Udayavani: ಅಪರೂಪದ ದಾಖಲೆಯ ಸಂಗ್ರಾಹ್ಯ ಸಂಚಿಕೆ
"ಉದಯವಾಣಿ"ಯ ಸೋಮವಾರದ ವಿಶೇಷ ಸಂಚಿಕೆ "ಶ್ರೀರಾಮಾವತರಣ" ಕ್ಕೆ ನಾಡಿನೆಲ್ಲೆಡೆ ಗಣ್ಯರು, ಓದುಗರಿಂದ ಶ್ಲಾಘನೆಯ ಮಹಾಪೂರ
Team Udayavani, Jan 23, 2024, 12:15 AM IST
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ “ಉದಯವಾಣಿ’ಯ ಸೋಮವಾರದ ವಿಶೇಷ ಸಂಚಿಕೆ “ಶ್ರೀರಾಮಾವತರಣ’ ಕ್ಕೆ ನಾಡಿನೆಲ್ಲೆಡೆ ಗಣ್ಯರು, ಓದುಗರಿಂದ ಶ್ಲಾಘನೆಯ ಮಹಾಪೂರವೇ ಹರಿದುಬಂದಿದೆ. ಅಯೋಧ್ಯೆ ರಾಮಜನ್ಮಭೂಮಿಗೆ ಸಂಬಂಧಿಸಿದಂತೆ ಅಪರೂಪದ ಮಾಹಿತಿಗಳನ್ನೊಳಗೊಂಡ ಸಂಗ್ರಾಹ್ಯ ಸಂಚಿಕೆ ಎಂಬ ಮೆಚ್ಚುಗೆ ಓದುಗ ವಲಯದಿಂದ ವ್ಯಕ್ತವಾಗಿದೆ. ಈ ಬಗ್ಗೆ ಆಯ್ದ ಅಭಿಪ್ರಾಯಗಳನ್ನು ಇಲ್ಲಿ ನೀಡಲಾಗಿದೆ.
ಸಂಗ್ರಹಯೋಗ್ಯ,ಮಾಹಿತಿ ಕಣಜ
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ “ಉದಯವಾಣಿ’ ಹೊರ ತಂದಿರುವ ಶ್ರೀರಾಮಾವತರಣ’ ವಿಶೇಷ ಸಂಚಿಕೆ ನಿಜಕ್ಕೂ ಸುಂದರವಾಗಿ ಮೂಡಿಬಂದಿದೆ. ಮಾಹಿತಿ ಕಣಜವನ್ನೇ ಹೊಂದಿರುವ ಇದು ಸಂಗ್ರಹಯೋಗ್ಯವಾಗಿದೆ.
ಪ್ರಹ್ಲಾದ ಜೋಶಿ, ಕೇಂದ್ರ ಸಚಿವ.
ಶ್ರೀರಾಮಾವತರಣ ಐತಿಹಾಸಿಕ ಸಂಚಿಕೆ
“ಉದಯವಾಣಿ’ ಹೊರತಂದ “ಶ್ರೀರಾಮಾವತರಣ’ ವಿಶೇಷ ಪುರವಣಿ ಶ್ರೀರಾಮನ ಚರಿತ್ರೆ ಹಾಗೂ ಮಂದಿರ ವರೆಗೂ ನಡೆದ ಹೋರಾಟವನ್ನು ಎಳೆ-ಎಳೆಯಾಗಿ ದಾಖಲಿಸಿದ್ದು, ಐತಿಹಾಸಿಕ ಸಂಚಿಕೆ ಎನ್ನುವಂತೆ ಹೊರಬಂದಿದೆ.
ಡಾ|ಉಮೇಶ ಜಾಧವ, ಸಂಸದರು-ಕಲಬುರಗಿ
ಸಂಚಿಕೆ ಸೊಗಸಾಗಿದೆ
“ಉದಯವಾಣಿ’ ಪತ್ರಿಕೆ ಹೊರತಂದ “ಶ್ರೀ ರಾಮಾವತರಣ’ ಸಂಚಿಕೆ ಸೊಗಸಾಗಿದೆ. ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಸಂಭ್ರಮ ಇಮ್ಮಡಿಗೊಳಿಸುವುದರಲ್ಲಿ “ಉದಯವಾಣಿ’ ರಾಮಭಕ್ತರ ನಾಡಿಮಿಡಿತ ಅರಿತಿದೆ. ವಿಶಿಷ್ಟ ಸಂಚಿಕೆ ಅತ್ಯಂತ ಸುಂದರವಾಗಿ ರೂಪುಗೊಂಡಿದೆ.
