ಪ್ರಮುಖ ನಗರಗಳ ಸುತ್ತಾಡಿ ಪೋಸ್ಟ್ ಹಾಕಿ, ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿ ಅಂದರ್!
Team Udayavani, Jan 27, 2024, 1:57 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ರಸಿದ್ಧ ನಗರಗಳನ್ನು ಸುತ್ತಾಡುತ್ತಾ ಸಾಮಾಜಿಕ ಜಾಲತಾಣಗಳ ಮೂಲಕ ಗಿರಾಕಿಗಳನ್ನು ಹುಡುಕಿ ಸೆಕ್ಸ್ ದಂಧೆ ನಡೆಸುತ್ತಿದ್ದ (ಟ್ರಾವೆಲ್ ಪ್ರಾಸ್ಟಿ ಟ್ಯೂಟ್ ರಾಕೆಟ್)ದಂಪತಿ ಹಲಸೂರು ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ದೆಹಲಿ ಮೂಲದ ದಂಪತಿ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡಲು ಟ್ರಾವೆಲ್ ವೇಶ್ಯಾವಾಟಿಕೆ ಹಾದಿ ಆಯ್ಕೆ ಮಾಡಿಕೊಂಡಿದ್ದರು. ಪತಿ ಹಾಗೂ ಪತ್ನಿಯು ಟೆಲಿಗ್ರಾಮ್, ವಾಟ್ಸ್‌ಆ್ಯಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಗ್ರೂಪ್ ರಚಿಸಿಕೊಂಡು ತಮ್ಮೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಇಚ್ಛಿಸುವವರನ್ನು ಆಹ್ವಾನಿಸುತ್ತಿದ್ದರು. ನಂತರ ಬೆಂಗಳೂರು, ದೆಹಲಿ, ಹೈದ್ರಾಬಾದ್, ಚೆನ್ನೈ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸುತ್ತಾಡುತ್ತಿದ್ದರು.
“ಮುಂದೆ ಇಂತಹ ನಗರಕ್ಕೆ ತೆರಳುತ್ತಿದ್ದೇವೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಇಚ್ಛಿಸುವ ಗ್ರಾಹಕರು ನಮ್ಮನ್ನು ಸಂಪರ್ಕಿಸಬಹುದು’ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದರು. ಇದನ್ನು ಗಮನಿಸುತ್ತಿದ್ದ ಗ್ರಾಹಕರು ತಮ್ಮ ಊರಿಗೆ ದಂಪತಿ ಬರುವ ಮೊದಲೇ ಅವರಿಗೆ ಕರೆ ಮಾಡಿ ಇಂತಹ ಕಡೆ ಸಿಗುವುದಾಗಿ ತಿಳಿಸುತ್ತಿದ್ದರು.
ಸಿಕ್ಕಿ ಬಿದ್ದಿದ್ದು ಹೇಗೆ?: ಬೆಂಗಳೂರಿನ ವ್ಯಕ್ತಿಯೊಬ್ಬರು ಇವರನ್ನು ಸಂಪರ್ಕಿಸಿ ಲೈಂಗಿಕ ಕ್ರಿಯೆ ನಡೆಸಿದ್ದರು. ಆ ವೇಳೆ ವ್ಯಕ್ತಿಯ ಗಮನಕ್ಕೆ ಬಾರದಂತೆ ದಂಪತಿ ಮೊಬೈಲ್‌ನಲ್ಲಿ ಖಾಸಗಿ ದೃಶ್ಯ ಸೆರೆ ಹಿಡಿದಿದ್ದರು. ಕೆಲ ದಿನಗಳ ನಂತರ ಈ ಫೋಟೋವನ್ನು ಆ ವ್ಯಕ್ತಿಗೆ ತೋರಿಸಿ ದುಡ್ಡಿಗೆ ಬೇಡಿಕೆಯಿಟ್ಟಿದ್ದರು. ದುಡ್ಡು ನೀಡದಿದ್ದರೆ ಖಾಸಗಿ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸುತ್ತಿದ್ದರು. ಇದರಿಂದ ನೊಂದ ವ್ಯಕ್ತಿ ಹಲಸೂರು ಪೊಲೀಸ್ ಠಾಣೆಗೆ ದಂಪತಿ ವಿರುದ್ಧ ದೂರು ನೀಡಿದ್ದರು.
ಕಾರ್ಯಾಚರಣೆ ನಡೆಸಿದ ಪೊಲೀಸರು ದಂಪತಿಯನ್ನು ತಮ್ಮ ಖೆಡ್ಡಕ್ಕೆ ಬೀಳಿಸಿ ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣವನ್ನು ಪುಲಕೇಶಿನಗರ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ದಂಪತಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಏನಿದು ಟ್ರಾವೆಲ್ ಪ್ರಾಸ್ಟಿಟ್ಯೂಟ್ ದಂಧೆ? : ಊರಿನಿಂದ ಊರಿಗೆ ಸುತ್ತಾಡುತ್ತಾ ಸೆಕ್ಸ್ ದಂಧೆ ನಡೆಸುತ್ತಿರುವ (ಟ್ರಾವೆಲ್ ಪ್ರಾಸ್ಟಿಟ್ಯೂಟ್ ರಾಕೆಟ್) ಪ್ರಕರಣವು ಬೆಂಗಳೂರು ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಇತ್ತೀಚೆಗೆ ನಡೆಯುತ್ತಿದೆ ಎನ್ನಲಾಗಿದೆ. ಈ ವೃತ್ತಿಯಲ್ಲಿರುವವರು ಮೊದಲೇ ಸಾಮಾಜಿಕ ಜಾಲತಾಣ, ಗ್ರೂಪ್ ಗಳಲ್ಲಿ ತಮ್ಮ ಮುಂದಿನ ಪ್ರಯಾಣದ ಬಗ್ಗೆ ಮಾಹಿತಿ ನೀಡುತ್ತಾರೆ. ಬಳಿಕ ತಮ್ಮನ್ನು ಸಂಪರ್ಕಿಸಿದವರನ್ನು ತಾವಿದ್ದಲ್ಲಿಗೆ ಕರೆಸಿ ಅಥವಾ ಅವರು ಸೂಚಿಸಿದ ಪ್ರದೇಶಕ್ಕೆ ತೆರಳಿ ಸಾವಿರಾರು ರೂ. ಪಡೆದುಕೊಳ್ಳುತ್ತಾರೆ. ಇದಾದ ಬಳಿಕ ಮತ್ತೂಂದು ಊರಿಗೆ ಹೋಗುತ್ತಾರೆ. ಪೊಲೀಸರು ಸೇರಿದಂತೆ ಯಾರ ಬಲೆಗೂ ಬೀಳದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಇವರು ಎಲ್ಲೂ ತಮ್ಮ ವೈಯಕ್ತಿಕ ಮಾಹಿತಿ ಒದಗಿಸುವುದಿಲ್ಲ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು… ಸುನಿಲ್ ಆರೋಪ
ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ
Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.