Jai Hanuman: ʼಹನುಮಾನ್ʼ ಹಿಟ್ ಬೆನ್ನಲ್ಲೇ ಸೀಕ್ವೆಲ್ ಘೋಷಿಸಿದ ಪ್ರಶಾಂತ್ ವರ್ಮಾ
Team Udayavani, Jan 23, 2024, 11:57 AM IST
ಹೈದರಾಬಾದ್: ʼಹನುಮಾನ್ʼ ಮೂಲಕ ನಿರ್ದೇಶಕ ಪ್ರಶಾಂತ್ ವರ್ಮಾ ಪ್ರೇಕ್ಷಕರ ಮನಗೆದ್ದಿದ್ದಾರೆ. ಸೂಪರ್ ಹೀರೋ ಕಥೆಯಯಾದ ʼಹನುಮಾನ್ʼ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡಿದೆ.
ತೇಜ ಸಜ್ಜಾ ಅಭಿನಯದ ಮೂಲಕ ʼಹನುಮಾನ್ʼ ನಲ್ಲಿ ಮಿಂಚಿದ್ದಾರೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಮಹೇಶ್ ಬಾಬು ಅವರ ʼಗುಂಟೂರು ಖಾರಂʼ ಸಿನಿಮಾದೊಂದಿಗೆ ಬಿಡುಗಡೆಯಾದ ʼಹನುಮಾನ್ʼ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಅದರ ಜೊತೆಗೆ ಸಿನಿಮಾದ ಕಥೆ ಹಾಗೂ ವಿಎಫ್ ಎಕ್ಸ್ ಕೂಡ ಮೆಚ್ಚುಗೆ ಪಡೆದುಕೊಂಡಿದೆ.
ʼಹನುಮಾನ್ʼ ಹಿಟ್ ಆದ ಖುಷಿಯಲ್ಲೇ ನಿರ್ದೇಶಕ ಪ್ರಶಾಂತ್ ವರ್ಮಾ ಸಿನಿಮಾದ ಸೀಕ್ವೆಲ್ ಅನೌನ್ಸ್ ಮಾಡಿದ್ದಾರೆ. ಎರಡನೇ ಭಾಗಕ್ಕೆ ʼಜೈ ಹನುಮಾನ್ʼ ಎಂದು ಟೈಟಲ್ ಇಡಲಾಗಿದ್ದು, ಪ್ರಾಣ ಪ್ರತಿಷ್ಠಾಪನೆಯ ದಿನ ಹನುಮಂತ ದೇವರ ಮುಂದೆ ಸಿನಿಮಾದ ಸ್ಕ್ರಿಪ್ಟ್ ಇಟ್ಟು ಪೂಜೆ ಮಾಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
“ಪ್ರಪಂಚದಾದ್ಯಂತದ ಪ್ರೇಕ್ಷಕರಿಂದ ಹನುಮಾನ್ ಮೇಲೆ ಅಪಾರ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞತೆಯೊಂದಿಗೆ, ನಾನು ನನಗೆ ಭರವಸೆ ನೀಡುವ ಮೂಲಕ ಹೊಸ ಪ್ರಯಾಣದ ಹೊಸ್ತಿಲಲ್ಲಿ ನಿಂತಿದ್ದೇನೆ! ರಾಮಮಂದಿರ ಪ್ರಾಣ ಪ್ರತಿಷ್ಠೆಯ ಶುಭ ದಿನದಂದು ʼಜೈ ಹನುಮಾನ್ʼ ಪ್ರಿ-ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗುತ್ತವೆ” ಎಂದು ಎಕ್ಸ್ ನಲ್ಲಿ ಪ್ರಶಾಂತ್ ವರ್ಮಾ ಬರೆದುಕೊಂಡಿದ್ದಾರೆ.
ಈ ಚಿತ್ರದಲ್ಲಿ ತೇಜ ಸಜ್ಜಾ ನಟಿಸಲಿದ್ದಾರೆ. ಆದರೆ ಯಾರು ಹನುಮಂತನ ಪಾತ್ರವನ್ನು ನಿರ್ವಹಿಸುತ್ತಾರೆ ಮತ್ತು ಶ್ರೀರಾಮನ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎನ್ನುವುದರ ಬಗೆಗಿನ ಕುತೂಹಲ ಕುತೂಹಲವಾಗಿಯೇ ಉಳಿದಿದೆ.
ಈ ಸಿನಿಮಾ ಮಾತ್ರವಲ್ಲದೆ, ಪ್ರಶಾಂತ್ ವರ್ಮಾ ಈಗಾಗಲೇ ಮತ್ತೊಂದು ಸೂಪರ್ ಹೀರೋ ʼ ಅಧಿರಾʼ ಎನ್ನುವ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಪ್ರತಿ ಸಂಕ್ರಾಂತಿ ಹಬ್ಬದಂದು ಒಂದು ಸೂಪರ್ ಹೀರೋ ಸಿನಿಮಾ ತೆರೆಗೆ ತರುವ ಯೋಜನೆಯಿದೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಪ್ರಶಾಂತ್ ವರ್ಮಾ ಹೇಳಿದ್ದರು.
With gratitude for the immense love and support showered upon #HanuMan from audiences across the globe, I stand at the threshold of a new journey by making a promise to myself! #JaiHanuman Pre-Production Begins on the auspicious day of #RamMandirPranPrathistha 🙏@ThePVCU pic.twitter.com/wcexuH6KFH
— Prasanth Varma (@PrasanthVarma) January 22, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
Tulu cinema; ಕೋಸ್ಟಲ್‌ನಲ್ಲೀಗ ಸಿನೆಮಾ ಹಂಗಾಮಾ!
SSMB29: ರಾಜಮೌಳಿ – ಮಹೇಶ್ ಬಾಬು ಸಿನಿಮಾದ ಲೀಡ್ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?
Video: ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಗೆ ಆಗ್ರಹ; ಆತ್ಮಹತ್ಯೆ ಯತ್ನಿಸಿದ ಅಭಿಮಾನಿ
MUST WATCH
ಹೊಸ ಸೇರ್ಪಡೆ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.