Subramanya ವನ್ಯಜೀವಿಗಳಿಗೆ ಅಕ್ರಮವಾಗಿ ಆಹಾರ: ದೂರು ದಾಖಲು
Team Udayavani, Jan 20, 2024, 8:24 PM IST
ಸುಬ್ರಹ್ಮಣ್ಯ: ವ್ಯಕ್ತಿಯೊಬ್ಬರು ವನ್ಯಜೀವಿಗಳಿಗೆ ಅಕ್ರಮವಾಗಿ ಆಹಾರ ನೀಡಿದ್ದಲ್ಲದೇ ಅದನ್ನು ಪ್ರಶ್ನಿಸಿದ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿದೆ.
ವನ್ಯಜೀವಿಗಳ ಅಧ್ಯಯನ ಹಾಗೂ ಸಂರಕ್ಷಣೆ ವಿಷಯದಲ್ಲಿ ಸುಬ್ರಹ್ಮಣ್ಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಳಿನೆಲೆ ಗ್ರಾಮದ ಭುವನೇಶ್ ದೂರು ನೀಡಿದವರು. ಅವರು ಶನಿವಾರ ಸುಬ್ರಹ್ಮಣ್ಯದತ್ತ ತೆರಳುವ ವೇಳೆ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ವಲಯ ಅರಣ್ಯ ಕಚೇರಿ ಬಳಿ ಕೋತಿಗಳಿಗೆ ಬಿಸ್ಕತ್ತು ಹಾಕುತ್ತಿದ್ದರು. ವನ್ಯಜೀವಿಗಳಿಗೆ ಆಹಾರ ನೀಡುವುದು ಅಪರಾಧ ಹಾಗೂ ಅವೈಜ್ಞಾನಿಕ ಎಂದು ತಿಳಿಹೇಳಿದರೂ ಆತ ಆಹಾರ ನೀಡುವುದನ್ನು ನಿಲ್ಲಿಸದೆ, ತಿಳಿಹೇಳಿದ ಭುವನೇಶ್ ಅವರಿಗೆ ಅಬಾಚ್ಯ ಶಬ್ದಗಳಿಂದ ಬೈದು, ಬಲಪ್ರಯೋಗ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದೇ ರೀತಿ ಹಲವರು ಆಹಾರ ನೀಡುತ್ತಿದ್ದು, ಆಹಾರಕ್ಕಾಗಿ ರಸ್ತೆಗೆ ಬರುವ ವನ್ಯಜೀವಿಗಳು ವಾಹನದ ಅಡಿಗೆ ಸಿಲುಕಿ ಸಾವನ್ನಪ್ಪಿರುತ್ತವೆ. ಆದ್ದರಿಂದ ಕೋತಿಗಳ ಅನಾರೋಗ್ಯಕ್ಕೆ ಹಾಗೂ ಕಾನೂನು ಬಾಹಿರ ಕೆಲಸ ಮಾಡಿರುವ ವ್ಯಕ್ತಿಯ ಮೇಲೆ ವನ್ಯಜೀವಿ ಕಾಯ್ದೆ ಪ್ರಕಾರ ಕೇಸು ದಾಖಲಿಸಿ ಕ್ರಮ ಜರಗಿಸುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.