Mangaluru; ಪ್ರತ್ಯೇಕ ಪ್ರಕರಣ: ಮೂವರು ಪಾದಚಾರಿಗಳಿಗೆ ಗಾಯ
Team Udayavani, Jan 21, 2024, 11:35 PM IST
ಮಂಗಳೂರು: ಮಂಗಳೂರು ನಗರ ಹಾಗೂ ಹೊರವಲಯದಲ್ಲಿ ಗುರುವಾರ ಸಂಭವಿಸಿದ ಅಪಘಾತಗಳಲ್ಲಿ ಮೂವರು ಪಾದಚಾರಿಗಳು ಗಾಯಗೊಂಡಿದ್ದಾರೆ.
ರಾತ್ರಿ 8ಕ್ಕೆ ಶಾಲೆಟ್ ಗೋವಿಸ್ (72) ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಪರಿಸರದಿಂದ ಮಸೀದಿ ರಸ್ತೆಯಾಗಿ ಮಿಲಾಗ್ರಿಸ್ ಕಡೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಸ್ಕೂಟರ್ ಢಿಕ್ಕಿಯಾಗಿ ಗಾಯಗೊಂಡಿದ್ದಾರೆ. ಸ್ಕೂಟರ್ ಸವಾರೆ ಅಮೀನಾ ಸಂಶೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ಸ್ಕೂಟರ್ ಚಲಾಯಿಸಿಕೊಂಡು ಬಂದ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದ್ದು ಶಾಲೆಟ್ ಅವರ ತಲೆಯ ಹಿಂಬದಿ, ಎಡಕೈ, ಹೊಟ್ಟೆಯ ಬಳಿ ಗಾಯವಾಗಿದೆ. ಸ್ಕೂಟರ್ ಸವಾರೆ ಪ್ರಾರಂಭದಲ್ಲಿ ಆಸ್ಪತ್ರೆಯ ವೆಚ್ಚ ನೀಡುವುದಾಗಿ ತಿಳಿಸಿದ್ದು ಅನಂತರ ವೆಚ್ಚ ನೀಡಲು ನಿರಾಕರಿಸಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಲಾರೆನ್ಸ್ ಸಾಲ್ವೆಡೋರ್ ಸಿಕ್ವೇರಾ ಅವರು ಗುರುವಾರ ಸಂಜೆ ದಾಮಸ್ ಕಟ್ಟೆ ಚರ್ಚ್ ಎದುರಿನ ರಸ್ತೆ ದಾಟಿ ರಸ್ತೆಯ ಅಂಚು ತಲುಪಿದಾಗ ಸ್ಕೂಟರ್ ಢಿಕ್ಕಿಯಾಗಿ ಅವರ ಕಾಲಿನ ಬಳಿ ಮೂಳೆ ಮುರಿತ ಉಂಟಾಗಿದೆ. ದೇಹದ ಇತರ ಕಡೆ ತರಚಿದ ಗಾಯವಾಗಿದೆ. ಸ್ಕೂಟರ್ ಸವಾರ ಪ್ರಸ್ತುತ್ ಶೆಟ್ಟಿ ಅವರ ಎಡಕೈ ತೋರು ಬೆರಳಿಗೆ, ದೇಹದ ಇತರ ಕಡೆಗಳಿಗೆ ಗಾಯವಾಗಿದೆ. ಸವಾರನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ.
ಮತ್ತೊಂದು ಘಟನೆ
ಮಂಜಮ್ಮ (56) ಅವರು ಗುರುವಾರ ಸಂಜೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಿಂದ ಮುಕ್ಕ ಜಂಕ್ಷನ್ ಕಡೆಗೆ ನಡೆದುಕೊಂಡು ಹೋಗುತ್ತಾ ಆಸ್ಪತ್ರೆಯ ದ್ವಾರದ ಎದುರು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದಾಗ ಕಾರು ಢಿಕ್ಕಿ ಹೊಡೆದ ಪರಿಣಾಮ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯಗಳಾಗಿವೆ. ಅಲ್ಲದೆ ಭುಜಕ್ಕೆ ಗುದ್ದಿದ ಒಳಗಾಯ, ಹಣೆಗೆ ಚರ್ಮ ಹರಿದ ಗಾಯವಾಗಿದೆ. ಕಾರು ಚಾಲಕ ಶೇಖರ ಶೇರುಗಾರ ನಿರ್ಲಕ್ಷ್ಯತನದಿಂದ ಕಾರು ಚಲಾಯಿಸಿಕೊಂಡು ಬಂದಿರುವುದು ಅಪಘಾತಕ್ಕೆ ಕಾರಣ ಎಂಬುದಾಗಿ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.