Tumkur; ಕಾಂಗ್ರೆಸ್ ಸರ್ಕಾರ ಪತನದ ಬಿಜೆಪಿಯವರ ಹಗಲು ಕನಸು : ಡಾ.ಜಿ.ಪರಮೇಶ್ವರ್


Team Udayavani, Jan 26, 2024, 3:27 PM IST

ಡಾ.ಜಿ.ಪರಮೇಶ್ವರ್

ತುಮಕೂರು: ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂಬುದು ಬಿಜೆಪಿಯ ಹಗಲುಗನಸು. ಇದಕ್ಕೆ ಜೆಡಿಎಸ್ ಕೂಡ ಹೊರತಾಗಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಟೀಕಿಸಿದರು.

ತುಮಕೂರು ನಗರದಲ್ಲಿ ಗಣರಾಜ್ಯೋತ್ಸವ ಆಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಬಿಜೆಪಿಗೆ ಹೋಗಿದ್ದಾರೆ, ಹೋಗಲಿ. ಅವರನ್ನು ನಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ ಅದ್ದೂರಿಯಾಗಿ ಸ್ವಾಗತ ಬಯಸಿದ್ದೆವು. ನನ್ನನ್ನು ಸರಿಯಾಗಿ ಬಿಜೆಪಿಯವರು ನಡೆಸಿಕೊಂಡಿಲ್ಲ ಅಂತೆಲ್ಲಾ ಹೇಳಿ ಪಕ್ಷಕ್ಕೆ ಬಂದಿದ್ದರು. ಪಕ್ಷಕ್ಕೆ ಅವರು ಬಂದ ಬಳಿಕ ಕಾಂಗ್ರೆಸ್ ನಲ್ಲಿ ಅವರಿಗೆ ಗೌರವಯುತವಾಗಿ ನಡೆಸಿಕೊಂಡಿದ್ದೆವು. ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಅವಕಾಶ ಕಲ್ಪಿಸಿದೆವು. ಮುಖ್ಯಮಂತ್ರಿಯಾಗಿದ್ದವರು ಸೋಲಬಾರದು ಆದರೂ ಸೋತರು.‌ ಇದು ಅವರಿಗೆ ಜನಬೆಂಬಲ‌ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಆದರೂ ಅವರು ಮುಖ್ಯಮಂತ್ರಿಯಾಗಿದ್ದವರು ಎಂದು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದವು. ಆದರೆ ಬಿಜೆಪಿಯನ್ನು ಬೈದವರು ಮತ್ತೆ ವಾಪಸು ಹೋಗಿದ್ದಾರೆ ಎಂದರೆ ಯಾಕೆ ಹೋಗಿದ್ದಾರೆ ಎಂದು ಗೊತ್ತಿಲ್ಲ. ಇದರ ಹಿಂದಿನ ಮರ್ಮ, ಒತ್ತಡದ ಗುಟ್ಟು ಗೊತ್ತಿಲ್ಲ ಎಂದರು.

ಜಗದೀಶ್ ಶೆಟ್ಟರ್ ಹೋಗಿರುವುದಕ್ಕೆ ಟೀಕೆ ಟಿಪ್ಪಣಿ ಮಾಡಲ್ಲ. ನಮಗೆ ಲಾಭನೂ ಇಲ್ಲ‌. ನಷ್ಟ ಇಲ್ಲ‌. ಅವರನ್ನು ಲಾಭ ಆಗುತ್ತದೆ ಅಂತಾನೆ ಕರೆಸಿಕೊಂಡಿದ್ದೆವು. ಆದರೆ ಸೋತರಲ್ಲ ಆದರಿಂದ ನಮಗೆ ನಷ್ಟ ಆಯಿತಲ್ಲ ಎಂದರು.

ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಸೇರುತ್ತಾರೆ ಅಂತಾ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ‌ ನೀಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ರಾಜಣ್ಣ ಹೇಳಿದರೆ ನಾನು‌ ಹೇಳಿದಂತೆ. ಪಕ್ಷದಲ್ಲಿ ಅಧ್ಯಕ್ಷರಿಗೆ ಎಲ್ಲಾ ವಿಚಾರ ಗೊತ್ತು. ಮುದ್ದಹನುಮೇಗೌಡ ಅವರು ಪಕ್ಷಕ್ಕೆ ಬರುವ ವಿಚಾರದ ಬಗ್ಗೆ ನನಗೆ ಮಾಹಿತಿಯಿಲ್ಲ. ನಾನು ಪಕ್ಷದ ಅಧಿಕಾರಿಯಲ್ಲ. ಸರಕಾರಿ ಕಾರ್ಯಕ್ರಮದ ಅನುಷ್ಟಾನಕ್ಕೆ ಸರಕಾರಿ ಉಸ್ತುವಾರಿಯಿದ್ದೇನೆ. ಪಕ್ಷಕ್ಕೆ ನಮ್ಮ ಅಧ್ಯಕ್ಷರೇ ಸುಪ್ರಿಂ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಸಂವಿಧಾನದ ಮಹತ್ವ ಸಾರುವ ಹಿನ್ನೆಲೆಯಲ್ಲಿ ಜಾಥಾ ಹಮ್ಮಿಕೊಂಡಿದೆ. ಈ ಜಾಥಾ ಇಂದಿನಿಂದ  ಫೆ.23 ತಾರೀಖಿನವರೆಗೆ ನಡೆಯುತ್ತದೆ. ಜಿಲ್ಲೆಯ 330 ಗ್ರಾಮ ಪಂಚಾಯತಿಗಳಿಗೆ ಜಾಥಾ ಸಂವಿಧಾನದ ಅರಿವು ಮೂಡಿಸಲಿದೆ ಎಂದರು.

ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಈಡೇರಿಸಿದೆ. ಅದರಲ್ಲಿ ನ್ಯೂನತೆ ಬಂದಿದ್ದರೆ ಈ ಜಾಥಾದಲ್ಲಿ ತಿಳಿಸಬಹುದು. ಅದನ್ನು ಸರಿಪಡಸಲಾಗುವುದು. ಅಲ್ಲದೆ, ಜನಪರ ಆಡಳಿತ ಕೊಡುವುದಿಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬದ್ಧವಾಗಿದೆ ಎಂಬುದನ್ನು ಜಾಥಾದಲ್ಲಿ ತಿಳಿಸಲಾಗುತ್ತದೆ.

ಜ.29 ರಂದು ಜಿಲ್ಲೆಗೆ ಸಿಎಂ

ಇದೇ ಜ. 29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಕಳೆದ ಎಂಟು ತಿಂಗಳಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ನಾನಾ ಕಾಮಾಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ 200 ಹೆಚ್ಚು ಅಡಿಗಲ್ಲು ಹಾಕಬೇಕು ಎಂ ಚಿಂತನೆಯಿದೆ. ಆದರೆ ಕಡಿಮೆ ಮಾಡಿ ನೂರಕ್ಕೆ ಇಳಿಸಿದ್ದೇವೆ. ಸುಮಾರು 697 ಕೋಟಿ ರೂ ವೆಚ್ಚದಲ್ಲಿ ‌ಅಡಿಗಲ್ಲು ಮತ್ತು ಶಂಕುಸ್ಥಾಪನೆ ಮಾಡುತ್ತೇವೆ. ಜೊತೆಗೆ ವಿಶ್ವವಿದ್ಯಾಲಯವನ್ನು ಸುಮಾರು 40 ಕೋಟಿ ವೆಚ್ಚದಲ್ಲಿ ಕಟ್ಟಿದ್ದಾರೆ. ಅದನ್ನು ಉದ್ಘಾಟನೆ ಮಾಡಲಾಗುತ್ತದೆ. ಭವಿಷ್ಯ ತುಮಕೂರು ಇತಿಹಾಸದಲ್ಲಿ ಬೃಹತ್ ಮೊತ್ತದ ಅಡಿಗಲ್ಲು, ಕಾಮಗಾರಿಗೆ ಗುದ್ದಲಿಪೂಜೆಯನ್ನು ಮೊದಲ ಬಾರಿಗೆ ಮಾಡಲಾಗುತ್ತಿದೆ. ‌ಇದು ತುಮಕೂರು ‌ಜಿಲ್ಲೆಗೆ ಹೆಮ್ಮೆಯ‌ ವಿಚಾರವಾಗಿದೆ ಎಂದರು.

