ಓದುಗರ ಜತೆ ಬಾಂಧವ್ಯ “ಉದಯವಾಣಿ’ಯ ಶಕ್ತಿ: ಡಾ| ಸಂಧ್ಯಾ ಎಸ್‌. ಪೈ

"ಉದಯವಾಣಿ ದೀಪಾವಳಿ ಧಮಾಕ' ವಿಜೇತರಿಗೆ ಬಹುಮಾನ ವಿತರಣೆ

Team Udayavani, Jan 20, 2024, 11:11 PM IST

ಓದುಗರ ಜತೆ ಬಾಂಧವ್ಯ “ಉದಯವಾಣಿ’ಯ ಶಕ್ತಿ: ಡಾ| ಸಂಧ್ಯಾ ಎಸ್‌. ಪೈ

ಮಂಗಳೂರು: “ಉದಯವಾಣಿ’ ಪತ್ರಿಕೆ ಆಯೋಜಿ ಸುವ ಪ್ರತೀ ಸ್ಪರ್ಧೆ, ಕಾರ್ಯಕ್ರಮದಲ್ಲೂ ಸಾವಿರಾರು ಮಂದಿ ಉತ್ಸಾಹದಿಂದ ಭಾಗವಹಿಸುತ್ತಾರೆ. 54 ವರ್ಷಗಳ ಈ ಬಾಂಧವ್ಯ ಅದ್ಭುತವಾದುದು. ಇದು ಇನ್ನಷ್ಟು ಹೊಸತನಗಳಿಗೆ ನಮ್ಮನ್ನು ಪ್ರೇರೇಪಿಸುತ್ತದೆ ಎಂದು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಹೇಳಿದರು.

“ಉದಯವಾಣಿ ದೀಪಾವಳಿ ಧಮಾಕ 2023′ ಸ್ಪರ್ಧೆಯಲ್ಲಿ ವಿಜೇತರಾದ ಅದೃಷ್ಟಶಾಲಿಗಳಿಗೆ ಮಂಗಳೂರಿನ ಲೇಡಿಹಿಲ್‌ನಲ್ಲಿರುವ ಎಸ್‌.ಎಲ್‌.ಶೇಟ್‌ ಡೈಮಂಡ್‌ ಹೌಸ್‌ನಲ್ಲಿ ಶನಿವಾರ ನಡೆದ ಬಹುಮಾನ ವಿತರಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಣ್ಣ ವಿಚಾರಗಳಲ್ಲೂ ಖುಷಿಯಿದೆ, ಆದರೆ ಅದನ್ನು ಬಿಟ್ಟು ದೊಡ್ಡದಕ್ಕೆ ಆಸೆ ಪಡುವ ಕಾರಣ, ಸಂತೋಷವನ್ನು ಕಳೆದುಕೊಳ್ಳುತ್ತೇವೆ. ಪ್ರತಿ ವಿಚಾರದಲ್ಲೂ ಪ್ರಾಪ್ತಿ, ಯೋಗವಿದೆ. ಅದರಿಂದಲೇ ನಮಗೆ ಬಹುಮಾನದಂಥ “ಸಂತೋ ಷ’ ದೊರೆಯುತ್ತದೆ ಎಂದರು.

“ಉದಯವಾಣಿ’ಯ ದೀಪಾವಳಿ ಧಮಾಕಕ್ಕೆ ವರ್ಷದಿಂದ ವರ್ಷಕ್ಕೆಜನರ ಉತ್ಸಾಹ ಹೆಚ್ಚುತ್ತಿದೆ. ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ ಸಂಸ್ಥೆ ಆರಂಭದಿಂದಲೂ ನಮ್ಮ ಜತೆ ಕೈ ಜೋಡಿ ಸುತ್ತಿರುವುದು ಶ್ಲಾಘನೀಯ ಎಂದರು.

ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ ಮಾಲಕ ರವೀಂದ್ರ ಶೇಟ್‌ ಮಾತನಾಡಿ, “ಉದಯವಾಣಿ’ ಪತ್ರಿಕೆ ಸುದ್ದಿಯನ್ನು ನೀಡುವುದರ ಜತೆಗೆ, ಓದುಗರನ್ನು ತನ್ನೊಂದಿಗೆ ಒಳಗೊಳ್ಳುವ ಕೆಲಸ ಮಾಡುತ್ತಿದೆ. ಓದುಗರಿಗಾಗಿ ವಿವಿಧ ಸ್ಪರ್ಧೆಗಳನ್ನು, ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರ ನೆನಪುಗಳನ್ನೂ ಅವಿಸ್ಮರಣೀಯಗೊಳಿಸುತ್ತಿದೆ. ಸಾಮಾಜಿಕ, ಸಾಂಸ್ಕೃತಿಕ, ಕಲಾತ್ಮಕ, ಕೌಶಲಾತ್ಮಕ ಹೀಗೆ ರಚನಾತ್ಮಕವಾಗಿ ಪತ್ರಿಕೆ ಹೊಸ ಆಯಾಮ ಕೊಡುವಲ್ಲಿ ಸಂಧ್ಯಾ ಪೈ ಮತ್ತು ಸತೀಶ್‌ ಪೈ ಅವರ ಕಾರ್ಯ ಅದ್ವಿತೀಯ ಎಂದರು.

ಸಂಬಂಧ ಗಟ್ಟಿಗೊಳಿಸುವ ಶಕ್ತಿ
ಡೈಮಂಡ್‌ ಹೌಸ್‌ನ ದೀಪ್ತಿ ಶೇಟ್‌ ಅವರು ಮಾತ ನಾಡಿ, ಚಿನ್ನ ಮತ್ತು ಬೆಳ್ಳಿಗೆ ನಮ್ಮ ಸಂಬಂಧವನ್ನು ಗಟ್ಟಿಗೊಳಿಸುವ ಶಕ್ತಿ ಇದೆ. “ಉದಯವಾಣಿ’ ಪತ್ರಿಕೆ ಮತ್ತು “ಎಸ್‌ಎಲ್‌ ಶೇಟ್‌’ ಸಂಸ್ಥೆ ಇಂತಹ ಶ್ರೇಷ್ಠ ಕಾರ್ಯವನ್ನು ಒಟ್ಟಾಗಿ ಮಾಡುತ್ತಿದೆ ಎಂದರು. ಡೈಮಂಡ್‌ ಹೌಸ್‌ ಪಾಲುದಾರರಾದ ಶರತ್‌ ಶೇಟ್‌, ಪ್ರಸಾದ್‌ ಶೇಟ್‌, ಪ್ರಸನ್ನ ಶೇಟ್‌ ಉಪಸ್ಥಿತರಿದ್ದರು.

“ಉದಯವಾಣಿ’ ಮ್ಯಾಗಜಿನ್‌ ವಿಭಾಗ ಮತ್ತು ಸ್ಪೆಷಲ್‌ ಇನಿಶಿಯೇಟಿವ್ಸ್‌ನ ಉಪಾಧ್ಯಕ್ಷ ರಾಮಚಂದ್ರ ಮಿಜಾರು ಪ್ರಸ್ತಾವನೆಗೈದು, “ಉದಯವಾಣಿ”ಯ ದೀಪಾವಳಿ ವಿಶೇಷಾಂಕ ಕರ್ನಾ ಟಕ ಮಾತ್ರವಲ್ಲದೆ, ಕೇರಳ, ಮಹಾರಾಷ್ಟ್ರ ದಲ್ಲೂ ಓದುಗರನ್ನು ಹೊಂದಿದೆ. ಹಬ್ಬಕ್ಕೆ ಸಿಹಿ, ಸಂತೋಷದ ಜತೆಗೆ ಓದುಗರಿಗೆ ಸಾಹಿತ್ಯ ಸಂಸ್ಕೃತಿಯನ್ನು ವಿಶೇಷಾಂಕ ನೀಡುತ್ತಿದೆ ಎಂದರು.

“ಉದಯವಾಣಿ’ಯ ಮಂಗಳೂರು ರೀಜನಲ್‌ ಮ್ಯಾನೇಜರ್‌ ಸತೀಶ್‌ ಮಂಜೇಶ್ವರ ಬಹುಮಾನ ವಿಜೇತರ ವಿವರ ವಾಚಿಸಿದರು. ಮುಖ್ಯ ವರದಿಗಾರ ವೇಣು ವಿನೋದ್‌ ಕೆ.ಎಸ್‌. ಸ್ವಾಗತಿಸಿ, ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ನ ಶನಾಯಾ ಶೇಟ್‌ ವಂದಿಸಿದರು. ಹಿರಿಯ ವರದಿಗಾರ ದಿನೇಶ್‌ ಇರಾ ಕಾರ್ಯಕ್ರಮ ನಿರೂಪಿಸಿದರು.

