Vijaypura: ಸತತ 4ನೇ ಬಾರಿ ಸ್ಪರ್ಧೆಗೆ ಜಿಗಜಿಣಗಿ ಉತ್ಸುಕ

ಬಿಜೆಪಿ ಟಿಕೆಟ್‌ಗೆ ರಾಜೇಂದ್ರ ನಾಯಕ, ಮಹೇಂದ್ರ ನಾಯಕ ಪ್ರಯತ್ನ ಕಾಂಗ್ರೆಸ್‌ನಿಂದ ಬಂಜಾರ ಸಮಾಜದಿಂದ ಹೊಸಬರ ಸ್ಪರ್ಧೆಗೆ ಹೆಚ್ಚಿದ ಒತ್ತಡ- ಈ ಬಾರಿಯೂ ಪ್ರಕಾಶ ರಾಠೊಡ ಸ್ಪರ್ಧಿಸುತ್ತಾರಾ?

Team Udayavani, Jan 25, 2024, 5:29 AM IST

ramesh jigajinagi

ವಿಜಯಪುರ: ಪರಿಶಿಷ್ಟ ಜಾತಿಗೆ ಮೀಸಲಾದ ಬಸವನಾಡು ವಿಜಯಪುರ ಲೋಕಸಭೆ ಕ್ಷೇತ್ರ ಸತತ ಮೂರು ಸಲದಿಂದ ಬಿಜೆಪಿಯ ವಶದಲ್ಲಿದೆ. ಹಿಂದೆ ಇಲ್ಲಿ ಆರು ಬಾರಿ ಕಾಂಗ್ರೆಸ್‌ ಹಾಗೂ ಎರಡು ಸಲ ಜನತಾ ಪರಿವಾರ ಗೆದ್ದಿದ್ದು, ಒಂದು ರೀತಿ ಇದು ಜನತಾ ಪರಿವಾರದ ಭದ್ರ ನೆಲೆ ಎಂದರೂ ತಪ್ಪಲ್ಲ. ಯಾಕೆಂದರೆ, ಹಾಲಿ ಸಂಸದ ಹಾಗೂ ಕಳೆದ ಮೂರು ಅವಧಿಯಲ್ಲಿ ಗೆದ್ದಿರುವ ಬಿಜೆಪಿಯ ರಮೇಶ್‌ ಜಿಗಜಿಣಗಿ ಮೂಲತಃ ಜನತಾ ಪರಿವಾರದವರೇ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಗರಡಿಯಲ್ಲಿ ಪಳಗಿದವರು.

ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದಿದ್ದ ರಮೇಶ ಜಿಗಜಿಣಗಿ, ಕ್ಷೇತ್ರ ಮರುವಿಂಗಡಣೆ ಬಳಿಕ ವಿಜಯಪುರ ಲೋಕಸಭೆ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದಾಗ ತವರಿಗೆ ಮರಳಿದ್ದರು. ಈ ಸಲವೂ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮೈತ್ರಿಯ ಕಾರಣದಿಂದ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಎದುರಾಳಿಯಾಗಿದ್ದ ಜೆಡಿಎಸ್‌ ಈ ಬಾರಿ ಮೈತ್ರಿ ಪಕ್ಷವಾಗಿದೆ. ಜತೆಗೆ ಪಕ್ಷ ಬಲಿಷ್ಠವಾಗಿಲ್ಲದ ಕಾರಣ ಸ್ಥಾನ ಹಂಚಿಕೆ ಸಂದರ್ಭ ವಿಜಯಪುರ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕೇಳುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿ ಯಾರೇ ಆದರೂ ಇದು ಪ್ಲಸ್‌ ಪಾಯಿಂಟ್‌ ಆಗಲಿದೆ.

