5 ದಶಕಗಳ ಕಾಲ ಕಾರ್ಯನಿರ್ವಹಿಸಿದ ಹಾಲಿನ ಶೀತಲ ಕೇಂದ್ರಕ್ಕೆ ಬೀಗ!

Team Udayavani, Jan 20, 2024, 5:33 PM IST

5 ದಶಕಗಳ ಕಾಲ ಕಾರ್ಯನಿರ್ವಹಿಸಿದ ಹಾಲಿನ ಶೀತಲ ಕೇಂದ್ರಕ್ಕೆ ಬೀಗ!

ಚಿಂತಾಮಣಿ: ಬರೋಬ್ಬರಿ ಐದು ದಶಕಗಳ ಕಾಲ ನೂರಾರು ಕಾರ್ಮಿಕರ ಕುಟುಂಬಗಳಿಗೆ ಬದುಕು ಕಟ್ಟಿಕೊಟ್ಟಿದ್ದ ನಗರದ ಹೊರ ವಲಯದ ಕನ್ನಂಪಲ್ಲಿಯಲ್ಲಿರುವ ಹಾಲಿನ ಶೀತಲ ಕೇಂದ್ರ 12 ದಿನಗಳ ಹಿಂದೆಯೆ ಸ್ಥಗಿತಗೊಂಡು ಕಾರ್ಮಿಕರು ಅಭದ್ರತೆಯಲ್ಲಿ ಭವಿಷ್ಯದ ಬದುಕಿನ ಬಗ್ಗೆ ಚಿಂತಿಸುವಂತಾಗಿದೆ.

5 ದಶಕಗಳ ಹಿಂದೆಯೆ ಈ ಕೇಂದ್ರ ಆರಂಭಗೊಂಡಿದ್ದು, 1999 ರಿಂದ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಸೇರಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೋಚಿಮುಲ್‌ ಹೋಬಳಿಗೆ, ಗ್ರಾಪಂ ಒಂದು ಬಿಎಂಸಿ ಕೇಂದ್ರಗಳ ಸ್ಥಾಪನೆ ಮಾಡಿರುವ ಪರಿಣಾ ಮ ದಶಕಗಳ ಕಾಲ ಹಾಲು ಶೀತಲ ಕೇಂದ್ರವಾಗಿ ಕಾರ್ಯ ನಿರ್ವಹಿಸಿದ ಚಿಂತಾಮಣಿ ಕೇಂದ್ರ ಇದೀಗ ಸ್ಥಗಿತಗೊಂಡು ಕಾರ್ಮಿಕರ ಬದುಕು ಕಾವಲು ದಾರಿ ಹಿಡಿದಿದೆ.

ಕುಟುಂಬಗಳು ಜೀವನ ನಿರ್ವಹಣೆಗೆ ಕಷ್ಟಸಾಧ್ಯ: ಕಳೆದ 14 ದಿನಗಳಿಂದ ಕಾರ್ಮಿಕರು ಎಂದನಂತೆ ಈ ಶೀತಲ ಕೇಂದ್ರಕ್ಕೆ ಬಂದು ಕಾದು ಕಾದು ಕುಳಿತು ಮನೆಗಳಿಗೆ ಕೆಲಸ ಇಲ್ಲದೇ ಬರಿಗೈಯಲ್ಲಿ ವಾಪಸ್‌ ತೆರಳುವಂತಾಗಿದೆ. ಅಲ್ಲದೇ ಕೇಂದ್ರದಲ್ಲಿ ಗುತ್ತಿಗೆ ಆಧಾರಿತ ಮೇಲೆ ಕಾರ್ಯನಿರ್ವಹಿಸುವ ಸುಮಾರು 50ಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಅವರ ಅವಲಂಬಿತ ಕುಟುಂಬಗಳು ಜೀವನ ನಿರ್ವಹಣೆಗೆ ಕಷ್ಟಸಾಧ್ಯವಾ ಗುವ ರೀತಿಯಲ್ಲಿ ಆತಂಕದ ಕಾರ್ಮೋಡ ಮೂಡಿದೆ.

