Ram Mandir: ಆಧ್ಯಾತ್ಮಿಕ, ಸಾಂಸ್ಕೃತಿಕ,ಸಂಗೀತೋತ್ಸವ ನೆಲೆಯಾಗಿರುವ ರಾಮಮಂದಿರಗಳು


Team Udayavani, Jan 22, 2024, 1:41 PM IST

Ram Mandir: ಆಧ್ಯಾತ್ಮಿಕ, ಸಾಂಸ್ಕೃತಿಕ,ಸಂಗೀತೋತ್ಸವ ನೆಲೆಯಾಗಿರುವ ರಾಮಮಂದಿರಗಳು

ಹಳೆಯ ಮೈಸೂರು ಸಂಸ್ಥಾನದಲ್ಲಿ ( ಬಹುಶಃ ಬೇರೆಡೆಯೂ) ದೊಡ್ಡ ಸಣ್ಣ ಊರುಗಳಲ್ಲಿ ಎಲ್ಲಜಾತಿ ಸಮುದಾಯದವರು ತಮ್ಮ ವ್ಯಾಪ್ತಿಯಲ್ಲಿ ರಾಮಮಂದಿರಗಳನ್ನು ಮಾಡಿಕೊಂಡಿ ರುತ್ತಾರೆ.ಅಲ್ಲಿ ಶಿಲೆಯ ವಿಗ್ರಹವಾಗಲೀ ಪ್ರಾಣಪ್ರತಿಷ್ಠಾಪನೆಯಾಗಲೀ ಆಗಿರುವುದಿಲ್ಲ. ರಾಮಚಂದ್ರನ ಫೋಟೋಗೆ ಪೂಜೆ ಮಂಗಳಾರತಿ ನಡೆಯುತ್ತದೆ. ಹರಕೆ ಹೊರುವುದು, ವ್ರತ ಇತ್ಯಾದಿ ಇರುವುದಿಲ್ಲ. ಗ್ರಾಮಗಳಲ್ಲಿ ಇದೊಂದು ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಯೂ ಹೌದು.

ಚಾಮರಾಜನಗರ ಪಟ್ಟಣ ವನ್ನೇ ತೆಗೆದುಕೊಂಡರೆ, ಅಗ್ರ ಹಾರದ ಬೀದಿಯ ಪಟ್ಟಾಭಿ ರಾಮಮಂದಿರ, ಶಂಕರಪುರ ರಾಮಮಂದಿರ ಮಾತ್ರವೇ ಅಲ್ಲದೇ, ಬಣಜಿಗರ ಬೀದಿ, ಡಾ. ಅಂಬೇಡ್ಕರ್‌ ಬೀದಿ, ಕುರುಬ ಸಮಾಜದ ಬೀದಿ, ಕುಂಬಾರ ಸಮಾಜದ ಬೀದಿ ಮುಂತಾದೆಡೆ ರಾಮ ಮಂದಿ ರಗಳಿವೆ. ಹೀಗೆಯೇ ಅನೇಕ ಗ್ರಾಮಗಳಲ್ಲಿ ರಾಮ ಮಂದಿರಗಳು ಅಸ್ತಿತ್ವ ಹೊಂದಿವೆ. ಇವುಗಳಲ್ಲಿ ಕೆಲವು ಪ್ರಾಚೀನವಾದವು. ರಾಮ ಭಾರತೀಯರ ಸಾಕ್ಷಿ ಪ್ರಜ್ಞೆಯಲ್ಲಿ ಅಂತರ್ಗತ ನಾಗಿ ದ್ದಾನೆ. ಉತ್ತರ ಭಾರತ ದಲ್ಲಿ ಜನರು ಪರಸ್ಪರ ಎದುರಾದಾಗ ನಮಸ್ಕಾರವನ್ನು ರಾಮ್‌ ರಾಮ್‌ ಎಂದೇ ಹೇಳುತ್ತಾರೆ.

