India ಷೇರುಪೇಟೆಗೆ ವಿಶ್ವದಲ್ಲಿ ಈಗ 4ನೇ ಸ್ಥಾನ
ಹಾಂಕಾಂಗ್ ಮೀರಿಸಿ ದೇಶದ ಸಾಧನೆ
Team Udayavani, Jan 24, 2024, 5:48 AM IST
ಹೊಸದಿಲ್ಲಿ:ಜಗತ್ತಿನ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ಭಾರತದ ಷೇರು ಪೇಟೆಯಲ್ಲೂ ವಿಕ್ರಮ ಸಾಧಿಸಿದೆ. ಇದು ವರೆಗೆ ನಾಲ್ಕನೇ ಸ್ಥಾನದಲ್ಲಿ ಇದ್ದ ಹಾಂಕಾಂಗ್ ಷೇರುಪೇಟೆಯನ್ನು ಹಿಂದಿಕ್ಕಿ ಆ ಸ್ಥಾನಕ್ಕೆ ಭಾರತ ಲಗ್ಗೆ ಇಟ್ಟಿದೆ. ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಲಾಗಿರುವುದು ಗಮ ನಾರ್ಹ ಅಂಶವಾಗಿದೆ. ಅಮೆರಿಕ, ಚೀನಾ, ಜಪಾನ್ ಕ್ರಮವಾಗಿ ಮೊದಲ, ದ್ವಿತೀಯ, ತೃತೀಯ ಸ್ಥಾನದಲ್ಲಿವೆ.
ಕೇಂದ್ರ ಸರ್ಕಾರ ಹೂಡಿಕೆದಾರರಿಗೆ ಅನುಕೂಲಕರವಾಗಿರುವ ನೀತಿಗಳನ್ನು ರಚಿಸಿ ಜಾರಿಗೊಳಿಸುತ್ತಿದೆ. ಇದರಿಂದಾಗಿ ಜಗತ್ತಿನ ಹೂಡಿಕೆದಾರರ ಆಸಕ್ತಿ ಈಗ ಭಾರತೀಯ ಷೇರುಪೇಟೆಯತ್ತ ಹೊರಳಿದೆ ಎಂದು ಬ್ಲೂಮ್‌ಬರ್ಗ್ ತನ್ನ ವರದಿಯಲ್ಲಿ ಉಲ್ಲೇಖೀಸಿದೆ. ಹೀಗಾ ಗಿಯೇ, ಮೊದಲ ಬಾರಿಗೆ ನಾಲ್ಕನೇ ಸ್ಥಾನ ದಲ್ಲಿ ಇದ್ದ ಹಾಂಕಾಂಗ್ ಷೇರುಪೇಟೆಯನ್ನು ಹಿಂದಿಕ್ಕಿ ಭಾರತ ಆ ಸ್ಥಾನ ಅಲಂಕರಿಸಿದೆ. ದೇಶದ ಷೇರುಪೇಟೆ ಮೌಲ್ಯ 4.33 ಶತಕೋಟಿ ಡಾಲರ್ ಆಗಿದೆ. ಐದನೇ ಸ್ಥಾನಕ್ಕೆ ತಳ್ಳ ಲ್ಪಟ್ಟಿರುವ ಹಾಂಕಾಂಗ್ ಷೇರುಪೇಟೆಯ ಮೌಲ್ಯ 4.29 ಶತಕೋಟಿ ಡಾಲರ್ ಆಗಿದೆ. ಕಳೆದ ವರ್ಷದ ಡಿ.5ರಂದು ಮೊದಲ ಬಾರಿಗೆ ದೇಶದ ಷೇರುಪೇಟೆಯ ಮೌಲ್ಯ ಶತಕೋಟಿ ಡಾಲರ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
AAP; ಸಂಜಯ್ ಸಿಂಗ್ ವಿರುದ್ಧ ಗೋವಾ ಸಿಎಂ ಪತ್ನಿಯಿಂದ 100 ಕೋಟಿ ಮಾನನಷ್ಟ ಮೊಕದ್ದಮೆ
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
Decision Awaited: 2025ಕ್ಕೆ ನೀಟ್ ಆನ್‌ಲೈನ್: ಶೀಘ್ರವೇ ನಿರ್ಧಾರ
Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!
MUST WATCH
ಹೊಸ ಸೇರ್ಪಡೆ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ
ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ ಪೊಲೀಸ್ ವಶಕ್ಕೆ
Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.