Ayodhya Ram Mandir ; ಕರಾವಳಿಯಲ್ಲಿ ರಾಮನ ಪ್ರಭಾವಳಿ
Team Udayavani, Jan 22, 2024, 6:45 AM IST
ಮಂಗಳೂರು: ಅಯೋಧ್ಯಾ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಪುಣ್ಯ ಘಳಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ಕರಾವಳಿಯಾದ್ಯಂತ ಸೋಮವಾರ ಈ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳುವ ತವಕ ಇಮ್ಮಡಿಯಾಗಿದೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಸಾಕಾರ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಯಲ್ಲಿ ಸಂಭ್ರಮ-ಸಡಗರ ಮೇಳೈಸಿದ್ದು ಹಬ್ಬದ ವಾತಾವರಣ ರೂಪುಗೊಂಡಿದೆ.
ಶ್ರೀ ಕ್ಷೇತ್ರ ಕಟೀಲು, ಪೊಳಲಿ, ಕದ್ರಿ, ಮಂಗಳಾದೇವಿ, ಮರೋಳಿ, ಕುದ್ರೋಳಿ, ಪಾಂಡೇಶ್ವರ ಸಹಿತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಲಿದೆ. ಮುಜರಾಯಿ ದೇವಾಲಯಗಳಲ್ಲಿಯೂ ವಿಶೇಷ ಪೂಜೆ ಆಯೋಜನೆಗೊಂಡಿದೆ. ಬೆಳಗ್ಗಿನಿಂದಲೇ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯ ಕ್ರಮ ನಡೆಯಲಿದ್ದು, ವಿಶೇಷ ಪೂಜೆ, ರಾಮತಾರಕ ಯಜ್ಞ, ಭಜನೆ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಯಲಿದೆ.
ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಪುಣ್ಯ ಕ್ಷಣವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಲು ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಹಾಗೂ ಸಂಘ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲೂ ಎಲ್‌ಇಡಿ ಮೂಲಕ ವ್ಯವಸ್ಥೆ ಮಾಡಲಾಗಿದೆ.
ಎಲ್ಲೆಲ್ಲೂ ಕೇಸರಿ ಸಡಗರ
ಕರಾವಳಿಯ ವಿವಿಧ ಭಾಗಗಳಲ್ಲಿ ಕೇಸರಿ ಧ್ವಜ ತೋರಣ ಕಂಗೊಳಿಸುತ್ತಿದೆ. ಪ್ರಮುಖ ರಸ್ತೆಗಳ ಅಲ್ಲಲ್ಲಿ ಶ್ರೀರಾಮನ ಕಟೌಟ್,ಶುಭ ಕೋರುವ ಬ್ಯಾನರ್‌ಗಳು, ಪ್ರವೇಶ ದ್ವಾರಗಳು, ಪತಾಕೆ ಗಳು ರಾರಾಜಿಸುತ್ತಿವೆ. ಕೆಲವು ಬಸ್, ಆಟೋ, ಟ್ಯಾಕ್ಸಿ ನಿಲ್ದಾಣಗಳೂ ಕೇಸರಿಮಯವಾಗಿದೆ. ವಾಹನಗಳಲ್ಲೂ ಶ್ರೀರಾಮ, ರಾಮ ಮಂದಿರದ ಸ್ಟಿಕ್ಕರ್‌ಗಳಿವೆ. ವಿಶೇಷವಾಗಿ ಕೆಲವು ಮನೆಗಳಲ್ಲಿ ಕೇಸರಿ ಬಾವುಟ, ಜೈ ಶ್ರೀರಾಮ್ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ.
ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ|ಡಿ.ವೀರೇಂದ್ರ ಹೆಗ್ಗಡೆ, ಆರ್‌ಎಸ್‌ಎಸ್ ಮುಖಂಡ ಡಾ|ಕಲ್ಲಡ್ಕ ಪ್ರಭಾಕರ ಭಟ್, ಗುರುಪುರ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಮಹರ್ಷಿ ಓಂಶ್ರೀ ವಿದ್ಯಾನಂದ ಸರಸ್ವತಿ ಹಾಗೂ ಮಾತಾಶ್ರೀ ಶಿವಜ್ಞಾನಮಯಿ ಸರಸ್ವತಿ, ಬಂಟ್ವಾಳ ಕಾಣಿಯೂರಿನ ಶ್ರೀ ಮಹಾಬಲ ಸರಸ್ವತಿ ಸ್ವಾಮೀಜಿ, ವಿಹಿಂಪ ಮುಖಂಡ ಪ್ರೊ|ಎಂ.ಬಿ. ಪುರಾಣಿಕ್, ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ವಿಶಾಲ್ ಹೆಗ್ಡೆ, ಉದ್ಯಮಿ ಜಿತೇಂದ್ರ ಕೊಟ್ಟಾರಿ ಅವರು ಅಯೋಧ್ಯೆಗೆ ತೆರಳಿದ್ದು, ಪ್ರಾಣ ಪ್ರತಿಷ್ಠೆಯ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗುವರು.
ಉಡುಪಿ
ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಸೋಮವಾರ ಬೆಳಗ್ಗೆಯಿಂದ ನಡೆಯಲಿರುವ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಿತಿಯ ಕಾರ್ಯಕ್ರಮದ ಲೈವ್ ವೀಕ್ಷಣೆಗೆ ಉಡುಪಿ ಜಿಲ್ಲೆಯ ಎಲ್ಲ ದೇವಸ್ಥಾನ ಗಳಲ್ಲೂ ಎಲ್ ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ.ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೇ ರಾಮ ತಾರಕ ಜಪ ಯಜ್ಞ, ಹೋಮ, ಹವನ ಇತ್ಯಾದಿಗಳ ಜತೆಗೆ ವಿವಿಧ ಭಜನ ಮಂಡಳಿಗಳಿಂದ ಭಜನೆ ನೆರವೇರಲಿದೆ. ಶ್ರೀ ರಾಮೋತ್ಸವದ ಹೆಸರಿನಲ್ಲಿ ದಿನವಿಡಿ ವಿವಿಧ ಕಾರ್ಯಕ್ರಮ ನಡೆಸಲು ಆಯಾ ದೇವಸ್ಥಾನದ ಆಡಳಿತ ಮಂಡಳಿಗಳು ಸಿದ್ಧತೆ ಮಾಡಿಕೊಂಡಿವೆ.
ದೇವರಿಗೆ ವಿಶೇಷ ಪೂಜೆ, ರಂಗಪೂಜೆ, ಶ್ರೀರಾಮ ಪಟ್ಟಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆಯ ಜತೆಗೆ ಮಧ್ಯಾಹ್ನದ ಅನ್ನದಾನದ ವ್ಯವಸ್ಥೆಯನ್ನು ದೇವಸ್ಥಾನಗಳಲ್ಲಿ ಮಾಡಲಾಗಿದೆ. ಜಿಲ್ಲೆಯಾದ್ಯಂತ ಎಲ್ಲ ಮನೆಗಳಿಗೂ ಈಗಾಗಲೇ ಸಂಘ ಪರಿವಾರ ಸಂಘಟನೆಗಳು ಅಕ್ಷತೆ ವಿತರಣೆ ಮಾಡಿವೆ. ವಿಶ್ವ ಹಿಂದೂ ಪರಿಷತ್ ಕರೆಯಂತೆ ಜಿಲ್ಲಾದ್ಯಂತ ದೇವಸ್ಥಾನಗಳು ಮತ್ತು ಭಜನ ಮಂದಿರ ಸಹಿತ ಧಾರ್ಮಿಕ ಕೇಂದ್ರಗಳಲ್ಲಿ ಮಾತ್ರ ರಾಮೋತ್ಸವ, ಪೂಜೆ ಇತ್ಯಾದಿ ಇರಲಿವೆ. ಸಂಜೆ ದೇವಸ್ಥಾನ ಹಾಗೂ ಪ್ರತೀ ಮನೆಯಲ್ಲಿ ದೀಪೋತ್ಸವ ಇರಲಿದೆ. ಪ್ರತೀ ಮನೆಯಲ್ಲೂ ಕನಿಷ್ಠ 5 ದೀಪ ಹಚ್ಚಲು ಕರೆ ನೀಡಲಾಗಿದೆ. ಕೆಲವು ದೇವಸ್ಥಾನಗಳಲ್ಲಿ ಉತ್ಸವ, ರಥೋತ್ಸವ ಇರಲಿದೆ.