ದೀಪಾವಳಿ ಧಮಾಕಾ ವಿಜೇತರು
ಬಂಪರ್‌ ಬಹುಮಾನ:ಸುದೇಷ್ಣಾ ಮಂಗಳೂರು.
ಪ್ರಥಮ: ಕೆ.ವಿ. ಶಿವಕುಮಾರ್‌ ನಂಜನಗೂಡು, ರಾಕೇಶ್‌ ಜಪ್ಪಿನಮೊಗರು.
ದ್ವಿತೀಯ: ಆಕಾಶ್‌ ಕುಲಕರ್ಣಿ ಸತ್ತೂರು, ಧಾರವಾಡ, ಭವಾನಿ ಉಳ್ಳಾಲ, ಹರೀಶ್‌ ಐತಾಳ ಸುರತ್ಕಲ್‌.
ತೃತೀಯ: ಉಮೇಶ್‌ ಕುಂಜಿಬೆಟ್ಟು ಉಡುಪಿ, ನಾಗಭೂಷಣ ವಾಕೂಡ ಕೊಕ್ಕರ್ಣೆ, ಸುದರ್ಶನ್‌ ಶಿವರಾಮ ಶೆಟ್ಟಿ ಮೂಡುಬೆಳ್ಳೆ, ಪದ್ಮಿನಿ ಕೆ. ಮಂಗಳೂರು.

ಪ್ರೋತ್ಸಾಹಕರ ಬಹುಮಾನ: ಎಸ್‌.ವಿ.ರತನ ಶಿವಮೊಗ್ಗ, ಸಂತೋಷ್‌ ವಿಷ್ಣು ಮಡಿವಾಳ ಮಂಕಿ (ಉತ್ತರ ಕನ್ನಡ), ನಿಧಿ ಯಲಹಂಕ ಬೆಂಗಳೂರು, ಪ್ರತಿಮಾ ಕೆ.ಪಿ. ಕಾಸರಗೋಡು, ಸತ್ಯೇಂದ್ರ ಕೂಸ ಪೂಜಾರಿ ಮುಂಬಯಿ, ಪಿ. ನರಸಿಂಹಲು ಸಿಂಧನೂರು, ಸಂಧ್ಯಾ ಸವಣೂರು ಕಡಬ, ಪುಟ್ಟಣ್ಣ ಪೂಜಾರಿ ನಾಲ್ಕೂರು ಸುಳ್ಯ, ಅಬ್ದುಲ್‌ ರಜಾಕ್‌ ಅನಂತಾಡಿ ಬಂಟ್ವಾಳ, ಕೃಷ್ಣ ಮಟ್ಟಾರು ಕಾಪು, ರೇವತಿ ಮಯ್ನಾಡಿ ಬೈಂದೂರು, ಶೋಭಿತಾ ಹೊಸ್ಮಾರು ಕಾರ್ಕಳ, ಚೈತ್ರಾ ಮಚ್ಚಿನ ಬೆಳ್ತಂಗಡಿ, ಕುಶಲ ವಿ. ಮೊಲಿ ಮೂಡುಬಿದಿರೆ, ಕೌಶಿಕ್‌ ಉಳ್ಳಂಜೆ ಕಟೀಲು, ಜಯಶ್ರೀ ಯು. ಕೋಟೇಶ್ವರ, ಬೀನಾ ಫೆರ್ನಾಂಡಿಸ್‌ ಮಂಗಳೂರು, ಅಣ್ಣಪ್ಪ ನಾಯಕ್‌ ಹೆಬ್ರಿ, ಬಿ.ಅಶೋಕ್‌ ಶೆಟ್ಟಿ ಬೆಂಗಳೂರು, ತನುಶ್ರೀ ಕೆ.ವಿ. ಕೊಳ್ತಿಗೆ ಪುತ್ತೂರು.