ಶರಣಗೌಡ ಕಂದಕೂರ, ಗುರುಮಠಕಲ್ ಶಾಸಕ
ಭರ್ಜರಿ ಔತಣ
ಮುಂಜಾನೆ ಉದಯವಾಣಿಯ ಶ್ರೀ ರಾಮಾವತರಣ ಎಂಬ ವಿಶೇಷ ಪುರವಣಿಯನ್ನು ಖುದ್ದಾಗಿ ನಾನೇ ಬಿಡುಗಡೆಗೊಳಿಸಿ, ನಂತರ ಓದಿದೆ. ಪುಟಗಳು ವಿಷಯಗಳ ಭರ್ಜರಿ ಔತಣವಾಗಿದೆ. ಸಂಗ್ರಹಕ್ಕೆ ಯೋಗ್ಯ ಸಂಚಿಕೆ ನೀಡಿದ ಉದಯವಾಣಿ ಬಳಗಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.
ಟಿ.ಎಸ್.ಶ್ರೀವತ್ಸ, ಶಾಸಕರು ಕೃಷ್ಣರಾಜ ಕ್ಷೇತ್ರ
ಕನ್ನಡಿಗರು ಮರೆಯದಂತಹ ಸಂಚಿಕೆ
ಅಯೋಧ್ಯೆ, ಶ್ರೀರಾಮ ಮತ್ತು ರಾಮಾಯಣ ಈ ದೇಶದ ಆಸ್ಮಿತೆ. ಮಂದಿರ ಉದ್ಘಾಟನೆ ಸಂದರ್ಭ “ಉದಯವಾಣಿ’ ಶ್ರೀರಾಮಚಂದ್ರನ ಸಮಸ್ತ ಮಾಹಿತಿಯನ್ನು ನೀಡುವ ಮೂಲಕ ಕನ್ನಡಿಗರು ಮರೆಯದಂತಹ ಸಂಚಿಕೆ ಹೊರತಂದಿದೆ.
ಪರಣ್ಣ ಮುನವಳ್ಳಿ, ಮಾಜಿ ಶಾಸಕರು
ಉದಯವಾಣಿಗೆ ಧನ್ಯವಾದಗಳು
ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಾಗೂ ಭವ್ಯ ಮಂದಿರದ ಸಂಪೂರ್ಣ ಮಾಹಿತಿಯನ್ನು ಒದಗಿಸಿದ ಉದಯವಾಣಿಗೆ ಧನ್ಯವಾದಗಳು. ವಿವಿಧ ಲೇಖನಗಳು, ಮಂದಿರ ಹೋರಾಟದ ಇತಿಹಾಸ “ಶ್ರೀರಾಮಾ ವತರಣ’ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದ್ದು, ಸಂತಸ ತಂದಿದೆ.
ಬಾಲಚಂದ್ರ ಜಾರಕಿಹೊಳಿ, ಶಾಸಕರು, ಅರಭಾವಿ
ಸಮಗ್ರ ಮಾಹಿತಿ ಮೂಡಿಬಂದಿದೆ
“ಶ್ರೀರಾಮಾವತರಣ’ ಸಂಚಿಕೆಯನ್ನು ಅಕ್ಷರ ಮತ್ತು ಫೋಟೋಗಳ ಮೂಲಕ ಸಂಗ್ರಹ ಯೋಗ್ಯವಾಗುವಂತೆ ರೂಪಿಸಲಾಗಿದೆ. ಅತ್ಯುತ್ತಮ ವಾಗಿ ಸಮಗ್ರ ಮಾಹಿತಿ ಮೂಡಿಬಂದಿದೆ. ಅಯೋಧ್ಯೆ ಹಾಗೂ ಪ್ರಭು ಶ್ರೀರಾಮಚಂದ್ರನ ಇತಿಹಾಸದ ಪ್ರತಿ ಮಗ್ಗುಲನ್ನು ನಿಖರವಾಗಿ ದಾಖಲಿಸಲಾಗಿದೆ.