ಮನೆ:
ಅಯೋಧ್ಯೆ ಹಸ್ತಾಂತರ
ರಾಮಭಕ್ತರು ಮತ್ತು ವಿವಿಧ ಸಂಘ-ಸಂಸ್ಥೆಗಳ ದೇಣಿಗೆಯೊಂದಿಗೆ ಉಡುಪಿಯ ಕಲ್ಯಾಣಪುರ ಮೂಡ್ ತೋರಿಸಿ ಗ್ರಾಮಸ್ಥರು ಒಬ್ಬರಿಗೆ ನಿರ್ಮಿಸಿದ ಮನೆ “ಅಯೋಧ್ಯೆ’ಯನ್ನು ಶಾಸಕ ಯಶ್‌ಪಾಲ್ ಸುವರ್ಣ ಸೋಮವಾರ ಹಸ್ತಾಂತರಿಸಲಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಹಾಲು ಪಾಯಸ ಮತ್ತು ಸಂಜೆ 5 ರಥೋತ್ಸವ ಇರಲಿದೆ.
ಕರ್ನಾಟಕ: ಕುಮಾರ ವಾಲ್ಮೀಕಿ ತೊರವೆ ರಾಮಾಯಣ (16ನೇ ಶತಮಾನ), ನಾಗಚಂದ್ರ ರಚಿತ ರಾಮಚಂದ್ರ ಚರಿತ ಪುರಾಣ (12ನೇ ಶತಮಾನ), ಮುದ್ದಣ ವಿರಚಿತ ಅದ್ಭುತ ರಾಮಾಯಣ (1895) ರಾಜ್ಯದಲ್ಲಿ ಜನಪ್ರಿಯವಾಗಿದೆ.
ಕಾರ್ಕಳ ತಾಲೂಕು
ಕಾರ್ಕಳ: ತಾಲೂಕಿನಾದ್ಯಂತ ಸೋಮವಾರ ರಾಮನಾಮ ಸಂಕೀರ್ತನೆ, ರಾಮಭಜನೆ ಸಹಿತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬಜಗೋಳಿ ದಿಡಿಂಬಿರಿಯ ಅಯ್ಯಪ್ಪ ಮಂದಿರದಲ್ಲಿ ದಿನಪೂರ್ತಿ ರಾಮೋತ್ಸವ, ಕುಣಿತ ಭಜನೆ, 1,008 ರಾಮಭಕ್ತರಿಂದ ಹನುಮಾನ್ ಚಾಲೀಸ ಪಠಣ, ಶ್ರೀರಾಮ ತಾರಕ ಮಂತ್ರ ಂಯಾಗ,ಶ್ರೀ ರಾಮ ಕರಸೇವಕರಿಗೆ ವಿಶೇಷ ಪ್ರಸಾದ ನೀಡಿ ಗೌರವಾರ್ಪಣೆ ನಡೆಯಲಿದೆ. ನಗರದ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ, ದೇವಸ್ಥಾನಗಳಲ್ಲಿ ಸೇರುವಂತೆ ನಗರದಲ್ಲಿ ಸ್ವಯಂ ಸೇವಕರು ಕರಪತ್ರ ಹಂಚಿ ಮನವಿ ಮಾಡಿದ್ದಾರೆ.