ರಾಮಾಯಣ ಮಹಾ ಕಾವ್ಯವೂ ಹೌದು, ಪುರಾಣ ವೂ, ಭಾರತೀಯರಿಗೆ ಗೌರವಾ ದರದ ಗ್ರಂಥವೂ ಹೌದು. ವಾಲ್ಮೀಕಿ ರಾಮಾ ಯಣ ಮೂಲ ಎನ್ನುವುದಾ ದರೆ, ಅಂದಿನಿಂದ ಇಂದಿನ ವರೆಗೂ ಅನೇಕ ಕವಿಗಳು, ಋಷಿಗಳು, ಮನೀಷಿಗಳಿಂದ ರಾಮಾಯಣಗಳು ರಚನೆ ಯಾಗುತ್ತಲೇ ಇವೆ. ಕನ್ನಡದಲ್ಲಿ ನಮ್ಮ ಕವಿಗಳು, ಹರಿದಾಸ ಪರಂಪರೆಯ ದಾಸರು ರಾಮನನ್ನು ಕುರಿತು ಎದೆ ತುಂಬಿ, ಮನತುಂಬಿ ಹಾಡಿದ್ದಾರೆ. ಈ ಎಲ್ಲ ಕಾರಣಗಳಿಂದ ಎಲ್ಲೆಲ್ಲಿಯೂ ರಾಮಮಂದಿರಗಳು ತಲೆಯೆತ್ತಿವೆ. ಶ್ರದ್ಧಾಳುಗಳು, ಸಂಗೀತ, ಸಾಹಿತ್ಯ ಪ್ರೇಮಿಗಳು, ಸಮಾಜ ಸೇವಕರು ಸೇರಿಕೊಂಡು ಸಾಮಾನ್ಯವಾಗಿ ಎಲ್ಲ ದೊಡ್ಡ ಸಣ್ಣ ಊರುಗಳಲ್ಲಿ ತಮ್ಮದೇ ರಾಮಮಂದಿರಗಳನ್ನು ನಿರ್ಮಿಸಿಕೊಂಡಿದ್ದಾರೆ. ನಮ್ಮ ಭಾಗದಲ್ಲಿ ರಾಮಮಂದಿರಗಳು ದೇವಾಲಯಗಳಿಗಿಂತ ವಿಭಿನ್ನವಾಗಿವೆ.

ಈ ರಾಮಮಂದಿರಗಳಲ್ಲಿ ಶ್ರೀರಾಮನ ಭಾವಚಿತ್ರದ ಪೂಜೆ ನಡೆಯುತ್ತದೆ. ಜೊತೆಗೆ ಆಧ್ಯಾತ್ಮಿಕ, ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳ ಪೋಷಕ ತಾಣಗಳೂ ಆಗಿವೆ. ಚಾಮರಾಜನಗರ ಪಟ್ಟಣದ ಹೃದಯ ಭಾಗದಲ್ಲೇ ಇರುವ ಪಟ್ಟಾಭಿ ರಾಮಮಂದಿರ ಪ್ರಾಚೀನವಾದುದು ಭವ್ಯ ಇತಿಹಾಸ ಹೊಂದಿರುವಂತಹದು. ಇದನ್ನು 1943 ರಲ್ಲಿ ಆರಂಭಿಸಲಾ ಯಿತೆಂದೂ ಹೇಳುತ್ತಾ ರಾದರೂ, ಅದಕ್ಕೂ ಸುಮಾರು 15-20 ವರ್ಷ ಗಳ ಮುಂಚೆ ಇದ್ದ ಬಗ್ಗೆ ದಾಖಲೆ ಇದೆ. ಶ್ರೀಕಂಠೇಶ್ವರನ ಗುಡಿ ಹಾಗೂ ಬಹಳ ವರ್ಷಗಳ ಕಾಲ ರಥದ ಬೀದಿಯ ಸಂ.ವಿ.ಕೃಷ್ಣಭಾಗ ವತರ ಮನೆಯಲ್ಲಿ ರಾಮಮಂದಿರ ಮತ್ತು ರಾಮೋತ್ಸವ ನಡೆಯುತ್ತಿದ್ದವು.

