Ayodhya Ram Temple ; ನನಗೆ ಆಹ್ವಾನ ಬಂದಿದೆ, ಭಾಗಿಯಾಗುತ್ತೇನೆ ಎಂದ ನಿತ್ಯಾನಂದ
Team Udayavani, Jan 21, 2024, 10:01 PM IST
ಹೊಸದಿಲ್ಲಿ: ಸ್ವಯಂಘೋಷಿತ ದೇವಮಾನವ ಮತ್ತು ದೇಶದಿಂದ ಪರಾರಿಯಾಗಿರುವ ಅತ್ಯಾಚಾರ ಆರೋಪಿ ನಿತ್ಯಾನಂದ ಅಯೋಧ್ಯೆಯಲ್ಲಿ ಸೋಮವಾರ ನಡೆಯುವ ರಾಮ ಮಂದಿರದ ಲೋಕಾರ್ಪಣೆ ಮತ್ತು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ತನಗೆ ಆಹ್ವಾನವಿದೆ ಎಂದು ಹೇಳಿಕೊಂಡಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ.
ಕೈಲಾಸ ಎಂದು ಕರೆಯಲ್ಪಡುವ ದೇಶದಲ್ಲಿ “ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶ” ಎಂದು ಕರೆಯಲ್ಪಡುವ ನಿತ್ಯಾನಂದ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು “ಈ ಐತಿಹಾಸಿಕ ಮತ್ತು ಅಸಾಧಾರಣ ಘಟನೆಯನ್ನು ತಪ್ಪಿಸಿಕೊಳ್ಳಬೇಡಿ! ಭಗವಾನ್ ರಾಮನನ್ನು ದೇವಾಲಯದ ಮುಖ್ಯ ದೇವತೆಯಲ್ಲಿ ಔಪಚಾರಿಕವಾಗಿ ಆಹ್ವಾನಿಸಲಾಗುತ್ತದೆ. ಸಾಂಪ್ರದಾಯಿಕ ಪ್ರಾಣ ಪ್ರತಿಷ್ಠೆ ಮತ್ತು ಇಡೀ ಜಗತ್ತನ್ನು ಅಲಂಕರಿಸಲಿದೆ” ಎಂದು ಬರೆದಿದ್ದಾರೆ.
ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶರು ಔಪಚಾರಿಕವಾಗಿ ಆಹ್ವಾನಿಸಿದ ನಂತರ ಭಗವಾನ್ ಶ್ರೀ ನಿತ್ಯಾನಂದ ಪರಮಶಿವಂ ಅವರು ಈ ಭವ್ಯ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
2 More Days Until the Inauguration of Ayodhya Ram Mandir!
Don’t miss this historic and extraordinary event! Lord Rama will be formally invoked in the temple’s main deity during the traditional Prana Pratishtha and will be landing to grace the entire world!
Having been formally… pic.twitter.com/m4ZhdcgLcm
— KAILASA’s SPH NITHYANANDA (@SriNithyananda) January 20, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.