ಪುತ್ತೂರು:
ಪುತ್ತೂರು: ಅನೇಕ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ, ಕೆಲವು ಖಾಸಗಿ ಶಾಲೆಗಳಲ್ಲಿ ರಾಮ ನಾಮ ತಾರಕ ಮಂತ್ರ ಪಠಣ, ರಸಪ್ರಶ್ನೆ ಸ್ಪರ್ಧೆ, ರಾಮಕಥಾ ನೃತ್ಯ ಪ್ರದರ್ಶನ ನಡೆಯಲಿದೆ. ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯಲಿರುವ ರಾಮತಾರಕ ಯಜ್ಞದ ಅಂಗವಾಗಿ ಮೂರು ದಿನಗಳ ರಾಮಾಶ್ವ ದಿಗ್ವಿಜಯ ಯಾತ್ರೆ ನಡೆಯುತ್ತಿದೆ. ಶೇತಾಶ್ವವು ಪುತ್ತೂರು ಸೀಮೆ ವ್ಯಾಪ್ತಿಯ 22 ಗ್ರಾಮಗಳ ದೇವಸ್ಥಾನಗಳಿಗೆ ಪರ್ಯಟನೆ ಮಾಡುತ್ತಿದೆ. 22 ಗ್ರಾಮ ದೇವಸ್ಥಾನಗಳನ್ನು ಸಂದರ್ಶಿಸಿ ಗೌರವ ಸ್ವೀಕರಿಸಲಿದೆ.
ಬೆಳ್ತಂಗಡಿ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ನೆರವೇರಲಿದೆ. ಅಮೃತವರ್ಷಿಣಿ ಸಭಾಭವನದಲ್ಲಿ ಬೆಳಗ್ಗೆ 11ರಿಂದ ಭಜನೆ ಸತ್ಸಂಗ ನಡೆಯಲಿದ್ದು ಹೇಮಾವತಿ ವೀ. ಹೆಗ್ಗಡೆ ಚಾಲನೆ ನೀಡುವರು. ಕನ್ಯಾಡಿ ನಿತ್ಯಾನಂದನಗರದ ಶ್ರೀ ರಾಮಕ್ಷೇತ್ರದಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಭಜನೆ ಸತ್ಸಂಗ ನಡೆಯಲಿದೆ. ಪೂರ್ವಾಹ್ನ 11ರಿಂದ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಪೂರ್ಣಗೊಳ್ಳುವವರೆಗೆ ಕ್ಷೇತ್ರದಲ್ಲಿ ಸೀತಾರಾಮ ಪರಿವಾರ ದೇವರಿಗೆ ವಿಶೇಷ ಪೂಜೆ, ಬಳಿಕ ಅನ್ನಸಂತರ್ಪಣೆ ನೆರವೇರಲಿದೆ. ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಸೀಯಾಳಾಭಿಷೇಕಯುಕ್ತ ಮಹಾಪೂಜೆ, 120 ಅಗಲು ರಂಗಪೂಜೆ ನೆರವೇರಲಿದೆ. ಉಜಿರೆ ಜನಾರ್ದನ ದೇವಸ್ಥಾನ, ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಕಾರ್ಯಕ್ರಮಗಳು ನೆರವೇರಲಿವೆ.
ಬಂಟ್ವಾಳ
ಬಂಟ್ವಾಳ: ತಾಲೂಕಿನ 80 ಅಧಿಕ ಶ್ರದ್ಧಾಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಶೇಷವಾಗಿ ರವಿವಾರ ರಾತ್ರಿ ನೇತ್ರಾವತಿ ನದಿಯ ಮಧ್ಯೆ ಹಣತೆಯ ಬೆಳಕಿನೊಂದಿಗೆ ಶ್ರೀ ಸತ್ಯನಾರಾಯಣ ಪೂಜೆ ನಡೆದಿದೆ. ಸೋಮವಾರ ಎಲ್ಲರೂ ಸ್ವಯಂಪ್ರೇರಿತರಾಗಿ ತಮ್ಮೆಲ್ಲ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿ ಸಮೀಪದ ದೇವಸ್ಥಾನಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಂಘಟನೆಗಳು ಮನವಿ ಮಾಡಿರುವುದರಿಂದ ನಗರ ಭಾಗದಲ್ಲಿ ಜನಸಂಚಾರ ವಿರಳಗೊಳ್ಳುವ ಸಾಧ್ಯತೆ ಇದೆ.
