UV Fusion: ಮೊದಲ ಗೆಲುವಿನ ಖುಷಿ

Team Udayavani, Jan 23, 2024, 3:06 PM IST

8-uv-fusion

ಅದು ನನಗೆ ದೊರೆತ ಮೊದಲ ಗೆಲುವು. ಮುಂದೆ ಏರಬೇಕಾಗಿರುವ ಎತ್ತರದ ಮೊದಲ ಮೆಟ್ಟಿಲದು. ಅಲ್ಲಿಯವರೆಗೂ ಆನಂದ ಭಾಷ್ಪದ ಬಗ್ಗೆ ಕೇಳಿದ್ದಷ್ಟೇ. ಆದರೆ ಅಂದೇ ಮೊದಲ ಬಾರಿಗೆ ನನಗೆ ಅನುಭವವಾಗಿದ್ದು.

ಅಂದು ಮೊಬೈಲ್‌ ಫೋಟೋಗ್ರಾಫಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದೆ. ವೇದಿಕೆಯಲ್ಲಿ ನನ್ನ ಹೆಸರನ್ನು ಘೋಷಿಸುತ್ತಿದ್ದಂತೆ ನನಗಾದ ಅನುಭವ ಈಗಲೂ ರೋಮಾಂಚನ ತರುತ್ತದೆ. ಆ ಸಂತಸ ಹೇಳತೀರದು. ಆ ಚಪ್ಪಾಳೆಯ ಸದ್ದಿನ ಮದ್ಯೆ ಬಹುಮಾನ ಪಡೆಯಲು ಓಡಿ ಹೋದದ್ದು, ಅದನ್ನು ಸೆರೆಹಿಡಿಯಲು ಕೆಮರಾ ಕಣ್ಣುಗಳು ನನ್ನತ್ತ ತಿರುಗಿದ್ದು ಎಲ್ಲವೂ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತೆ ಇದೆ.

ವಿಜಯಪುರದ ಮಹಿಳಾ ವಿವಿಯಲ್ಲಿ ಮಾಧ್ಯಮ ವಿದ್ಯಾರ್ಥಿನಿಯಾದ ನನಗೆ ಮೈಸೂರಿನಲ್ಲಿ ನಡೆದ ಜರ್ನೋತ್ರಿ ಮಾಧ್ಯಮ ಹಬ್ಬ – 2023ರಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿಬಂದಿತ್ತು. ಅಂದು ನಾನು ಎರಡು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ. ಕ್ಲಾಸ್‌ನಲ್ಲಿ ಏರು ಧ್ವನಿಯಲ್ಲಿ ಟೀಚರ್‌ ಕೇಳ್ಳೋ ಪ್ರಶ್ನೆಗಳಿಗೆ ಉತ್ತರ ನೀಡಲು ತಡಬಡಿಸುವ ನನಗೆ, ಧೈರ್ಯ ತುಂಬಿ ಹತ್ತಾರು ಜನರ ಮಧ್ಯೆ ನಡೆಯುವ ಚರ್ಚಾ ಸ್ಪರ್ಧೆಗೆ ಇಳಿಸಿದ್ದರು. ವೇದಿಕೆ ಹತ್ತಿದ ನನ್ನ ಪಾಡು ನಾಯಿ ಪಡು. ಏನೋ ಹೇಳಲು ಹೊರಟು ಇನ್ನೇನೋ ಹೇಳಿ ತಡಬಡಿಸುತ್ತ ಅರ್ಧದಲ್ಲಿಯೇ ವೇದಿಕೆ ಬಿಟ್ಟು ಕೆಳಗಿಳಿದೆ.

