ಶ್ರೀರಾಮನ ಮಂತ್ರ ಪಠಿಸಲು ಆನ್ ಲೈನ್ ವೇದಿಕೆ ಕಲ್ಪಿಸಿದ ಡೈಲಿ ಹಂಟ್, ಜೋಶ್…
ಸಾಮೂಹಿಕವಾಗಿ ತೊಡಗಿಸಿಕೊಳ್ಳಲು ಬಳಕೆದಾರರನ್ನು ಆಹ್ವಾನಿಸಿದೆ.
Team Udayavani, Jan 22, 2024, 1:08 PM IST
ಬೆಂಗಳೂರು: ಚಿಕ್ಕ ಚಿಕ್ಕ ಶಾರ್ಟ್ ನ್ಯೂಸ್, ಟ್ರೆಂಡಿಂಗ್ಸ್ ಮತ್ತು ವೈರಲ್ ವಿಡಿಯೋ ಮೂಲಕ ಬಹುಭಾಷೆಯಲ್ಲಿ ಮಾಹಿತಿ ಒದಗಿಸುವ ಜೋಶ್ (Josh) ಮತ್ತು ಶ್ರೀರಾಮ ಮಂತ್ರ ಪಠಿಸಲು ಜೋಶ್ ಮತ್ತು ಡೈಲಿ ಹಂಟ್ ವರ್ಚುವಲ್ ಮೂಲಕ ವೇದಿಕೆ ಕಲ್ಪಿಸಿದೆ.
ವರ್ಚುವಲ್ ಪಠಣಕ್ಕಾಗಿ ಅತಿದೊಡ್ಡ ಫ್ಲ್ಯಾಟ್ ಫಾರಂಗಳಲ್ಲಿ ಒಂದಾಗಿರುವ ವೇದಿಕೆ ಶ್ರೀರಾಮನ ಮೇಲಿನ ಭಕ್ತಿಯನ್ನು ಕೇಂದ್ರೀಕರಿಸುವ ಆಧ್ಯಾತ್ಮಿಕ ಮಂತ್ರಗಳನ್ನು ಪಠಿಸಲು ಸಾಮೂಹಿಕವಾಗಿ ತೊಡಗಿಸಿಕೊಳ್ಳಲು ಬಳಕೆದಾರರನ್ನು ಆಹ್ವಾನಿಸಿದೆ.
ಜೋಶ್ ಕೊಟ್ಟಿರುವ ಲಿಂಕ್ ಕ್ಲಿಕ್ (https://share.myjosh.in/webview/ram-mandir-event) ಮಾಡಿದರೆ ಶ್ರೀರಾಮ ಚಾಂಟ್ ರೂಮ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಮೊದಲ ಹಂತದಲ್ಲಿ ನಿಮ್ಮ ಹೆಸರು ನಮೂದಿಸಬೇಕು.
ನಂತರ ನೀವು ಎಷ್ಟು ಬಾರಿ ಶ್ರೀರಾಮ ಮಂತ್ರ ಪಠಣ ಮಾಡಲು ಇಷ್ಟಪಡುತ್ತೀರಿ ಎಂದು ಆಯ್ಕೆ ಬರುತ್ತದೆ. ಅದರಲ್ಲಿ 11, 108 ಎಂಬ ಆಯ್ಕೆ ಬರುತ್ತದೆ. ಅದರಲ್ಲಿ ಒಂದನ್ನು ಆಯ್ಕೆ ಮಾಡಿದ ಬಳಿಕ ‘ಶ್ರೀರಾಮ್ ಜೈರಾಮ್ ಜೈ ಜೈ ರಾಮ್’ ಎಂಬ ಮಂತ್ರ ಪಠಣ ಆರಂಭವಾಗುತ್ತದೆ. ನೀವು ಅದನ್ನು ಅನುಸರಿಸಬೇಕಿದೆ.
ಡೈಲಿ ಹಂಟ್ ಆ್ಯಪ್ನಲ್ಲಿ ಬಳಕೆದಾರರು ಲೈವ್ ಫೀಡ್ ಮೂಲಕ ಅಯೋಧ್ಯೆ ರಾಮಮಂದಿರದ ಉದ್ಘಾಟನೆಯ ಲೈವ್-ಸ್ಟ್ರೀಮ್ ಅನುಭವವನ್ನು ಆನಂದಿಸಬಹುದು. ಆಡಿಯೋ ಅಪ್‌ಡೇಟ್‌ಗಳು, ಪಾಡ್‌ಕಾಸ್ಟ್‌ಗಳು, ರಾಮನ ಕಥೆ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವಿವಿಧ ಸಂವಾದಾತ್ಮಕ ವಿಜೆಟ್‌ಗಳನ್ನು ಅನ್ವೇಷಿಸುವ ಮೂಲಕ ಬಳಕೆದಾರರು ಈವೆಂಟ್‌ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.