ಚುನಾವಣೆ ಎದುರಿಸುವಲ್ಲಿ ಚತುರತೆ, ಪಕ್ಷದಲ್ಲಿ ಹಿರಿತನ, ಜಾತಿ ಸಮೀಕರಣ ಹೀಗೆ ಹಲವು ಲೆಕ್ಕಾಚಾರದಲ್ಲಿ ಕೇಸರಿ ಪಾಳೆಯ ಮತ್ತೂಮ್ಮೆ ಟಿಕೆಟ್‌ ನೀಡಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಇದರ ಹೊರತಾ ಗಿಯೂ ಪಕ್ಷ ಟಿಕೆಟ್‌ ನೀಡದಿದ್ದರೂ ಬೇಸರಿಸಿಕೊಳ್ಳದೆ ಮನೆಯಲ್ಲಿ ನನ್ನ ಪಾಡಿಗೆ ನಾನಿರುತ್ತೇನೆ ಎನ್ನುವ ಮೂಲಕ ದಾಳವನ್ನೂ ಉರುಳಿಸುತ್ತಲೇ ಇದ್ದಾರೆ. ಆದರೆ ಜಿಲ್ಲೆಯ ಹಿರಿಯ ಶಾಸಕ ಬಸನ ಗೌಡ ಪಾಟೀಲ್‌ ಯತ್ನಾಳ್‌ ಜತೆ ವೈಮನಸ್ಸು ಹೊಂದಿ ದ್ದಾರೆ ಎಂಬುದು ಗಮನೀಯ.

ಇನ್ನು ಸಂಘ ಪರಿವಾರದ ಹಿನ್ನೆಲೆಯ ಡಾ| ಬಾಬುರಾಜೇಂದ್ರ ನಾಯಕ ಟಿಕೆಟ್‌ ಸಿಗುವ ಭರವಸೆಯಲ್ಲಿ ಸಮಾಜಸೇವೆಯ ಮೂಲಕ ಕ್ಷೇತ್ರದ ಜನರೊಂದಿಗೆ ಬೆರೆಯಲು ಮುಂದಾಗಿದ್ದಾರೆ. ವಿಧಾನಸಭೆ ಚುನಾವಣೆ ಟಿಕೆಟ್‌ ಆಕಾಂಕ್ಷಿಯಾಗಿ ಪೊಲೀಸ್‌ ಅಧಿಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟು ಬಂದಿರುವ ಮಹೇಂದ್ರ ನಾಯಕ ಕೂಡ ಲೋಕಸಭೆ ಚುನಾವಣೆಗೆ ಕಮಲ ಪಕ್ಷದ ಟಿಕೆಟ್‌ ಆಕಾಂಕ್ಷಿ. ಆದರೆ ನೆರೆಯ ಕಲಬುರ್ಗಿ ಕ್ಷೇತ್ರದಲ್ಲಿ ಬಂಜಾರಾ ಸಮುದಾಯಕ್ಕೆ ಸೇರಿದ ಡಾ| ಉಮೇಶ ಜಾಧವ್‌ ಬಿಜೆಪಿ ಹಾಲಿ ಸಂಸದ. ಪಕ್ಷ ಮತ್ತೂಮ್ಮೆ ಅವರಿಗೆ ಮಣೆ ಹಾಕಿದರೆ ಬಂಜಾರಾ ಸಮು ದಾಯದ  ಇವರಿಬ್ಬರ ಪ್ರಯತ್ನ ಫಲಿಸುವುದು ಕಷ್ಟ.

ಹಿಂದಿನ ಎರಡೂವರೆ ದಶಕದ ಚುನಾವಣೆ ಅವಲೋಕಿಸಿದರೆ ಬಿಜೆಪಿ ಭದ್ರಕೋಟೆ ಬೇಧಿಸುವುದು ಕಾಂಗ್ರೆಸ್‌ಗೆ ಈಗಲೂ ಸುಲಭವಿಲ್ಲ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರವಿದೆ. ಪ್ರಭಾವಿ ನಾಯಕರಾಗಿದ್ದು, ಸಚಿವರಾಗಿರುವ ಎಂ.ಬಿ.ಪಾಟೀಲ್‌ ಹಾಗೂ ಶಿವಾನಂದ ಪಾಟೀಲ್‌ ಸಹಿತ  ಆರು ಮಂದಿ ಪಕ್ಷದ ಶಾಸಕರಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಕೈಮೇಲಾಗುವುದು ಖಚಿತ ಎಂಬ ನಿರೀಕ್ಷೆಯಲ್ಲಿದ್ದಾರೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು.