ಇನ್ನು ಉಳಿದಿದ್ದು ನನಗೆ ಅರಿವಿಲ್ಲದೆ ನನ್ನೊಳಗಿರುವ ಫೋಟೋಗ್ರಫಿ ಕಲೆ. ಈ ಸ್ಪರ್ಧೆಗೆ ಹೆಸರು ನೀಡಿದ್ದೆ ಒಂದು ವಿಚಿತ್ರ. ಅಂದು ಬಸ್‌ಗಾಗಿ ಬಸ್‌ಸ್ಟಾಂಡ್‌ ಕಾಯುತ್ತಾ ನಿಂತಿದ್ದೆ. ಕೇಸರಿನಲ್ಲಿರುವ ನಗುಮೊಗದ ಹೂವೊಂದನ್ನು ಕಂಡ ನನಗೆ ಅದನ್ನು ಮೊಬೈಲ್‌ ಕೆಮರಾ ಕಣ್ಣಿನಲ್ಲಿ ಸೆರೆಹಿಡಿಯುವ ಮನಸ್ಸಾಯಿತು. ಅದನ್ನು ನೋಡಿದ ನನ್ನ ಸಂಗಡಿಗರು, ಎನಿದು ಹುಚ್ಚಾಟ, ಇಷ್ಟೆಲ್ಲಾ ಫೋಟೋ ಹುಚ್ಚು ಇರಬಾರದು ಎಂದೆಲ್ಲಾ ಹೇಳುತ್ತಿರುವುದನ್ನು ಕೇಳಿ ಕೊಂಚ ಸಂಕೋಚಗೊಂಡಿದ್ದರೂ, ನಾನು ತೆಗೆದ ಫೋಟೋ ನೋಡಿ ಅರೇ! ಫೋಟೋ ಎಷ್ಟು ಚನ್ನಾಗಿದೆ ಎಂದಿದ್ದರು. ಇದಾದ ಸುಮಾರು ಒಂದು ತಿಂಗಳ ಬಳಿಕ ಮೈಸೂರಿನಲ್ಲಿ ಜರ್ನೋತ್ರಿ ಮಾಧ್ಯಮ ಹಬ್ಬ ನಡಿಯುತ್ತಿದೆ, ಅದರಲ್ಲಿ ನಾವೂ ಭಾಗವಹಿಸಲಿದ್ದೇವೆ ಎಂಬ ವಿಷಯ ತಿಳಿಯಿತು. ಅಲ್ಲಿ ಕೆಮರಾ ಹಾಗೂ ಮೊಬೈಲ್‌ ಫೋಟೋಗ್ರಾಫಿ ಎಂಬ ಎರಡು ಸ್ಪರ್ಧೆಗಳಿದ್ದವು. ಮೊಬೈಲ್‌ ಫೋಟೋಗ್ರಾಫಿ ಯಾರು ಮಾಡುವಿರಿ ಎನ್ನುವ ಅಧ್ಯಾಪಕರ ಪ್ರಶ್ನೆಗೆ ನನ್ನ ಸೀನಿಯರ್‌ ಒಬ್ಬರು ನನ್ನ ಹೆಸರನ್ನು ಸೂಚಿಸಿದರು. ಆಗುವುದಿಲ್ಲ ಅಂದರೆ ಸರಿಯಲ್ಲ ಎಂದು ಒಂದು ಪ್ರಯತ್ನ ಮಾಡೋಣ ಅಂತ ಒಪ್ಪಿಕೊಂಡೆ.

ಈ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಬರುತ್ತದೆ ಎಂದು ನಾನು ಕನಸ್ಸಿನಲ್ಲೂ ಯೋಚಿಸಿರಲಿಲ್ಲ. ಎಡನೆಯ ಅಥವಾ ಮೂರನೇ ಸ್ಥಾನ ಸಿಕ್ಕರೆ ಸಾಕು ಎಂದು ಅಂದುಕೊಂಡಿದ್ದ ನನಗೆ ಮೊದಲ ಬಹುಮಾನ ಬಂದಿದ್ದು ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ.

