Mangaluru; ಶಾರದಾ ಪೀಠಕ್ಕಾಗಿ ಎಲ್‌ಒಸಿ ದಾಟಲೂ ಸಿದ್ಧ

ಶಾರದಾ ಪೀಠ ಸಂರಕ್ಷಣ ಸಮಿತಿ ಸಂಸ್ಥಾಪಕ ರವೀಂದರ್‌ ಪಂಡಿತ

Team Udayavani, Jan 25, 2024, 7:30 AM IST

Mangaluru; ಶಾರದಾ ಪೀಠಕ್ಕಾಗಿ ಎಲ್‌ಒಸಿ ದಾಟಲೂ ಸಿದ್ಧ

ಮಂಗಳೂರು: ಭಾರತ -ಪಾಕ್‌ ಗಡಿಯಲ್ಲೇ ಇರುವ ಕಾಶ್ಮೀರದ ತೀತ್ವಾಲ್‌ನಲ್ಲಿ ಶಾರದಾ ದೇವಿಯ ಮಂದಿರ ನಿರ್ಮಾಣಗೊಂಡಿರುವುದು ನಮ್ಮ ಭಾಗ್ಯ. ಆದರೆ ಸಮಸ್ತ ಹಿಂದೂಗಳ ಮಕುಟವಾಗಿರುವ ಶಾರದಾ ಪೀಠಕ್ಕೆ ಮುಕ್ತಿ ದೊರಕಿಸಬೇಕು, ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳದೆ ಹೋದರೆ ನಾವೇ ಶ್ರದ್ಧಾಳುಗಳು ಸೇರಿಕೊಂಡು ನಿಯಂತ್ರಣ ರೇಖೆ ಎಲ್‌ಒಸಿ (ಗಡಿ) ದಾಟಿ ಮಂದಿರದತ್ತ ಸಾಗಲಿದ್ದೇವೆ…

ಕಾಶ್ಮೀರದ ಶಾರದಾ ಪೀಠ ಸಂರಕ್ಷಣ ಸಮಿತಿಯ ಸಂಸ್ಥಾಪಕ, ರವೀಂದರ್‌ ಪಂಡಿತ ಅವರ ಖಚಿತ ಮಾತುಗಳಿವು.

ಹಲವು ವರ್ಷಗಳಿಂದ ಶಾರದಾ ಪೀಠಕ್ಕೆ ಭಾರತೀಯರೂ ತೆರಳುವಂತಹ ಅವಕಾಶಕ್ಕಾಗಿ ಹೋರಾಡುತ್ತಿರುವವರು. ತಮ್ಮ ಊರಿನಲ್ಲೇ ನೆಲೆ ಕಳೆದುಕೊಂಡ ಕಾಶ್ಮೀರಿ ಪಂಡಿತರ ಪರವಾಗಿ ಅಭಿಯಾನದಲ್ಲಿ ತೊಡಗಿಕೊಂಡಿರುವ ಅವರು ಮಂಗಳೂರು ಲಿಟ್‌ ಫೆಸ್ಟ್‌ನಲ್ಲಿ ಭಾಗವಹಿಸಲು ಆಗಮಿಸಿದ್ದರು. ಅವರು ಉದಯವಾಣಿ ಜತೆಗೆ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಶಾರದಾ ಪೀಠ, ಸರಕಾರದ ಯತ್ನ ಸಾಲದು
ಶಾರದಾ ಪೀಠಕ್ಕೆ ನಮಗೆ ಪ್ರವೇಶ ಸಿಗಬೇಕು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಪ್ರಯತ್ನ ಸಾಲದು. ಕೇಂದ್ರದ ಮೇಲೆ ನಾವು ನಿರಂತರ ಒತ್ತಡ ಹೇರಬೇಕಿದೆ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಇರುವಂತಹ ಈ ಶಾರದಾ ಪೀಠ ಎಲ್ಲ ಹಿಂದೂಗಳಿಗೆ ಪವಿತ್ರ, ಅಲ್ಲಿ ಈಗ ಪಾಕ್‌ ಸೇನೆಯವರು ಕಾಫಿ ಶಾಪ್‌ ತೆರೆಯುತ್ತಿರುವುದು ಅಕ್ಷಮ್ಯ. ಅದನ್ನು ವಿರೋಧಿಸಿ ಪಾಕ್‌ ಪ್ರಧಾನಿ, ಪಿಒಕೆಯ ಪ್ರಧಾನಿಗೆ ಪತ್ರ ಬರೆದಿದ್ದೇನೆ, ಆದರೆ ಪ್ರಯೋಜನವಾಗಿಲ್ಲ. ಕೇಂದ್ರ ಸರಕಾರ ಇದನ್ನು ಉನ್ನತ ಮಟ್ಟದಲ್ಲಿ ತಡೆಯಬೇಕಿದೆ.