ಈ ಬಾರಿ ಬಿಜೆಪಿಗೆ ಕಾಂಗ್ರೆಸ್‌ ನೇರ ಎದುರಾಳಿ ಆಗಲಿದ್ದು, ಕೈ ಪಾಳೆಯ ದಿಂದ ಕೆಪಿಸಿಸಿಗೆ ಕಳಿಸಿರುವ ಪಟ್ಟಿಯಂತೆ 10 ಸ್ಪರ್ಧಾಕಾಂಕ್ಷಿಗಳಿದ್ದಾರೆ. ರಮೇಶ ಜಿಗಜಿಣಗಿ ವಿರುದ್ಧ ಸತತ ಎರಡು ಸೋಲು ಸಹಿತ ಮೂರು ಬಾರಿ ಪರಾಭವಗೊಂಡಿರುವ ಮೇಲ್ಮನೆ ಶಾಸಕ ಪ್ರಕಾಶ ರಾಠೊಡ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಆರ್‌.ಆಲಗೂರು, ಜಿ.ಪಂ. ಮಾಜಿ ಅಧ್ಯಕ್ಷ ಅರ್ಜುನ ರಾಠೊಡ, ಬಲರಾಮ ನಾಯಕ, ಕಾಂತಾ ನಾಯಕ, ಡಿ.ಎಲ್‌.ಚೌವ್ಹಾಣ್‌, ಮಾಜಿ ಅಧಿಕಾರಿ ರಾಜಶೇಖರ ಯಡಳ್ಳಿ ಹಾಗೂ ಮಾಜಿ ಶಾಸಕ ಮನೋಹರ ಐನಾಪುರ ಸಹಿತ 10 ಮಂದಿ  ಆಕಾಂಕ್ಷಿಗಳಿದ್ದಾರೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿಯಾಗಿ ಜಿಗಜಿಣಗಿ ವಿರುದ್ಧ ಸ್ಪಧಿìಸಿ ಸೋತಿದ್ದ ಸುನೀತಾ ಚೌವ್ಹಾಣ್‌ ಹಾಗೂ ಪ್ರಕಾಶ ರಾಠೊಡ ಇಬ್ಬರೂ ಬಂಜಾರಾ ಸಮುದಾಯದವರು. ಹೀಗಾಗಿ ಹೊಸಮುಖಕ್ಕೆ ಟಿಕೆಟ್‌ ನೀಡಬೇಕು ಎಂಬ ಬೇಡಿಕೆ ಬಂಜಾರಾ ಸಮುದಾಯದ ಟಿಕೆಟ್‌ ಆಕಾಂಕ್ಷಿಗಳಿಂದ ಕೇಳಿಬಂದಿದೆ.

ಈ ಪಟ್ಟಿಯಲ್ಲಿ ಕಾಂತಾ ನಾಯಕ ಮಹಿಳಾ ಕೋಟದಲ್ಲಿ ಕೊಡಿ ಎನ್ನುತ್ತಿ ದ್ದಾರೆ. ಬಲರಾಮ ನಾಯಕ, ಅರ್ಜುನ ರಾಠೊಡ, ಡಿ.ಎಲ್‌.ಚೌವ್ಹಾಣ್‌ ನಮಗೊಂದು ಅವಕಾಶ ಕೊಟ್ಟು ನೋಡಿ ಎಂಬ ಬೇಡಿಕೆ ಸಲ್ಲಿಸಿದ್ದಾರೆ.  ಹೊರಗಿನ ಜಿಲ್ಲೆಯವರೂ ಮೀಸಲು ಕ್ಷೇತ್ರದಿಂದ ಲೋಕಸಭೆ ಪ್ರವೇಶಕ್ಕೆ ಪ್ರಯತ್ನ ನಡೆಸಿದ್ದಾರೆ.

 ಜಿ.ಎಸ್‌.ಕಮತರ

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

BYV

Talk Fight: ಯಾರು ಏನೇ ಅಂದ್ರೂ ಬಿಜೆಪಿ ಕಾರ್ಯಕರ್ತರು ನನ್ನ ಒಪ್ಪಿದ್ದಾರೆ: ವಿಜಯೇಂದ್ರ

COngress-Meet

Munirathna:ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಹೇಳಿಕೆ; ಸಮುದಾಯದ ಸಚಿವ, ಶಾಸಕರಿಂದ ಸಿಎಂಗೆ ಮನವಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.