Ram Mandir; ಅಯೋಧ್ಯೆ ತಲುಪಿದ ಕರ್ನಾಟಕದ 7 ಮಠಾಧೀಶರು
Team Udayavani, Jan 21, 2024, 12:57 AM IST
ಚಿತ್ರದುರ್ಗ: ಅಯೋಧ್ಯೆಯಲ್ಲಿ ಸೋಮವಾರ ನಡೆಯುವ ಶ್ರೀರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಏಳು ಮಂದಿ ಮಠಾಧೀಶರು ಶನಿವಾರ ಅಯೋಧ್ಯೆಗೆ ತಲುಪಿದರು. ಚಿತ್ರದುರ್ಗದ ಮಾದಾರ ಚನ್ನಯ್ಯ ಗುರು ಪೀಠದ ಬಸವಮೂರ್ತಿ ಶ್ರೀಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಠದ ಶ್ರೀಶಾಂತವೀರ ಸ್ವಾಮೀಜಿ, ಭಗೀರಥ ಗುರುಪೀಠದ ಶ್ರೀಪುರುಷೋತ್ತಮಾನಂದಪುರಿ ಸ್ವಾಮೀಜಿ, ದಾವಣಗೆರೆ ಜಿಲ್ಲೆ ರಾಜನಹಳ್ಳಿ ಗುರುಪೀಠದ ಶ್ರೀವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಹರಿಹರ ಪಂಚಮಸಾಲಿ ಗುರುಪೀಠದ ಶ್ರೀವಚನಾನಂದ ಸ್ವಾಮೀಜಿ ಹಾಗೂ ಹಾವೇರಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಯವರು ಬೆಂಗಳೂರಿನಿಂದ ಪ್ರಯಾಣ ಬೆಳೆಸಿದರು.
ರಾಮಲಲ್ಲಾಗೆ ಧಿವಾಸ್ ಪೂಜೆ
ರಾಮ ಮಂದಿರದಲ್ಲಿ ಐದನೇ ದಿನದ ಪೂಜಾ ಕಾರ್ಯಗಳು ಶನಿವಾರ ಸಾಂಗವಾಗಿ ನೆರವೇರಿವೆ. ರಾಮಲಲ್ಲಾಮವ ವಿಗ್ರಹಕ್ಕೆ ವಿವಿಧ “ಧಿವಾಸ್’ ಪೂಜೆಗಳನ್ನು ನೆರವೇರಿಸಿ ಅಲಂಕಾರಗಳನ್ನು ಮಾಡಲಾಗಿದೆ. ಪುಷ್ಪ ಧಿವಾಸ್ ಆಚರಣೆಯ ಭಾಗವಾಗಿ ದೇಶದ ವಿವಿಧ ಪ್ರದೇಶಗಳಿಂದ ಕಳುಹಿಸಲಾಗಿದ್ದ ಸಕ್ಕರೆ, ಹೂವುಗಳಿಂದ ಮೂರ್ತಿಗೆ ಪೂಜೆ- ಅಲಂಕಾರಗಳನ್ನು ನೆರವೇರಿಸಲಾಗಿದೆ. ಅಲ್ಲದೇ, ದೇಶದ ವಿವಿಧ ಧಾರ್ಮಿಕ ಕ್ಷೇತ್ರಗಳಿಂದ ತಂದು 81 ಕಲಶಗಳಲ್ಲಿ ಸಂಗ್ರಹಿಸಿಡಲಾಗಿದ್ದ ಪುಣ್ಯ ಔಷಧೀಯ ಜಲದಿಂದ ವಿಗ್ರಹಕ್ಕೆ ಪುಣ್ಯ ಸ್ನಾನ ಮತ್ತು ಗರ್ಭಗುಡಿಯ ಸ್ವತ್ಛತ ಕಾರ್ಯಗಳನ್ನು ನಡೆಸಲಾಗಿದೆ. “ಸ್ನಾಪನ್’ ಎಂದು ಕರೆಯುವ ಈ ವಿಧಿಯನ್ನು ವೇದ -ಮಂತ್ರಗಳ ಘೋಷದೊಂದಿಗೆ ಸುದೀರ್ಘ ಮೂರು ಗಂಟೆಗಳ ಕಾಲ ನಡೆಸಲಾಗಿದೆ. ಔಷಧೀಯ ಪುಣ್ಯ ಜಲವು ಗೋಮೂತ್ರ, ವಿವಿಧ ಹಣ್ಣುಗಳು ಸೇರಿದಂತೆ ಹಲವು ಔಷಧಯುಕ್ತ ಪದಾರ್ಥಗಳ ಸಾರವನ್ನು ಒಳಗೊಂಡಿತ್ತು. ವಿಶೇಷವಾಗಿ ಈ ಜಲದೊಂದಿಗೆ ಭಾರತದ ಕ್ಷೇತ್ರಗಳು ಮಾತ್ರವಲ್ಲದೇ, ನೇಪಾಲದ ಪುಣ್ಯ ಕ್ಷೇತ್ರಗಳ ಜಲವನ್ನೂ ಸೇರಿಸಲಾಗಿದೆ.
ಕರ್ನಾಟಕ ಸಹಿತ ದೇಶದ 14 ದಂಪತಿಯಿಂದ ಯಜಮಾನ ವಿಧಿ
ದೇಶದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಹಾಗೂ ಈಶಾನ್ಯ ಭಾಗದಿಂದ 14 ದಂಪತಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಪೂಜೆಯಲ್ಲಿ ಯಜಮಾನ ಕ್ರಿಯಾವಿಧಿ ನಡೆಸ ಲಿದ್ದಾರೆ. ಹೀಗೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖೀಲ ಭಾರತೀಯ ಪ್ರಚಾರ ಪ್ರಮುಖರಾದ ಸುನಿಲ್ ಅಂಬೆಕರ್ ತಿಳಿಸಿದ್ದಾರೆ. ಈ ಪೈಕಿ ಕರ್ನಾಟಕದ ಲಿಂಗ ರಾಜ್ ಬಸವರಾಜ್ ಹಾಗೂ ಅವರ ಪತ್ನಿಯೂ ಸೇರಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ
Ayodhya: ವ್ಯಾಟಿಕನ್, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ
Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?
Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ
Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.