ಗಾಲಿ ಜನಾರ್ದನ ರೆಡ್ಡಿ , ಗಂಗಾವತಿ ಶಾಸಕರು
ಸಂಚಿಕೆ ನೋಡಿ ಖುಷಿಯಾಯಿತು
ಉದಯವಾಣಿ ವಿಶೇಷ ಸಂಚಿಕೆ ನೋಡಿ ಖುಷಿಯಾಯಿತು. ಒಂದು ವಾರದಿಂದ ಆಯೋಧ್ಯೆ ವಿಷಯವಾಗಿ ಟಿವಿಯಲ್ಲಿ ನೋಡಿದರೂ ಅನೇಕ ಸಂಗತಿಗಳು ನಮಗೆ ತಿಳಿದಿರಲಿಲ್ಲ. ಆದರೆ ಉದಯವಾಣಿ ಸಾಕಷ್ಟು ಮಾಹಿತಿ ನೀಡಿದೆ.
ಸಿ.ಎನ್.ಬಾಲಕೃಷ್ಣ, ಶಾಸಕರು ಶ್ರವಣಬೆಳಗೊಳ
ಶ್ಲಾಘನೀಯ ಕಾರ್ಯ
ರಾಮಾಯಣ ಕಾವ್ಯ ಕಾಲಾತೀತ, ದೇಶಾತೀತ, ಭಾಷಾತೀತ, ಸಾರ್ವಕಾಲಿಕ. ಆದುದರಿಂದ ಮಣ್ಣಿನ ಎರಡು ಕಣ್ಣುಗಳಾದ ರಾಮ ಹಾಗೂ ಕೃಷ್ಣರ ದೈವಿಕ ಮೂರ್ತಿಗಳನ್ನು ಜನಮಾನಸದಲ್ಲಿ ಪ್ರತಿಷ್ಠಾಪಿಸುವ ಅತ್ಯುನ್ನತ ಕೆಲಸವನ್ನು ಉದಯವಾಣಿ ಮಾಡುತ್ತಿರುವುದು ಶ್ಲಾಘನೀಯ.
ಡಾ| ಕಾತ್ಯಾಯಿನಿ ಕುಂಜಿಬೆಟ್ಟು, ಸಾಹಿತಿ ಉಡುಪಿ
ಮೇಲ್ಪಂಕ್ತಿ ಹಾಕಿಕೊಟ್ಟ ಉದಯವಾಣಿ
ಉದಯವಾಣಿಯ “ಶ್ರೀರಾಮಾವತರಣ’ ವಿಶಿಷ್ಟ ಪುಟಗಳ ವಿಶೇಷ ಸಂಚಿಕೆ ಮೌಲ್ಯಯುತವಾಗಿದ್ದು, ಓದುಗರಿಗೆ ಬಹುದೊಡ್ಡ ಕೊಡುಗೆಯಾಗಿದೆ. ರಾಮ ಮಂದಿರದ ಸವಿನೆನಪು ಸುದೀರ್ಘ ಕಾಲದವರೆಗೆ ಇರುವ ಹಿನ್ನೆಲೆಯಲ್ಲಿ ಅದರ ಕುರಿತಾದ ಸಂಗತಿಗಳು ಕೂಡ ನಮ್ಮೊಡನೆ ಇರಬೇಕು. ಈ ನಿಟ್ಟಿನಲ್ಲಿ ಭವಿಷ್ಯದ ದಿನಗಳಿಗೆ ಬೆಳಕಾಗಬಲ್ಲ ಸಂಚಿಕೆಯನ್ನು ಉದಯವಾಣಿ ಪ್ರಕಟಿಸಿದೆ. ವಿಶೇಷವೆಂದರೆ, ಕಳೆದ ಹಲವು ವಾರ ಗಳಿಂದ ರಾಮ ಮಂದಿರದ ಕುರಿತ ವಿಸ್ತೃತ ವರದಿಯನ್ನು ಮಾಡುವ ಮೂಲಕ ಉದಯವಾಣಿ ಮೇಲ್ಪಂಕ್ತಿ ಯನ್ನು ಹಾಕಿಕೊಟ್ಟಿದೆ. ಈ ಎಲ್ಲ ಬರಹಗಳು ಹೊಸ ಪುಸ್ತಕದ ರೂಪದೊಂದಿಗೆ ಮೂಡಿಬರಲಿ.
ಡಾ.ಎಂ. ಪ್ರಭಾಕರ ಜೋಶಿ, ತಾಳಮದ್ದಲೆ ಅರ್ಥಧಾರಿ, ಯಕ್ಷ ವಿದ್ವಾಂಸ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.