ಕಳೆದ 7 ತಿಂಗಳಲ್ಲಿ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ‌ 55 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ಇದರಿಂದ ಸುಮಾರು 450 ಕೋಟಿ ರೂ. ಉತ್ಪತ್ತಿ ಮಾಡಲಾಗಿದೆ.‌ ಇದರಿಂದಾಗಿ‌ ಇಡೀ ರಾಜ್ಯದಲ್ಲಿ ತುಮಕೂರು ಜಿಲ್ಲೆ ಮೊದಲ ಸ್ಥಾನದಲ್ಲಿದ್ದೇವೆ ಎಂದರು.

ನರೇಗಾಕ್ಕೆ ಪೂರಕವಾಗಿ ಒಂದು ಸಾವಿರ ಶಾಲೆಗಳನ್ನು ಪೇಸ್ ಲಿಫ್ಟ್ ಮಾಡಿ ಕಾಂಪೌಡ್ ಮಾಡಿ ರಿಪೇರಿ ಮಾಡಲಾಗಿದೆ. ಇದಕ್ಕಾಗಿ 85 ಕೋಟಿ ಖರ್ಚು ಮಾಡಲಾಗಿದೆ ಎಂದರು

ಸಿಎಂ ಜಿಲ್ಲೆಗೆ ಬರುವುದರಿಂದ ಜಿಲ್ಲೆಗೆ ನಾನಾ ಬೇಡಿಕೆ ಇಡಲಾಗುತ್ತಿದೆ. ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಇಡೀ ಜಿಲ್ಲೆಗೆ ಒಂದು ವಿವಿ ಕೊಟ್ಟಿದ್ದು ಇತಿಹಾಸ. ತುಮಕೂರು ವಿಶ್ವವಿದ್ಯಾಲಯದಲ್ಲಿ ಲಕ್ಷಾಂತರ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ನೂತನ ಕ್ಯಾಂಪಸ್ ಬರುತ್ತಿದೆ. ಹಾಗಾಗಿ ಹೆಚ್ಚಿನ ಕೋರ್ಸ್ ಗಳನ್ನು ಮಾಡಲಿಕ್ಕೆ ಹೆಚ್ಚು ಹಣ ಕೊಡಬೇಕೆಂಬ ಬೇಡಿಕೆ‌‌ ಇಡಲಾಗುತ್ತಿದೆ ಎಂದರು.

