UV Fusion: ಸಂಸ್ಕೃತಿ ಸಂಭ್ರಮ: ಮಾಯವಾಗುತ್ತಿದೆ ಗರತಿಯ ಹಾಡು


Team Udayavani, Jan 23, 2024, 3:20 PM IST

10-uv-fusion

ಭಾರತ ಕಲೆ, ಸಂಸ್ಕೃತಿಯ ತವರೂರು. ಅನೇಕತೆಯಲ್ಲಿ ಏಕತೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ರಾಷ್ಟ. ವಿವಿಧ ಸಂಸ್ಕೃತಿ, ಭಾಷೆ, ಧರ್ಮ, ವೇಷ-ಭೂಷಣ ಮತ್ತು ಜಾನಪದ ಶೈಲಿ, ಜೀವನ-ಕಸುಬು ಹೀಗೆ ವೈವಿಧ್ಯಮಯ ಮತ್ತು ವೈಶಿಷ್ಯಪೂರ್ಣ ಸಮೃದ್ಧ ಪವಿತ್ರ ಭೂಮಿ ನಮ್ಮದು.

ಅದರಲ್ಲಿ ವಿಶೇಷವಾಗಿ ಭವ್ಯ ಪರಂಪರೆ, ಇತಿಹಾಸ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನೆಲೆಯನ್ನು ಹೊಂದಿದ ನಮ್ಮ ಕರ್ನಾಟಕದಲ್ಲಿ ಸೋಬಾನ ಪದ, ಲಾಲಿ ಹಾಡು, ಬೀಸುವ ಕಲ್ಲಿನ ಪದ, ಹಂತಿ ಪದ, ಗೀಗಿ ಪದ, ಮದುವೆ, ಸೀಮಂತ ಮತ್ತು ತೊಟ್ಟಿಲು ಕಾರ್ಯಕ್ರಮದಲ್ಲಿ ಹಾಡುವ ಅನೇಕ ಗರತಿಯ ಹಾಡುಗಳು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ.

ಗರತಿಯ ಹಾಡುಗಳು ನಮ್ಮ ನಾಡಿನ ಹೆಣ್ಣು ಮಕ್ಕಳ ಹೃದಯದ ಪಡಿಗನ್ನಡಿ ಇದ್ದಂತೆ. ಅದರಲ್ಲಿ ತಾಯಿ-ಮಗಳ, ಅಣ್ಣ-ತಮ್ಮಂದಿರ ನಡುವಿನ ಮಮತೆಯ ಮಾಧುರ್ಯ, ಗಂಡ-ಹೆಡಿರ ಸರಸ-ವಿರಸ ಮತ್ತು ಪ್ರೇಮ ಸತ್ವವು ಹಾಗೂ ಹೆಣ್ಣಿನ ತ್ಯಾಗ-ಬುದ್ಧಿಯು ತುಂಬಿ ತುಳುಕುತ್ತಿರುತ್ತದೆ. ಕೌಟುಂಬಿಕ ರಸವು ಪರಿಪಾಕಗೊಂಡಿರುತ್ತದೆ. ಗರತಿಯ ಹಾಡುಗಳು ಹೆಣ್ಣಿನ ಜೀವನ ಜೀವಾಳವಾಗಿದೆ.

ಯಾವುದೋ ಕಾಲದಿಂದ ಒಬ್ಬರಿಂದೊಬ್ಬರ ಬಾಯಿಯಿಂದ ಬಾಯಿಗೆ ಪಸರುತ್ತಾ ಬಂದಿರುವ ಈ ಗರತಿಯ ಹಾಡುಗಳು ಇಂದಿನ ಪಾಶ್ಚಾತ್ಯ ಸಂಸ್ಕೃತಿ, ಸಮೂಹ ಮಾಧ್ಯಮಗಳು, ಟಿವಿ, ಮೋಬೈಲ್‌, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಮಾಯವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಹೆಣ್ಣು ಸಂಸ್ಕೃತಿಯ ಪ್ರತಿಬಿಂಬ.

ಆಕೆ ಮದುವೆಯಾದ ಅನಂತರ ತವರುಮನೆ, ಗಂಡನ ಮನೆಯಲ್ಲಿ ಹೇಗೆ ಸಂಸಾರ ಮಾಡಬೇಕೆಂಬ ಬಗ್ಗೆ ಹಾಡುಗಳ ಮೂಲಕ ಕಿವಿಮಾತು ಹೇಳುತ್ತಾ, ಆಕೆಗಿರುವ ಸ್ಥಾನಮನ, ಗೌರವಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಗರತಿಯ ಹಾಡುಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. ಈ ಮೂಲಕ ಸ್ತ್ರೀ ಸಮಾಜದಲ್ಲಿ ಹೇಗೆ ಬಾಳಿ ಬದುಕಬೇಕೆಂಬ ಸೂಕ್ಷ್ಮವಿಷಯಗಳನ್ನು ವಿವರಿಸಿ ಸ್ತ್ರೀಗೆ ಗೌರವಯುತ ಜೀವನ-ಸಂಸಾರ ನಡೆಸಿ ಸಮಾಜದ ಕಟ್ಟಳೆಗಳನ್ನು ಮನವರಿಕೆ ಮಾಡಲಾಗುತ್ತಿತ್ತು.

