ತಿಗೆ ಚಾಲನೆ

Team Udayavani, Jan 20, 2024, 12:05 AM IST

Mangaluru ಕಟ್ಟುವ ಉತ್ಸಾಹ, ದುರಂತಪ್ರಜ್ಞೆ ಎರಡೂ ರಾಮಾಯಣದಲ್ಲಿದೆ: ಲಕ್ಷ್ಮೀಶ ತೋಳ್ಪಾಡಿ

ಮಂಗಳೂರು: ನಮ್ಮನ್ನು ಆಳುವುದು ಆಲೋಚನೆಗಳೇ ಹೊರತು ಸರಕಾರಗಳಲ್ಲ, ಆಲೋಚನೆ ಎಂದರೆ ಭಾಷೆ, ಮನಸ್ಸು, ಅದು ಘೋರವನ್ನು ಸೃಷ್ಟಿಸುವುದಾದರೆ, ಅದಕ್ಕೇ ಶಾಂತಿಯನ್ನೂ ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿ ಪ್ರಾಯಪಟ್ಟಿದ್ದಾರೆ.

ಇಲ್ಲಿನ ಟಿಎಂಎ ಪೈ ಸಭಾಂಗಣದಲ್ಲಿ ಶುಕ್ರವಾರ “ಮಂಗಳೂರು ಲಿಟ್‌ ಫೆಸ್ಟ್‌’ನ ಆರನೇ ಆವೃತ್ತಿಗೆ ಚಾಲನೆ ನೀಡಿ ಅವರು ಮಾತನಾಡಿ, ಕಟ್ಟುವ ಕೆಲಸವನ್ನು ಮುರಿದವರೇ ಮಾಡಬೇಕು, ಹಾಗೆ ಮಾಡಬೇಕಾದರೆ ಅಳಲಿಗೆ ಕಿವಿಕೊಡುವ ಸೂಕ್ಷ್ಮತೆ ಬೇಕು, ಅದನ್ನು ರಾಮಾಯಣ ಹೇಳುತ್ತದೆ ಎಂದು ತಿಳಿಸಿದರು.

ಸಾಹಿತ್ಯದಲ್ಲಿ ಸಾಮಾನ್ಯವಾಗಿ ಬಳಸುವ ಪದ ಸೃಷ್ಟಿಶೀಲತೆ ಅಥವಾ ಸೃಜನಶೀಲತೆ. ಅದು ಹುಟ್ಟಬೇಕಾದರೆ ಅದಕ್ಕೆ ಎರಡು ದಾರಿ ಇದೆ, ಅಥವಾ ಒಂದು ಸಮೀಕರಣವಿದೆ. ಮೊದಲನೆಯದ್ದು ಆದರ್ಶ ಅಥವಾ ಕಟ್ಟುವ ಉತ್ಸಾಹ ಮತ್ತು ದುರಂತಪ್ರಜ್ಞೆ ಅಥವಾ ನೋವಿಗೆ ಕಿವಿಯಾಗುವ ಸೂಕ್ಷ್ಮತೆ. ಇವೆರಡೂ ಒಟ್ಟಿಗೆ ರಾಮಾಯಣದಲ್ಲಿ ಸೇರಿಕೊಂಡಿವೆ ಎಂದು ಬಣ್ಣಿಸಿದರು.

ವಾಲ್ಮೀಕಿ ಕವಿ ನಾರದನಿಂದ ರಾಮನ ಕಥೆಯನ್ನು ಆಲಿಸಿ ತಿಳಿದುಕೊಂಡಿದ್ದರು, ಅವರು ಅದನ್ನು ಹಾಗೆಯೇ ಬರೆದಿದ್ದರೆ ಅದು ವಾಲ್ಮೀಕಿ ರಾಮಾಯಣವಾಗದೆ ನಾರದನ ರಾಮಾಯಣವಾಗುತ್ತಿತ್ತು. ಆದರೆ ಆ ಬಳಿಕ ಕ್ರೌಂಚ ಪಕ್ಷಿಗಳ ಮಿಲನವನ್ನು ನೋಡುತ್ತಿದ್ದಾಗ ಬೇಡನೊಬ್ಬ ಅದರಲ್ಲಿ ಗಂಡು ಹಕ್ಕಿಯನ್ನು ಕೊಲ್ಲುವುದು, ಆಗ ಹೆಣ್ಣು ಪಕ್ಷಿ ದುಃಖತಪ್ತವಾಗುವುದನ್ನು ನೋಡಿ ವಾಲ್ಮೀಕಿಯಲ್ಲಿ ಕರುಣ ರಸ ಸು#ರಣೆಯಾಯಿತು, ಹೀಗೆ
ಕಟ್ಟುವ ಉತ್ಸಾಹ ಮತ್ತು ನೋವಿಗೆ ಮಿಡಿಯುವ ಆದ್ರìತೆ ಇವೆರಡೂ ಸೇರಿದಾಗ ಅಲ್ಲಿ ನಮಗೆ ಗೊತ್ತಿಲ್ಲದಂತೆಯೇ ಸೃಷ್ಟಿ ಶೀಲತೆ ಪ್ರಕಟವಾಗುತ್ತದೆ ಎಂದರು.