ತೀತ್ವಾಲ್‌ನಲ್ಲಿ ಶಾರದಾ ಮಂದಿರ
ಕಾಶ್ಮೀರದ ತೀತ್ವಾಲ್‌ನ ಮಿಲಿಟರಿ ವಲಯದಲ್ಲಿ ಶಾರದಾ ಮಂದಿರವನ್ನು ಕಳೆದ ವರ್ಷ ಜೂ. 5ರಂದು ಶೃಂಗೇರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಉದ್ಘಾಟಿಸಿದ್ದಾರೆ. ಕೇವಲ 9 ತಿಂಗಳಲ್ಲಿ ಶಾರದಾ ಮಂದಿರ ಸಮಿತಿಯ ಖರ್ಚುವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಇದಕ್ಕೆ ಪಂಚಲೋಹದ ವಿಗ್ರಹ ಹಾಗೂ ಗ್ರಾನೈಟನ್ನು ಶೃಂಗೇರಿ ಮಠದ ಸ್ವಾಮೀಜಿಯವರು ದಾನವಾಗಿ ನೀಡಿದ್ದಾರೆ. ಈ ಮಂದಿರಕ್ಕೆ http://epass.kupwara.co.in/apply ಮೂಲಕ ಪಾಸ್‌ ಪಡೆದು ತೆರಳಬಹುದು. ಯಾತ್ರಿಕರಿಗೆ ಬೇಕಾದ ವಸತಿ ಸೌಲಭ್ಯಗಳೂ ಅಲ್ಲಿವೆ.

ಕಾಶ್ಮೀರ ಇನ್ನೂ ಭಾರತ ಪರವಾಗಿ ಇಲ್ಲ
370ನೇ ವಿಧಿ ರದ್ದುಗೊಳಿಸಿದ ಭಾರತ ಸರಕಾರದ ಕ್ರಮ ನಿಜಕ್ಕೂ ಬಹಳ ಕ್ರಾಂತಿಕಾರಿಯಾಗಿದ್ದು. ರಾಷ್ಟ್ರೀಯ -ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಭಾವ ಬೀರಿದೆ. ಆದರೆ ಕಾಶ್ಮೀರದಲ್ಲಿ ಇನ್ನೂ ಆಗಬೇಕಾದ್ದು ಬಹಳಷ್ಟಿದೆ. ನಾನು ಅಲ್ಲಿಯವನಾಗಿ ಕಂಡಿರುವುದೇನೆಂದರೆ ಪಾಕಿಸ್ಥಾನ ಪರವಾದವರ ಸಂಖ್ಯೆ ಇನ್ನಿಲ್ಲವಾಗಿದೆ, ಆದರೆ ಇನ್ನೂ ಭಾರತ ವಿರೋಧಿ ಧ್ವನಿ ಶೇ. 20ರಷ್ಟಿದೆ. ಇನ್ನುಳಿದವರು ಭಾರತದ ಪರವಾಗಿಯಂತೂ ಇಲ್ಲ. ಇವರನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸ ಆಗಬೇಕು. ಇದಕ್ಕೆ ತುಂಬಾ ಸಮಯ ಬೇಕಾಗಬಹುದು. ಕೇವಲ ಅಭಿವೃದ್ಧಿ ಕೆಲಸದಿಂದ ಅದು ಆಗುವಂಥದ್ದಲ್ಲ. ಸಾಂಸ್ಕೃತಿಕವಾಗಿ ಆಗಬೇಕಾದ ಕೆಲಸವದು.

-ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

Darshan (3)

Darshan; ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ನಟ: ಬಿಗಿ ಪೊಲೀಸ್ ಬಂದೋಬಸ್ತ್

20-hosanagara

Hosanagara: ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವು

“ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ

Tulu Cinema: “ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ

Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

16-skin

Deepawali: ಪಟಾಕಿ ಅವಘಡ: ಚರ್ಮ ಕಸಿ ಶಸಚಿಕಿತ್ಸೆಗೆ ಸಜ್ಜು

Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…

Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…

ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

Dr Bibek Debroy: ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

26

Waqf ವಿವಾದ ಹಿನ್ನೆಲೆ ಭೂದಾಖಲೆ ಪರಿಶೀಲನೆಗೆ ವಿಎಚ್‌ಪಿ ಮನವಿ

25

Mangaluru: ಇಂದು ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ

24

Mangaluru: ಕರಾವಳಿ ಕೆಥೋಲಿಕರಿಂದ ಮೃತರು, ಸಂತ ಭಕ್ತರ ವಿಶಿಷ್ಟ ಸ್ಮರಣೆ

23

Mangaluru: ತುಳು ವಿಕ್ಷನರಿ, ವಿಕಿಸೋರ್ಸ್‌ ಲೈವ್‌ ಆರಂಭ

22

Mangaluru: ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Rajyotsava Celebration: ಬೆಳಗಾವಿಯಲ್ಲಿ ವೈಭವದ ಕರ್ನಾಟಕ ರಾಜ್ಯೋತ್ಸವ

Rajyotsava Celebration: ಬೆಳಗಾವಿಯಲ್ಲಿ ವೈಭವದ ಕರ್ನಾಟಕ ರಾಜ್ಯೋತ್ಸವ

29

Kakinada: ಹಳೆ ವೈಷಮ್ಯ; ಒಂದೇ ಕುಟುಂಬದ ಮೂವರ ಹ*ತ್ಯೆ

Darshan (3)

Darshan; ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ನಟ: ಬಿಗಿ ಪೊಲೀಸ್ ಬಂದೋಬಸ್ತ್

ವಿನೀತ್‌ ಕುಮಾರ್‌ ನಟನೆಯ “90 ಎಮ್ ಎಲ್” ಸಿನಿಮಾ ಮುಹೂರ್ತ

Tulu Cinema: ವಿನೀತ್‌ ಕುಮಾರ್‌ ನಟನೆಯ “90 ಎಮ್ ಎಲ್” ಸಿನಿಮಾ ಮುಹೂರ್ತ

20-hosanagara

Hosanagara: ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.