ಅಯೋಧ್ಯೆ ತಲುಪಿದ ಶೀರೂರುಶ್ರೀ
ಉಡುಪಿ: ಅಯೋಧ್ಯೆಯ ಶ್ರೀರಾಮ ಪ್ರತಿಷ್ಠಾಪನೆ ಪ್ರಯುಕ್ತ ಶೀರೂರು ಮಠಾಧೀಶರಾದ ವೇದವರ್ಧನ ತೀರ್ಥ ಶ್ರೀಪಾದರು ರವಿವಾರ ಅಯೋಧ್ಯೆಗೆ ತಲುಪಿದರು. ಮಠದ ದಿವಾನರಾದ ವಿದ್ವಾನ್ ಉದಯ ಕುಮಾರ ಸರಳತ್ತಾಯ ಉಪಸ್ಥಿತರಿದ್ದರು.
ಸುಳ್ಯ, ಕಡಬ
ಸುಳ್ಯ: ನಗರ ಸೇರಿದಂತೆ ಪ್ರಮುಖ ಪೇಟೆ, ಗ್ರಾಮೀಣ ಭಾಗದ ಕೇಂದ್ರ, ಮನೆಗಳನ್ನು ಕೇಸರಿ ಬಂಟಿಂಗ್ಸ್ ಮೂಲಕ ಸಿಂಗರಿಸಲಾಗಿದೆ. ಕಾರ್ಯಕ್ರಮಕ್ಕೆ ಶುಭಕೋರಿ ವಿವಿಧೆಡೆ ಬ್ಯಾನರ್ ಅಳವಡಿಸಲಾಗಿದೆ. ಮನೆಗಳಲ್ಲೂ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕಾಗಿ ಸಿದ್ಧತೆ ನಡೆದಿದೆ. ಹೆಚ್ಚಿನ ವ್ಯಾಪಾರ ಮಳಿಗೆಗಳು ಸೋಮವಾರ ಸಂಸ್ಥೆಗಳಿಗೆ ರಜೆ ಸಾರಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿವೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬೆಳಗ್ಗೆ 6.30ರಿಂದ ಸಂಜೆ 6.30ರ ವರೆಗೆ ಭಜನೆ ನಡೆಯಲಿದೆ.
ಕುಂದಾಪುರ
ಕುಂದಾಪುರ: ನಗರವಿಡೀ ಕೇಸರಿಮಯವಾಗಿದೆ.ಬಹುತೇಕ ದೇವಾಲಯಗಳಲ್ಲಿ ಭಜನೆ, ಪೂಜೆ, ಹೋಮ ಹವನ ನಡೆಯಲಿದೆ. ಕೋಡಿಯಲ್ಲಿ ಮನೆ ಮನೆಗೆ ಮಣ್ಣಿನ ಹಣತೆ ದೀಪಗಳನ್ನು ನೀಡಿ ಪ್ರಾಣಪ್ರತಿಷ್ಠೆ ಸಂದರ್ಭ ಬೆಳಗುವಂತೆ ಸೂಚಿಸಲಾಗಿದೆ. “ರಾಮ’ ಎಂಬ ಹೆಸರು ಇರುವವರನ್ನು ಗುರುತಿಸಿ ಗೌರವಿಸುವ ಕಾರ್ಯವೂ ನಡೆದಿದೆ. ಕೆಲವರು ಸಾವಿರಾರು ಲಾಡುಗಳನ್ನು ಮಾಡಿ ಹಂಚುವ ಇರಾದೆ ಹೊಂದಿದ್ದಾರೆ. ಬಹುತೇಕ ಅಂಗಡಿಗಳಲ್ಲಿ ಶ್ರೀರಾಮನ ಚಿತ್ರ ಇರುವ ಧ್ವಜಕ್ಕೆ ಬೇಡಿಕೆ ಹೆಚ್ಚಾಗಿದ್ದು ಹೆಚ್ಚಿನವರು ಖಾಲಿಯಾಗಿದೆ ಎಂದು ಉತ್ತರಿಸುತ್ತಿದ್ದಾರೆ.
