Karnataka: ರಾಜ್ಯದ 23 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಗೌರವ
ಎಡಿಜಿಪಿ ಸೌಮೇಂದು ಮುಖರ್ಜಿ, ಡಿವೈಎಸ್‌ಪಿ ಸುಧೀರ್ ಎಂ. ಹೆಗಡೆಗೆ ವಿಶಿಷ್ಟ ಸೇವಾ ಪದಕ
Team Udayavani, Jan 25, 2024, 9:13 PM IST
ಬೆಂಗಳೂರು: ಈ ವರ್ಷದ (2024)ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಕರ್ನಾಟಕದ ಇಬ್ಬರು ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ ಹಾಗೂ 21 ಪೊಲೀಸರು ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಎಡಿಜಿಪಿ ಸೌಮೇಂದು ಮುಖರ್ಜಿ ಹಾಗೂ ಬೆಂಗಳೂರಿನ ಕೆಎಸ್‌ಎಚ್‌ಆರ್‌ಸಿ ವಿಭಾಗದ ಡಿವೈಎಸ್‌ಪಿ ಸುಧೀರ್ ಎಂ.ಹೆಗಡೆ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು
ರಮಣ್ ಗುಪ್ತ (ಅಪರ ಪೊಲೀಸ್ ಆಯುಕ್ತ, ಪೂರ್ವ, ಬೆಂಗಳೂರು), ಅನಿಲ್ ಕುಮಾರ್ ಎಸ್. ಭೂಮರಡ್ಡಿ (ಅಪರ ಪೊಲೀಸ್ ಅಧೀಕ್ಷಕ, ಶಿವಮೊಗ್ಗ), ನಾಗರಾಜ್ (ಕಮಾಂಡೆಂಟ್, 1ನೇ ಪಡೆ, ಕೆಎಸ್‌ಐಎಸ್‌ಎಫ್, ಬೆಂಗಳೂರು), ಎಸ್.ಪಿ.ಧರಣೀಶ್ (ಅಪರ ಪೊಲೀಸ್ ಅಧೀಕ್ಷಕ, ಯಾದಗಿರಿ), ವಿ. ನಾರಾಯಣಸ್ವಾಮಿ (ಸಹಾಯಕ ಪೊಲೀಸ್ ಆಯುಕ್ತ, ಜಯನಗರ ಉಪ ವಿಭಾಗ, ದಕ್ಷಿಣ ವಿಭಾಗ, ಬೆಂಗಳೂರು), ವಿ.ರಘುಕುಮಾರ್ (ಸಹಾಯಕ ನಿರ್ದೇಶಕ, ರಾಜ್ಯ ಗುಪ್ತ ವಾರ್ತೆ, ಬೆಂಗಳೂರು), ಬಿ.ಎಸ್.ಶ್ರೀನಿವಾಸ್ ರಾಜ್ (ಡಿವೈಎಸ್‌ಪಿ, ಸಿಐಡಿ, ಬೆಂಗಳೂರು), ಎಸ್.ಆರ್. ವೀರೇಂದ್ರ ಪ್ರಸಾದ್ (ಇನ್‌ಸ್ಪೆಕ್ಟರ್, ಚನ್ನರಾಯಪಟ್ಟಣ ಪೊಲೀಸ್ ಠಾಣೆ, ಬೆಂಗಳೂರು ಗ್ರಾ.), ಎಂ.ಆರ್.ಹರೀಶ್ (ಇನ್‌ಸ್ಪೆಕ್ಟರ್, ದೊಡ್ಡ ಬೆಳವಂಗಲ ಪೊಲೀಸ್ ಠಾಣೆ, ಬೆಂಗಳೂರು ಗ್ರಾ.), ಆರ್. ಪುಂಡಲೀಕ (ಸ್ಪೆಷಲ್ ಆರ್‌ಎಸ್‌ಐ 6ನೇ ಪಡೆ, ಕೆಎಸ್‌ಆರ್‌ಪಿ, ಕಲಬುರಗಿ), ಶ್ರೀರಾಮ (ಸಹಾಯಕ ಪೊಲೀಸ್ ಉಪನಿರೀಕ್ಷಕ, ಬಜ್ಪೆ ಪೊಲೀಸ್ ಠಾಣೆ, ಮಂಗಳೂರು), ಸುರೇಶ್ ಆರ್. ಪುಡಕಲಕಟ್ಟಿ (ಎಎಸ್‌ಐ, ವೈರ್‌ಲೆಸ್, ಕೇಂದ್ರ ಕಚೇರಿ ಬೆಂಗಳೂರು), ಎಚ್.ದಾದಾಪೀರ್ (ಎಆರ್‌ಎಸ್‌ಐ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ದಾವಣಗೆರೆ), ಸಿ.ವೆಂಕಟೇಶ್ (ಸಹಾಯಕ ಗುಪ್ತಚರ ಅಧಿಕಾರಿ, ರಾಜ್ಯ ಗುಪ್ತವಾರ್ತೆ, ಬೆಂಗಳೂರು), ಶಮಂತ್ ಯಶ್ ಜಿ. (ಎಎಸ್‌ಐ, ಸಿಐಡಿ, ಬೆಂಗಳೂರು), ಸಿ.ವಿ.ಗೋವಿಂದರಾಜು (ಹೆಡ್ ಕಾನ್‌ಸ್ಟೆಬಲ್, 4ನೇ ಪಡೆ , ಕೆಎಸ್‌ಆರ್‌ಪಿ, ಬೆಂಗಳೂರು), ಎಂ. ಮಣಿಕಂಠ (ಸಿಎಚ್‌ಸಿ, ಸಹಾಯಕ ಪೊಲೀಸ್ ಆಯುಕ್ತರ ಕಚೇರಿ, ಸಂಚಾರ ಉಪ ವಿಭಾಗ, ಪಾಂಡೇಶ್ವರ, ಮಂಗಳೂರು), ಎಸ್.ಎನ್.ನರಸಿಂಹರಾಜು (ಸಿಎಚ್‌ಸಿ, ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗ, ತುಮಕೂರು).
ಕೇಂದ್ರ ನಿಯೋಜನೆಯಲ್ಲಿರುವ ಮೂವರಿಗೆ ಪ್ರಶಸ್ತಿ
ಕೇಂದ್ರ ಗೃಹ ಸಚಿವಾಲಯದಲ್ಲಿ ನಿಯೋಜನೆ ಮೇಲಿರುವ ಕರ್ನಾಟಕ ಕೇಡರ್‌ನ ಪಂಕಜ್ ಕುಮಾರ್ ಠಾಕೂರ್ (ಜಂಟಿ ನಿರ್ದೇಶಕ ಎಂಎಚ್‌ಎ, ಹೊಸದಿಲ್ಲಿ) ವಿಶಿಷ್ಟ ಸೇವಾ ಪದಕ ಹಾಗೂ ಪ್ರವೀಣ್ ಮಧುಕರ್ ಪವಾರ್ (ಜಂಟಿ ನಿರ್ದೇಶಕರು, ಸಿಬಿಐ, ಹೊಸದಿಲ್ಲಿ), ಕೌಶಲೇಂದ್ರ ಕುಮಾರ್ (ಉಪ ನಿರ್ದೇಶಕ, ಎಂಎಚ್‌ಎ, ಹೊಸದಿಲ್ಲಿ) ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ
Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ
JDS protest: ಎಚ್‌ಡಿಕೆ ಕರಿಯ: ಜಮೀರ್ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ
Congress: “40 ಪರ್ಸೆಂಟ್ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.