ಕೆ.ಎಸ್‌. ಅಶ್ವತ್ಥ್ ವಿದಾಯ ಘೋಷಿಸಿದ್ದು ಇಲ್ಲೇ: ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ ಕೆ.ಎಸ್‌. ಅಶ್ವತ್ಥ್ ಅವರು ಕನ್ನಡ ಚಿತ್ರರಂಗಕ್ಕೆ ವಿದಾಯ ಘೋಷಿಸಿದ್ದು ಇದೇ ರಾಮ ಮಂದಿರದ ಕಾರ್ಯಕ್ರಮದಲ್ಲಿ. ಅಂದು ವೇದಿಕೆಯಲ್ಲಿ ಪಾರ್ವತಮ್ಮ ರಾಜ್‌ ಕುಮಾರ್‌ ಸಹ ಇದ್ದರು. ತಮ್ಮ ಭಾಷಣದ ನಡುವೆ ಇನ್ನು ನಾನು ಚಿತ್ರಗಳಲ್ಲಿ ನಟಿಸು ವುದಿಲ್ಲ ಎಂದು ಅಶ್ವತ್ಥ ಘೋಷಿಸಿದರು.

ಎಪ್ಪತ್ತೈದು ವರ್ಷಗಳ ಇತಿಹಾಸದ ಚಾ.ಜನಗರ ಪಟ್ಟಾಭಿರಾಮಮಂದಿರ : ಚಾಮರಾಜನಗರ ಪಟ್ಟಣದ ಅಗ್ರಹಾರದ ಬೀದಿಯಲ್ಲಿ ಇರುವ ಪಟ್ಟಾಭಿರಾಮ ಮಂದಿರ ಪ್ರಾಚೀನವಾದುದು ಭವ್ಯ ಇತಿಹಾಸ ಹೊಂದಿರುವಂಥದು. ಇದನ್ನು 1943 ರಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಪೂಜೆಗೊಳ್ಳುತ್ತಿರುವುದು ಕೋದಂಡರಾಮ ಅಲ್ಲ, ಪ್ರಸನ್ನರಾಮ ಅಲ್ಲ, ಸೀತಾರಾಮ ಅಲ್ಲ, ಜಾನಕಿರಾಮ ಅಲ್ಲ, ಪಟ್ಟಾಭಿರಾಮ. ಪಟ್ಟಾಭಿರಾಮ ಎಂದರೆ ಪಟ್ಟಾಭಿಷೇಕಕ್ಕೆ ಕುಳಿತ ರಾಮ. ಈ ರಾಮಮಂದಿರದ ಕಲ್ಪನೆ ಮಾಡಿ, ಇದನ್ನು ಕಟ್ಟಿದ ಹಿರಿಯರು ತಮ್ಮ ಪೂಜೆಗೆ, ಪಟ್ಟಾಭಿರಾಮನನ್ನೇ ಆಯ್ಕೆ ಮಾಡಿಕೊಂಡರು. ಪಟ್ಟಾಭಿರಾಮ, ಕುಟುಂಬ ವತ್ಸ, ಆತನ ಪಕ್ಕದಲ್ಲಿ ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ಇದ್ದಾರೆ. ರಾಮನ ಪದತಲದಲ್ಲಿ ಆಂಜನೇಯ ಇದ್ದಾನೆ. ಚಾಮರಾಜನಗರದ ಪಟ್ಟಾಭಿ ರಾಮಮಂದಿರ ಕ್ಕೆ ಸ್ವಂತಕಟ್ಟಡ ಕಟ್ಟುವ ಯೋಜನೆ ರೂಪು ಗೊಂಡಿತು. ಅದಕ್ಕಾಗಿ ಹಣ ಕೂಡಿಸಲು ಆ ಕಾಲದ ಯುವಕರು ಬೆನಿಫಿಟ್‌ ನಾಟಕ ಮಾಡಿ ಹಣ ಕೂಡಿಸಲು ನಿರ್ಧರಿಸಿದರು. ದಿ.ಎ. ವಾಸುದೇವರಾವ್‌ ,ಬಿ. ಸೀನಪ್ಪ ಅವರ ನೇತೃತ್ವದಲ್ಲಿ ಪ್ರಹ್ಲಾದಚರಿತ್ರೆ, ಧ್ರುವಚರಿತ್ರೆ, ಬುದೊœàದಯ, ಕಿಸಾಗೌತಮಿ ನಾಟಕಗಳನ್ನು ಪ್ರದರ್ಶಿಸಿ ಹಣ ಸಂಗ್ರಹಿಸಲಾಯಿತು. ಹಣ ಸಾಲದೇ ಬಂದಾಗಲೂ ಮತ್ತೆ ಎರಡನೆಯ ಬಾರಿಯೂ ನಾಟಕ ಪ್ರದರ್ಶಿಸಿದರೆಂದು ತಿಳಿದು ಬಂದಿದೆ.