ಕಾರ್ಮಿಕರೊಂದಿಗೆ ಅಧಿಕಾರಿಗಳ ಸಭೆ: ಕಾರ್ಮಿಕ ಕುಟುಂಬಗಳು ಬೀದಿ ಪಾಲಾಗುವ ಸಂಭವವಿದೆ ಯೆಂದು ಹೆಸರು ಹೇಳಲು ಇಚ್ಛಿಸಿದ ಕಾರ್ಮಿಕರು ತಮ್ಮ ಅಂತರಾಳದ ನೋವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಹಾಲು ಶೀತಲ ಕೇಂದ್ರ ಬಾಗಿಲು ಮುಚ್ಚುತ್ತಿರುವ ಪರಿ ಣಾಮ ಇತ್ತ ಈ ಕೋಟ್ಯಾಂತರ ಬೆಳೆಬಾಳುವ ಶೀತಲ ಕೇಂದ್ರದ ಯಂತ್ರಗಳು ಅವುಗಳು ಹಂತ ಹಂತವಾಗಿ ಕಿಲುಬಿಡಿದು ಒಕ್ಕೂಟಕ್ಕೆ ನಷ್ಟವಾಗುವುದು ಖಂಡಿತ. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಅಧಿಕಾರಿಗಳು ಕಾರ್ಮಿಕರೊಂದಿಗೆ ಒಂದು ಸುತ್ತಿನ ಸಭೆಯನ್ನು ನಡೆಸಿ ಸುಧೀರ್ಘ‌ ಚರ್ಚೆಯನ್ನು ಕೂಡ ಮಾಡಿದ್ದಾರೆ. ಆದರೆ ಐಸ್‌ ಕ್ರೀಂ ಫ್ಯಾಕ್ಟರಿ ನಿರ್ಮಾಣ 2 ವರ್ಷ ಹಿಡಿಯುತ್ತದೆ. ಅಲ್ಲಿಯ ವರೆಗೂ ಒಕ್ಕೂಟವು ಮತ್ತು ಸರ್ಕಾರವು ಈ ಕಾರ್ಮಿಕರ ಜೀವನ ಬದುಕಿನ ಬಗ್ಗೆ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಅಧಿಕಾರಿಗಳು ಹೇಳುವುದೇನು?: ಇನ್ನೂ ಕೋಚಿಮುಲ್‌ ಅಧಿಕಾರಿಗಳೆನು ಹೇಳುವುದೇನೆಂದರೆ ಎರಡು ವರ್ಷ ಗಳಲ್ಲಿ ಇಲ್ಲಿ ಐಸ್‌ ಕ್ರೀಮ್‌ ಫ್ಯಾಕ್ಟರಿ ಆರಂಭಗೊಂಡ ನಂತರ ಇದೇ ಸಿಬ್ಬಂದಿ ಯನ್ನು ಐಸ್‌ ಕ್ರೀಮ್‌ ಫ್ಯಾಕ್ಟರಿಯ ಕಾರ್ಯ ನಿರ್ವಹಣೆಗೆ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಆದರೆ, ಅಲ್ಲಿಯ ತನಕ ಕಾರ್ಮಿಕ ಕುಟುಂಬಗಳ ಜೀವನ ಹೇಗೆ ಎನ್ನುವ ಪ್ರಶ್ನೆ, ಕಾರ್ಮಿಕರದ್ದಾಗಿದೆ. ಒಟ್ಟಾರೆಯಾಗಿ ಒಂದು ಕಡೆ ಅಭಿವೃದ್ಧಿ ಹೆಜ್ಜೆ ಮತ್ತೂಂದು ಕಡೆ ಕಾರ್ಮಿಕರ ಬದುಕಲ್ಲಿ ನಿರಾಸೆಯ ಕಾರ್ಮೋಡದ ಛಾಯೆ ಮೂಡಿದೆ.

ಎಂ.ಡಿ.ತಿಪ್ಪಣ್ಣ

ಟಾಪ್ ನ್ಯೂಸ್

HDK (3)

MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

1-satyendrar

ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್‌ ಗೆ ಜಾಮೀನು

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

sanjay-raut

Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ

UP: ಟೊಮ್ಯಾಟೋ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೋ ಕಾದು ಕೂತ ಪೊಲೀಸರು

UP: ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೊ ಕಾದು ಕೂತ ಪೊಲೀಸರು

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cheque Bounce Case: ಚಿಂತಾಮಣಿ ಟಿಎಪಿಸಿಎಂಎಸ್‌ಗೆ 1.22 ಕೋಟಿ ದಂಡ

Cheque Bounce Case: ಚಿಂತಾಮಣಿ ಟಿಎಪಿಸಿಎಂಎಸ್‌ಗೆ 1.22 ಕೋಟಿ ದಂಡ

0528

Chikkaballapur: ಕೈ ಚೆಲ್ಲಿದ ಜನಪ್ರತಿನಿಧಿಗಳು: ಸುಂಕ ವಸೂಲಿಗೆ ನಗರಸಭೆ ಟೆಂಡರ್‌!

dinesh-gu

COVID ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ:ಚಿಕ್ಕಬಳ್ಳಾಪುರದಲ್ಲಿ ದಿನೇಶ್‌ ಗುಂಡೂರಾವ್‌

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

0421472757

Nandi Hills: ವಿಶ್ವ ವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವಾಹ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

ಟಿಕೆಟ್‌ ಕೊಡಿಸದೆ ವಂಚನೆ: ಸಚಿವ ಜೋಶಿ ಸೋದರ, ಸೋದರಿ, ಅಳಿಯನ ವಿರುದ್ಧ ಕೇಸ್‌

ಟಿಕೆಟ್‌ ಕೊಡಿಸದೆ ವಂಚನೆ: ಸಚಿವ ಜೋಶಿ ಸೋದರ, ಸೋದರಿ, ಅಳಿಯನ ವಿರುದ್ಧ ಕೇಸ್‌

HDK (3)

MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

1-satyendrar

ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್‌ ಗೆ ಜಾಮೀನು

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.