ತುಮಕೂರು ಬಹಳ ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರಿಗಿಂತ ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರು ವಿಸ್ತಾರವಾಗುತ್ತಿದೆ. ಹಾಗಾಗಿ ತುಮಕೂರು , ರಾಮನಗರ ಕೋಲಾರ ಚೆನ್ನಪಟ್ಟಣ ಅಭಿವೃದ್ಧಿ ಮಾಡಿಬೇಕಿದೆ. ಆ ಮೂಲಕ ಬೆಂಗಳೂರು ಮೇಲಿನ ಒತ್ತಡ ಕಡಿಮೆಯಾಗಲಿದೆ. ಹಾಗಾಗಿ ಈಗಾಗಲೇ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಒತ್ತಡ ಇದೆ. ಒಂದು ಕೋಟಿ ಮೂವತ್ತು ಲಕ್ಷ ವಾಹನಗಳಿವೆ. ಅದರಲ್ಲಿ 80 ಲಕ್ಷ ದ್ವಿಚಕ್ರವಾಹನಗಳಿವೆ. ಹಾಗಾಗಿ ರಸ್ತೆಗಳು ಅಗಲೀಕರಣ ಮಾಡಲು ಸಾಧ್ಯವಿಲ್ಲ. ಈಗಾಗಲೇ‌ ಸಾಧ್ಯವಾದಷ್ಡು ಮಾಡಲಾಗಿದೆ. ಹಾಗಾಗಿ ಬೆಂಗಳೂರರನ್ನು ತುಮಕೂರು ನಗರಕ್ಕೆ ಸಂಪರ್ಕ ಕಲ್ಪಿಸಬೇಕು. ಈ ಹಿನ್ನೆಲೆಯಲ್ಲಿ ಮೆಟ್ರೊ ರೈಲನ್ನು ತುಮಕೂರಿಗೆ ತರಬೇಕು ಎಂದು ಸಿಎಂ ಡಿಸಿಎಂ ಇಬ್ಬರಿಗೂ ಮನವಿ ಮಾಡಿದ್ದೇನೆ. ಹಾಗಾಗಿ ಇಬ್ಬರೂ ಡಿಪಿಆರ್ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ಇದು ಮೊದಲ ಹಂತ. ಎರಡನೇ ಹಂತದಲ್ಲಿ ರಾಜ್ಯ ಮತ್ತು‌ ಕೇಂದ್ರ ಸರ್ಕಾರದಿಂದ ಅನುಮತಿ ಸಿಗಬೇಕು. ಸದ್ಯಕ್ಕೆ ಡಿಪಿಆರ್ ಆಗಬೇಕು. ಅದಾದ ಬಳಿಕ‌ ಮುಂದಿನ ಚರ್ಚೆ ಮಾಡಲಾಗುವುದು ಎಂದು ಹೇಳಿದರು.

ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಉದ್ಘಾಟನೆ ಮಾಡುತ್ತೇವೆ. ರಾಮಮಂದಿರದ ರೀತಿಯಲ್ಲಿ ಮೊದಲನೆ ಹಂತದಲ್ಲಿ ಉದ್ಘಾಟನೆ ಮಾಡುತ್ತೇವೆ. ಪದೇ ಪದೆ ಮುಖ್ಯಮಂತ್ರಿ ಬರುವುದಿಲ್ಲ. ಹಾಗಾಗಿ ಮುಖ್ಯಮಂತ್ರಿಗಳ ಅಮೃತ ಹಸ್ತದಿಂದ ಉದ್ಘಾಟನೆ ಮಾಡಲಿದ್ದಾರೆ. ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗುತ್ತಿದೆ ಎಂದರು.

ಲಿಕಿಂಗ್ ಕೆನಾಲ್ ವಿಚಾರ ಮಾತ‌ನಾಡಿ, ಈ ವಿಚಾರ ಕ್ಯಾಬಿನೆಟ್ ಚರ್ಚೆಯಾಗಿದೆ. ಇದರಿಂದ ಯಾವುದೇ ಏನು ತೊಂದರೆಯಾಗಲ್ಲ ಎಂದರು.

ಸ್ಟೇಡಿಯಂ ಅನ್ನು ಹಸ್ತಾಂತರವಾಗಿದೆ ಎಡಿ ಸ್ಪೋರ್ಟ್ಸ್ ಅವರಿಗೆ ಹಸ್ತಾಂತರ ಮಾಡಲಾಗಿದೆ‌. ಕೊಬ್ಬರಿಗೆ ಬೆಂಬಲ‌ ಬೆಲೆ ವಿಚಾರ ವಾಗಿ ಮಾತನಾಡಿ, 1500 ನಾವು ಕೊಡುತ್ತೇವೆ. ಕೇಂದ್ರದಿಂದ 12ಸಾವಿರ ಕೊಟ್ಟಿದ್ದೀರಾ ಮಾರ್ಕೆಟಿಂಗ್ ಬೆಲೆ 15 ಸಾವಿರ ಇದೆ ಎಂದಾಗ ಕೇಂದ್ರದವರು 15 ಕೊಡಿಲಿ , ನಾವು 2 ಸಾವಿರ ಕೊಡುತ್ತೇವೆ. ಒಟ್ಟು 17 ಸಾವಿರ ಆಗುತ್ತದೆ ಎಂದರು.

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.