ಚಾಮರಾಜನಗರ, ನಂಜನಗೂಡು, ಮೈಸೂರು, ಮಾಲೂರು ಕಾಗಲವಾಡಿ, ತಿ. ನರಸೀಪುರಗಳಲ್ಲಿ ನಾಟಕಗಳನ್ನು ರಾಮಮಂದಿರ ನಿರ್ಮಿಸಲು ಪ್ರದರ್ಶಿಸಲಾಯಿತು. ಈ ಹಣದಲ್ಲಿ ಈಗಿರುವ ಕಟ್ಟಡ ನಿರ್ಮಿಸಲಾಯಿತು.

ಸಂಗೀತೋತ್ಸವ: ಈ ರಾಮಮಂದಿರದಲ್ಲಿ ರಾಮನವಮಿ ಸಂದರ್ಭದಲ್ಲಿ ಸುಮಾರು 15 ದಿವಸ ರಾಮೋತ್ಸವದ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ. ಅರುವತ್ತು ಎಪ್ಪತ್ತರ ದಶಕದಲ್ಲಿ ದಿ.ಕೃಷ್ಣಸ್ವಾಮಿ ನಂತರ ಟಿ. ನಾಗರಾಜ್‌ ಅವರ ನೇತೃತ್ವದಲ್ಲಿ ಭರಪೂರ ಸಂಗೀತೋತ್ಸವ ನಡೆಯುತ್ತಿತ್ತು. ಆ ಕಾಲದ ಕರ್ನಾಟಕದ ಶ್ರೇಷ್ಠ ಸಂಗೀತ ವಿದ್ವಾಂಸರು ಇಲ್ಲಿ ಕಚೇರಿ ನಡೆಸಿದ್ದಾರೆ. ಟಿ. ಚೌಡಯ್ಯ ,ಲಾಲಗುಡಿ ಜಯರಾಮ್‌ ಅವರಂತಹ್‌ ಕಲಾವಿದರು ಒಂದು ದಿವಸ ಅವರ ಮಟ್ಟದ ಗಾಯಕರಿಗೆ ಪಕ್ವವಾದ್ಯ ಮಾರನೆಯ ದಿವಸ ಸೋಲೋ ಕಚೇರಿ ನಡೆಸಿಕೊಡುತ್ತಿದ್ದರು.