ಅಶ್ವತ್ಥ ಎಲೆಯಲ್ಲಿ ಧನುರ್ಧಾರಿ ಶ್ರೀರಾಮ
ಕಟಪಾಡಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕƒತ ಕಲಾವಿದ ಮಹೇಶ್ ಮರ್ಣೆ ಅವರು ಅಶ್ವತ್ಥ ಎಲೆಯಲ್ಲಿ ರಚಿಸಿದ ಶ್ರೀ ರಾಮನ ಕಲಾಕೃತಿಗಳು.
ಆಂಧ್ರಪ್ರದೇಶ: ಶ್ರೀ ವಿಶ್ವನಾದಾ ಸತ್ಯನಾರಾಯಣ/ಶ್ರೀಮದ್‌ರಾಮಾಯಣ ಕಲಾಪವೃಕಾnಮು: ಕವಿ ವಿಶ್ವನಾಥ ಸತ್ಯನಾರಾಯಣ ಬರೆದ ಕೃತಿ. ತೆಲುಗು ಭಾಷೆಯಲ್ಲಿ ಮೊದಲ ಜ್ಞಾನಪೀಠ ಪಡೆದ ಕೃತಿ.
ಅಸ್ಸಾಂ: ಸಪ್ತಕಂಡ ರಾಮಾಯಣ/ಕಥಾ ರಾಮಾಯಣ: ಅಸ್ಸಾಂ ಭಾಷೆಯಲ್ಲಿ ಮಧ್ವ ಕಂಡಾಲಿ 14ನೇ ಶತಮಾನದಲ್ಲಿ ಬರೆದ ಕೃತಿ.
ಬಂಗಾಲ: ಕಿಟ್ಟಿವಾಸಿ ರಾಮಾಯಣ: ಬಂಗಾಲಿ ಭಾಷೆಯಲ್ಲಿ ಕಿಟ್ಟಿಬಾಸ್ ಓಜಾ 15ನೇ ಶತಮಾನದಲ್ಲಿ ಬರೆದ ರಾಮಾಯಣ. ಬಂಗಾಲದ ಅತ್ಯಂತ ಜನಪ್ರಿಯ ಮಹಾಕಾವ್ಯವಾಗಿದೆ.
ಬಿಹಾರ: ಮಿಥಿಲಾ ಭಾಷಾ ರಾಮಾಯಣ, ರಾಮೇಶ್ವರ ಚರಿತ ಮಿಥಿಲಾ: ಮೈಥಿಲಿ ಭಾಷೆಯಲ್ಲಿ ರಚಿತವಾದ ರಾಮಾಯಣ ಜನಪ್ರಿಯವಾಗಿದೆ.
ಗೋವಾ:
ರಾಮಾಯಣು: ಕೊಂಕಣಿ ಭಾಷೆಯಲ್ಲಿ ಕವಿ ಕೃಷ್ಣದಾಸ ಶರ್ಮಾ 15ನೇ ಶತಮಾನದಲ್ಲಿ ಬರೆದ ಕೃತಿ.
ಗುಜರಾತ್: ತುಲಸಿ-ಕೃತ ರಾಮಾಯಣ: 17ನೇ ಶತಮಾನದಲ್ಲಿ ಕವಿ ಪ್ರೇಮಾನಂದ ಸ್ವಾಮಿ ಗುಜರಾತಿ ಭಾಷೆಯಲ್ಲಿ ರಚಿಸಿದ ತುಳಸೀದಾಸರ ರಾಮಚರಿತಮಾನಸಬ ಆಧಾರಿತ ಕೃತಿ.
ಜಮ್ಮು-ಕಾಶ್ಮೀರ: ರಾಮಾವತಾರಾ ಚರಿತ: 19ನೇ ಶತಮಾನದಲ್ಲಿ ಕಾಶ್ಮೀರಿ ಭಾಷೆಯಲ್ಲಿ ರಚಿತ ರಾಮಾಯಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
MUST WATCH
ಹೊಸ ಸೇರ್ಪಡೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.