Moon: ಚಂದ್ರನಲ್ಲಿಗೆ ಜಪಾನ್ ಲ್ಯಾಂಡರ್ ಇಳಿಕೆಗೆ ಚಂದ್ರಯಾನ-2 ಆರ್ಬಿಟರ್ ನೆರವು
ಭಾರತ ನೀಡಿದ ಮಾಹಿತಿಯಿಂದ ಜಪಾನ್ ಯಾನ ಸಕ್ಸಸ್
Team Udayavani, Jan 27, 2024, 9:41 PM IST
ಟೋಕಿಯೋ/ನವದೆಹಲಿ: ಇತ್ತೀಚೆಗಷ್ಟೇ ಚಂದ್ರನ ಮೇಲ್ಮೆ„ಯನ್ನು ಸ್ಪರ್ಶಿಸಿದ ಜಪಾನ್‌ನ “ಸ್ಲಿಮ್'(ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್‌ವೆಸ್ಟಿಗೇಟಿಂಗ್ ಮೂನ್) ಬಾಹ್ಯಾಕಾಶ ನೌಕೆಗೆ ಶಶಾಂಕನ ನೆಲದಲ್ಲಿ ಇಳಿಯಲು ಸಹಾಯ ಮಾಡಿದ್ದು ಯಾರು ಗೊತ್ತೇ? ಭಾರತದ ಚಂದ್ರಯಾನ-2 ಆರ್ಬಿಟರ್! ಹೌದು, ಚಂದ್ರಯಾನ-2ರ ಆರ್ಬಿಟರ್‌ನಲ್ಲಿ ಬಳಸಿರುವ ಸುಧಾರಿತ ತಂತ್ರಜ್ಞಾನಗಳು ಸ್ಲಿಮ್ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಯೋಜನೆಗಳಿಗೆ “ಆಪ್ತಮಿತ್ರ’ನಾಗಿ ಕಾರ್ಯನಿರ್ವಹಿಸುತ್ತಿವೆ.
ಇತ್ತೀಚೆಗೆ ಜಪಾನ್‌ನ ಸ್ಲಿಮ್ ನೌಕೆಯು ಚಂದ್ರನ ಸಮೀಪ ಬಂದು, ಉದ್ದೇಶಿತ ಪ್ರದೇಶದ 100 ಮೀಟರ್ ವ್ಯಾಪ್ತಿಯೊಳಗೆ ನಿಖರವಾಗಿ ಇಳಿಯಲು, ಚಂದ್ರಯಾನ-2ರ ಆರ್ಬಿಟರ್ ಸೆರೆಹಿಡಿದ ಚಿತ್ರಗಳ ಸಹಾಯ ಪಡೆಯಿತು. ಭಾರತದ ಆರ್ಬಿಟರ್ ನೀಡಿದ ಮಾಹಿತಿಯ ಆಧಾರದಲ್ಲೇ ಸ್ಲಿಮ್ ಚಂದ್ರನ ಮೇಲ್ಮೆ„ನಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಯಿತು. ನಂತರದಲ್ಲಿ, ಸ್ಲಿಮ್ ನಿರೀಕ್ಷಿತ ರೀತಿಯಲ್ಲಿ ಕಾರ್ಯನಿರ್ವಹಿಸಿಲ್ಲವಾದರೂ, ಅದರ ಯಶಸ್ವಿ ಲ್ಯಾಂಡಿಂಗ್ ಸಾಧ್ಯವಾಗಿದ್ದು ಮಾತ್ರ ಚಂದ್ರಯಾನ-2ರ ಆರ್ಬಿಟರ್‌ನಿಂದಲೇ.
ಇಸ್ರೋದ ಚಂದ್ರಯಾನ-2 ಯೋಜನೆ ಯಶಸ್ಸು ಕಾಣದಿದ್ದರೂ, ಅದರ ಆರ್ಬಿಟರ್ ಮಾತ್ರ ಈಗಲೂ ಚಂದಿರನ ಸಮೀಪದಲ್ಲೇ ಸುತ್ತುತ್ತಾ, ಅಲ್ಲಿನ ಮೇಲ್ಮೆ„ ಸ್ವರೂಪ, ಖನಿಜಗಳ ಮಾಹಿತಿ, ಮಂಜುಗಡ್ಡೆಯ ಶೋಧ ಮುಂತಾದ ಅಧ್ಯಯನದಲ್ಲಿ ತೊಡಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.