ಹಾಲುಂಡ ತರೀಗಿ ಏನೆಂದ ಹಾಡಲೆ

ಹೊಳೆದಂಡೆಯಲಿರುವ ಕರಕೀಯ

ಕುಡಿಯಂಗ ಹಬ್ಬಲಿ ಅವರ ರಸಬಳ್ಳಿ

ಎಂಬ ಸಾಲುಗಳಿಂದ ತವರುಮನೆಯ ಎಲ್ಲ ಕುಟುಂಬದ ಸದಸ್ಯರು ಸಂತೋಷದಿಂದಿರಲಿ. ಅದರ ಕೀರ್ತಿಯು ವ್ಯಾಪಕವಾಗಿ ಬಳ್ಳಿಯಂತೆ ಹಬ್ಬಲೆಂದು ಒಳ್ಳೆಯ ಬಯಕೆಯನ್ನು ನಾವು ತಿಳಿದುಕೊಳ್ಳಬಹುದು.

ಅತ್ತೀಯ ಮನಿಯಾಗ ಮುತ್ತಾಗಿ ಇರಬೇಕ

ಹೊತ್ತ ನೀಡಿದರ ಉಣಬೇಕ

ತವರೂರ ಉತ್ತಮರ ಹೆಸರ ತರಬೇಕ

ಎಂಬ ಮೇಲಿನ ಸಾಲುಗಳಿಂದ ತಾಯಿಯಾದವಳು ಮದುವೆಯಾಗಿ ಗಂಡನ ಮನೆ ಸೇರುತ್ತಿರುವ ತನ್ನ ಮಗಳಿಗೆ ಗಂಡನ ಮನೆಯಲ್ಲಿ ಗುರು-ಹಿರಿಯರಿಗೆ ಗೌರವ ನೀಡುವುದು, ಅತ್ತೆ-ಮಾವ ಮತ್ತು ಮನೆಯವರೊಂದಿಗೆ ಹೇಗೆ ನಡೆದುಕೊಳ್ಳಬೇಕು. ಗಂಡನ ಮನೆಯ ಕುಟುಂಬದ ಸದಸ್ಯರೆಲ್ಲರ ಪ್ರೀತಿಗೆ ಪಾತ್ರರಾಗಿ, ತಂದೆ-ತಾಯಿ, ತವರುಮನೆಯ ಹೆಸರು ತರಬೇಕೆಂಬ ಕಿವಿಮಾತು ಹೇಳುತ್ತಿದ್ದಳು. ಹೀಗಾಗಿ ತನ್ನ ಯಾವುದೇ ತಪ್ಪುಗಳನ್ನು ಮಾಡಿದರೆ ಆಕೆ ಗರತಿಯ ಹಾಡುಗಳ ಮೂಲಕ ಬುದ್ಧಿವಾದವನ್ನು ಹೇಳುತ್ತಾ ತನ್ನ ಗಂಡನ ವ್ಯಕ್ತಿತ್ವ ಹಾಗೂ ಸತಿಯ ಅಂದ-ಚೆದವನ್ನು ವರ್ಣನೆ ಮಾಡುತ್ತಾಳೆ.

ನಮ್ಮ ಸಂಸ್ಕೃತಿಯನ್ನು ಅಭಿವ್ಯಕ್ತಿಗೊಳಿಸುವ ಗರತಿಯ ಹಾಡುಗಳು ಇಂದು ಮಾಯವಾಗುತ್ತಿರುವುದು ತೀರಾ ವಿಷಾದನೀಯ ಸಂಗತಿ. ನಮ್ಮ ಗ್ರಾಮೀಣ ಸೊಗಡು, ಜನಜೀವನ, ಜೀವನ ಶೈಲಿ, ಹಬ್ಬ-ಹರಿದಿನ, ಆಚರಣೆ, ಸಂಪ್ರದಾಯಗಳ ಬಗ್ಗೆ ಹಾಡಿನ ಮೂಲಕ ತಿಳಿಸಿಕೊಡುತ್ತಿರುವ ಗರತಿಯ ಜಾನಪದ ಹಾಡುಗಳು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದ ನಶಿಸಿ ಹೋಗುತ್ತಿವೆ. ಆಧುನಿಕತೆಯ ಸೋಗಿನಲ್ಲಿ ನಾವಿಂದು ನಮ್ಮ ಸಂಸ್ಕೃತಿ ಮತ್ತು ನಮ್ಮತನವನ್ನು ಮರೆತು ಬಿಡುತ್ತಿದ್ದೇವೆ. ಇದನ್ನು ನಮ್ಮ ಮುಂದಿನ ಯುವ ಜನಾಂಗಕ್ಕಾಗಿ ಉಳಿಸಿ, ಬೆಳೆಸಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ.

ಮಲ್ಲಪ್ಪ ಸಿ.

ಖೊದ್ನಪೂರ

ಟಾಪ್ ನ್ಯೂಸ್

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.