Google Doodle: 75ನೇ ಗಣರಾಜ್ಯೋತ್ಸವಕ್ಕೆ ಗೂಗಲ್ ನಿಂದ ವಿಶೇಷ ಡೂಡಲ್
Team Udayavani, Jan 26, 2024, 9:35 AM IST
ನವದೆಹೆಲಿ: ಗೂಗಲ್ ಪ್ರತಿ ವಿಶೇಷ ಸಂದರ್ಭದಲ್ಲಿ ಹೊಸ ಡೂಡಲ್ ರಚಿಸುವ ಮೂಲಕ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ. ಅದರಂತೆ ಇಂದು ದೇಶದೆಲ್ಲೆಡೆ 75ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಗಣರಾಜ್ಯೋತ್ಸವದ ಗೌರವಾರ್ಥವಾಗಿ ಗೂಗಲ್ ವಿಶೇಷವಾದ ಡೂಡಲ್ ಅನ್ನು ರಚಿಸಿದೆ.
ಈ ದಿನದ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಪರೇಡ್. ದಶಕಗಳಿಂದ ಗಣರಾಜ್ಯೋತ್ಸವದಂದು ರಾಜಧಾನಿಯ ಹೃದಯಭಾಗದಲ್ಲಿ ಈ ಪರೇಡ್ ನಡೆಯುತ್ತಿತ್ತು. ಸಮಯ ಬದಲಾಗಿದೆ, ಕಪ್ಪು ಬಿಳುಪು ಟಿವಿಯಿಂದ ಹಿಡಿದು ಎಲ್ಇಡಿ ಟಿವಿವರೆಗೆ ಜನರು ಬದಲಾಗಿದ್ದಾರೆ ಆದರೆ ಇದೀಗ ಜನ ಗಣರಾಜ್ಯೋತ್ಸವ ಪರೇಡ್ ಅನ್ನು ಮೊಬೈಲ್ ಪರದೆಗಳಲ್ಲಿ ವೀಕ್ಷಿಸುತ್ತಾರೆ. ಅದೇ ಚಿತ್ರಣವನ್ನು ಗೂಗಲ್ ಡೂಡಲ್ ಮೂಲಕ ಚಿತ್ರೀಕರಿಸಿದೆ.
ಕಪ್ಪು ಬಿಳುಪು ಟಿವಿಯ ಯುಗದಿಂದ ಕಲರ್ ಟಿವಿಯಿಂದ ಮೊಬೈಲ್ ಫೋನ್‌ಗೆ – ಈ ಸಂಪೂರ್ಣ ಪ್ರಯಾಣವನ್ನು ಈ ವಿಶೇಷ ಡೂಡಲ್‌ನಲ್ಲಿ (ಗೂಗಲ್ ಡೂಡಲ್) ಸೆರೆಹಿಡಿಯಲಾಗಿದೆ. ಮತ್ತು ಈ ಕಲೆಯನ್ನು ಕಲಾವಿದೆ ವೃಂದಾ ಜವೇರಿ ರಚಿಸಿದ್ದಾರೆ.
ಕಳೆದ ವರ್ಷವೂ ಇದೇ ದಿನ ಗೂಗಲ್ ವಿಶೇಷ ಡೂಡಲ್ ತಂದಿತ್ತು. ಸೇವಾ ಸಂಸ್ಥೆಯ ಗುಜರಾತಿ ಕಲಾವಿದ ಪಾರ್ಥ್ ಕೊತೇಕರ್ ಅವರು ಗಣರಾಜ್ಯೋತ್ಸವ ಪರೇಡ್ ಕ್ಷಣಗಳಿಗಾಗಿ ವಿಶೇಷ ಪೇಪರ್ ಕಟ್ ರಚಿಸಿದ್ದರು.
1950 ರಲ್ಲಿ ಈ ದಿನದಂದು ಭಾರತವು ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಹೊರಹೊಮ್ಮಿತು ಮತ್ತು ಸಂವಿಧಾನವನ್ನು ಅಂಗೀಕರಿಸಲಾಯಿತು. 1947 ರಲ್ಲಿ ಸ್ವಾತಂತ್ರ್ಯದ ನಂತರ, ಭಾರತದ ಸಂವಿಧಾನವನ್ನು ರಚಿಸುವ ಕೆಲಸ ಪ್ರಾರಂಭವಾಯಿತು. ಭಾರತದ ಸಂವಿಧಾನ ರಚನಾ ಸಭೆಯು ಹಲವು ಬದಲಾವಣೆಗಳನ್ನು ಮಾಡಿ ಒಂದೆರಡು ವರ್ಷಗಳ ಕಾಲ ಚರ್ಚೆ ನಡೆಸಿತು. ನಂತರ ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವನ್ನು ರಚಿಸಲಾಯಿತು. ಈ ಸಂವಿಧಾನದ ಅಂಗೀಕಾರದ ಮೂಲಕ, ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸಲಾಗುತ್ತದೆ, ನಾಗರಿಕರ ನಾಗರಿಕ ಹಕ್ಕುಗಳು ಬಲಗೊಳ್ಳುತ್ತವೆ.
ಈ ದಿನವನ್ನು ಆಚರಿಸಲು ರಾಜಧಾನಿ ದೆಹಲಿಯಲ್ಲಿ ವಿಶೇಷ ಪರೇಡ್ ನಡೆಸಲಾಗುತ್ತದೆ ಇಲ್ಲಿ ಭದ್ರತಾ ಪಡೆಗಳಿಂದ ವಿಶೇಷ ಕವಾಯತು, ಮಿಲಿಟರಿ ಕೌಶಲ್ಯವನ್ನು ಪ್ರದರ್ಶಿಸಲಾಗುತ್ತದೆ.
ಇದನ್ನೂ ಓದಿ: Bhavatharini: ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರ ಪುತ್ರಿ ಭವತಾರಿಣಿ ನಿಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.