Ram Mandir: 13 ಮಂದಿರ ನಿರ್ಮಾಣಕ್ಕೆ ಸಿದ್ಧತೆ: ಸ್ವಾಮಿ ಗುರುದೇವ್
ಸಂದರ್ಶನವೊಂದರಲ್ಲಿ ಟ್ರಸ್ಟ್ ಖಜಾಂಚಿ ಉಲ್ಲೇಖ ಮಂದಿರ ಆವರಣದಲ್ಲಿ 6 ದೇಗುಲ, ಹೊರಗೆ 7
Team Udayavani, Jan 25, 2024, 1:11 AM IST
ಅಯೋಧ್ಯೆ: ಅಯೋಧ್ಯೆಯನ್ನು ಜಾಗತಿಕ ಅಧ್ಯಾತ್ಮಿಕ ಪ್ರವಾಸಿ ಕೇಂದ್ರವನ್ನಾಗಿಸಲು ವಿಸ್ತಾರವಾದ ಯೋಜನೆಗಳನ್ನು ರೂಪಿಸಲಾಗಿದ್ದು, ಆ ಪೈಕಿ ರಾಮ ಮಂದಿರವನ್ನು ಹೊರತು ಪಡಿಸಿದಂತೆ ಇನ್ನೂ 13 ಮಂದಿರಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಈ ಎಲ್ಲಾ ಯೋಜನೆಗಳೂ ಪ್ರಗತಿಯಲ್ಲಿವೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗುರುದೇವ್ ಗಿರಿಜಿ ಹೇಳಿದ್ದಾರೆ.
ಖಾಸಗಿ ವಾಹಿನಿ ಜತೆಗೆ ಸಂದರ್ಶನದಲ್ಲಿ ಮತನಾಡಿದ ಅವರು, ಮಂದಿರ ಕಾಮಗಾರಿ ಪ್ರಗತಿಯಲ್ಲಿದೆ. ಇದರೊಂದಿಗೆ 13 ದೇಗುಲಗಳನ್ನು ನಿರ್ಮಿಸಲು ಸಿದ್ದತೆ ನಡೆಯುತ್ತಿದೆ. ರಾಮ ಮಂದಿರವಿರುವ ಸಂಕೀರ್ಣದ ಒಳಗೇ 6 ದೇವಾಲಯಗಳನ್ನು ನಿರ್ಮಿ Ó ಲಾಗುತ್ತದೆ. ದೇಗುಲದ 4 ಮೂಲೆ ಗಳಲ್ಲಿ ಗಣಪತಿ, ಶಿವ, ಜಗದಂಬಾ ಮತ್ತು ಸೂರ್ಯದೇವರಿಗೆ ಸಮರ್ಪಿ ತವಾದ ದೇಗುಲಗಳು ಇರಲಿವೆ. ಅದರ ಜತೆಗೆ ಹನುಮಂತನಿಗೆ ಮೀಸಲಾದ ಪ್ರತ್ಯೇಕ ದೇಗುಲ ಮತ್ತು ಸೀತಾ ದೇವಿ ಅಡುಗೆ ಮಾಡುತ್ತಿದ್ದ ಸೀತಾ ರಸೋಯಿ ಜಾಗದಲ್ಲಿ ಅನ್ನಪೂರ್ಣ ದೇವಿಗೆ ಸಮರ್ಪಿತವಾದ ದೇಗುಲ ನಿರ್ಮಾಣಗೊಳ್ಳಲಿದೆ ಎಂದರು.
ಮಂದಿರದ ಹೊರ ಆವರಣದಲ್ಲಿ ಸಂತ ವಾಲ್ಮೀಕಿ, ರಿಷಿ ವಸಿಷ್ಠ, ವಿಶ್ವಾಮಿತ್ರ, ದೇವಿ ಶಬರಿ, ಜಟಾಯು ಸೇರಿದಂತೆ ರಾಮನ ಜೀವನದಲ್ಲಿ ಪ್ರಮುಖ ಪಾತ್ರ ಗಳಾದ ಕೆಲವರಿಗೆ ಈ ದೇಗುಲಗಳು ಸಮರ್ಪಿತವಾಗಲಿವೆ ಎಂದೂ ಸ್ವಾಮಿ ಗುರುದೇವ್ ತಿಳಿಸಿದ್ದಾರೆ. ಈಗಾಗಲೇ ಈ ದೇಗುಲಗಳ ನಿರ್ಮಾಣ ಕಾರ್ಯ ವೂ ನಡೆಯುತ್ತಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.