ಮಿಥಿಕ್‌ ಸೊಸೈಟಿಯ ಟ್ರಸ್ಟಿ ಎಸ್‌.ರವಿ ಅವರು ಮಾತನಾಡಿ, ಮಂಗಳೂರು ಲಿಟ್‌ ಫೆಸ್ಟ್‌ ದಿ ಐಡಿಯಾ ಆಫ್‌ ಭಾರತ್‌ ಎಂಬ ವಿಷಯದೊಂದಿಗೆ ನಡೆಯುತ್ತ ಬಂದಿದೆ ಎಂದರು.

ಮಹಿಳಾ ಸಶಕ್ತೀಕರಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಧಾರವಾಡದ ವನಿತಾ ಸೇವಾ ಸಮಾಜ ಸಂಸ್ಥೆಗೆ ಮಂಗಳೂರು ಲಿಟ್‌ ಫೆಸ್ಟ್‌ ಪರವಾಗಿ ಪ್ರಶಸ್ತಿ ನೀಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಮಧುರಾ ಹೆಗ್ಡೆ ಅವರು ಪ್ರಶಸ್ತಿ ಸ್ವೀಕರಿಸಿದರು. ಭಾರತ್‌ ಫೌಂಡೇಶನ್‌ ಟ್ರಸ್ಟಿಗಳಾದ ಕ್ಯಾ| ಬೃಜೇಶ್‌ ಚೌಟ, ಶ್ರೀರಾಜ್‌ ಗುಡಿ ಉಪಸ್ಥಿತರಿದ್ದರು.
ಭಾರತ್‌ ಫೌಂಡೇಶನ್‌ನ ಟ್ರಸ್ಟಿ ಸುನಿಲ್‌ ಕುಲಕರ್ಣಿ ಸ್ವಾಗತಿಸಿ, ವಂದಿಸಿದರು. ಅಭಿಷೇಕ್‌ ಶೆಟ್ಟಿ ಮತ್ತು ನಿಧಿ ಹೆಗ್ಡೆ ನಿರೂಪಿಸಿದರು.

ಜ. 20, 21ರಂದು ಕಲಾಪ
ಜ. 20, 21ರಂದು ಮಂಗಳೂರು ಲಿಟ್‌ ಫೆಸ್ಟ್‌ನಲ್ಲಿ ವಿವಿಧ ಕಲಾಪಗಳು ನಡೆಯಲಿದ್ದು, ದಿ ಐಡಿಯಾ ಆಫ್‌ ಭಾರತ್‌ ಎಂಬ ವಿಚಾರದಲ್ಲಿ ಹಲವು ಮಗ್ಗುಲಗಳಲ್ಲಿ ವಿಷಯಮಂಡನೆ, ಸಮಾಲೋಚನೆಗಳು ನಡೆಯಲಿವೆ.

ಟಾಪ್ ನ್ಯೂಸ್

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

1-dr

Veerendra Heggade 77ನೇ ವರ್ಷಕ್ಕೆ ಪಾದಾರ್ಪಣೆ: ಗಣ್ಯರಿಂದ ಶುಭ ಹಾರೈಕೆ

UTK

Speaker ಯು.ಟಿ.ಖಾದರ್‌ ವ್ಯಾಟಿಕನ್‌ ಸಿಟಿಗೆ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.