Pakistan: ಇರಾನ್ ಮೇಲೆ ವೈಮಾನಿಕ ದಾಳಿಗೆ ಮುನ್ನ ಅಮೆರಿಕ ಸಂಪರ್ಕಿಸಿದ್ದ ಪಾಕಿಸ್ಥಾನ?
ಪ್ರಶ್ನೆಗೆ ಉತ್ತರಿಸದ ಅಮೆರಿಕದ ಶ್ವೇತಭವನದ ವಕ್ತಾರ
Team Udayavani, Jan 20, 2024, 12:40 AM IST
ವಾಷಿಂಗ್ಟನ್: ಇರಾನ್ ಮೇಲೆ ವೈಮಾ ನಿಕ ದಾಳಿ ನಡೆಸುವುದಕ್ಕೆ ಮುನ್ನ ಪಾಕಿಸ್ಥಾನವು ಅಮೆರಿಕವನ್ನು ಸಂಪರ್ಕಿಸಿತ್ತೇ ಎಂಬ ಅನುಮಾನ ಈಗ ವ್ಯಕ್ತವಾಗತೊಡಗಿದೆ. ಈ ಬಗ್ಗೆ ಶ್ವೇತಭವನದ ವಕ್ತಾರ ಮ್ಯಾಥ್ಯಾ ಮಿಲ್ಲರ್ ಅವರು ಪತ್ರಕರ್ತರ ನೇರ ಪ್ರಶ್ನೆಗೆ ಉತ್ತರ ನೀಡದೆ ಇರುವುದು ಶಂಕೆಗೆ ಹೆಚ್ಚು ಪುಷ್ಟಿ ನೀಡಿದೆ. “ಯಾವುದೇ ಖಾಸಗಿ ಸಂಭಾಷಣೆಯ ಬಗ್ಗೆ ಇಲ್ಲಿ ವಿವರಿಸುವ ಅಂಶಗಳೇನೂ ಇಲ್ಲ’ ಎಂದು ಅವರು ಹೇಳಿದ್ದು ಊಹಾಪೋಹಗಳಿಗೆ ಕಾರಣವಾಗಿದೆ.
ಇದೇ ವೇಳೆ, ಇರಾನ್ ಮತ್ತು ಪಾಕಿಸ್ಥಾನ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಿಲ್ಲರ್, 2 ರಾಷ್ಟ್ರಗಳ ನಡುವಿನ ವೈಮನಸ್ಸಿನ ಬಗ್ಗೆ ಅಮೆರಿಕಕ್ಕೆ ಆತಂಕವಿದೆ. ಮಧ್ಯ ಪ್ರಾಚ್ಯದಲ್ಲಿನ ಯುದ್ಧ ಸದೃಶ ವಾತಾವರಣ ತಗ್ಗಬೇಕು ಎಂದರು.
ಪ್ಯಾಲೆಸ್ತೀನ್ ವಿವಿ ಮೇಲೆ ಇಸ್ರೇಲ್ ಬಾಂಬ್
ಗಾಜಾ ಪಟ್ಟಿಯಲ್ಲಿ ಇರುವ ಪ್ಯಾಲೆಸ್ತೀನ್ ವಿಶ್ವವಿದ್ಯಾನಿಲಯದ ಪ್ರಧಾನ ಕ್ಯಾಂಪಸ್ ಮೇಲೆ ಇಸ್ರೇಲಿ ಸೇನಾ ಪಡೆಗಳು ಬಾಂಬ್ ದಾಳಿ ನಡೆಸಿವೆ. ಜಾಲತಾಣಗಳಲ್ಲಿ ವೈರ ಲ್ ಆಗಿರುವ ವೀಡಿಯೋದಲ್ಲಿನ ದೃಶ್ಯಗಳ ಪ್ರಕಾರ, ಇಡೀ ವಿವಿ ಬಾಂಬ್ ದಾಳಿಗೆ ಧ್ವಂಸ ಗೊಂಡಿದೆ. ಘಟನೆ ಬಗ್ಗೆ ಇಸ್ರೇಲ್‌ನಿಂದ ಅಮೆರಿಕ ಮಾಹಿತಿ ಕೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.