ಹೊನ್ನಪ್ಪ ಭಾಗವತರ ಕಚೇರಿ ವೀಕ್ಷಿಸಿದ ಡಾ.ರಾಜ್‌ಕುಮಾರ್‌ : ಪಟ್ಟಾಭಿರಾಮಮಂದಿರದ ಸಂಗೀತ ಕಾರ್ಯಕ್ರಮದಲ್ಲಿ ಸಿ.ಹೊನ್ನಪ್ಪಭಾಗವತರ ಕಚೇರಿ ರಾತ್ರಿ ವೇಳೆ ನಡೆಯುತ್ತಿತ್ತು. ಬೆಂಗಳೂರಿನಿಂದ ಗಾಜನೂರಿಗೆ ಚಾಮರಾಜನಗರದ ಮಾರ್ಗ ಹೋಗುತ್ತಿದ್ದ ರಾಜ್‌ಕುಮಾರ್‌ ಅವರಿಗೆ ಈ ಕಚೇರಿ ನೋಡಬೇಕೆನಿಸಿ, ಯಾರಿಗೂ ಗೊತ್ತಾಗದಂತೆ ತಲೆ ಮೇಲೆ ಪೇಟ ಕಟ್ಟಿಕೊಂಡು, ಮುಸುಕು ಹೊದ್ದುಕೊಂಡು ನೋಡುತ್ತಿದ್ದರು. ಆ ಸಂದರ್ಭದಲ್ಲಿ ಯಾರೋ ಬೆಂಕಿ ಕಡ್ಡಿ ಗೀರಿದಾಗ ರಾಜ್‌ಕುಮಾರ್‌ ಮುಖ ಕಂಡು, ರಾಜ್‌ಕುಮಾರ್‌ ರಾಜ್‌ಕುಮಾರ್‌ ಎಂದು ಕೂಗಿಕೊಂಡರು. ಆಗ ರಾಜ್‌ಕುಮಾರ್‌ ಕಾರ್ಯಕ್ರಮ ಅಸ್ತವ್ಯಸ್ತವಾಗಬಾರದೆಂದು ಹೇಗೋ ನುಸುಳಿಕೊಂಡು ಕಾರುಹತ್ತಿದರೆಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

1-ani

Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Elephant Chasing Biker: ಆನೆ ದಾಳಿಯಿಂದ ಜಸ್ಟ್ ಎಸ್ಕೇಪ್, ಎದೆ ಜಲ್ ಎನಿಸುವ ವಿಡಿಯೋ ವೈರಲ್

Elephant Chasing Biker: ಆನೆ ದಾಳಿಯಿಂದ ಜಸ್ಟ್ ಎಸ್ಕೇಪ್, ಎದೆ ಜಲ್ ಎನಿಸುವ ವಿಡಿಯೋ ವೈರಲ್

1-cr

Coimbatore;ಕಾರ್ಮಿಕರ ಮನೆಗೆ ನುಗ್ಗಿ ಅಕ್ಕಿ ತಿಂದ ಆನೆ!: ವೈರಲ್‌ ವೀಡಿಯೋ

1-nn

America ಸಚಿವನ ನಿಂದಿಸಿದ್ದಕ್ಕೆ ಪತ್ರಕರ್ತನ ಹೊರದಬ್ಬಿದರು!

1-dog

Dog; ಪಶು ಆಸ್ಪತ್ರೆಗೇ ಮರಿ ತಂದು ಚಿಕಿತ್ಸೆ ಕೊಡಿಸಿದ ಹೆಣ್ಣು ಶ್ವಾನ!

Video: ಪತ್ನಿ, ಪ್ರಿಯಕರನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಕಾರಿನ ಬಾನೆಟ್ ಮೇಲೆ ಜಿಗಿದ ಪತಿ

Video: 5km ಬಾನೆಟ್ ಮೇಲೆ ನೇತಾಡಿ ಪತ್ನಿ, ಪ್ರಿಯಕರನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪತಿ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

crime

Padubidri: ಸ್ಕೂಟಿಗೆ ಈಚರ್‌ ವಾಹನ ಢಿಕ್ಕಿ; ಸವಾರನಿಗೆ ಗಾಯ

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.