“ಉದಯವಾಣಿ’ ದೀಪಾವಳಿ ವಿಶೇಷಾಂಕದಲ್ಲಿ ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸಿ, ಕಳುಹಿಸಿದ್ದೆ. ನನಗೆ ಬಹುಮಾನ, ಅದೂ ಬಂಪರ್‌ ಬಹುಮಾನ ಬರುತ್ತದೆ ಎಂದುಕೊಂಡಿರಲಿಲ್ಲ. ಅದೃಷ್ಟಶಾಲಿಯಾಗಿ ಆಯ್ಕೆಯಾಗಿರುವುದು ಖುಷಿ ತಂದಿದೆ.
– ಸುದೇಷ್ಣಾ. ಮಂಗಳೂರು, ಬಂಪರ್‌ ಬಹುಮಾನ ವಿಜೇತರು

“ಉದಯವಾಣಿ, ತರಂಗ, ತುಷಾರ, ತುಂತುರು’ ಸೇರಿದಂತೆ “ಉದಯವಾಣಿ’ ಬಳಗದ ವಿವಿಧ ಪತ್ರಿಕೆಗಳನ್ನು 30 ವರ್ಷಗಳಿಂದ ಖರೀದಿಸಿ, ಓದಿ, ಸಂಗ್ರಹಿಸಿ ಇಟ್ಟಿದ್ದೇನೆ. ರಾಜ್ಯಾದ್ಯಂತ ಓದುಗರನ್ನು ತನ್ನೊಂದಿಗೆ ಬೆಸೆಯುತ್ತಿರುವ ಪತ್ರಿಕೆಯಾಗಿದ್ದು, ಪ್ರತೀವರ್ಷ ದೀಪಾವಳಿ- ಯುಗಾದಿ ವಿಶೇಷಾಂಕವನ್ನೂ ಖರೀದಿಸುವೆ. ಈ ಬಾರಿ ಪ್ರಥಮ ಬಹುಮಾನ ಪಡೆಯು ತ್ತೇನೆ ಎಂಬ ಕಲ್ಪನೆ ಇರಲಿಲ್ಲ. ಬಹು ಮಾನ ದೊರೆತದ್ದು ಖುಷಿ ತಂದಿದೆ.
– ಕೆ.ವಿ. ಶಿವಕುಮಾರ್‌, ನಂಜನಗೂಡು
ಪ್ರಥಮ ಬಹುಮಾನ ವಿಜೇತರು

“ಉದಯವಾಣಿ’ ಪತ್ರಿಕೆಯಿಂದಲೇ ಪ್ರಾಥಮಿಕ ಶಾಲಾ ಹಂತದಲ್ಲಿ ಓದುವ ಹವ್ಯಾಸ ಆರಂಭ ವಾಯಿತು. ರಾಜ್ಯದಲ್ಲೇ ಅತ್ಯುತ್ತಮ ವಿಶ್ವಾಸಾರ್ಹ ಪತ್ರಿಕೆ ಇದು. ಈ ಬಾರಿಯ ವಿಶೇಷಾಂಕವನ್ನು ಓದಲೇ ಬೇಕು ಎಂಬ ಉದ್ದೇಶದಿಂದ ಖರೀ ದಿಸಿದ್ದೆ. ಅದರಲ್ಲಿದ್ದ ದೀಪಾವಳಿ ಧಮಾಕದ ಕೂಪನ್‌ ಅನ್ನು ತುಂಬಿ ಕಳುಹಿಸಿದ್ದೆ. ಬಹುಮಾನ ಒಲಿದಿರುವುದು ನನ್ನ ಅದೃಷ್ಟ.
– ಅಬ್ದುಲ್‌ ರಜಾಕ್‌, ಅನಂತಾಡಿ ಬಂಟ್ವಾಳ, ಪ್ರೋತ್ಸಾಹಕರ ಬಹುಮಾನ ವಿಜೇತರು

ಟಾಪ್ ನ್ಯೂಸ್

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗ‌ಳಲ್ಲೇ ಬಸ್‌ ನಿಲುಗಡೆ; ಅನಾಹುತಕ್ಕೆ ಎಡೆ

8(1)

Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು

7(1)

Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

9–Niveus-Mangalore-Marathon

Niveus Mangalore Marathon 2024: ನ.10: ನೀವಿಯಸ್‌ ಮಂಗಳೂರು ಮ್ಯಾರಥಾನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.