![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 21, 2024, 4:35 PM IST
ಹೈದರಾಬಾದ್: ಟಾಲಿವುಡ್ ಸಿನಿರಂಗದಲ್ಲಿ ಭರ್ಜರಿ ಸದ್ದು ಮಾಡಿರುವ ʼಹನುಮಾನ್ʼ ಸಿನಿಮಾ 100 ಕೋಟಿ ಕ್ಲಬ್ ಸೇರಿದೆ. ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿದೆ.
ಅಯೋಧ್ಯೆಯ ರಾಮ ಮಂದಿರದ ಅದ್ಧೂರಿ ‘ಪ್ರಾಣ ಪ್ರತಿಷ್ಠಾ’ ಸಮಾರಂಭ ಸೋಮವಾರ(ಜ.22 ರಂದು) ಜರುಗಲಿದೆ. ಇದೇ ಸಂದರ್ಭದಲ್ಲಿ ರಾಮ ಮಂದಿರಕ್ಕೆ ʼಹನುಮಾನ್ʼ ಚಿತ್ರತಂಡ ಈ ಮೊದಲೇ ಹೇಳಿದಂತೆ ದೇಣಿಗೆಯನ್ನು ನೀಡಿದೆ.
ತೇಜ ಸಜ್ಜಾ ಅಭಿನಯದ ʼಹನುಮಾನ್ʼ ಸಿನಿಮಾಕ್ಕೆ ಎಲ್ಲೆಡೆಯಿಂದ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬರುತ್ತಿದೆ. ನಿರ್ದೇಶಕ ಪ್ರಶಾಂತ್ ವರ್ಮಾ ಅವರು ʼಹನುಮಾನ್ʼ ಚಿತ್ರತಂಡದಿಂದ ರಾಮ ಮಂದಿರಕ್ಕೆ ದೇಣಿಗೆ ನೀಡುವುದಾಗಿ ಈ ಹಿಂದೆ ಹೇಳಿದ್ದರು. ಅದರಂತೆ ಚಿತ್ರತಂಡ ಅಯೋಧ್ಯೆ ರಾಮ ಮಂದಿರಕ್ಕೆ 2.66 ಕೋಟಿ ರೂಪಾಯಿಯ ದೇಣಿಗೆಯನ್ನು ನೀಡಿದೆ.
ಈ ಕುರಿತು ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ ಚಿತ್ರತಂಡ “ಅಯೋಧ್ಯೆ ರಾಮಮಂದಿರಕ್ಕೆ 2,66,41,055 ಮೊತ್ತದ ದೇಣಿಗೆ ನೀಡುವ ಮಹತ್ತರ ಕಾರ್ಯಕ್ಕೆ ಕೈಜೋಡಿಸಿರುವ 53,28,211 ಜನರಿಗೆ ಧನ್ಯವಾದಗಳು. ನೀವು ʼಹನುಮಾನ್ʼ ವೀಕ್ಷಿಸಿ ದೈವಿಕ ಅನುಭವ ಪಡೆಯುವ ಮೂಲಕ ಈ ಕಾರ್ಯಕ್ಕೆ ಜೊತೆಯಾಗಿದ್ದೀರಿ. ನಿಮ್ಮ ಟಕೆಟ್ ನ 5 ರೂ. ಅಯೋಧ್ಯೆ ರಾಮಮಂದಿರಕ್ಕೆ ಹೋಗುತ್ತದೆ ಈ ಐತಿಹಾಸಿಕ ಕ್ಷಣದ ಭಾಗವಾಗಿರುವುದಕ್ಕೆ ಮೈತ್ರಿ ವಿತರಣಾ ತಂಡ ಕೃತಜ್ಞವಾಗಿರುತ್ತದೆ” ಎಂದು ಟ್ವೀಟ್ ಮಾಡಿದೆ.
ಈ ಹಿಂದೆ ʼಹನುಮಾನ್ʼ ಚಿತ್ರತಂಡ ಚಿತ್ರದ ಮೊದಲ ದಿನದ ಕಲೆಕ್ಷನ್‌ನಿಂದ 14 ಲಕ್ಷ ರೂಪಾಯಿಗಳನ್ನು ದೇಣಿಗೆಯನ್ನು ರಾಮ ಮಂದಿರಕ್ಕೆ ನೀಡಿದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.