-ಲಕ್ಷ್ಮೀ ಶಿವಣ್ಣ

ಮಹಿಳಾ ವಿವಿ ವಿಜಯಪುರ

ಟಾಪ್ ನ್ಯೂಸ್

Brics Summit 2024:ಬ್ರಿಕ್ಸ್ ಸಮಾವೇಶಕ್ಕೆ ಮುನ್ನುಡಿ ಬರೆದ ಭಾರತ -ಚೀನಾ ಸಂಘರ್ಷ ಶಮನ

Brics Summit 2024:ಬ್ರಿಕ್ಸ್ ಸಮಾವೇಶಕ್ಕೆ ಮುನ್ನುಡಿ ಬರೆದ ಭಾರತ -ಚೀನಾ ಸಂಘರ್ಷ ಶಮನ

Sandalwood: ತಾತ್ಕಾಲಿಕ ಪಯಣದತ್ತ ಸೂಚನ್‌

Sandalwood: ತಾತ್ಕಾಲಿಕ ಪಯಣದತ್ತ ಸೂಚನ್‌

Uttara Pradesh:ಸಿಎಂ ಯೋಗಿ ಸರ್ಕಾರದ ಬುಲ್ಡೋಜರ್‌ ಕ್ರಮಕ್ಕೆ ಸುಪ್ರೀಂ ತಡೆ, ನಾಳೆ ವಿಚಾರಣೆ

Uttara Pradesh:ಸಿಎಂ ಯೋಗಿ ಸರ್ಕಾರದ ಬುಲ್ಡೋಜರ್‌ ಕ್ರಮಕ್ಕೆ ಸುಪ್ರೀಂ ತಡೆ, ನಾಳೆ ವಿಚಾರಣೆ

77

Tollywood: ‘ಪುಷ್ಪ-2ʼ ಐಟಂ ಸಾಂಗ್‌ನಲ್ಲಿ ಸೊಂಟ ಬಳುಕಿಸಲಿದ್ದಾರೆ ʼಸ್ತ್ರೀ-2ʼ ನಟಿ

Kollegala: ಬೆಂಗಳೂರಿನಿಂದ ತಮಿಳುನಾಡಿಗೆ ತಿಮಿಂಗಿಲದ ವಾಂತಿ ಸಾಗಾಟ… ಇಬ್ಬರ ಬಂಧನ

Kollegala: ಬೆಂಗಳೂರಿನಿಂದ ತಮಿಳುನಾಡಿಗೆ ತಿಮಿಂಗಿಲದ ವಾಂತಿ ಸಾಗಾಟ… ಇಬ್ಬರ ಬಂಧನ

Udupi: ಕತ್ತು ಸೀಳಿ ಸ್ನೇಹಿತನನ್ನೇ ಹತ್ಯೆಗೈದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ

Udupi: ಕತ್ತು ಸೀಳಿ ಸ್ನೇಹಿತನನ್ನೇ ಹತ್ಯೆಗೈದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ

Madhya Pradesh: ಕಾರ್ಖಾನೆಯಲ್ಲಿ ಸ್ಫೋಟ… 10 ಮಂದಿ ಗಂಭೀರ, ಹಲವರು ಸಿಲುಕಿರುವ ಶಂಕೆ

Madhya Pradesh: ಕಾರ್ಖಾನೆಯಲ್ಲಿ ಸ್ಫೋಟ… 10 ಮಂದಿ ಗಂಭೀರ, ಹಲವರು ಸಿಲುಕಿರುವ ಶಂಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-uv-fusion

Life: ಬಯಸಿದಂತೆಲ್ಲಾ ಇರುವುದಿಲ್ಲ ಬದುಕು

7-uv-fusion

UV Fusion: ಋಣವನ್ನು ಎಂದಿಗೂ ಮರೆಯದಿರೋಣ

6-uv-fusion

UV Fusion: ಸಹವಾಸ ದೋಷ

5-uv-fusion

UV Fusion: ಬೆಳವಣಿಗೆ ಯಾವುದು?

4-uv-fusion

Women: ಹೆಣ್ಣು ಹೊರೆಯಲ್ಲ ಶಕ್ತಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

3

Mangaluru: ಮೂಕ ಪ್ರಾಣಿಗಳ ಪ್ರಾಣ ಹಿಂಡುವ ಪ್ಲಾಸ್ಟಿಕ್‌!

2(2)

Vitla ಸಂಪರ್ಕದ ರಾಜ್ಯ, ಅಂತಾರಾಜ್ಯ ರಸ್ತೆಗಳಲ್ಲೆಲ್ಲ ಹೊಂಡ

Brics Summit 2024:ಬ್ರಿಕ್ಸ್ ಸಮಾವೇಶಕ್ಕೆ ಮುನ್ನುಡಿ ಬರೆದ ಭಾರತ -ಚೀನಾ ಸಂಘರ್ಷ ಶಮನ

Brics Summit 2024:ಬ್ರಿಕ್ಸ್ ಸಮಾವೇಶಕ್ಕೆ ಮುನ್ನುಡಿ ಬರೆದ ಭಾರತ -ಚೀನಾ ಸಂಘರ್ಷ ಶಮನ

Sandalwood: ತಾತ್ಕಾಲಿಕ ಪಯಣದತ್ತ ಸೂಚನ್‌

Sandalwood: ತಾತ್ಕಾಲಿಕ ಪಯಣದತ್ತ ಸೂಚನ್‌

Uttara Pradesh:ಸಿಎಂ ಯೋಗಿ ಸರ್ಕಾರದ ಬುಲ್ಡೋಜರ್‌ ಕ್ರಮಕ್ಕೆ ಸುಪ್ರೀಂ ತಡೆ, ನಾಳೆ ವಿಚಾರಣೆ

Uttara Pradesh:ಸಿಎಂ ಯೋಗಿ ಸರ್ಕಾರದ ಬುಲ್ಡೋಜರ್‌ ಕ್ರಮಕ್ಕೆ ಸುಪ್ರೀಂ ತಡೆ, ನಾಳೆ ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.